ಇನ್ಸ್ಟಾಗೆ ಬಂದ ಲೇಡಿ ಸೂಪರ್‌ಸ್ಟಾರ್‌; ಅವಳಿ ಮಕ್ಕಳ ಮುಖ ರಿವೀಲ್ ಮಾಡಿದ ನಯನತಾರಾ

Published : Aug 31, 2023, 02:30 PM ISTUpdated : Aug 31, 2023, 02:36 PM IST
ಇನ್ಸ್ಟಾಗೆ ಬಂದ ಲೇಡಿ ಸೂಪರ್‌ಸ್ಟಾರ್‌;  ಅವಳಿ ಮಕ್ಕಳ ಮುಖ ರಿವೀಲ್ ಮಾಡಿದ ನಯನತಾರಾ

ಸಾರಾಂಶ

ನಯನತಾರಾ, ಸೌತ್ ಇಂಡಸ್ಟ್ರಿಯ ಅತ್ಯಂತ ಬೇಡಿಕೆಯ ನಟಿ. ಆದ್ರೆ ಹೈಯೆಸ್ಟ್ ಫ್ಯಾನ್‌ ಫಾಲೋವಿಂಗ್ ಹೊಂದಿದ್ರೂ ಸಹ ಸೋಷಿಯಲ್ ಮೀಡಿಯಾದಲ್ಲಿ ಖಾತೆಯನ್ನು ಹೊಂದಿರಲ್ಲಿಲ್ಲ. ಸದ್ಯ ಲೇಡಿ ಸೂಪರ್‌ಸ್ಟಾರ್‌ ಇನ್‌ಸ್ಟಾಗ್ರಾಂಗೆ ಎಂಟ್ರಿ ಕೊಟ್ಟಿದ್ದಾರೆ. ರೀಲ್ಸ್ ಮೂಲಕ ಅವಳಿ ಮಕ್ಕಳ ಮುಖವನ್ನು ಮೊದಲ ಬಾರಿಗೆ ತೋರಿಸಿದ್ದಾರೆ.

ದಕ್ಷಿಣಭಾರತದ ಬಹುಬೇಡಿಕೆಯ ನಟಿ, ಲೇಡಿ ಸೂಪರ್‌ಸ್ಟಾರ್ ಎಂದು ಕರೆಸಿಕೊಳ್ಳುವ ನಯನತಾರಾ ತಮ್ಮ ವೃತ್ತಿಜೀವನದ ಆರಂಭದಿಂದಲೂ ಸಾಮಾಜಿಕ ಜಾಲತಾಣಗಳಿಂದ ದೂರವೇ ಉಳಿದಿದ್ದಾರೆ. ಹೀಗಿದ್ದೂ ಅವರ ಫ್ಯಾನ್ಸ್‌ ಪೇಜ್‌ಗಳೇನೂ ಕಡಿಮೆಯಿಲ್ಲ. ದೇಶ-ವಿದೇಶದಿಂದ ಕೋಟ್ಯಾಂತರ ಅಭಿಮಾನಿಗಳು ಅವರ ಪೇಜ್‌ಗಳ ಮೂಲಕ ನಯನತಾರಾ ಪೋಟೋಸ್, ವಿಡಿಯೋಸ್ ಪೋಸ್ಟ್ ಮಾಡುತ್ತಲೇ ಇರುತ್ತಾರೆ. ಹೀಗಿರುವಾಗ ಎಲ್ಲರಿಗೂ ಅಚ್ಚರಿ ಮೂಡಿಸುವಂತೆ ಲೇಡಿ ಸೂಪರ್ ಸ್ಟಾರ್ ನಯನತಾರಾ ಇನ್‌ಸ್ಟಾಗ್ರಾಂಗೆ ಎಂಟ್ರಿ ಕೊಟ್ಟಿದ್ದಾರೆ.

ಉಯಿರ್-ಉಲಗ್ ಮುಖವನ್ನು ಪರಿಚಯಿಸುವ ಚೊಚ್ಚಲ ರೀಲ್
ಆಗಸ್ಟ್ 31ರಂದು, ಅವರು Instagram ನಲ್ಲಿ ಪಾದಾರ್ಪಣೆ ಮಾಡುವ ಮೂಲಕ ಎಲ್ಲರನ್ನು ಅಚ್ಚರಿಗೊಳಿಸಿದರು. ಆದರೆ, ಎಲ್ಲರ ಗಮನ ಸೆಳೆದದ್ದು ಆಕೆ ತನ್ನ ಅವಳಿ ಮಕ್ಕಳಾದ ಉಯಿರ್ ಮತ್ತು ಉಲಗ್ ಅವರನ್ನು ಪರಿಚಯಿಸುವ ಚೊಚ್ಚಲ ರೀಲ್ ಅನ್ನು ಪೋಸ್ಟ್ ಮಾಡಿದಾಗ. ಹೌದು, ಆರಂಭದಿಂದಲೂ ತಮ್ಮ ಟ್ವಿನ್ಸ್ ಮಕ್ಕಳ ಮುಖವನ್ನು ಎಲ್ಲೂ ತೋರಿಸದಿದ್ದ ನಯನತಾರಾ ಇನ್‌ಸ್ಟಾಗ್ರಾಂನಲ್ಲಿ ಮಕ್ಕಳನ್ನು ಪರಿಚಯಿಸಿದ್ದಾರೆ. ನಯನತಾರಾ ಇನ್‌ಸ್ಟಾ ಡೆಬ್ಯೂಟ್ ರೀಲ್‌ನಲ್ಲಿ ಅವಳಿ ಮಕ್ಕಳನ್ನು ITwins) ಪರಿಚಯಿಸಿದರು. 'ಜೈಲರ್' ಸಿನಿಮಾದ ಅನಿರುದ್ಧ್ ರವಿಚಂದರ್ ಅವರ 'ಟೈಗರ್ ಕಾ ಹುಕುಂ' ಹಾಡಿನ ಮ್ಯೂಸಿಕ್‌ಗೆ ವಾಕ್ ಮಾಡುವ ಮೂಲಕ ನಯನತಾರಾ ಮಕ್ಕಳ ಮುಖವನ್ನು ಪರಿಚಯಿಸಿದರು. 

ಬಾಲಿವುಡ್ ಫೈಯರ್ ‘ಜವಾನ್ ಸಾಂಗ್’ ರಿಲೀಸ್ ! ಲೇಡಿ ಸೂಪರ್ ಸ್ಟಾರ್ ಜತೆ ಕಿಂಗ್ ಖಾನ್ ರೊಮ್ಯಾನ್ಸ್ !

ಜವಾನ್ ಚಿತ್ರದ ಟ್ರೈಲರ್ ಹಂಚಿಕೊಂಡ ನಟಿ ನಯನತಾರಾ
ಈ ಇನ್‌ಸ್ಟಾಗ್ರಾಮ್ ರೀಲ್ ಈಗ ಸಾಮಾಜಿಕ ಜಾಲತಾಣದಲ್ಲಿ (Social media) ವೈರಲ್ ಆಗ್ತಿದೆ. ನಯನತಾರಾ ಇನ್‌ಸ್ಟಾಗ್ರಾಂ ಎಂಟ್ರಿಗೆ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ. ವಿಘ್ನೇಶ್ ಶಿವನ್ ಅವರು ನಯನತಾರಾ ಅವರನ್ನು ಸಾಮಾಜಿಕ ಮಾಧ್ಯಮದಲ್ಲಿ ಮುದ್ದಾದ ಕಾಮೆಂಟ್ ಮೂಲಕ ಸ್ವಾಗತಿಸಿದ್ದಾರೆ (Welcome). 'ವೆಲ್‌ಕಂ ಟು ಇನ್‌ಸ್ಟಾಗ್ರಾಂ ಆಲ್‌ ಮೈ ಕ್ಯೂಟೀಸ್' ಎಂದು ಬರೆದುಕೊಂಡು ರೀಲ್ಸ್ ರಿ ಶೇರ್ ಮಾಡಿದ್ದಾರೆ. ಈ ಸುದ್ದಿ ಪೋಸ್ಟ್ ಮಾಡಿದಾಗ 476 ಮಂದಿ ಲೇಡಿ ಸೂಪರ್‌ಸ್ಟಾರ್‌ನ್ನು ಫಾಲೋ ಮಾಡುತ್ತಿದ್ದಾರೆ. ಮಕ್ಕಳ ಜೊತೆಗಿನ ವಿಡಿಯೋ ಮಾತ್ರವಲ್ಲದೆ ಜವಾನ್ ಚಿತ್ರದ ಟ್ರೈಲರ್‌ನ್ನು ಸಹ ನಯನತಾರಾ ಪೋಸ್ಟ್ ಮಾಡಿದ್ದಾರೆ. ವಿಘ್ನೇಶ್ ಶಿವನ್ ಇದನ್ನು ರಿಶೇರ್ ಮಾಡಿ Proud of you ಎಂದು ಬರೆದುಕೊಂಡಿದ್ದಾರೆ.

ಶಾರುಖ್ ಖಾನ್ ಅವರ 'ಜವಾನ್' ಚಿತ್ರದ ಮೂಲಕ ನಯನತಾರಾ ಬಾಲಿವುಡ್‌ಗೆ ಪಾದಾರ್ಪಣೆ ಮಾಡಲು ಸಿದ್ಧರಾಗಿದ್ದಾರೆ. ಚಿತ್ರವು ಹಿಂದಿ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ಸೆಪ್ಟೆಂಬರ್ 7ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ತಮ್ಮ ವೃತ್ತಿಜೀವನದ ಆರಂಭದಿಂದಲೂ, ನಯನತಾರಾ ಸಾಮಾಜಿಕ ಜಾಲತಾಣಗಳಿಂದ ದೂರ ಉಳಿಯಲು ನಿರ್ಧರಿಸಿದ್ದರು. ಚಲನಚಿತ್ರ ಕಾರ್ಯಕ್ರಮಗಳಲ್ಲೂ ನಯನತಾರಾ ಭಾಗವಹಿಸುವುದು ಕಡಿಮೆ. 

ನಯನತಾರಾ ಮತ್ತು ವಿಘ್ನೇಶ್ ಶಿವನ್ ಅಕ್ಟೋಬರ್ 2022ರಲ್ಲಿ ಬಾಡಿಗೆ ತಾಯ್ತನದ ಮೂಲಕ ಅವಳಿ ಗಂಡು ಮಕ್ಕಳನ್ನು ಸ್ವಾಗತಿಸಿದರು. ಇಲ್ಲಿಯವರೆಗೆ ಹಲವು ಬಾರಿ ದಂಪತಿ ಮಕ್ಕಳೊಂದಿಗೆ ಕಾಣಿಸಿಕೊಂಡಿದ್ದರೂ ಎಲ್ಲೂ ಮುಖ ತೋರಿಸಿಲ್ಲ. ಓಣಂ ಹಬ್ಬದ ದಿನ ವಿಘ್ನೇಶ್ ಶಿವನ್ ಹಬ್ಬ ಆಚರಿಸುತ್ತಿರುವ ಫೋಟೋಗಳನ್ನು ಹಂಚಿಕೊಂಡಿದ್ದು, ಮಕ್ಕಳು ಊಟ ಮಾಡುತ್ತಿರುವ ಪೋಟೋ ಹಂಚಿಕೊಂಡಿದ್ದರು. ಆದರೆ ಮುಖ ತೋರಿಸಿರಲ್ಲಿಲ್ಲ.

ಅವಳಿ ಮಕ್ಕಳೊಂದಿಗೆ ಓಣಂ ಆಚರಿಸಿದ ನಯನತಾರಾ-ವಿಘ್ನೇಶ್ ಶಿವನ್‌

ನಯನತಾರಾ ಮತ್ತು ವಿಘ್ನೇಶ್ ಶಿವನ್ ಲವ್ ಸ್ಟೋರಿ
ನಯನತಾರಾ ಮತ್ತು ವಿಘ್ನೇಶ್ ಶಿವನ್ 2015 ರಲ್ಲಿ 'ನಾನು ರೌಡಿ ಧಾನ್' ಸೆಟ್‌ನಲ್ಲಿ ಪ್ರೀತಿಸುತ್ತಿದ್ದರು. ಜೂನ್ 2022 ರಲ್ಲಿ ಮಹಾಬಲಿಪುರಂನಲ್ಲಿ ಅದ್ದೂರಿ ಸಮಾರಂಭದಲ್ಲಿ ದಂಪತಿಗಳು (Couples) ವಿವಾಹವಾದರು. ಅಕ್ಟೋಬರ್ 2022 ರಲ್ಲಿ, ಇಬ್ಬರು ಅವಳಿ ಗಂಡು ಮಕ್ಕಳನ್ನು ಬಾಡಿಗೆ ತಾಯ್ತನದ ಮೂಲಕ ಸ್ವಾಗತಿಸಿದರು. ಕೆಲವು ತಿಂಗಳ ಹಿಂದೆ ನಯನತಾರಾ ಮತ್ತು ವಿಘ್ನೇಶ್ ತಮ್ಮ ಪುತ್ರರ ಹೆಸರನ್ನು ಹಂಚಿಕೊಂಡಿದ್ದರು. ಈಗ ಅವರು ತಮ್ಮ ಅವಳಿ ಮಕ್ಕಳ ಮುಖವನ್ನು ಜಗತ್ತಿಗೆ ತೋರಿಸಿದ್ದಾರೆ.

ವೀಡಿಯೊ ಇಲ್ಲಿದೆ:

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಜ್ಯೋತಿಷಿ ವೇಣು ಸ್ವಾಮಿ ಭವಿಷ್ಯ: ಸಮಂತಾ ಬಾಳಲ್ಲಿ ನಿಜವಾಯ್ತು, ಆದ್ರೆ ರಶ್ಮಿಕಾ ಲೈಫಲ್ಲಿ ಸುಳ್ಳಾಗಲಿ ಅಂತಿರೋ ಫ್ಯಾನ್ಸ್!
ಕೊಳಕು ಪ್ಯಾಂಟ್‌ ಬಗ್ಗೆ ಮಾತನಾಡಿದ್ರು, ಮೊಮ್ಮಗನ ಸಿನಿಮಾಕ್ಕೆ ಸಮಸ್ಯೆ ತಂದ್ರು: Jaya Bachchan ಬಾಯ್ಕಾಟ್‌ ಆಗ್ತಾರಾ?