
ನಟಿ ಹಾಗೂ ಬಿಗ್ ಬಾಸ್ ಖ್ಯಾತಿಯ ರಾಖಿ ಸಾವಂತ್ ಮತ್ತೆ ಮದುವೆಯಾಗಿ ಈಗ ಮತ್ತೊಮ್ಮೆ ಸುದ್ದಿಯಾಗಿದ್ದಾರೆ. ಮೈಸೂರು ಮೂಲದ ಬಾಯ್ ಫ್ರೆಂಡ್ (Boy Friend) ಆದಿಲ್ ಖಾನ್ ದುರ್ರಾನಿ ಜೊತೆ ರಾಖಿ ಸಾವಂತ್ ರಿಜಿಸ್ಟರ್ ಮದುವೆಯಾಗಿದ್ದಾರೆ ಎಂಬ ಸುದ್ದಿ ಬಹಳ ವೈರಲ್ ಆಗಿದೆ. ಇದಕ್ಕೆ ಸಂಬಂಧಿಸಿದಂತೆ ಮದುವೆ ನೋಂದಣಿ ಪತ್ರ ವೈರಲ್ (Viral) ಆಗಿದ್ದೂ ಆದಿಲ್ ಮಾತ್ರ ಈ ಸುದ್ದಿಯನ್ನು ತಳ್ಳಿ ಹಾಕುತ್ತಿದ್ದಾರೆ. ಆದರೆ ಇಬ್ಬರ ಪೋಟೋಗಳನ್ನು ನೋಡಿದರೆ ಇಬ್ಬರೂ ಕೋರ್ಟ್‌ನಲ್ಲಿ ಮದುವೆಯಾಗಿದ್ದಾರೆ ಎನ್ನುವುದು ಗೊತ್ತಾಗುತ್ತಿದೆ.
ಈಗ ಮದುವೆಯ ಬಗ್ಗೆ ಮೌನ ಮುರಿದಿರುವ ರಾಖಿ ಸಾವಂತ್, ಆದಿಲ್ ಅವರನ್ನು ಸುಮಾರು ಏಳು ತಿಂಗಳ ಹಿಂದೆಯೇ ಮದುವೆಯಾಗಿದ್ದೆ ಎಂದು ಬಹಿರಂಗಪಡಿಸಿದ್ದಾರೆ. ಇದೇ ವೇಳೆ ತಮ್ಮ ಪತಿ ಆದಿಲ್ (Adil Khan Durrani) ತಮಗೆ ಭಾರಿ ಮೋಸ ಮಾಡಿರುವುದಾಗಿ ರಾಖಿ ಹೇಳಿಕೊಂಡಿದ್ದಾರೆ. ಮದುವೆಯ ಬಗ್ಗೆ ಬಾಯಿ ಬಿಡದಂತೆ ಆದಿಲ್ ತಮ್ಮನ್ನು ಬೆದರಿಸಿದ್ದರು ಎಂದು ರಾಖಿ ಸಾವಂತ್ (Rakhi Sawanth) ಹೇಳಿದ್ದಾರೆ. 'ಆತನನ್ನು ನಾನು ವರ್ಷಗಳ ಹಿಂದೆಯೇ ಭೇಟಿಯಾಗಿದ್ದೆ. ನಂತರ ಮದುವೆಯ ವಿಚಾರ ನಡೆಯಿತು. ಕಳೆದ ವರ್ಷ ಜುಲೈನಲ್ಲಿ ಮದುವೆಯಾದ್ವಿ. ಆದರೆ ಮದ್ವೆ ಬಗ್ಗೆ ಹೇಳದಂತೆ ಪತಿ ಬೆದರಿಕೆ ಹಾಕಿದ್ದ' ಎಂದು ರಾಖಿ ಹೇಳಿದ್ದಾರೆ. 'ಮದುವೆ ಬಗ್ಗೆ ತಿಳಿದರೆ ಅವನ ತಂಗಿಗೆ ಹುಡುಗ ಸಿಗುವುದಿಲ್ಲ ಎನ್ನುವ ಕಾರಣ ನೀಡಿ ವಿಷಯ ಬಹಿರಂಗಪಡಿಸಬೇಡಿ ಎಂದಿದ್ದ. ನನ್ನ ಹೆಸರು ಹೇಳುವುದು ಅವನಿಗೆ ನಾಚಿಕೆ ಅಂತೆ. ಅದಕ್ಕೇ ಹೇಳಬೇಡ' ಎಂದು ಹೇಳಿರುವುದಾಗಿ ರಾಖಿ ಹೇಳಿಕೊಂಡಿದ್ದಾರೆ.
ಅಮ್ಮನಿಗೆ ಕ್ಯಾನ್ಸರ್, ಆಸ್ಪತ್ರೆಯಲ್ಲಿದ್ದಾರೆ, ದಯವಿಟ್ಟು ಪ್ರಾರ್ಥಿಸಿ; ಕಣ್ಣೀರಿಟ್ಟ ರಾಖಿ ಸಾವಂತ್
'ಆದಿಲ್ ಪತ್ನಿಯಾಗಿ ನಾನು ಇರಲು ಬಯಸುತ್ತೇನೆ. ಆದರೆ ಆತ ಯಾಕೆ ಹೀಗೆ ಹೇಳುತ್ತಿದ್ದಾನೋ ಗೊತ್ತಿಲ್ಲ. ನನಗೆ ಅನ್ನಿಸಿದ ಮಟ್ಟಿಗೆ ಆತನಿಗೆ ತಾನು ಹಿಂದೂ ಹುಡುಗಿಯನ್ನು ಮದುವೆಯಾಗಿದ್ದೇನೆ ಎಂದು ಹೇಳುವುದು ಕಷ್ಟ ಎಂದು ಕಾಣಿಸುತ್ತಿದೆ. ಆದ್ದರಿಂದ ನನ್ನ ಸ್ಥಿತಿ ತ್ರಿಶಂಕುವಿನದ್ದಾಗಿದೆ. ಮದುವೆಯಾಗಿದ್ದರೂ ಮದುವೆಯ ವಿಷಯ ಬಹಿರಂಗಪಡಿಸುವಂತಿಲ್ಲ. ಬಿಗ್ ಬಾಸ್ ಶೋ (Bigg Boss Show)ನಲ್ಲಿದ್ದಾಗಲೂ ಮದುವೆ ವಿಷಯವನ್ನು ಜಗತ್ತಿನ ಮುಂದೆ ಹೇಳಿಕೊಳ್ಳಲು ಆಗಲೇ ಇಲ್ಲ. ಆಗಲೇ ಮದುವೆಯಾಗಿ ಹೋಗಿತ್ತು. ನನಗೆ ತುಂಬಾ ಕಷ್ಟವಾಗಿತ್ತು. ಅವನ ಮಾತು ಕೇಳಿ ಇಷ್ಟು ತಿಂಗಳು ಸುಮ್ಮನಿದ್ದೆ. ಆದರೆ ಈಗ ನಾನು ಸುಮ್ಮನೆ ಇರುವುದು ಸಾಧ್ಯವಿಲ್ಲ. ಆತ ಮೋಸ ಮಾಡುತ್ತಿದ್ದಾನೆ ಎಂದು ಎನ್ನಿಸುತ್ತಿದೆ' ಎಂದು ರಾಖಿ ದುಃಖ ತೋಡಿಕೊಂಡಿದ್ದಾರೆ.
'ನನ್ನ ಮದುವೆ ಪದೇ ಪದೇ ಬ್ರೇಕಪ್ ಆಗುತ್ತಿದೆ. ಆದರೆ ಈ ಬಾರಿ ಹಾಗೆ ಆಗಲು ನಾನು ಬಯಸುವುದಿಲ್ಲ. ಇನ್ನೂ ಏನೇನೋ ಹೇಳುವುದು ಇದೆ. ಆದರೆ ಎಲ್ಲದ್ದಕ್ಕೂ ಇದು ಸರಿಯಾದ ಸಮಯವಲ್ಲ. ಸಮಯ ಬಂದಾಗ ನಾನು ಎಲ್ಲವನ್ನು ಹೇಳುತ್ತೇನೆ" ಎಂದು ಹೇಳಿದ್ದಾರೆ.
ಅಕ್ಕನಿಗೆ ಪೈಪೋಟಿ ನೀಡಲು ಸಿದ್ಧರಾದ ಉರ್ಫಿ ಸಹೋದರಿಯರು ಇವರೇ ನೋಡಿ...
ಅದೇ ಇನ್ನೊಂದೆಡೆ ಈಗ ಮದುವೆಯ ಸುದ್ದಿಯನ್ನು ತಳ್ಳಿಹಾಕುತ್ತಿರುವ ಆದಿಲ್, ಹಿಂದೊಮ್ಮೆ ರಾಖಿ ಜೊತೆಗೆ ಇರೋದಿಕ್ಕೆ ತಮಗೆ ಬೆದರಿಕೆ ಕರೆಗಳು ಬರುತ್ತಿವೆ ಎಂದು ಮಾಧ್ಯಮಗಳ ಮುಂದೆ ಹೇಳಿಕೊಂಡಿದ್ದರು. ಇದಾದ ಬಳಿಕವೂ ರಾಖಿಗೆ ದುಬೈನಲ್ಲಿ (Dubai) ಫ್ಲ್ಯಾಟ್, ಬಂಗಾರದ ಫೋನ್ ಸೇರಿದಂತೆ ಹಲವು ಐಷಾರಾಮಿ ಉಡುಗೊರೆಗಳನ್ನು ನೀಡಿದ್ದಾರೆ. ಬಿಗ್ಬಾಸ್ಗೆ ಹೋಗುವ ಮುನ್ನ ಹಿಂದಿನ ಪತಿ ರಿತೇಶ್ (Ritesh) ಜೊತೆ ರಾಖಿ ಸಾವಂತ್ ಭಾರಿ ಸುದ್ದಿಯಾಗಿದ್ದರು. ಇಬ್ಬರೂ ಬಿಗ್ಬಾಸ್ ಮನೆಯೊಳಕ್ಕೆ ಹೋಗಿದ್ದರು. ಆದರೆ ಅದೇ ಸಮಯದಲ್ಲಿ ಭಾರಿ ಜಗಳವಾಗಿತ್ತು. ಹೊರಬಂದ ಮೇಲೆ ದೂರವಾಗಿದ್ದರು. ರಿತೇಶ್‌ಗೆ ಮೊದಲೇ ಮದುವೆ ಆಗಿರೋದು ನನಗೆ ಗೊತ್ತಿರಲಿಲ್ಲ. ಅವನು ನನಗೆ ಮೋಸ ಮಾಡಿದ ಎಂದಿದ್ದ ರಾಖಿ, ರಿತೇಶ್‌ರನ್ನು ಮದುವೆಯಾಗಿ ತಪ್ಪು ಮಾಡಿದೆ ಎಂದಿದ್ದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.