ಅನೈತಿಕ ಸಂಬಂಧ ಆರೋಪ; ಪತಿ ವಿರುದ್ಧ ದೂರು ಕೊಟ್ಟ ರಾಖಿ ರಸ್ತೆಯಲ್ಲಿ ಪರೋಟ ತಿನ್ನಿಸುತ್ತಿರುವ ವಿಡಿಯೋ ವೈರಲ್

By Vaishnavi Chandrashekar  |  First Published Feb 7, 2023, 9:11 AM IST

ಓಶಿವಾರ ಪೊಲೀಸ್ ಠಾಣೆಯಲ್ಲಿ ಪತಿ ಆದಿಲ್ ವಿರುದ್ಧ ದೂರು ದಾಖಲಿಸಿದ ರಾಖಿ ಸಾವಂತ್. ರಸ್ತೆ ರಂಪಾಟಕ್ಕೆ ಬ್ರೇಕ್ ಇಲ್ವಾ? 


ಬಾಲಿವುಡ್‌ ನಟಿ, ಬಿಗ್ ಬಾಸ್‌ ಸ್ಪರ್ಧಿ ರಾಖಿ ಸಾವಂತ್ ಕೆಲವು ದಿನಗಳ ಹಿಂದೆ ತಾಯಿ ಜಯಾ ಸಾವಂತ್‌ರನ್ನು ಕಳೆದುಕೊಂಡು ದುಃಖದಲ್ಲಿದ್ದರು. ಇದೇ ಸಮಯದಲ್ಲಿ ಗುಪ್ತವಾಗಿ ನಡೆದಿದ ಮದುವೆ ಬಹಿರಂಗವಾಗಿತ್ತು. ಇನ್ನು ಮುಂದೆ ರಾಖಿ ಒಂಟಿಯಲ್ಲಿ ಮೈಸೂರು ಹುಡುಗ ಆದಿಲ್ ಜೊತೆಗಿದ್ದಾನೆ ಎಂದು ತಿಳಿದು ಅಭಿಮಾನಿಗಳು ಖುಷಿಯಲ್ಲಿದ್ದರು. ಆದರೆ ಸಣ್ಣ ಪುಟ್ಟ ಮನಸ್ತಾಪಗಳನ್ನು ಪ್ಯಾಪರಾಜಿಗಳ ಜೊತೆ ಹಂಚಿಕೊಂಡು ಸಂಸಾರದ ಕಥೆಯನ್ನು ರಸ್ತೆಗೆ ತಂದಿಟ್ಟಿದ್ದಾರೆ. ಈಗ ಮುಂಬೈ ಠಾಣೆಯಲ್ಲಿ ದೂರು ದಾಖಲಾಗಿದೆ.

ಆದಿಲ್​ನನ್ನು ಮದುವೆಯಾಗಿ ಮೋಸಹೋದೆ ಎಂದು ಕಣ್ಣೀರಿಟ್ಟಿದ್ದ ರಾಖಿ 'ಕಳೆದ ವರ್ಷ ಜುಲೈನಲ್ಲಿ ಮದುವೆಯಾದ್ವಿ (Marriage). ಆದರೆ ಮದ್ವೆ ಬಗ್ಗೆ ಹೇಳದಂತೆ ಪತಿ ಬೆದರಿಕೆ ಹಾಕಿದ್ದ' ಎಂದು ರಾಖಿ ಹೇಳಿದ್ದಾರೆ. 'ಮದುವೆ ಬಗ್ಗೆ ತಿಳಿದರೆ ಅವನ  ತಂಗಿಗೆ ಹುಡುಗ ಸಿಗುವುದಿಲ್ಲ ಎನ್ನುವ ಕಾರಣ ನೀಡಿ ವಿಷಯ ಬಹಿರಂಗಪಡಿಸಬೇಡಿ ಎಂದಿದ್ದ. ನನ್ನ ಹೆಸರು ಹೇಳುವುದು ಅವನಿಗೆ ನಾಚಿಕೆ ಅಂತೆ. ಅದಕ್ಕೇ ಹೇಳಬೇಡ' ಎಂದು ಹೇಳಿರುವುದಾಗಿ ಗೋಳೋ ಎಂದಿದ್ದರು. ಕೊನೆಗೂ ಆದಿಲ್​ ಖಾನ್​ ತಾನು ರಾಖಿಯನ್ನು ಮದುವೆಯಾಗಿದ್ದು ನಿಜ ಎಂದು ಒಪ್ಪಿಕೊಂಡಿದ್ದರು. ಅಂತೂ ಈ ದಂಪತಿಯ ನಡುವಿನ ನಾಟಕ ಅಂತ್ಯವಾಯಿತು ಎಂದು ಅಂದುಕೊಳ್ಳುತ್ತಿರುವಾಗಲೇ ಈಗ ಮತ್ತೊಂದು ನಾಟಕ ಶುರುವಾಗಿದೆ. 

Tap to resize

Latest Videos

ರಾಖಿ ಸಾವಂತ್ ಪ್ರೆಗ್ನೆಂಟ್‌ ಇದೇನು ನಿಜನಾ ಅಥವಾ ಮತ್ತೊಂದು ಸುಳ್ಳಾ?

ಅನೈತಿಕ ಸಂಬಂಧ: 

ರಾಖಿ ಬಿಗ್ ಬಾಸ್‌ನಲ್ಲಿದ್ದಾಗ ಆದಿಲ್ ಯುವತಿಯೊಬ್ಬಳ ಪರಿಚಯ ಮಾಡಿಕೊಂಡು ಈಗ ಆ ಸಂಬಂಧ ನಡೆಸುತ್ತಿದ್ದಾನೆ ಎಂದು ಆರೋಪ ಮಾಡಿದ್ದಾರೆ.  'ನಾನು ಬಿಗ್ ಬಾಸ್ ಮರಾಠಿಯ ಸೀಸನ್​ 4ನಲ್ಲಿದ್ದಾಗ ಅವರ ಜೀವನದಲ್ಲಿ ಬೇರೆ ಯುವತಿ ಬಂದಿದ್ದಾಳೆ. ಅವಳು ಯಾರು ಎನ್ನುವುದು ನನಗೆ ಚೆನ್ನಾಗಿ ಗೊತ್ತು.  ಆದರೆ ಈಗಲೇ  ನಾನು ಅದನ್ನು ಬಹಿರಂಗಪಡಿಸುವುದಿಲ್ಲ.  ಆದರೆ ಸಮಯ ಬಂದಾಗ, ನಾನು ಎಲ್ಲಾ ಫೋಟೋಗಳು ಮತ್ತು ವೀಡಿಯೊಗಳನ್ನು ತೋರಿಸುತ್ತೇನೆ' ಎಂದಿದ್ದಾರೆ. ಹಿಂದೊಮ್ಮೆ ಪತಿ ಆದಿಲ್​ ಬಗ್ಗೆ ಇಲ್ಲಸಲ್ಲದ ಆರೋಪ ಮಾಡಿದ್ದ ರಾಖಿ, ಈಗ 'ಆತ ನನ್ನನ್ನು  ಕೇವಲ ಖ್ಯಾತಿಗಾಗಿ ಮೆಟ್ಟಿಲಿನಂತೆ ಬಳಸಿಕೊಳ್ಳುತ್ತಿದ್ದಾನೆ. ನನ್ನನ್ನು ಮದುವೆಯಾದ ಮಾತ್ರಕ್ಕೆ ಆತನನ್ನು ನೀವೇಲ್ಲ ಫೇಮಸ್ ಮಾಡಬೇಡಿ. ನಾನು ಅವನನ್ನು ಫೇಮಸ್ (Famous) ಮಾಡಿದ್ದೇನೆ. ಎಲ್ಲಾ ಸೆಲೆಬ್ರಿಟಿಗಳನ್ನು ಭೇಟಿಯಾಗುವಂತೆ ಮಾಡಿದ್ದೇನೆ. ಈಗ ಇದು ಜಾಸ್ತಿಯಾಯ್ತು ಎನ್ನಿಸುತ್ತಿದೆ' ಎಂದು ರಾಖಿ  ಹೇಳಿದ್ದಾರೆ. 

ರಾಖಿ ವೈಯಕ್ತಿ ಜೀವನದ ಪ್ರತಿಯೊಂದು ವಿಚಾರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿರುವುದಕ್ಕೆ ಆದಿಲ್ ಬೇಸರ ಮಾಡಿಕೊಂಡು ದಯವಿಟ್ಟು ನನಗೆ ಕರೆ ಮಾಡಬೇಡ ಎಂದಿದ್ದರು. ಜೀವನ ಹಾಳಾಯ್ತು ಎಂದು ಹೇಳುತ್ತಲೇ ರಾಖಿ ಓಶಿವಾರ ಪೊಲೀಸ್ ಠಾಣೆ ಮುಂಬೈನಲ್ಲಿ ಆದಿಲ್ ವಿರುದ್ಧ ದೂರು ನೀಡಿದ್ದಾರೆ. ಆದಿಲ್‌ಗೆ ಅನೈತಿಕ ಸಂಬಂಧವಿದೆ ಇದರಿಂದ ನನ್ನ ಜೀವನ ಕಷ್ಟವಾಗುತ್ತಿದೆ ನನ್ನ ಪತಿ ನನ್ನ ಜೊತೆಗಿರಬೇಕು ಎಂದು ಹೇಳಿಕೆ ನೀಡಿದ್ದಾರೆ. 'ಆ ಯುವತಿ ನನಗೆ ಆದಿಲ್‌ಗೆ ನೆಮ್ಮದಿಯಾಗಿ ಜೀವನ ನಡೆಸಲು ಬಿಡಲಿಲ್ಲ ಅಂದ್ರೆ ಆಕೆ ಇಡೀ ಜೀವನ ಬಯಲು ಮಾಡುವೆ. ಅವರಿಬ್ಬರ ಫೋಟೋ ಮತ್ತು ಚಾಟ್ಸ್‌ ನನ್ನ ಬಳಿ ಇದೆ' ಎಂದು ರಾಖಿ ಹೇಳಿದ್ದಾರೆ. 

ಪತಿ ವಿರುದ್ಧ ದೂರು ನೀಡಿ ರಾಖಿ ಮುಂದೆ ಎನು ಮಾಡುತ್ತಾರೆಂದು ಯೋಚನೆ ಮಾಡುವಷ್ಟರಲ್ಲಿ ಮುಂಬೈ ರಸ್ತೆ ಬದಿಯಲ್ಲಿ ಆದಿಲ್ ಖಾನ್ ಜೊತೆ ಪರೋಟ ತಿನ್ನುತ್ತಿರುವ ವಿಡಿಯೋವನ್ನು ಪ್ಯಾಪರಾಜಿಗಳು ಸೆರೆ ಹಿಡಿದಿದ್ದಾರೆ. ಕ್ಯಾಮೆರಾ ನೋಡುತ್ತಿದ್ದಂತೆ ದುಃಖದ ಮುಖ ಮಾಡಿಕೊಂಡಿದ್ದಾರೆ. 'ಈ ಕ್ಷಣವೂ ರಾಖಿ ಏನು ಮಾಡುತ್ತಿದ್ದಾರೆ ಗೊತ್ತಾಗುತ್ತಿಲ್ಲ ಆದರೆ ರಾಖಿ ಕ್ಯಾಮೆರಾ ಕಂಡಾಗ ಸೃಷ್ಟಿ ಮಾಡುವ ನಾಟಕ ಅದ್ಭುತವಾಗಿರುತ್ತದೆ' ಎಂದು ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ. 

click me!