
ಕಾಂಟ್ರವರ್ಸಿ ಕ್ವೀನ್, ಡ್ರಾಮಾ ಕ್ವೀನ್ ಎಂದೆಲ್ಲಾ ಫೇಮಸ್ ಆಗಿರೋ 46 ವರ್ಷದ ರಾಖಿ ಸಾವಂತ್ ಈಗ ಪಾಕಿಸ್ತಾನದಲ್ಲಿ ಇದ್ದಾರಂತೆ. ಅಲ್ಲಿಯ ಪೊಲೀಸ್ ಆಫೀಸರ್ ಜೊತೆ ನನ್ನ ಮದುವೆಯಾಗುತ್ತಿದ್ದು, ಸದ್ಯ ಪಾಕಿಸ್ತಾನದ ಲಾಹೋರ್ನಲ್ಲಿ ಇರುವುದಾಗಿ ನಟಿ ಹೇಳಿದ್ದಾರೆ. ಮಗುವನ್ನು ಭಾರತದಲ್ಲಿ ಮಾಡಿಕೊಳ್ಳಬೇಕೋ, ಪಾಕಿಸ್ತಾನದಲ್ಲಿಯೇ ಮಾಡಿಕೊಳ್ಳಬೇಕೋ ಎನ್ನುವ ಬಗ್ಗೆ ಆಕೆ ಆಮೇಲೆ ಯೋಚನೆ ಮಾಡಲಿದ್ದಾರಂತೆ! ಹೀಗೊಂದು ವಿಡಿಯೋ ಮಾಡಿರುವ ನಟಿ ಅದನ್ನು ಶೇರ್ ಮಾಡಿಕೊಂಡಿದ್ದಾರೆ. ಅಷ್ಟಕ್ಕೂ ನಟಿಗೆ ಅದೆಷ್ಟು ಮದುವೆ, ಸಂಬಂಧಗಳು ಆಗಿ ಹೋಗಿದ್ವೋ ಲೆಕ್ಕವಿಲ್ಲ. ಸದಾ ಮದುವೆ, ವಿಚ್ಛೇದನ ಎನ್ನುತ್ತಾ ಡ್ರಾಮಾ ಮಾಡುತ್ತಲೇ ಈಕೆ ಕಾಲ ಕಳೆಯುವುದು ಇದೆ. ವಯಸ್ಸು 46 ಆದರೂ ಇಂದಿಗೂ ಈಕೆ ಹುಡುಗಾಟಿಕೆ ಬಿಟ್ಟಿಲ್ಲ.
ಕೆಲ ದಿನಗಳ ಹಿಂದಷ್ಟೇ ಪಾಕಿಸ್ತಾನದ ಧರ್ಮಗುರು ಅಬ್ದುಲ್ ಕ್ವಾವಿ ಪ್ರಪೋಸ್ ಮಾಡಿರುವ ಬಗ್ಗೆ ನಟಿ ಹೇಳಿದ್ದರು. ದೋಡಿ ಖಾನ್ರನ್ನು ಮೊದಲು ಮದುವೆಯಾಗುವುದಾಗಿ ಹೇಳಿದ್ದರು. ಆಮೇಲೆ ಧರ್ಮಗುರು ಮದುವೆಗೆ ಒಪ್ಪಿಕೊಂಡಿದ್ದಾರೆ ಎಂದಿದ್ದರು. ನಾನು 7-8 ಕೋಟಿ ಸಾಲ ಮಾಡಿದ್ದೇನೆ. ಯಾವುದೇ ಷರತ್ತುಗಳಿಲ್ಲದೆ ಈ ಸಾಲವನ್ನು ತೀರಿಸಿದರೆ ಮದುವೆಗೆ ಸಿದ್ಧ ಎಂದು ಹೇಳಿರುವುದಾಗಿ ನಟಿ ಈ ಹಿಂದೆ ಸಂದರ್ಶನದಲ್ಲಿ ಹೇಳಿದ್ದರು. ಧರ್ಮಗುರು ಕೂಡ ರಾಖಿಯ ಜೊತೆಗಿನ ಮದುವೆಯ ಬಗ್ಗೆ ಹೇಳಿಕೆ ನೀಡಿರುವುದಾಗಿಯೂ ವರದಿಯಾಗಿತ್ತು. ಇದೀಗ ಪಾಕಿಸ್ತಾನದ ಪೊಲೀಸ್ ಅಧಿಕಾರಿಯನ್ನು ಮದ್ವೆಯಾಗ್ತಾರಂತೆ.
ಧರ್ಮಗುರು ಜೊತೆ ಮದ್ವೆಗಾಗಿ ಪಾಕ್ನಲ್ಲಿ ರಾಖಿ: ವಿಮಾನದಲ್ಲಿ ಮಾಡಿದ್ದು ಎಲ್ಲಿ ಹೋಗತ್ತೆ ಎಂದು ಪ್ರಶ್ನಿಸಿದ ನಟಿ!
ಅಷ್ಟಕ್ಕೂ, ಪಾಕಿಸ್ತಾನಿ ಮುಫ್ತಿ ಅಬ್ದುಲ್ ಕ್ವಾವಿ ಅವರು ರಾಖಿ ಸಾವಂತ್ ಅವರಿಗೆ ಮದುವೆಗೆ 3 ದಿನಗಳ ಗಡುವು ನೀಡಿದ್ದಾರೆ. ತಮ್ಮ ಮದುವೆ ಎರಡೂ ದೇಶಗಳಿಗೆ ಶಾಂತಿಯನ್ನು ತರಬಹುದು ಎಂದಿದ್ದರು. ಮೊದಲು ಇವರ ಮದುವೆಯಾಗುವುದಾಗಿ ಹೇಳಲಾಗಿತ್ತು, ಕೊನೆಗೆ ಅದು ಆಗುವುದಿಲ್ಲ ಎನ್ನಲಾಗಿತ್ತು. ಒಟ್ಟಿನಲ್ಲಿ ಹೈಡ್ರಾಮಾ ನಡೆಯುತ್ತಿದೆ. ಅಂದಹಾಗೆ, ಅಬ್ದುಲ್ ಅವರಿಗೆ 58 ವರ್ಷ ವಯಸ್ಸು. ಅವರಿಗೆ ಮದುವೆಯಾಗಿ ಮೊಮ್ಮಕ್ಕಳೂ ಇದ್ದಾರೆ. . "ಮನುಷ್ಯ ಮತ್ತು ಕುದುರೆ ಎಂದಿಗೂ ವಯಸ್ಸಾಗುವುದಿಲ್ಲ" ಎಂದು ರಾಖಿ ಈ ಹಿಂದೆ ಹೇಳಿದ್ದರು. ಇದು ಕಾಶ್ಮೀರದ ಪಹಲ್ಗಾಮ್ನಲ್ಲಿ ನಡೆದ ಉಗ್ರರ ದಾಳಿಗೂ ಮುನ್ನ ನಟಿ ನೀಡಿರುವ ಹೇಳಿಕೆ. ಈಗ ಸದ್ಯ ಪಾಕಿಸ್ತಾನ ಮತ್ತು ಭಾರತದ ಎಲ್ಲಾ ರಸ್ತೆ ಕ್ಲೋಸ್ ಮಾಡುವ ಆದೇಶ ಹೊರಡಿಸಲಾಗಿದೆ. ಭಾರತದಲ್ಲಿ ಇರುವ ಪಾಕಿಸ್ತಾನಿಗಳ ವಾಪಸಿಗೆ ಗಡುವು ಕೂಡ ನೀಡಲಾಗುತ್ತಿದೆ. ಇದೀಗ ನಟಿ ಏನು ಹೇಳುತ್ತಾರೋ ಕಾದು ನೋಡಬೇಕಿದೆ. ಕೆಲ ದಿನಗಳ ಹಿಂದೆ ರಾಖಿ, ಪಾಕಿಸ್ತಾನಕ್ಕೆ ಹೊರಟಿರುವುದಾಗಿ ಹೇಳಿದ್ದು, ವಧುವಿನಂತೆ ಶೃಂಗಾರ ಮಾಡಿಕೊಂಡು ವಿಮಾನದಲ್ಲಿನ ವಿಡಿಯೋ ಒಂದನ್ನು ಶೇರ್ ಮಾಡಿದ್ದರು. ಇದರಲ್ಲಿ ಅವರು, ಗಗನಸಖಿಯ ಜೊತೆ ಮಾತನಾಡುವುದನ್ನು ನೋಡಬಹುದು. ಇದು ಪೂರ್ವಯೋಜಿತವಾಗಿರುವುದು ಸುಲಭದಲ್ಲಿ ತಿಳಿಯುತ್ತದೆ. ಆದರೆ ನೋಡುಗರನ್ನು ಮೂರ್ಖರನ್ನಾಗಿ ಮಾಡುತ್ತಿರುವ ರಾಖಿ, ಇದೇ ಮೊದಲ ಬಾರಿಗೆ ವಿಮಾನದಲ್ಲಿ ಪ್ರಯಾಣಿಸುತ್ತಿರುವಂತೆ ನಟಿಸಿದ್ದರು. ಗಗನಸಖಿಯ ಜೊತೆಗಿನ ಇವರ ಸಂಭಾಷಣೆಯ ವಿಡಿಯೋಗಳು ವೈರಲ್ ಆಗುತ್ತಿವೆ.
ಅಷ್ಟಕ್ಕೂ ನಟಿ ಬಂಧನದ ಭೀತಿ ಎದುರಿಸುತ್ತಿದ್ದಾರೆ. ಹೈಕೋರ್ಟ್ ಆದೇಶದ ಪ್ರಕಾರ ಅವರು ಸರೆಂಡರ್ ಆಗಬೇಕಿದೆ. ಪತಿ ಆದಿಲ್ ಖಾನ್ ದುರ್ರಾನಿಯ ಖಾಸಗಿ ವಿಡಿಯೋವನ್ನು ರಾಖಿ ವೈರಲ್ ಮಾಡಿದ್ದರು. ಈ ಪ್ರಕರಣದಲ್ಲಿ ಮುಂಬೈ ಸೆಷನ್ಸ್ ಕೋರ್ಟ್ ರಾಖಿ ಅವರಿಗೆ ನಿರೀಕ್ಷಣಾ ಜಾಮೀನು ಅರ್ಜಿಯನ್ನು ತಿರಸ್ಕರಿಸಿದೆ. ಹೀಗಾಗಿ ಯಾವ ಕ್ಷಣದಲ್ಲಾದರೂ ರಾಖಿ ಬಂಧನಕ್ಕೆ ಒಳಗಾಗುತ್ತಾರಾ ಎಂಬ ಚರ್ಚೆಗಳು ಎದ್ದಿವೆ. ರಾಖಿ ವಿರುದ್ಧ ಭಾರತೀಯ ದಂಡ ಸಂಹಿತೆ ಮತ್ತು ಮಾಹಿತಿ ತಂತ್ರಜ್ಞಾನ ಕಾಯ್ದೆಯಡಿ ಮಾನನಷ್ಟ ಮೊಕದ್ದಮೆ ದಾಖಲಿಸಲಾಗಿದೆ. ಆದರೆ ಇದಾಗಿ ವರ್ಷ ಆಗುತ್ತಾ ಬಂದರೂ ಸದ್ಯ ಏನೂ ಸುದ್ದಿ ಇಲ್ಲ!
ನನ್ನದಲ್ಲದ ತಪ್ಪಿಗೆ ಭಿಕ್ಷುಕಿಯಾಗಿ ಜೀವನ ಮಾಡ್ತಿದ್ದೇನೆ: ಭಾರತದಿಂದ ಓಡಿ ಹೋದ ರಾಖಿ ಸಾವಂತ್ ಕಣ್ಣೀರು!
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.