ಅನಂತ್ ಅಂಬಾನಿ ಮದ್ವೆಗೆ ತಮಗೆ ಯಾಕೆ ಕರೆದಿಲ್ಲ ಎಂದು ಪ್ರಶ್ನಿಸಿರೋ ರಾಖಿ ಸಾವಂತ್ ತಮಗೆ ಕರೆದಿದ್ದರೆ ಆಗ್ತಿರೋ ನಾಲ್ಕು ಪ್ರಯೋಜನಗಳ ಕುರಿತು ಹೇಳಿದ್ದಾರೆ. ಅವರು ಹೇಳಿದ್ದೇನು?
ಅಂಬಾನಿಜೀ... ಮದ್ವೆಗೆ ನನ್ನನ್ಯಾಕೆ ಕರೆದಿಲ್ಲ? ನಾನು ಹೇಗೆ ಡ್ಯಾನ್ಸ್ ಮಾಡ್ತಿದ್ದೆ ಎನ್ನುವುದು ನಿಮಗೆ ಗೊತ್ತಿಲ್ವಾ? ಮುನ್ನಿ ಬದ್ನಾಮ್ ಹುಯೀ ಅಂಥ ಎಷ್ಟೋ ಸೆಕ್ಸಿ ಡ್ಯಾನ್ಸ್ ಮಾಡಿದ್ದೇನೆ. ನೀವು ನೋಡಿಲ್ವಾ? ನನ್ನನ್ನು ಯಾಕೆ ಕರೆದಿಲ್ಲಾ ಅಂಬಾನಿಜೀ... ಯಾರ್‍ಯಾರಿಗೋ ಸಾವಿರಾರು ಕೋಟಿ ರೂಪಾಯಿ ಕೊಟ್ಟು ಕರೆಸಿಕೊಂಡ್ರಿ. ರಿಹಾನಾಗೆ ಅಷ್ಟೆಲ್ಲಾ ದುಡ್ಡು ಕೊಟ್ಟಿದ್ರೂ ಹರಿದ ಬಟ್ಟೆಯೊಂದಿಗೆ ಪರ್ಫಾಮ್ ಮಾಡಿದ್ಲು... ನನ್ನನ್ನು ಯಾಕೆ ಕರೆದಿಲ್ಲ? ನನ್ನನ್ನು ಕರೆದಿದ್ರೆ ಹಾಟ್-ಸೆಕ್ಸಿಯಾಗಿ ಬರುತ್ತಿದ್ದೆ.. ಇನ್ನು ಏನೆಲ್ಲಾ ಮಾಡುತ್ತಿದ್ದೆ...
ಹೀಗೆಂದು ಡ್ರಾಮಾ ಕ್ವೀನ್, ಬಾಲಿವುಡ್ ನಟಿ ರಾಖಿ ಸಾವಂತ್ ಮುಕೇಶ್ ಅಂಬಾನಿಯವರನ್ನು ಪ್ರಶ್ನಿಸಿದ್ದಾರೆ. ಇನ್‌ಸ್ಟಾಗ್ರಾಮ್‌ನಲ್ಲಿ ವಿಡಿಯೋ ಶೇರ್ ಮಾಡಿರುವ ನಟಿ, ತಮ್ಮನ್ನು ಯಾಕೆ ಕರೆದಿಲ್ಲ ಎಂದು ಅಂಬಾನಿಯವರನ್ನು ಪ್ರಶ್ನಿಸಿದ್ದಾರೆ. ತಮ್ಮನ್ನು ಮದುವೆಗೆ ಕರೆದಿದ್ದರೆ ನಾಲ್ಕು ಉಪಯೋಗವಿತ್ತು ಎನ್ನುತ್ತಲೇ ಅದರ ಬಗ್ಗೆ ಹೇಳಿದ್ದಾರೆ. ಡ್ಯಾನ್ಸ್ ಮಾಡುವ ಮೂಲಕ ಎಲ್ಲರನ್ನೂ ರಂಜಿಸುತ್ತಿದ್ದೆ, ಉದ್ದನೆ ಬಟ್ಟೆ ಹಾಕಿಕೊಂಡು ಬಂದು ನೆಲವನ್ನೂ ಗುಡಿಸುತ್ತಿದ್ದೆ, ಅತಿಥಿಗಳು ಊಟ ಮಾಡಿದ ಬಳಿಕ ಪಾತ್ರೆ ತೊಳೆಯುತ್ತಿದ್ದೆ, ಅವರ ಕೋಣೆಯನ್ನೆಲ್ಲಾ ಶುಚಿಗೊಳಿಸುತ್ತಿದ್ದೆ. ಇಷ್ಟಾದರೂ ನನ್ನನ್ನು ಯಾಕೆ ಕರೆದಿಲ್ಲ. ತುಂಬಾ ತಪ್ಪು ಮಾಡಿಬಿಟ್ರಿ ಎಂದು ರಾಖಿ ಸಾವಂತ್ ಗೋಳೋ ಎಂದಿದ್ದಾರೆ.
ದುಡ್ಡಿಗಾಗಿ ಮದುವೆಯಲ್ಲಿ ಕುಣಿದು ಕುಪ್ಪಳಿಸಿದ ಬಾಲಿವುಡ್ ಸ್ಟಾರ್ಗಳಿಗೆ ಕಂಗನಾ ರಣಾವತ್ ಟಾಂಗ್!
ನನ್ನನ್ನು ಕರೆದಿದ್ದರೆ ವೇದಿಕೆಗೇ ಕಿಚ್ಚು ಹೊತ್ತಿಸುತ್ತಿದೆ, ಖುರ್ಚಿಗಳನ್ನು ಕಿತ್ತು ಹಾಕುವಂಥ ಪರ್ಫಾಮ್ ಮಾಡುತ್ತಿದ್ದೆ. ಇನ್ನು ಏನೇನೋ ಮಾಡುತ್ತಿದ್ದೆ. ಆದರೆ ನನ್ನನ್ನು ನೀವು ಕರೆಯದೇ ಬಹಳ ತಪ್ಪು ಮಾಡಿರುವಿರಿ, ಯಾರ್‍ಯಾರನ್ನೋ ಕರೆದಿರುವಿರಿ ಎಂದು ರಾಖಿ ಸಾವಂತ್ ಹೇಳಿದ್ದಾರೆ. ಅಂದಹಾಗೆ ಸದ್ಯ ಎಲ್ಲೆಲ್ಲೂ ಮುಕೇಶ್ ಅಂಬಾನಿ ಮತ್ತು ನೀತಾ ಅಂಬಾನಿ ಪುತ್ರ ಅನಂತ್ ಅಂಬಾನಿ- ರಾಧಿಕಾ ಮರ್ಚೆಂಟ್ ಮದುವೆಯದ್ದೇ ಚರ್ಚೆ. ಇದರಲ್ಲಿ ಬಹುತೇಕ ಎಲ್ಲಾ ಬಾಲಿವುಡ್ ನಟ-ನಟಿಯರೂ ಭಾಗವಹಿಸಿ, ವೇದಿಕೆ ಮೇಲೆ ಕುಣಿದು ಕುಪ್ಪಳಿಸಿದ್ದಾರೆ. ಅಷ್ಟಕ್ಕೂ ಇವರೇನು ಮದುವೆಯಲ್ಲಿ ಖುಷಿಯಿಂದ ಕುಣಿದವರಲ್ಲ. ಇಂಥ ಮದುವೆಗಳಲ್ಲಿ ಕುಣಿಯುವುದಕ್ಕಾಗಿಯೇ ಹಲವು ನಟ-ನಟಿಯರು ಕೋಟಿ ಕೋಟಿಗಟ್ಟಲೆ ಹಣವನ್ನು ಪಡೆದುಕೊಳ್ಳುತ್ತಾರೆ. ಆದರೆ ನೋಡುಗರಿಗೆ ಮಾತ್ರ ಅವರು ಮದುವೆಯ ದಿನ ತಮ್ಮ ಇಷ್ಟದಿಂದ ಖುಷಿಯಾಗಿ ಕುಣಿದರು ಎಂದೇ ಕಾಣಿಸುವುದು ಉಂಟು.
ಇದೇ ಕಾರಣಕ್ಕೆ ಗರ್ಭಿಣಿಯಾಗಿರುವ ದೀಪಿಕಾ ಪಡುಕೋಣೆ ಕೂಡ ಸಾಕಷ್ಟು ಟ್ರೋಲ್ಗೆ ಒಳಗಾಗಿದ್ದರು. ಎರಡು ತಿಂಗಳ ಗರ್ಭಿಣಿಯಾದರೂ ದುಡ್ಡಿನ ಆಸೆಗೆ ಬಿದ್ದು ಪತಿಯ ಜೊತೆ ಭರ್ಜರಿ ಸ್ಟೆಪ್ ಹಾಕಿದ್ದಾರೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಚರ್ಚೆಯೂ ಆಗಿತ್ತು. ಈಗ ಇವರಿಗೆಲ್ಲಾ ದುಡ್ಡು ಕೊಟ್ಟು ಕರೆದು ತಮ್ಮನ್ನು ಕರೆದಿಲ್ಲ ಎನ್ನುವುದು ರಾಖಿ ಮಾತು.
ನಿಮ್ಮ ಚಡ್ಡಿ, ಬನಿಯನ್ ಮಾರಿದ್ರೂ ಮೂರು ಖಾನ್‌ರನ್ನು ಸೇರಿಸಲು ಸಾಧ್ಯವಿಲ್ಲ ಎಂದಿದ್ದ ಶಾರುಖ್: ಈಗ?