ಅಭಿಮಾನಿಗಳ ನಿರೀಕ್ಷೆ ಸುಳ್ಳಾಗೋಯ್ತು: ಡಿವೋರ್ಸ್​ಗೆ ಅರ್ಜಿ ಸಲ್ಲಿಸಿದ ರಜನಿ ಪುತ್ರಿ ಐಶ್ವರ್ಯಾ- ಧನುಷ್​?

By Suvarna NewsFirst Published Apr 8, 2024, 5:44 PM IST
Highlights

ರಜನೀಕಾಂತ್​ ಅವರ ಪುತ್ರಿ ಐಶ್ವರ್ಯ ಮತ್ತು ನಟ ಧನುಷ್​ ಅವರು ಒಂದಾಗಬಹುದು ಎನ್ನುವ ಫ್ಯಾನ್ಸ್​ ನಿರೀಕ್ಷೆ ಸುಳ್ಳಾಗಿದ್ದು, ಡಿವೋರ್ಸ್​ಗೆ ಅರ್ಜಿ ಸಲ್ಲಿಸಿದ್ದಾರೆ ಎನ್ನಲಾಗಿದೆ. 
 

ಸೂಪರ್​ಸ್ಟಾರ್ ರಜನೀಕಾಂತ್ ಪುತ್ರಿ ಕಾಲಿವುಡ್ ನಿರ್ದೇಶಕಿ ಐಶ್ವರ್ಯಾ ರಜನಿಕಾಂತ್  (Aishwarya Rajinikanth) ಮತ್ತು ಧನುಷ್ (Dhanush)  ಪ್ರತ್ಯೇಕವಾಗಿದ್ದು ಎರಡು ವರ್ಷಗಳೇ ಕಳೆದು ಹೋಗಿವೆ. ಇವರು ಮತ್ತೆ ಒಂದಾಗುವರು, ಪರಸ್ಪರ ಒಬ್ಬರನ್ನೊಬ್ಬರು ಮತ್ತೆ ಇಷ್ಟಪಡಲು ಶುರು ಮಾಡಿದ್ದಾರೆ, ಇದರಿಂದ ಶೀಘ್ರವೇ ಒಂದಾಗುವ ಗುಡ್​ ನ್ಯೂಸ್ ಕೊಡಲಿದ್ದಾರೆ ಎನ್ನುವ ಅಭಿಮಾನಿಗಳ ಅನಿಸಿಕೆ ಕೊನೆಗೂ ಹುಸಿಯಾಗಿ ಹೋಯ್ತು. ಐಶ್ವರ್ಯಾ ರಜನಿಕಾಂತ್‌ ಮತ್ತು ನಟ ಧನುಷ್‌ ಇದೀಗ ಚೆನ್ನೈನ ಕೌಟುಂಬಿಕ ನ್ಯಾಯಾಲಯದಲ್ಲಿ ವಿವಾಹ ವಿಚ್ಛೇದನಕ್ಕೆ ಅಧಿಕೃತವಾಗಿ ಅರ್ಜಿ ಸಲ್ಲಿಸಿದ್ದಾರೆ ಎಂದು ತಿಳಿದುಬಂದಿದೆ. ಇದೀಗ ಇವರಿಬ್ಬರು ಕಾನೂನು ಪ್ರಕಾರವಾಗಿ ಡಿವೋರ್ಸ್‌ ಪ್ರಕ್ರಿಯೆ ಆರಂಭಿಸಿದ್ದಾರೆ.

2004 ರಲ್ಲಿ ವಿವಾಹವಾಗಿದ್ದ ಈ ಜೋಡಿ, 2022ರ ಜನವರಿಯಲ್ಲಿ ಪ್ರತ್ಯೇಕಗೊಳ್ಳುವುದಾಗಿ  ಘೋಷಿಸಿ ಎಲ್ಲರನ್ನೂ ಅಚ್ಚರಿಗೆ ತಳ್ಳಿದ್ದರು. ಇದೀಗ ಇಬ್ಬರೂ  ದೂರವಾಗಿದ್ದರೂ  ಇಬ್ಬರ ನಡುವಿನ ಸ್ನೇಹ, ಗೌರವ ಹಾಗೆಯೇ ಇದೆ ಎನ್ನಲಾಗಿತ್ತು. ಕೆಲ ದಿನಗಳ ಹಿಂದಷ್ಟೇ  ಐಶ್ವರ್ಯ ಅವರು  ಧನುಷ್‌ ಅವರನ್ನು ನೆನಪು ಮಾಡಿಕೊಂಡಿದ್ದರು.  ಮದುವೆಯಾಗಿ ಎರಡು ಮಕ್ಕಳಾದ ಮೇಲೆ 18 ವರ್ಷಗಳ ಬಳಿಕ ಪ್ರತ್ಯೇಕಗೊಳ್ಳುವುದಾಗಿ  ಘೋಷಿಸಿದ್ದ ಜೋಡಿ,  ಮತ್ತೆ ಒಂದಾಗಲಿದ್ದಾರೆ  ಎನ್ನುವ ಮಾತು ಕೇಳಿ ಬಂದಿತ್ತು.  ಅಧಿಕೃತವಾಗಿ ವಿಚ್ಛೇದನವನ್ನು ಇವರು ಘೋಷಿಸದಿದ್ದರೂ ಪ್ರತ್ಯೇಕವಾಗಿ ವಾಸಿಸುತ್ತಿದ್ದರು. ಆದರೆ ಇದೀಗ ಅಧಿಕೃತ ಡಿವೋರ್ಸ್​ಗೆ ಅರ್ಜಿ ಸಲ್ಲಿಸಿದ್ದಾರೆ ಎನ್ನಲಾಗಿದೆ. 

ಕಂಗನಾ ವಿರುದ್ಧ ಮಾತನಾಡಿ ನಾಯಕಿ 'ಕೈ'ಸುಟ್ಟುಕೊಂಡ ಬೆನ್ನಲ್ಲೇ ನಾಯಕನಿಂದ ಗೋಮಾಂಸದ ಪೋಸ್ಟ್​: ನಟಿ ತಿರುಗೇಟು

ಇವರಿಬ್ಬರ ನಡುವೆ  ಪರಸ್ಪರ ದ್ವೇಷವಿಲ್ಲ. ಅವರು ಗಂಡ ಮತ್ತು ಹೆಂಡತಿಯಾಗಿ ಒಟ್ಟಿಗೆ ವಾಸಿಸುತ್ತಿಲ್ಲವಾದರೂ, ಇಬ್ಬರೂ  ಉತ್ತಮ ಸ್ನೇಹಿತರಾಗಿದ್ದೇವೆ ಎಂದಿದ್ದರು ಐಶ್ವರ್ಯ.  ಐಶ್ವರ್ಯಾ ಅವರು ತಮ್ಮ ನಿರ್ದೇಶದನದ ಲಾಲ್ ಸಲಾಂಗಾಗಿ ಸಂದರ್ಶನ ನೀಡುವ ಸಮಯದಲ್ಲಿ ಧನುಷ್​ ಕುರಿತು ಒಳ್ಳೆಯ ಮಾತುಗಳನ್ನಾಡಿದ್ದು, ಇವರಿಬ್ಬರೂ ಮತ್ತೆ ಒಂದಾಗುತ್ತಿದ್ದಾರಾ ಎನ್ನುವಂತೆ ಮಾಡಿತ್ತು. ದಕ್ಷಿಣ ಚಿತ್ರರಂಗದ ಪ್ರಸಿದ್ಧ ಸಂಗೀತ ಸಂಯೋಜಕ ಅನಿರುದ್ಧ್ ರವಿಚಂದರ್ ಅವರ ಕುರಿತು ಮಾತನಾಡುತ್ತಿರುವ ಸಂದರ್ಭದಲ್ಲಿ ಐಶ್ವರ್ಯ ತಮ್ಮ ಪತಿ ಧನುಷ್​ ಅವರನ್ನು ಹೊಗಳಿದ್ದರು. ಅಷ್ಟಕ್ಕೂ ಅನಿರುದ್ಧ್ ರವಿಚಂದರ್  ದೊಡ್ಡ ಸ್ಟಾರ್ ಸಂಗೀತ ನಿರ್ದೇಶಕ. ಸದ್ಯ ಅವರು ಕೋಟಿಗಳ ಲೆಕ್ಕದಲ್ಲಿ  ಸಂಭಾವನೆ ಪಡೆಯುತ್ತಾರೆ. ಆದರೆ, ಅನಿರುದ್ಧ್ ಮೊದಲು ಸಂಗೀತ ನೀಡಿದ್ದು ಐಶ್ವರ್ಯಾ ರಜನಿಕಾಂತ್ ನಿರ್ದೇಶನದ '3' ಸಿನಿಮಾಗೆ. ಆಗ ಅವರ ವಯಸ್ಸು 20ರ ಆಸುಪಾಸು ಇತ್ತು. ಇಷ್ಟು ಚಿಕ್ಕ ಹುಡುಗನ ಕೈಯಲ್ಲಿ ಸಂಗೀತ ನಿರ್ದೇಶನ ಮಾಡಿಸಬೇಕು ಎಂಬುದು ಧನುಷ್ ಆಸೆ ಆಗಿತ್ತು ಎನ್ನುವ ಮೂಲಕ ಅನಿರುದ್ಧ್ ಅವರಿಗೆ ಬ್ರೇಕ್​ ನೀಡಿದ್ದು ಧನುಷ್​ ಎಂದು ಪರೋಕ್ಷವಾಗಿ ಹೇಳಿ ಪತಿಯನ್ನು ಹೊಗಳಿದ್ದರು. 

 ಕಳೆದ ಕೆಲವು ವರ್ಷಗಳಲ್ಲಿ, ಅನಿರುದ್ಧ್ ರವಿಚಂದರ್ ಭಾರತದಲ್ಲಿ ಹೆಚ್ಚು ಬೇಡಿಕೆಯಿರುವ ಸಂಗೀತ ಸಂಯೋಜಕರಾಗಿದ್ದಾರೆ. ಅವರು ದಕ್ಷಿಣದ ಪ್ರತಿಯೊಬ್ಬ ನಿರ್ದೇಶಕರ ಮೊದಲ ಆಯ್ಕೆಯಾಗಿದ್ದಾರೆ.  2012ರಲ್ಲಿ '3' ಸಿನಿಮಾದ ಮೂಲಕ ಜರ್ನಿ ಆರಂಭಿಸಿದರು. ಆ ಚಿತ್ರದ 'ಕೊಲವೆರಿ ಡಿ..' ಹಾಡು ಆ ಕಾಲಕ್ಕೆ ಮಾಡಿದ ಮೋಡಿ ಎಂಥದ್ದು ಎಂಬುದು ಎಲ್ಲರಿಗೂ ಗೊತ್ತಿದೆ. ಅನಿರುದ್ಧ್ ರವಿಚಂದರ್ ಅವರು ಐಶ್ವರ್ಯ ಅವರ ಸೋದರ ಸಂಬಂಧಿ. ಆದರೆ ಅವರ ಪ್ರತಿಭೆಯನ್ನು ಧನುಷ್ ಗುರುತಿಸಿದ್ದರು ಎಂದು ಐಶ್ವರ್ಯ ತಿಳಿಸಿದ್ದರು.  ಅನಿರುದ್ಧ್‌ನ ಸಕ್ಸಸ್‌ ಜರ್ನಿ ನೋಡಿದಾಗ, ನನಗೆ ತುಂಬ ಖುಷಿಯಾಗುತ್ತದೆ. ಆತ ನನ್ನ ಸಂಬಂಧಿ. ಆದರೂ ಆತ ಮ್ಯೂಸಿಕ್ ಡೈರೆಕ್ಟರ್ ಆಗುವುದಕ್ಕೆ ನಾನು ಕಾರಣಳಲ್ಲ. ಅನಿರುದ್ಧ್‌ ಸಿನಿಮಾರಂಗಕ್ಕೆ ಬಂದಿದ್ದೇ ಧನುಷ್ ಕಡೆಯಿಂದ. ಮೂರು  ಸಿನಿಮಾಗಳ ಎಲ್ಲಾ ಹಾಡುಗಳನ್ನು ಬರೆಯಲು ಅವರು ಪ್ರೋತ್ಸಾಹಿಸಿದರು. ಇಂಡಸ್ಟ್ರಿಗೆ  ಎಂಟ್ರಿಯಾಗಲು ಧನುಷ್ ಕಾರಣ ಎಂದು ಪತಿಯನ್ನು ಹಾಡಿ ಹೊಗಳಿದ್ದರು. ಇದನ್ನು ನೋಡಿ ದಂಪತಿ ಒಂದಾಗಲಿದ್ದಾರೆ ಎನ್ನುವ ನಿರೀಕ್ಷೆ ಹುಸಿಯಾಗಿ ಹೋಗಿದೆ. 

30 ಲಕ್ಷ ಸಂಬಳ ಪಡೆದು ರಾಜ್​ಕುಂದ್ರಾರ ಬೆನ್ನಿಗೆ ಚೂರಿ ಹಾಕಿದ ಶೆರ್ಲಿನ್​! ಬ್ಲೂ ಫಿಲ್ಮ್​ ಕೇಸ್​ ಬಗ್ಗೆ ಗೆಹನಾ ಹೇಳಿದ್ದೇನು?

click me!