ಪವಿತ್ರರಾದ ರಾಖಿ- ಗಂಡಸ್ರು ಇನ್ನು ಮುಟ್ಟುವಂತಿಲ್ಲ! ವೈರಲ್​ ವಿಡಿಯೋ ನೋಡಿ ಫ್ಯಾನ್ಸ್​ ಶಾಕ್​

Published : Sep 03, 2023, 03:32 PM IST
ಪವಿತ್ರರಾದ ರಾಖಿ- ಗಂಡಸ್ರು ಇನ್ನು ಮುಟ್ಟುವಂತಿಲ್ಲ! ವೈರಲ್​ ವಿಡಿಯೋ ನೋಡಿ ಫ್ಯಾನ್ಸ್​ ಶಾಕ್​

ಸಾರಾಂಶ

 ಮೆಕ್ಕಾ-ಮದೀನಾಕ್ಕೆ ಹೋಗಿ ಬಂದ ಮೇಲೆ ರಾಖಿ ಪವಿತ್ರರಾಗಿದ್ದು, ಗಂಡಸ್ರು ಮುಟ್ಟುವಂತಿಲ್ವಂತೆ. ವೈರಲ್​ ವಿಡಿಯೋದಲ್ಲಿ ಅವರು ಹೇಳಿದ್ದೇನು ಕೇಳಿ  

ಯಾ ಅಲ್ಲಾ ಹ್​...  ಇದೇನು ಮಾಡಿದೆ? ಆತ ನನ್ನ ಜೀವನ ಹಾಳು ಮಾಡಿದ. ಬಾಲಿವುಡ್​ನಲ್ಲಿ (Bollywood) ಮಿಂಚಲು ನನ್ನನ್ನು ಬಳಸಿಕೊಂಡ. ಮಹಿಳೆಯೊಬ್ಬಳ ಜೀವನವನ್ನೇ ಬರ್ಬಾದ್ ಮಾಡಿದ. ನ್ಯಾಯ ಕೋರಿ ನಿನ್ನ ಬಳಿ ಬಂದಿದ್ದೇನೆ. ನನಗೆ ನ್ಯಾಯ ಕೊಡಿಸು. ನನ್ನ ಜೀವನ ಅವನಿಂದ ಹಾಳಾಗಿ ಹೋಯ್ತು... ಎಂದು ನಟಿ ರಾಖಿ ಸಾವಂತ್​ ಮೆಕ್ಕಾದಲ್ಲಿ ಮೊನ್ನೆಯಷ್ಟೇ  ಬಿಕ್ಕಿಬಿಕ್ಕಿ ಅತ್ತಿದ್ದರು.  ತಮ್ಮ ಮಾಜಿ ಪತಿ ಆದಿಲ್​ ಖಾನ್​ ದುರ್ರಾನಿ (Adil Khan Durrani)  ತಮಗೆ ಮೋಸ ಮಾಡಿರುವುದಾಗಿ ಒಂದೇ ಸಮನೆ ಮೆಕ್ಕಾದಲ್ಲಿ ರೋಧಿಸಿದ್ದರು. ರಾಖಿ ಸಾವಂತ್​.  ಕೆಲ ದಿನಗಳ ಹಿಂದೆ ಉಮ್ರಾ ನೆರವೇರಿಸಲು ( ಉಮ್ರಾ ಎಂದರೆ ಮುಸ್ಲಿಮರು ಮೆಕ್ಕಾದಲ್ಲಿರುವ ಮಸ್ಜಿದ್ ಅಲ್-ಹರಾಮ್‌ಗೆ ಮಾಡುವ ತೀರ್ಥಯಾತ್ರೆಯಾಗಿದೆ) ರಾಖಿ ಮೆಕ್ಕಾಗೆ ಹೋಗಿದ್ದರು.  ಅಲ್ಲಿಯ  ಮಸ್ಜಿದ್-ಅಲ್-ಹರಾಮ್ ನಲ್ಲಿ ಉಮ್ರಾ ನೆರವೇರಿಸಿದ್ದರು. ಅವರ ಸ್ನೇಹಿತ ವಹಿದ್ ಅಲಿ ಖಾನ್ ಮತ್ತು ಅವರ ಪತ್ನಿ ಶೈಸ್ತಾ ಅಲಿ ಖಾನ್ ಜೊತೆಗೆ ರಾಖಿ  ಮೆಕ್ಕಾಗೆ ಹೋಗಿದ್ದರು.  ಆದರೆ ರಾಖಿ ಎಂದರೇನೇ ಡ್ರಾಮಾ ಕ್ವೀನ್​ ಎನ್ನುವುದು ಜಗಜ್ಜಾಹೀರವಾಗಿದೆ.  ಈ ಡ್ರಾಮಾ  ಮಾಡಲು ಮೆಕ್ಕಾದಂಥ ಪವಿತ್ರ ಸ್ಥಾನವನ್ನು  ಬಳಸಿಕೊಂಡಿರುವುದು ಸರಿಯಲ್ಲ ಎಂದು ಸಿಕ್ಕಾಪಟ್ಟೆ ಟ್ರೋಲ್​ಗೆ ಒಳಗಾಗುತ್ತಲೇ ಇದ್ದಾರೆ.

ಅಷ್ಟಕ್ಕೂ  ರಾಖಿ ಸಾವಂತ್​ (Rakhi Sawanth) ಮತ್ತು ಅವರ ಮಾಜಿ ಪತಿ ಮೈಸೂರಿನ ಯುವಕ ಆದಿಲ್​ ಖಾನ್​ ನಡುವಿನ ಜಟಾಪಟಿ ಎಲ್ಲಿರಿಗೂ ತಿಳಿದದ್ದೇ.  ಆದಿಲ್​ ಖಾನ್​ ದುರ್ರಾನಿ ಅವರ ಜೊತೆಗಿನ ಮದುವೆಯ ಕಥೆ ಸಿನಿಮಾಕ್ಕಿಂತಲೂ ಕುತೂಹಲವಾಗಿದೆ. ಮೈಸೂರಿನ ಯುವಕ ಆದಿಲ್​ ಖಾನ್​ ಮದುವೆಯನ್ನು ನಿರಾಕರಿಸಿದ್ದು, ರಾಖಿ ರಂಪಾಟ ಮಾಡಿದ್ದು, ಕೊನೆಗೂ ಆದಿಲ್​  ಮದುವೆಯನ್ನು ಒಪ್ಪಿಕೊಂಡಿದ್ದು ಎಲ್ಲವೂ ಯಾವ ಸಿನಿಮಾ ಕಥೆಗಿಂತಲೂ ಭಿನ್ನವಾಗಿರಲಿಲ್ಲ. ಎಲ್ಲವೂ ಸುಖಾಂತ್ಯಗೊಂಡಿತು ಎನ್ನುವಾಗಲೇ  ಆದಿಲ್ ತಮಗೆ ಮೋಸ ಮಾಡುತ್ತಿದ್ದಾರೆ, ಹಲ್ಲೆ ಮಾಡಿದ್ದಾರೆ, ಇನ್ನೊಬ್ಬಳ ಜೊತೆ ಅಕ್ರಮ ಸಂಬಂಧ ಹೊಂದಿದ್ದಾರೆ,  ಆದಿಲ್‌ಗಾಗಿ   ಇಸ್ಲಾಂಗೆ ಮತಾಂತರ ಮಾಡಿಕೊಂಡಿರುವೆ. ನಾನು ಇಸ್ಲಾಂ ಧರ್ಮವನ್ನು ಒಪ್ಪಿಕೊಂಡು ಆದಿಲ್‌ನ ಮದುವೆ ಆಗಿದ್ದೇನೆ ಎಂದೆಲ್ಲಾ ಆರೋಪಿಸಿದ್ದ ರಾಖಿ ಕೊನೆಗೆ ದೂರು ಕೊಟ್ಟರು. ಇದರಿಂದ ಆದಿಲ್​ (Adil Khan Durrani) ವಿರುದ್ಧ ಎಫ್​ಐಆರ್​ ದಾಖಲಾಗಿದ್ದು  ಜೈಲಿಗೆ ಹೋಗಿ ಈಗ ಬಿಡುಗಡೆಯಾಗಿದ್ದಾರೆ.

ನಿಜವಾದ ಮುಸಲ್ಮಾನರು ಸುಳ್ಳು ಹೇಳಲ್ಲ, ಡ್ರಾಮಾ ಮಾಡಲ್ಲ: ನಟಿ ಶೆರ್ಲಿನ್​ ಚೋಪ್ರಾ ಹೇಳಿದ್ದೇನು?
 
ಕಳೆದೊಂದು ವಾರದಿಂದ ಇವರಿಬ್ಬರ ನಡುವಿನ ಜಗಳ ತಾರಕಕ್ಕೇರಿತ್ತು. ಒಬ್ಬರ ಮೇಲೊಬ್ಬರು ಗೂಬೆ ಕೂರಿಸುತ್ತಾ ನಿತ್ಯವೂ ಪತ್ರಿಕಾಗೋಷ್ಠಿ ಮಾಡುತ್ತಿದ್ದರು.  ಇವರಿಬ್ಬರ ಮದುವೆಯ ಸುದ್ದಿ ಹಾಗೂ ನಂತರ ನಡೆದ ಡ್ರಾಮಾ ಎಲ್ಲರಿಗೂ ತಿಳಿದ ವಿಷಯವೇ.  ಆದಿಲ್​ ಖಾನ್​ ಮೊದಲು ಮದುವೆಯನ್ನು ನಿರಾಕರಿಸಿದ್ದು, ರಾಖಿ ರಂಪಾಟ ಮಾಡಿದ್ದು, ಕೊನೆಗೂ ಆದಿಲ್​  ಮದುವೆಯನ್ನು ಒಪ್ಪಿಕೊಂಡಿದ್ದು ಎಲ್ಲವೂ ಯಾವ ಸಿನಿಮಾ ಕಥೆಗಿಂತಲೂ ಭಿನ್ನವಾಗಿರಲಿಲ್ಲ. 

ಇದೀಗ ರಾಖಿ ಮೆಕ್ಕಾ-ಮದೀನಾಕ್ಕೆ ಹೋಗಿ ಬಂದು ಮತ್ತೆ ಡ್ರಾಮಾ  ಶುರು ಮಾಡಿದ್ದಾರೆ. ಅವರು ವಾಪಸಾಗುತ್ತಿದ್ದಂತೆಯೇ ಫೋಟೋ ಕ್ಲಿಕ್ಕಿಸಲು ಕೆಲವು ಪುರುಷರು ಹತ್ತಿರ ಹೋದಾಗ ನಟಿ ರಾಖಿ, ನಾನೀಗ ಪವಿತ್ರಳಾಗಿದ್ದೇನೆ. ನನ್ನನ್ನು ಯಾವ ಗಂಡಸರೂ ಮುಟ್ಟುವಂತಿಲ್ಲ.ಮೆಕ್ಕಾ-ಮದೀನಾಕ್ಕೆ ಹೋಗಿ ಪವಿತ್ರಳಾಗಿ ಬಂದಿದ್ದೇನೆ ಎನ್ನುವ ಮೂಲಕ ಎಲ್ಲ ಪುರುಷರನ್ನು ದೂರ ಸರಿಸಿದ್ದಾರೆ. ಇದಕ್ಕೂ ಈಗ ಸಕತ್​ ಟ್ರೋಲ್​ಗೆ ಒಳಗಾಗುತ್ತಿದ್ದಾರೆ. ಎಷ್ಟು ದಿನ ಪವಿತ್ರಳು ಎಂದೆಲ್ಲಾ ಪ್ರಶ್ನೆ ಮಾಡುತ್ತಿದ್ದಾರೆ. ಇನ್ನು ಕೆಲವರು ಡ್ರಾಮಾ ಮಾಡಲು ಮೆಕ್ಕಾ-ಮದೀನಾ ಹೆಸರನ್ನು ಬಳಸಿಕೊಳ್ಳುತ್ತಿರುವುದಕ್ಕೆ ಕೆಂಡಾಮಂಡಲರಾಗಿದ್ದಾರೆ. 

ಮದ್ವೆನೇ ಆಗಲ್ಲ ಎಂದಿದ್ದ ರಾಖಿಗೆ ಡಿವೋರ್ಸ್​ಗೂ ಮುನ್ನವೇ ಸಿಕ್ಕನಂತೆ ಮತ್ತೊಬ್ಬ- ಯಾರೀತ?

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

2026ರಲ್ಲಿ ಹಾಟ್ ಆಗಿರಬೇಕಾ, ಪ್ರೆಗ್ನೆಂಟ್ ಆಗಿಬಿಡಲೇ? ಸಲಹೆ ಕೇಳಿದ ನಟಿಗೆ ಭರ್ಜರಿ ಕಮೆಂಟ್
ಯೂಟ್ಯೂಬ್‌ನಲ್ಲಿರುವ ಟಾಕ್ಸಿಕ್ ಟೀಸರ್ ವಿರುದ್ಧ ಅಸಮಾಧಾನಕ್ಕೆ ಸೆನ್ಸರ್ ಬೋರ್ಡ್ ಮಹತ್ವದ ಹೇಳಿಕೆ