ಮೆಕ್ಕಾಕ್ಕೆ ಉಮ್ರಾ ನೆರವೇರಿಸಲು ಹೋಗಿರುವ ರಾಖಿ ಸಾವಂತ್ ವಾಪಸಾಗುತ್ತಿದ್ದಂತೆಯೇ ಶಾಕಿಂಗ್ ಸುದ್ದಿ ಸಿಕ್ಕಿದೆ. 200 ಕೋಟಿ ರೂ. ಮಾನನಷ್ಟ ಮೊಕದ್ದಮೆ ದಾಖಲಿನ ವಿಷಯವಿದು.
ವಿವಾದಗಳ ರಾಣಿ ರಾಖಿ ಸಾವಂತ್ ಸೌದಿ ಅರೇಬಿಯಾದ ಮೆಕ್ಕಾದಿಂದ (Mecca) ಉಮ್ರಾ ಮುಗಿಸಿ ಗುರುವಾರ ಬೆಳಗ್ಗೆ ದೇಶಕ್ಕೆ ಮರಳಿದ್ದಾರೆ. ಆದರೆ ಮುಂಬೈ ವಿಮಾನ ನಿಲ್ದಾಣದಿಂದ ಹೊರ ಬಂದ ಕೂಡಲೇ ಅವರಿಗೆ ದೊಡ್ಡ ಶಾಕ್ ಕಾದಿತ್ತು. ವಾಸ್ತವವಾಗಿ, ಶೆರ್ಲಿನ್ ಚೋಪ್ರಾ ಮತ್ತು ರಾಖಿ ನಡುವಿನ ಸಂಬಂಧ ಮತ್ತೆ ಹದಗೆಟ್ಟಿದೆ. ರಾಖಿ ಸಾವಂತ್ ವಿರುದ್ಧ 200 ಕೋಟಿ ಮಾನನಷ್ಟ ಮೊಕದ್ದಮೆ ಹೂಡುವುದಾಗಿ ಶೆರ್ಲಿನ್ ಹೇಳಿಕೊಂಡಿದ್ದಾರೆ. ವಿಮಾನ ನಿಲ್ದಾಣದಲ್ಲಿಯೇ ರಾಖಿ ಸಾವಂತ್‌ಗೆ ಶೆರ್ಲಿನ್‌ನ ಈ ನಡೆಯ ಬಗ್ಗೆ ಪಾಪರಾಜಿ ತಿಳಿಸಿದ್ದಾರೆ. ಆದರೆ ಈ ಸಮಯದಲ್ಲಿ ರಾಖಿ ಸಾವಂತ್ ತುಂಬಾ ಶಾಂತವಾಗಿದ್ದು ನನಗೆ ಇದೆಲ್ಲ ಗೊತ್ತಿಲ್ಲ ಎಂದು ಹೇಳಿದ್ದಾರೆ.
ರಾಖಿ ಸಾವಂತ್ ಅವರು ಸೌದಿ ಅರೇಬಿಯಾದಲ್ಲಿ ಕಾಣಿಸಿಕೊಂಡ ರೀತಿಯಲ್ಲಿಯೇ ಮುಂಬೈ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಿದ್ದಾರೆ. ಬಿಳಿ ಬುರ್ಖಾ ಧರಿಸಿ ವಾಪಸಾಗಿದ್ದಾರೆ. ರಾಖಿಯನ್ನು ಸ್ವಾಗತಿಸಲು ಸಾಕಷ್ಟು ಮಂದಿ ಸೇರಿದ್ದರು. ರಾಖಿ ಸಾವಂತ್ ಅವರನ್ನು ಜನರು ಹೂವಿನ ಹಾರ ಹಾಕಿ ಸ್ವಾಗತಿಸಿದರು. ಪುರುಷರು ಹೂವಿನ ಹಾರ ಹಾಕಲು ಬಂದಾಗ ಅದನ್ನು ಕೈಯಲ್ಲಿ ಪಡೆದ ರಾಖಿ (Rakhi Sawanth), ಮುಸ್ಲಿಂ ಮಹಿಳೆಯರು ಹಾಕಿದ ಹಾರವನ್ನು ಕೊರಳಿಗೆ ಹಾಕಿಸಿಕೊಂಡರು. ಈ ಸಮಯದಲ್ಲಿ ಹಾಜರು ಇದ್ದ ಪಾಪರಾಜಿಗಳು, ನಿಮ್ಮ ಬೆನ್ನಿನ ಹಿಂದೆ 200 ಕೋಟಿ ರೂಪಾಯಿಗಳ ಮಾನನಷ್ಟ ಪ್ರಕರಣದ ಬಗ್ಗೆ ಮಾತನಾಡಲಾಗುತ್ತಿದೆ. ಏನು ಹೇಳುತ್ತೀರಾ ಎಂದು ಕೇಳಿದ್ದಾರೆ. ಈ ಪ್ರಶ್ನೆಗೆ ಶಾಂತವಾಗಿದ್ದ ರಾಖಿ ಸಾವಂತ್, ಅಷ್ಟೇ ಶಾಂತತೆಯಿಂದ 'ನನಗೇನೂ ಗೊತ್ತಿಲ್ಲ. ಉಮ್ರಾ ಮುಗಿಸಿ ಈಗಷ್ಟೇ ಬಂದಿದ್ದೇನೆ. ನಾನು ಪುಣ್ಯಭೂಮಿಗೆ ಹೋಗಿದ್ದೆ, ಇದೆಲ್ಲ ನನಗೆ ಗೊತ್ತಿಲ್ಲ. ಯಾರು ಏನು ನಾಟಕ ಮಾಡುತ್ತಿದ್ದಾರೆ...ಯಾರ ಬಗ್ಗೆ ಮಾತನಾಡುತ್ತಿದ್ದಾರೆಂದು ನನಗೆ ಗೊತ್ತಿಲ್ಲ' ಎಂದಿದ್ದಾರೆ.
ಯಾ ಅಲ್ಹಾ... ಮಹಿಳೆಗೆ ಅನ್ಯಾಯವಾಗಿದೆ, ನ್ಯಾಯ ಕೊಡಿಸು... ಮೆಕ್ಕಾದಲ್ಲಿ ಬಿಕ್ಕಿಬಿಕ್ಕಿ ಅತ್ತ ರಾಖಿ ಸಾವಂತ್!
ರಾಖಿ ಸಾವಂತ್ ಮತ್ತು ಶೆರ್ಲಿನ್ ಚೋಪ್ರಾ ನಡುವೆ ಬಹಳ ಹಿಂದೆಯೇ ವಿವಾದವಿತ್ತು. ಶೆರ್ಲಿನ್ ಅವರ ಖಾಸಗಿ ವಿಡಿಯೋಗಳನ್ನು ರಾಖಿ ಲೀಕ್ ಮಾಡಿದ್ದಾರೆ ಎಂಬ ಗಂಭೀರ ಆರೋಪವನ್ನು ಅವರು ರಾಖಿ ವಿರುದ್ಧ ಮಾಡಿದ್ದರು. ವಿಷಯ ಪೊಲೀಸರನ್ನೂ ತಲುಪಿತು ಆದರೆ ರಾಖಿ ಮತ್ತು ಶೆರ್ಲಿನ್ ಮತ್ತೆ ಸ್ನೇಹಿತರಾದರು. ಇಬ್ಬರೂ ಅನೇಕ ಸಂದರ್ಭಗಳಲ್ಲಿ ಒಟ್ಟಿಗೆ ಕಾಣಿಸಿಕೊಂಡರು. ಆದರೆ, ಆದಿಲ್ ದುರಾನಿ ಜಾಮೀನಿನ ಮೇಲೆ ಜೈಲಿನಿಂದ ಹೊರಬಂದ ನಂತರ, ಶೆರ್ಲಿನ್ ರಾಖಿ ವಿರುದ್ಧ ತಿರುಗಿ ಬಿದ್ದಿದ್ದಾರೆ. ಮತ್ತೊಮ್ಮೆ ರಾಖಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ರಾಖಿ ಮತ್ತು ಅವರ ವಕೀಲರಾದ ಫಲ್ಗುಣಿ ಬ್ರಹ್ಮಭಟ್ ಅವರು ತಮ್ಮ ಖಾಸಗಿ ಫೋಟೋಗಳನ್ನು ಮಾಧ್ಯಮಗಳ ಮುಂದೆ ತೋರಿಸಿ ಮುಜುಗರಕ್ಕೊಳಗಾಗಿದ್ದಾರೆ ಎಂದು ಶೆರ್ಲಿನ್ ಚೋಪ್ರಾ (sherlyn chopra) ಆರೋಪಿಸಿದ್ದಾರೆ.
ರಾಖಿ ಸಾವಂತ್ ಇತ್ತೀಚೆಗಷ್ಟೇ ಧರ್ಮ ಬದಲಿಸಿ ಫಾತಿಮಾ ಆಗಿದ್ದಾರೆ. ನಿಜವಾಗಿ ರಾಖಿ ತಾನು ಆದಿಲ್ ನನ್ನು ಮದುವೆಯಾಗಲು ಇಸ್ಲಾಂಗೆ ಮತಾಂತರಗೊಂಡಿರುವುದಾಗಿ ಹೇಳಿಕೊಂಡಿದ್ದಾರೆ. ಆದರೆ, ನಂತರ ಆದಿಲ್ ಮತ್ತು ರಾಖಿ ನಡುವೆ ಜಗಳ ಪ್ರಾರಂಭವಾಗಿತ್ತು. ರಾಖಿ ಆದಿಲ್ ಖಾನ್ರನ್ನುಜೈಲಿಗೆ ತಳ್ಳಿದ್ದು, ಅವರೀಗ ಜಾಮೀನಿನ ಮೇಲೆ ಹೊರಗಡೆ ಇದ್ದಾರೆ. ಇದರ ನಡುವೆಯೇ, ರಾಖಿ ಮೆಕ್ಕಾಕ್ಕೆ ಹೋಗಿ ಉಮ್ರಾ ನೆರವೇರಿಸಿದ್ದಾರೆ. ತಾವೀಗ ರಾಖಿ ಅಲ್ಲ, ಫಾತೀಮಾ (Phatima) ಎಂದು ಕರೆಯಿರಿ ಎಂದೂ ಈ ಸಂದರ್ಭದಲ್ಲಿ ಅವರು ಹೇಳಿದ್ದಾರೆ.
ಮೆಕ್ಕಾದಲ್ಲಿ ಉಮ್ರಾ ನೆರವೇರಿಸಿದ ರಾಖಿ: ಈಗ ನಂಗಾ ನಾಚ್ ಶುರುನಾ ಕೇಳ್ತಿದ್ದಾರೆ ಫ್ಯಾನ್ಸ್!