30 ಲಕ್ಷ ಸಂಬಳ ಪಡೆದು ರಾಜ್​ಕುಂದ್ರಾರ ಬೆನ್ನಿಗೆ ಚೂರಿ ಹಾಕಿದ ಶೆರ್ಲಿನ್​! ಬ್ಲೂ ಫಿಲ್ಮ್​ ಕೇಸ್​ ಬಗ್ಗೆ ಗೆಹನಾ ಹೇಳಿದ್ದೇನು?

By Suvarna News  |  First Published Apr 8, 2024, 4:29 PM IST

ರಾಜ್​ಕುಂದ್ರಾರಿಂದ 30 ಲಕ್ಷ ಸಂಬಳ ಪಡೀತಿದ್ದ ಶೆರ್ಲಿನ್ ಚೋಪ್ರಾ, ಕೊನೆಗೆ ಕುಂದ್ರಾರ ಬೆನ್ನಿಗೇ ಚೂರಿ ಹಾಕಿದ್ಲು ಎಂದ ನಟಿ ಗೆಹನಾ ವಶಿಷ್ಠ. ಬ್ಲೂ ಫಿಲ್ಮ್​ ಕೇಸ್​ ಬಗ್ಗೆ ನಟಿ ಹೇಳಿದ್ದೇನು? 
 


ಬಾಲಿವುಡ್​ ಎವರ್​ಗ್ರೀನ್​ ತಾರೆ ಶಿಲ್ಪಾ ಶೆಟ್ಟಿ ಮತ್ತು ಅವರ ಪತಿ ಉದ್ಯಮಿ ರಾಜ್​ ಕುಂದ್ರಾ ಅಶ್ಲೀಲ ವಿಡಿಯೋ ನಿರ್ಮಾಣ ಕೇಸ್​ನಲ್ಲಿ ಸಿಕ್ಕಿಬಿದ್ದಿರುವ ವಿಷಯ ಎಲ್ಲರಿಗೂ ತಿಳಿದದ್ದೇ. ಅದು 2021ರ ಘಟನೆ.  ಶಿಲ್ಪಾ ಬಾಳಲ್ಲಿ ಬಿರುಗಾಳಿ ಬಂದಿತ್ತು.  ಇವರ ಪತಿ, ಖ್ಯಾತ ಉದ್ಯಮಿ ರಾಜ್​ ಕುಂದ್ರಾ ನೀಲಿ ಚಿತ್ರ (porn film) ಕೇಸ್​ನಲ್ಲಿ ಸಿಲುಕಿ ಬಿದ್ದಿದ್ದರು. ನಟಿಯರನ್ನು ಮತ್ತು ಮಾಡೆಲ್​ಗಳನ್ನು ಬಳಸಿಕೊಂಡು ರಾಜ್​ ಕುಂದ್ರಾ ಅವರು ನೀಲಿ ಚಿತ್ರಗಳನ್ನು ತಯಾರಿಸುತ್ತಿದ್ದರು ಎಂಬುದಕ್ಕೆ ಪೊಲೀಸರು ಹಲವು ಸಾಕ್ಷ್ಯಗಳನ್ನು ಒದಗಿಸಿದ್ದರು.  ಬ್ಲೂ ಫಿಲ್ಮ್​ ಆರೋಪದ ಮೇಲೆ ಅವರು 63 ದಿನಗಳವರೆಗೆ ಅರ್ತೂರು ಜೈಲಿನಲ್ಲಿ ಇದ್ದರು. ನೀಲಿ ಚಿತ್ರಗಳ  ನಿರ್ಮಾಣ ದಂಧೆಯಲ್ಲಿ ತೊಡಗಿದ್ದ ಆರೋಪವನ್ನು ಇಂದಿಗೂ ರಾಜ್​ ಕುಂದ್ರಾ ಇಂದಿಗೂ ಎದುರಿಸುತ್ತಿದ್ದಾರೆ.   ‘ನಾನು ಮಾಡಿದ್ದು ನೀಲಿ ಚಿತ್ರ ಅಲ್ಲ, ಕಾಮೋದ್ರೇಕದ ಸಿನಿಮಾ ಮಾತ್ರ’ ಎಂದು ರಾಜ್​ ಕುಂದ್ರಾ ಹೇಳಿಕೆ ನೀಡಿದ್ದರು. ತಾವು ಬ್ಲೂಫಿಲ್ಮ್​ ಮಾಡುವುದನ್ನು ಅವರು ಒಪ್ಪಿಕೊಂಡಿರಲಿಲ್ಲ. ಆದರೆ ಈ ಪ್ರಕರಣದಲ್ಲಿ ಹಲವು ನಟಿಯರ ಜೊತೆ ಖುದ್ದು ಶಿಲ್ಪಾ ಶೆಟ್ಟಿಯವರ (Shilpa Shetty) ಹೆಸರೂ ಥಳಕು ಹಾಕಿಕೊಂಡಿತ್ತು. 

ಇವರ ಜೊತೆ ಕೇಳಿ ಬಂದಿದ್ದ ನಟಿಯರ ಪೈಕಿ ಹಾಟ್​ ತಾರೆ ಎಂದೇ ಫೇಮಸ್​ ಆಗಿರೋ,  ನಟಿ ಗೆಹನಾ ವಸಿಷ್ಠ.  ಬ್ಲೂ ಫಿಲ್ಮ್ಂ ಕೇಸ್​ನಲ್ಲಿ ರಾಜ್​ ಕುಂದ್ರಾ ಜೊತೆ ಗೆಹನಾ ಅವರನ್ನೂ ಬಂಧಿಸಲಾಗಿತ್ತು. ಘಟನೆ ನಡೆದು ವರ್ಷಗಳ ಬಳಿಕ ಈಗ ಈ ಬಗ್ಗೆ ಮತ್ತೆ ಮಾತನಾಡಿದ್ದಾರೆ ನಟಿ. ಕಾರ್ಯನಿಮಿತ್ತ  ಭೋಪಾಲ್‌ನಲ್ಲಿರುವ ನಟಿ, ಅಲ್ಲಿ ತಮ್ಮ ಮತ್ತು ರಾಜ್​ ಕುಂದ್ರಾ ವಿರುದ್ಧ ಬಂದಿರುವ ನೀಲಿ ಚಿತ್ರದ ಆರೋಪವನ್ನು ತಳ್ಳಿ ಹಾಕಿದ್ದಾರೆ. ಇದೇ ವೇಳೆ ಗೆಹನಾ ಅವರು, ಇನ್ನೋರ್ವ ಬಿಚ್ಚೋಲೆ ನಟಿ ಶೆರ್ಲಿನ್​ ಚೋಪ್ರಾ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.

Tap to resize

Latest Videos

ಐಸ್​ಕ್ರೀಂ ಹೇಗೆ ತಿನ್ಬೇಕು ಎನ್ನೋದನ್ನು ಹೇಳಿಕೊಟ್ಟ ಹಾಟ್​ ಬ್ಯೂಟಿ ಶೆರ್ಲಿನ್​ ಚೋಪ್ರಾ!

ಅಷ್ಟಕ್ಕೂ ಆಗಿದ್ದೇನೆಂದರೆ, ಅಶ್ಲೀಲ ಚಿತ್ರ ನಿರ್ಮಾಣ ಆರೋಪದಡಿ ರಾಜ್ ಕುಂದ್ರಾ ಬಂಧನವಾಗುತ್ತದಂತೆ ಕುಂದ್ರಾ ಹಾಗೂ ಶಿಲ್ಪಾ ಶೆಟ್ಟಿ ವಿರುದ್ಧ ಶೆರ್ಲಿನ್ ಹಲವು ಆರೋಪ ಮಾಡಿದ್ದರು. ತನ್ನನ್ನು ಬಳಸಿಕೊಂಡು ಹಣ ನೀಡಿದ ಮೋಸ ಮಾಡಿದ್ದಾರೆ ಎಂದಿದ್ದರು. ರಾಜ್ ಕುಂದ್ರಾ ಬಂಧನದಿಂದ ಬಿಡುಗಡೆಯಾದ ಬೆನ್ನಲ್ಲೇ ಶೆರ್ಲಿನ್ ಚೋಪ್ರಾ ಈ ಕುರಿತು ದೂರು ದಾಖಿಲಿಸಿದ್ದರು. ರಾಜ್ ಕುಂದ್ರಾ ಹಾಗೂ ಶಿಲ್ಪಾ ಶೆಟ್ಟಿ ತನಗೆ ಮೋಸ, ಮಾನಸಿಕ ಕಿರುಕುಳ ಹಾಗೂ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಶೆರ್ಲಿನ್ ಚೋಪ್ರಾ ಜುಹೂ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಇದರ ಬೆನ್ನಲ್ಲೇ ರಾಜ್ ಕುಂದ್ರಾ ಹಾಗೂ ಶಿಲ್ಪಾ ಶೆಟ್ಟಿ, ಸಾರ್ವಜನಿಕ ವೇದಿಕೆಯಲ್ಲಿ ವಿನಾ ಕಾರಣ ಮಾನ ಹರಾಜು ಮಾಡಿದ್ದರು. ನಮಗಾದ ನಷ್ಟ ಪರಿಹಾರಕ್ಕೆ 50 ಕೋಟಿ ರೂಪಾಯಿ ನೀಡಬೇಕು ಎಂದು ಕುಂದ್ರಾ ದಂಪತಿ ಮಾನ ನಷ್ಟ ಮೊಕದ್ದಮೆ ಕೇಸ್ ಹೂಡಿದ್ದರು. 

ಇದರ ಬಗ್ಗೆಯೇ ಇದೀಗ ಗೆಹನಾ ಮಾತನಾಡಿದ್ದಾರೆ. ನಟಿ ಶೆರ್ಲಿನ್ ಚೋಪ್ರಾ  ರಾಜ್​ ಕುಂದ್ರಾ ಅವರಿಂದ 30 ಲಕ್ಷ ರೂಪಾಯಿ ಸಂಬಳ ಪಡೆಯುತ್ತಿದ್ದಳು. ಇಷ್ಟಾದರೂ ಪೋರ್ನ್​ ವಿಡಿಯೋ ಎನ್ನುವ ಮೂಲಕ ರಾಜ್​ ಅವರ ಬೆನ್ನಿಗೇ ಚೂರಿ ಹಾಕಿದಳು ಎಂದಿದ್ದಾರೆ. ದರೂ ಶೆರ್ಲಿನ್ ಚೋಪ್ರಾ ಬೆನ್ನಿಗೆ ಚೂರಿ ಹಾಕಿದ್ದಾಳೆ ಎಂದು ಹೇಳಿದ್ದಾರೆ.  ರಾಜ್ ತಮ್ಮ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಶೆರ್ಲಿನ್ ಚೋಪ್ರಾ ಸುಳ್ಳು ದೂರು ಕೊಟ್ಟಳು.  ಶೆರ್ಲಿನ್ ತನ್ನ ಆರ್ಮ್ಸ್‌ಪ್ರೈಮ್ ಅಪ್ಲಿಕೇಶನ್‌ಗಾಗಿ ಕೆಲಸ ಮಾಡುವಾಗ ರಾಜ್‌ನಿಂದ 30 ಲಕ್ಷ ರೂಪಾಯಿಗಳ ನಿಯಮಿತ ಸಂಬಳವನ್ನು ಪಡೆದಿದ್ದಾಳೆ, ಆದರೆ   ಪೋರ್ನ್ ಕೇಸ್​ನಲ್ಲಿ ಹೆಸರು ದಾಖಲಾಗುತ್ತಿದ್ದಂತೆಯೇ ದ್ರೋಹ ಮಾಡಿದ್ದಾಳೆ, ಬೆನ್ನಿಗೆ ಚೂರಿ ಹಾಕಿದ್ದಾಳೆ ಎಂದು ಆರೋಪಿಸಿದ್ದಾರೆ. ಕೊನೆಗೂ ನಾವಿಬ್ಬರೂ ನಿರಪರಾಧಿಗಳು ಎನ್ನುವ ಕಾರಣಕ್ಕೆ ಕೋರ್ಟ್​ ಜಾಮೀನು ನೀಡಿದೆ ಎಂದೂ ಹೇಳಿದ್ದಾರೆ. ಇದೇ ವೇಳೆ ಶೆರ್ಲಿನ್​ ವಿರುದ್ಧದ ಇನ್ನೂ ಆರೋಪ ಮಾಡಿರುವ ಗೆಹನಾ,  ರಾಜ್ ಕುಂದ್ರಾ ಅವರೇ ಶೆರ್ಲಿನ್ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಬೇಕು. ಆಕೆಯ ಮೇಲೆ ಸುಲಿಗೆ ಆರೋಪ ಹೊರಿಸಬೇಕು. ಅಷ್ಟಕ್ಕೂ ಶೆರ್ಲಿನ್ ಮೇಲೆ ಯಾರು ಅತ್ಯಾಚಾರ ಮಾಡುತ್ತಾರೆ? ಆದರ್ಶ್ ನಗರದ ರಿಯಲ್ ಎಸ್ಟೇಟ್ ಏಜೆಂಟ್‌ಗಳು ಆಕೆಯ ಫೋಟೋಗಳನ್ನು ತಮ್ಮ ಜೇಬಿನಲ್ಲಿ ಇಟ್ಟುಕೊಂಡು ತಿರುಗಾಡುತ್ತಿದ್ದಾರೆ ಎಂದು ಗೆಹಾನಾ ಹೇಳಿದ್ದಾರೆ.  

ಹೋಳಿ ಆಚರಣೆ ವೇಳೆ ಶೆರ್ಲಿನ್​ ಚೋಪ್ರಾ ನಂಗಾ ನಾಚ್​! ಕಾಮನೇನಾದ್ರೂ ಈಗ ನೋಡಿದ್ರೆ... ಅಂದ ನೆಟ್ಟಿಗರು

click me!