
ಈಗ ಎಲ್ಲೆಲ್ಲೂ ಸದ್ಯ ಮುಕೇಶ್ ಅಂಬಾನಿ ಮತ್ತು ನೀತಾ ಅಂಬಾನಿ ಪುತ್ರ ಅನಂತ್ ಅಂಬಾನಿ- ರಾಧಿಕಾ ಮರ್ಚೆಂಟ್ ಮದುವೆಯದ್ದೇ ಚರ್ಚೆ. ಇದರಲ್ಲಿ ಬಹುತೇಕ ಎಲ್ಲಾ ಬಾಲಿವುಡ್ ನಟ-ನಟಿಯರೂ ಭಾಗವಹಿಸಿ, ವೇದಿಕೆ ಮೇಲೆ ಕುಣಿದು ಕುಪ್ಪಳಿಸಿದ್ದಾರೆ. ಅಷ್ಟಕ್ಕೂ ಇವರೇನು ಮದುವೆಯಲ್ಲಿ ಖುಷಿಯಿಂದ ಕುಣಿದವರಲ್ಲ. ಇಂಥ ಮದುವೆಗಳಲ್ಲಿ ಕುಣಿಯುವುದಕ್ಕಾಗಿಯೇ ಹಲವು ನಟ-ನಟಿಯರು ಕೋಟಿ ಕೋಟಿಗಟ್ಟಲೆ ಹಣವನ್ನು ಪಡೆದುಕೊಳ್ಳುತ್ತಾರೆ. ಆದರೆ ನೋಡುಗರಿಗೆ ಮಾತ್ರ ಅವರು ಮದುವೆಯ ದಿನ ತಮ್ಮ ಇಷ್ಟದಿಂದ ಖುಷಿಯಾಗಿ ಕುಣಿದರು ಎಂದೇ ಕಾಣಿಸುವುದು ಉಂಟು. ಇದೇ ಕಾರಣಕ್ಕೆ ಗರ್ಭಿಣಿಯಾಗಿರುವ ದೀಪಿಕಾ ಪಡುಕೋಣೆ ಕೂಡ ಸಾಕಷ್ಟು ಟ್ರೋಲ್ಗೆ ಒಳಗಾಗಿದ್ದರು. ಎರಡು ತಿಂಗಳ ಗರ್ಭಿಣಿಯಾದರೂ ದುಡ್ಡಿನ ಆಸೆಗೆ ಬಿದ್ದು ಪತಿಯ ಜೊತೆ ಭರ್ಜರಿ ಸ್ಟೆಪ್ ಹಾಕಿದ್ದಾರೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಚರ್ಚೆಯೂ ಆಗಿತ್ತು.
ಅದೇ ಇನ್ನೊಂದೆ ಶಾರುಖ್ ಖಾನ್, ಸಲ್ಮಾನ್ ಖಾನ್ ಮತ್ತು ಆಮೀರ್ ಖಾನ್ ಒಟ್ಟಿಗೇ, ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡಿರುವುದೂ ಸದ್ದು ಮಾಡುತ್ತಿದೆ. ನಮ್ಮ ಮೂವರು ಖಾನ್‌ರನ್ನು ಒಟ್ಟಿಗೇ ಒಂದೇ ಕಡೆ ಸೇರಿಸುವಷ್ಟು ಸಂಪತ್ತು ಯಾರ ಬಳಿಯೂ ಇಲ್ಲ, ಚಡ್ಡಿ, ಬನಿಯನ್ ಮಾರಿದ್ರೂ ಇದು ಸಾಧ್ಯವಿಲ್ಲ ಎಂದು ಶಾರುಖ್ ಈ ಹಿಂದೆ ಹೇಳಿದ್ದ ಮಾತು ಸಾಕಷ್ಟು ಸದ್ದು ಮಾಡುತ್ತಿದೆ. ದುಡ್ಡಿನ ಆಸೆಗೆ ಬಿದ್ದು ತಮ್ಮ ಮಾತನ್ನೇ ಮರೆತರು ಎಂದೂ ಹೇಳಲಾಗುತ್ತಿದೆ. ಇಂಥವರಿಗೆ ಬುದ್ಧಿ ಕಲಿಸುವುದಕ್ಕಾಗಿಯೇ ಉಪಾಯ ಮಾಡಿ ಮುಕೇಶ್ ಅಂಬಾನಿಯವರು ತಮ್ಮ ಮಗನ ಮದುವೆ ಕರೆಸಿದ್ದಾರೆ, ಬಾಲಿವುಡ್ ಸ್ಟಾರ್ಸ್ ಹಣೆಬರಹವನ್ನು ಎಲ್ಲರ ಎದುರು ತೆರೆದಿಟ್ಟಿದ್ದಾರೆ ಎಂದು ಮತ್ತೊಂದಿಷ್ಟು ಜನ ಹೇಳುತ್ತಿದ್ದಾರೆ.
ನಿಮ್ಮ ಚಡ್ಡಿ, ಬನಿಯನ್ ಮಾರಿದ್ರೂ ಮೂರು ಖಾನ್‌ರನ್ನು ಸೇರಿಸಲು ಸಾಧ್ಯವಿಲ್ಲ ಎಂದಿದ್ದ ಶಾರುಖ್: ಈಗ?
ಈಗ ಇವರಿಗೆಲ್ಲಾ ಟಾಂಗ್ ಕೊಟ್ಟಿರೋ ಕಾಂಟ್ರವರ್ಸಿ ಲೇಡಿ ಕಂಗನಾ ರಣಾವತ್ ಯಾರ ಹೆಸರನ್ನೂ ಉಲ್ಲೇಖಿಸದೇ, ಇದೇ ವಿಷಯವನ್ನು ಕೆದಕಿದ್ದಾರೆ. ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ನಟಿ, ಹಿರಿಯ ಗಾಯಕಿ, ದಿವಂತರ ಲತಾ ಮಂಗೇಶ್ಕರ್ ಅವರ ಹಳೆಯ ಸಂದರ್ಶನವನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ ಲತಾ ಅವರು ಲಕ್ಷಾಂತರ ಆಫರ್ ನೀಡಿದರೂ ಮದುವೆಯಲ್ಲಿ ತಾವು ಹಾಡುವುದಿಲ್ಲ ಎಂದು ಹೇಳಿದ್ದರು.
ಇದನ್ನೇ ಹೇಳಿರುವ ಕಂಗನಾ, ತಮ್ಮನ್ನು ಲತಾ ಅವರಿಗೆ ಹೋಲಿಸಿಕೊಂಡಿದ್ದಾರೆ. ಹಲವರಿಗೆ ಹೇಗಾದರೂ ಮಾಡಿ, ಯಾವುದೇ ಮೂಲೆಗಳಿಂದ ಸಂಪತ್ತನ್ನು ಗಳಿಸುವ ಹಂಬಲ. ಆದರೆ ನಾನು ಹಾಗಲ್ಲ, ಇಂಥ ಆಮಿಷಗಳಿಗೆ ನಾನು ಒಳಗಾಗುವವಳಲ್ಲ. ಎಷ್ಟೇ ಆಮಿಷಗಳನ್ನು ಪಡೆದರೂ ನಾನು ಮದುವೆಯಲ್ಲಿ ಎಂದಿಗೂ ನೃತ್ಯ ಮಾಡಲಿಲ್ಲ, ಅನೇಕ ಸೂಪರ್ ಹಿಟ್ ಐಟಂ ಸಾಂಗ್ಗಳಿಗೆ ನರ್ತಿಸುವಂತೆ ಕೇಳಿಕೊಳ್ಳಲಾಗಿತ್ತು. ಆದರೆ ನಾನು ಅದಕ್ಕೆ ಒಪ್ಪಿದವಳಲ್ಲ. ಇಂಥ ಷಾರ್ಟ್ಕಟ್ ಮಾರ್ಗ ಅನುಸರಿಸಿ ಹಣ ಮಾಡುವ ಜಾಯಮಾನ ನನ್ನದಲ್ಲ ಎಂದಿದ್ದಾರೆ.
ಅನಂತ್ ಅಂಬಾನಿ ಮದ್ವೆಯಲ್ಲಿ ರಾಮ್‌ಚರಣ್‌ಗೆ ಶಾರುಖ್ ಖಾನ್ ಇದೆಂಥ ಇನ್‌ಸಲ್ಟ್? ಫ್ಯಾನ್ಸ್ ಕಿಡಿಕಿಡಿ
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.