ಶಾರುಖ್ ಖಾನ್ ಜೊತೆ ಮೊದಲ ನಾಯಕಿಯಾಗಿ ನಟಿಸಿದ ನಟಿ ರೇಣುಕಾ ಶಹಾನೆ. ಸರ್ಕಸ್ ಧಾರಾವಾಹಿಯ ಕುರಿತು ಇಬ್ಬರ ನಡುವೆ ನಡೆದ ಚಾಟ್ ವೈರಲ್ ಆಗಿದ್ದು, ಏನಿದೆ ಈ ಚಾಟ್ನಲ್ಲಿ?
1989-90ರ ಸುಮಾರಿಗೆ ದೂರದರ್ಶನ ಚಾನೆಲ್ನಲ್ಲಿ ಎಲ್ಲರ ಮನ ಗೆದ್ದಿರುವ ಸರ್ಕಸ್ (Circus) ಧಾರಾವಾಹಿ ನೆನಪಿದೆಯಾ? ಶಾರುಖ್ ಖಾನ್ (Shah Rukh Khan) ಅವರಿಗೆ ಬ್ರೇಕ್ ಕೊಟ್ಟ ಧಾರಾವಾಹಿ ಇದು. ಅಲ್ಲಿಂದಲೇ ಅವರ ಸಿನಿ ಪಯಣ ಶುರುವಾದದ್ದು ಎಂದರೂ ತಪ್ಪಾಗಲಿಕ್ಕಿಲ್ಲ. ಇಂದು ಶಾರುಖ್ ಸೂಪರ್ ಸ್ಟಾರ್ ಆಗಿರಬಹುದು. ಆದರೆ ಅವರಿಗೆ ದೊಡ್ಡ ಮಟ್ಟದ ಜನಪ್ರಿಯತೆ ತಂದುಕೊಟ್ಟದ್ದು ಸರ್ಕಸ್ ಧಾರಾವಾಹಿ. ಆ ಧಾರಾವಾಹಿಗೆ ಅಜೀಜ್ ಮಿಶ್ರಾ (Ajeej Mishra) ನಿರ್ದೇಶನ ಮಾಡಿದ್ದರು. ಈ ಧಾರಾವಾಹಿಯಲ್ಲಿ ನಾಯಕಿಯಾಗಿ ನಟಿಸಿದಾಗ ಮುದ್ದುಮೊಗದ ರೇಣುಕಾ ಶಹಾನೆ. ಈ ಧಾರಾವಾಹಿಯನ್ನು 2020ರ ಲಾಕ್ಡೌನ್ ಟೈಂನಲ್ಲಿ ಡಿಡಿಯಲ್ಲಿ ಪುನಃ ಪ್ರಸಾರ ಮಾಡಲಾಗಿತ್ತು. ಹಾಗೆ ನೋಡಿದರೆ ಶಾರುಖ್ ಅವರ ಮೊದಲ ನಾಯಕಿ ರೇಣುಕಾ ಅವರೇ. ಪಠಾಣ್ ಚಿತ್ರದಲ್ಲಿ ರೇಣುಕಾ ಅವರ ಪತಿ ಅಶುತೋಷ್ ರಾಣಾ ಅವರೂ ನಟಿಸಿದ್ದಾರೆ. ಇದರಲ್ಲಿ ಅವರದ್ದು ಕರ್ನಲ್ ಲೂಥ್ರಾ ಪಾತ್ರ. ಇದೀಗ ಪಠಾಣ್ ಚಿತ್ರವನ್ನು ರೇಣುಕಾ ಅವರು ಪತಿಯ ಜೊತೆ ವೀಕ್ಷಿಸಲು ಹೋಗಿದ್ದರು. ಈ ಸಂದರ್ಭದಲ್ಲಿ ಶಾರುಖ್ ಮತ್ತು ರೇಣುಕಾ ನಡುವೆ ಟ್ವಿಟರ್‌ನಲ್ಲಿ ಹಾಸ್ಯಭರಿತ ಮಾತುಕತೆ ನಡೆದಿದ್ದು, ಅದು ವೈರಲ್ ಆಗಿದೆ.
ತಮ್ಮ ಪತಿ ಅಶುತೋಷ್ ರಾಣಾ (Ashutosh Rana) ಜೊತೆ ಪಠಾಣ್ ಚಿತ್ರವನ್ನು ನೋಡಿಬಂದ ಮೇಲೆ ರೇಣುಕಾ ಟ್ವಿಟರ್‌ನಲ್ಲಿ ಸರ್ಕಸ್ನ ತುಣುಕೊಂದನ್ನು ಶೇರ್ ಮಾಡಿದ್ದಾರೆ. ಅದರಲ್ಲಿ ನಾಯಕನಾಗಿದ್ದ ಶೇಖರ್ (ಶಾರುಖ್ ಖಾನ್), ನಾಯಕಿಯಾಗಿದ್ದ ಮಾರಿಯಾ ಅರ್ಥಾತ್ ರೇಣುಕಾ ಶಹಾನೆ (Renuka Shahane) ಅವರಿಗೆ ನಾವು ಎಷ್ಟೊಂದು ವರ್ಷಗಳ ಬಳಿಕ ಭೇಟಿಯಾಗುತ್ತಿದ್ದೇವೆ ಅಲ್ಲವೆ ಎಂದು ಪ್ರಶ್ನಿಸುತ್ತಾನೆ. ಅದನ್ನೇ ರೇಣುಕಾ ಶೇರ್ ಮಾಡಿದ್ದಾರೆ. ಇದಕ್ಕೆ ಶಾರುಖ್ ಎಂದಿನಂತೆ ತಮ್ಮ ಮೊದಲ ನಾಯಕಿಗೆ ಹಾಸ್ಯದ ಉತ್ತರ ಕೊಟ್ಟಿದ್ದಾರೆ. ರೇಣುಕಾ ಅವರು, 'ಕರ್ನಲ್ ಲೂತ್ರಾ ಜಿ ಜೊತೆ ಅಂತಿಮವಾಗಿ ಪಠಾಣ್ (Pathaan) ವೀಕ್ಷಿಸಲಿದ್ದೇನೆ. ಹವಾಮಾನ ಉತ್ತಮವಾಗಿದೆ. ಪತಿಯ ಜೊತೆ ಸೀಟ್ ಬೆಲ್ಟ್‌ಗಳನ್ನು ಜೋಡಿಸಲಾಗಿದೆ ಎಂದು ಬರೆದುಕೊಂಡಿದ್ದಾರೆ.
Circus redux 🥹pic.twitter.com/iQQZsROo2z https://t.co/hSWRC4w9fU
— CinemaRare (@CinemaRareIN)ಇದಕ್ಕೆ ತಮಾಷೆಯ ಪ್ರತಿಕ್ರಿಯೆ ನೀಡಿರುವ ಶಾರುಖ್, 'ನೀವು ನನ್ನ ಮೊದಲ ನಾಯಕಿ ಎಂದು ಕರ್ನಲ್ ಲೂತ್ರಾ (Curnol Luthra) ಅವರಿಗೆ ಹೇಳಿದ್ದೀರಾ ಅಥವಾ ನಾವು ಅದನ್ನು ರಹಸ್ಯವಾಗಿಡಬೇಕೆ' ಎಂದು ಚಟಾಕಿ ಹಾರಿಸಿದ್ದಾರೆ. ಒಂದು ವೇಳೆ ಅವರಿಗೆ ಈ ರಹಸ್ಯ ಹೇಳಿದರೆ ನನ್ನನ್ನು ಏಜೆನ್ಸಿಯಿಂದ ವಜಾಗೊಳಿಸಬಹುದು ಎಂದಿದ್ದಾರೆ. ಅಸಲಿಗೆ ಪಠಾಣ್ ಚಿತ್ರದಲ್ಲಿ ದೀಪಿಕಾ ಹಾಗೂ ಶಾರುಖ್ ಮಧ್ಯೆ ಏನೋ ನಡೆಯುತ್ತಿದೆ ಎನ್ನುವುದು ಕರ್ನಲ್ ಲೂತ್ರಾ ಅವರ ಬಳಿ ಗುಪ್ತವಾಗಿ ಇಡಲಾಗಿತ್ತು. ಏಕೆಂದರೆ ಇದರಲ್ಲಿ ದೀಪಿಕಾ ಐಎಸ್ಐನ ಏಜೆಂಟ್ (ISI Agent) ಆಗಿದ್ದರಿಂದ ಇಬ್ಬರ ನಡುವಿನ ಪ್ರೀತಿಯನ್ನು ಯಾರಿಗೂ ಹೇಳಿರಲಿಲ್ಲ. ಅದಕ್ಕೇ ಶಾರುಖ್ ಖಾನ್ ಹೀಗೆ ತಮಾಷೆಯಾಗಿ ಹೇಳಿದ್ದಾರೆ.
Shah Rukh Khan: 'ಪಠಾಣ್' ಅಬ್ಬರದ ನಡುವೆಯೇ ಶಾರುಖ್ ಅಭಿಮಾನಿಗಳಿಗೆ ಶಾಕಿಂಗ್ ನ್ಯೂಸ್!
ಅಲ್ಲಿಗೆ ಸುಮ್ಮನೇ ಇರದ ರೇಣುಕಾ ಅವರು, 'ಹ್ಹಹ್ಹಹ್ಹಾ... ಅವರಿಂದ ಯಾವುದಾದರೂ ವಿಷಯ ಗುಪ್ತವಾಗಿ ಇಡಲು ಸಾಧ್ಯವೆ? ಖಂಡಿತಾ ಇಲ್ಲ. ನೀವೇ ಅವರನ್ನು ಅಂತರ್ಯಾಮಿ ಎಂದು ಹೇಳಿದ್ದೀರಿ. ಏನೇ ಆದರೂ ಅವರು ನಿಮ್ಮನಂತೂ ಫೈರ್ (Fire) ಮಾಡಲು ಸಾಧ್ಯವಿಲ್ಲ. ಏಕೆಂದರೆ, ನೀವು ಮಾಡುವ ಕೆಲಸ ಅವರಿಂದ ಮಾಡಲು ಆಗುವುದಿಲ್ಲವಲ್ಲ ಎಂದು ಪಠಾಣ್ ಚಿತ್ರಕ್ಕೆ ಹೊಂದಿಕೆ ಆಗುವಂತೆ ಉತ್ತರ ಕೊಟ್ಟಿದ್ದಾರೆ. ಈ ಪ್ರಶ್ನೋತ್ತರ ಸಕತ್ ವೈರಲ್ ಆಗಿದ್ದು, ನೆಟ್ಟಿಗರು ತುಂಬಾ ಖುಷಿ ಪಟ್ಟಿದ್ದಾರೆ. ಇದಕ್ಕೆ ಥಹರೇವಾರಿ ಕಮೆಂಟ್ಗಳು (Comments) ಬರುತ್ತಿವೆ.
Hahaha unsey koi baat chhupti kahaan hai? Aaphi ne unhe antaryaami kahaa hai 😃 aur chaahey jo ho jaaye, woh aapko fire nahi kar saktey kyunki jo kaam aap kartey hain woah koi aur nahi kar saktaa 🤗🙏🏾 https://t.co/D3JitHzCzg
— Renuka Shahane (@renukash)