
'ಆ ಮನೆಯಲ್ಲಿ ಅಪ್ಪ 9-5 ಕೆಲಸ ಮುಗಿಸಿ ಬರೋದನ್ನು ತಂಗಿಯೊಂದಿಗೆ ಕಾಯ್ತಿದ್ದೆ. ಅಲ್ಲಿ ಪೇರಲ ಮರವಿತ್ತು. ಹಣ್ಣುಗಳನ್ನು ಕಿತ್ತು ತಿನ್ನುತ್ತಿದ್ದೆವು' ತಾವು ತಮ್ಮ ತಂದೆ ತಾಯಿಯೊಂದಿಗೆ ಒಂದು ಕಾಲದಲ್ಲಿ 500 ರೂ. ಬಾಡಿಗೆಗೆ ಇದ್ದ ಮನೆಯನ್ನು ಅಕ್ಷಯ್ ಕುಮಾರ್ ಖರೀದಿಸುತ್ತಿದ್ದಾರೆ.
ಈ ಬಗ್ಗೆ ಯೂಟ್ಯೂಬರ್ ರಣವೀರ್ ಅಲಹಬಾಡಿಯಾ ಅವರೊಂದಿಗಿನ ಸಂದರ್ಶನದಲ್ಲಿ ಬಹಿರಂಗಪಡಿಸಿದ ಅಕ್ಷಯ್ ಕುಮಾರ್, 'ನನಗೆ ಇದರ ಹಿಂದಿನ ಸೈಕಾಲಜಿ ಅರ್ಥವಾಗುತ್ತಿಲ್ಲ. ಆದರೆ ಅಲ್ಲಿಗೆ ಹೋಗಲು ನನಗೆ ಸಂತೋಷವಾಗುತ್ತದೆ. ನನ್ನ ಹಳೆಯ ಮನೆಗೆ ಮತ್ತೆ ಭೇಟಿ ನೀಡಲು ನಾನು ಇಷ್ಟಪಡುತ್ತೇನೆ. ನಾವು ನಮ್ಮ ಬಾಡಿಗೆ ಮನೆಗೆ ರೂ 500 ಪಾವತಿಸುತ್ತಿದ್ದೆವು. ಈಗ ಆ ಮನೆಯನ್ನು ನವೀಕರಿಸುತ್ತಿದ್ದಾರೆ ಎಂದು ತಿಳಿಯಿತು. ನಾನು ಮೂರನೇ ಮಹಡಿಯನ್ನು ಖರೀದಿಸಲು ಬಯಸುತ್ತೇನೆ ಎಂದು ಮಾಲೀಕರಿಗೆ ಹೇಳಿದೆ. ನಾವು ಅಲ್ಲಿ ವಾಸಿಸುತ್ತಿದ್ದೆವು, ಎರಡು ಬೆಡ್‌ರೂಮ್‌ಗಳ ಫ್ಲ್ಯಾಟ್ ಇದೀಗ ನಿರ್ಮಾಣ ಹಂತದಲ್ಲಿದೆ, ನಾನು ಖರೀದಿಸುತ್ತಿದ್ದೇನೆ,' ಎಂದಿದ್ದಾರೆ.
'ನಮಗೆ ಅಲ್ಲಿ ಯಾರೂ ಇಲ್ಲ, ಆದರೆ ನಾನು ಆ ಫ್ಲಾಟ್ ಅನ್ನು ಇಟ್ಟುಕೊಳ್ಳಲು ಬಯಸುತ್ತೇನೆ' ಎಂದ ಅಕ್ಷಯ್ ನಮ್ಮ ಬೇರುಗಳೊಂದಿಗೆ ನಮಗಿರಬೇಕಾದ ಸಂಬಂಧದ ಬಗ್ಗೆ ಮಾತಾಡಿದ್ದಾರೆ.
ಈಗ ಆ ಅಪಾರ್ಟ್‌ಮೆಂಟ್ ಸಾಕಷ್ಟು ಬದಲಾಗಿದೆ. ಆದರೆ, ಈಗಲೂ ನಟ ಆಗಾಗ ಅಲ್ಲಿಗೆ ಭೇಟಿ ನೀಡಿ ಪೇರಲೆ ಹಣ್ಣು ಹಾಗೂ ಹೂವುಗಳನ್ನು ಸಂಗ್ರಹಿಸುತ್ತಾರಂತೆ. ತಮ್ಮ ವಿನಮ್ರ ಆರಂಭದ ಸಾರವನ್ನು ಕಾಪಾಡುವ ಬಯಕೆಯನ್ನು ಒತ್ತಿ ಹೇಳಿದ ನಟ, 'ನಾನು ಪ್ರಾಮಾಣಿಕವಾಗಿ ಅದರೊಂದಿಗೆ ಸಂಪರ್ಕದಲ್ಲಿರಲು ಬಯಸುತ್ತೇನೆ. ನಾನು ಅಲ್ಲಿಂದ ಬಂದಿದ್ದೇನೆ,' ಎಂದಿದ್ದಾರೆ.
ಈಗ ಕೋಟ್ಯಂತರ ಮೌಲ್ಯದ ಹಲವು ಮನೆಗಳು ಅಕ್ಷಯ್ ಬಳಿ ಇದ್ದರೂ ಈಗಲೂ ಭೂತಕಾಲದೊಂದಿಗೆ ಸಂಪರ್ಕದಲ್ಲಿರುವ ಅವರ ವಿನಮ್ರತೆ ಅನುಕರಣೀಯ.
ವೃತ್ತಿಪರ ಮುಂಭಾಗದಲ್ಲಿ, ಟೈಗರ್ ಶ್ರಾಫ್, ಮಾನುಷಿ ಚಿಲ್ಲರ್ ಅವರೊಂದಿಗೆ ಅಕ್ಷಯ್ ಕೊನೆಯದಾಗಿ 'ಬಡೇ ಮಿಯಾನ್ ಚೋಟೆ ಮಿಯಾನ್' ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಜೊತೆಗೆ ಹೌಸ್‌ಫುಲ್ 5, ಹೇರಾ ಫೆರಿ 3 ಮತ್ತು ವೆಲ್‌ಕಮ್ 3 ಮುಂತಾದ ಮೂರು ಚಿತ್ರಗಳಿವೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.