
ಸೂಪರ್ ಸ್ಟಾರ್ ರಜನಿಕಾಂತ್ ತಮಿಳುನಾಡಿನಲ್ಲಿ ದೊಡ್ಡ ಸ್ಟಾರ್ ಆಗಿ ಗುರುತಿಸಿಕೊಂಡಿದ್ದರೂ ಸಹ ಹುಟ್ಟೂರು ಕರ್ನಾಟಕದ ಮೇಲೆ ವಿಶೇಷ ಪ್ರೀತಿ ಇಟ್ಟುಕೊಂಡಿದ್ದಾರೆ. ಕರ್ನಾಟಕದಲ್ಲೇ ಹುಟ್ಟಿಬೆಳೆದ ತಲೈವಾ ಅಂದರೆ ಕನ್ನಡಿಗರಿಗೂ ಅಷ್ಟೆ ಪ್ರೀತಿ, ಅಕ್ಕರೆ. ಸೂಪರ್ ಸ್ಟಾರ್‌ಗೆ ಕರ್ನಾಟಕದಲ್ಲಿಯೂ ಅಪಾರ ಅಭಿಮಾನಿಗಳಿದ್ದಾರೆ. ರಜನಿಕಾಂತ್ ಆಗಾಗ ಸ್ನೇಹಿತರು ಮತ್ತು ಕುಟುಂಬವನ್ನು ಭೇಟಿಯಾಗಲು ಕರ್ನಾಟಕಕ್ಕೆ ಭೇಟಿ ನೀಡುತ್ತಾರೆ. ಇತ್ತೀಚಿಗಷ್ಟೆ ಸೂಪರ್ ಸ್ಟಾರ್ ಅವರ ಅಪ್ಪಟ ಕನ್ನಡ ಅಭಿಮಾನಿ ವಿವಾಹ ಜೀವನಕ್ಕೆ ಕಾಲಿಟ್ಟರು. ರಜನಿಕಾಂತ್ ವಿಶೇಷ ಆಹ್ವಾನ ನೀಡಲಾಗಿತ್ತು. ಆದರೆ ಸೂಪರ್ ಸ್ಟಾರ್ ಅಭಿಮಾನಿಯ ಮದುವೆಗೆ ಬರಲು ಸಾಧ್ಯವಾಗಿರಲಿಲ್ಲ. ಹಾಗಾಗಿ ನವದಂಪತಿಯನ್ನು ಚೆನ್ನೈನ ತನ್ನ ನಿವಾಸಕ್ಕೆ ಕರೆಸಿ ವಿಶೇಷ ಆತಿಥ್ಯ ನೀಡಿದ್ದಾರೆ.
ಹೌದು, ಕರ್ನಾಟಕದ ರಾಜ್ಯ ರಜನಿಕಾಂತ್ ಸಂಘಟನೆಯ ರಾಜ್ಯಾಧ್ಯಕ್ಷ ರಜಿನಿ ಸಂತೋಷ್ ಇತ್ತೀಚಿಗಷ್ಟೆ ಕೌಶಲ್ಯಾ ಎನ್ನುವವರ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಅವರ ಮದುವೆಗೆ ರಜನಿಕಾಂತ್‌ಗೆ ಬರಲು ಸಾಧ್ಯವಾಗಿರಲಿಲ್ಲ. ಅನಾರೋಗ್ಯದ ಕಾರಣ ಮದುವೆಗೆ ಬಂದಿರಲಿಲ್ಲ. ಹಾಗಾಗಿ ಸೂಪರ್ ಸ್ಟಾರ್ ಅವರನ್ನು ಮನೆಗೆ ಆಹ್ವಾನ ನೀಡಿದ್ದಾರೆ. ಚೆನ್ನೈ ನಿವಾಸಕ್ಕೆ ಭೇಟಿ ನೀಡಿದ ಸಂತೋಷ್ ದಂಪತಿಗೆ ವಿಶೇಷ ಆತಿಥ್ಯ ನೀಡಿದ್ದಾರೆ. ರಜನಿಕಾಂತ್ ನಿವಾಸದಲ್ಲಿ ಸಂತೋಷ್ ದಂಪತಿ ಮಾತನಾಡುತ್ತಿರುವ, ಕಾಫಿ ಕುಡಿಯುತ್ತಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಬಳಿಕ ಸಂತೋಷ್ ದಂಪತಿ ಸೂಪರ್ ಸ್ಟಾರ್ ಕಾಲಿಗೆ ಬಿದ್ದಿ ಆಶೀರ್ವಾದ ಪಡೆದುಕೊಂಡಿದ್ದಾರೆ. ನವಜೋಡಿಗೆ ಸೂಪರ್ ಸ್ಟಾರ್ ಶುಭಹಾರೈಸಿದ್ದಾರೆ. ಅಲ್ಲದೇ ನವಜೋಡಿಗೆ ಕೆಲವು ವಸ್ತುಗಳನ್ನು ಉಡುಗೊರೆಯಾಗಿ ನೀಡಿದರು.
ಸಂತಸ ಹಂಚಿಕೊಂಡ ಸಂತೋಷ
ಈ ಬಗ್ಗೆ ಸಂತೋಷ್ ಸಂತಸ ವ್ಯಕ್ತಪಡಿಸಿದ್ದಾರೆ. 'ನನ್ನ ಹೆಂಡತಿ ಜೊತೆ ನಾನು ತಲೈವ ಆಶೀರ್ವಾದ ಪಡೆದಿದ್ದೇನೆ. ಮದುವೆಯ ಉಡುಗೊರೆ ಮತ್ತು ವಿಶೇಷ ಆತಿಥ್ಯಕ್ಕಾಗಿ ರಜನಿಕಾಂತ್ ಅವರಿಗೆ ಧನ್ಯವಾದಗಳು. ನೀವು ನನ್ನ ಕೆಲಸವನ್ನು ಮೆಚ್ಚಿದ್ದೀರಿ. ನಮ್ಮ ಗುರುಗಳಾದ ನಮ್ಮ ತಲೈವ ರಜನಿಕಾಂತ್ ಅವರೊಂದಿಗೆ ಕಳೆದ ಆ ಸುವರ್ಣ 4 ಗಂಟೆಗಳು 4 ದಶಕಗಳಿಗೆ ಸಮ. ಅವರ ನಿವಾಸಕ್ಕೆ ನಮ್ಮನ್ನು ಆಹ್ವಾನಿಸಿ ಮತ್ತು ನಮ್ಮೊಂದಿಗೆ ಊಟವನ್ನು ಆನಂದಿಸಿದರು. ನನ್ನ ಅಳಿಲು ಸಾಮಾಜಿಕ ಸೇವೆಯನ್ನು ಗುರುತಿಸಿ ನೀವು ನನಗೆ ಮತ್ತು ನನ್ನ ತಂಡಕ್ಕೆ ಬಹುಮಾನವನ್ನು ನೀಡಿದ್ದೀರಿ. ಮತ್ತು ಪ್ರಶಂಸಾ ಪತ್ರವನ್ನು ನೀಡಿದ್ದೀರಿ' ಎಂದು ಸಂತೋಷ್ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾರೆ.
ರಜನಿಕಾಂತ್‌ಗೆ ಅಂದು ಹೇಗೆಲ್ಲಾ ಅವಮಾನ ಆಗಿತ್ತು ಗೊತ್ತಾ? ಅವರೇ ಹೇಳ್ತಾರೆ
ಅಭಿಮಾನಿ ಸಂತೋಷ್ ಬಗ್ಗೆ
ಸಂತೋಷ್ ಮೊದಲಿನಿಂದಲೂ ರಜನಿಕಾಂತ್ ಅವರ ಅಭಿಮಾನಿ. ರಜನಿಕಾಂತ್ ಅವರ ಮನೆಯ ಕಾರ್ಯಕ್ರಮಗಳಲ್ಲಿ ಸಂತೋಷ್ ಯಾವಾಗಲೂ ಇರುತ್ತಾರೆ. ಸೋಷಿಯಲ್ ಮೀಡಿಯಾದಲ್ಲೂ ರಜನಿ ಹೆಸರಿನೊಂದಿಗೆ ಸಂತೋಷ್ ತನ್ನ ಹೆಸರು ಹಾಕಿರುವುದು ವಿಶೇಷ. ಸಂತೋಷ್ ಪತ್ನಿ ಕೌಶಲ್ಯ ಕೂಡ ರಜನಿಕಾಂತ್ ಅವರ ಅಭಿಮಾನಿ. ಸಂತೋಷ್ ಅವರು ಮಾನವ ಹಕ್ಕುಗಳು ಮತ್ತು ಭ್ರಷ್ಟಾಚಾರ ವಿರೋಧಿ ಬ್ಯೂರೋದ ರಾಜ್ಯ ಸಂಯೋಜಕರಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ.
777 ಚಾರ್ಲಿ ವೀಕ್ಷಿಸಿದ ರಜಿನಿಕಾಂತ್; ರಕ್ಷಿತ್‌ಗೆ ಕರೆ ಮಾಡಿ ಸೂಪರ್ ಸ್ಟಾರ್ ಹೇಳಿದ್ದೇನು?
ಚೆಸ್ ಆಡುತ್ತಿರುವ ಫೋಟೋ ಹಂಚಿಕೊಂಡಿದ್ದ ಸೂಪರ್ ಸ್ಟಾರ್
ಸೂಪರ್ ಸ್ಟಾರ್ ರಜನಿಕಾಂತ್ ಅವರಿಗೆ ಚೆಸ್ ಆಟ ಎಂದರೆ ತುಂಬಾ ಇಷ್ಟಪಡುತ್ತಾರೆ. ಸದ್ಯ ತಮಿಳುನಾಡು 44 ನೇ ಚೆಸ್ ಒಲಿಂಪಿಯಾಡ್ ಪ್ರಾರಂಭವಾಗಿದೆ. ಹಾಗಾಗಿ ಚೆಸ್ ಆಟಗಾರರಿಗೆ ರಜನಿಕಾಂತ್ ಶುಭಾಶಯಗಳನ್ನು ತಿಳಿಸಿದರು. #ChessOlympiad2022 ಎಂಬ ಹ್ಯಾಶ್‌ಟ್ಯಾಗ್ ಬಳಸಿ, ಸೂಪರ್ ಸ್ಟಾರ್ ಟ್ವೀಟ್ ಮಾಡಿದ್ದರು, 'ನಾನು ಅತ್ಯಂತ ಇಷ್ಟಪಡುವ ಒಳಾಂಗಣ ಆಟ, ಎಲ್ಲಾ ಚೆಸ್ ಮನಸ್ಸುಗಳಿಗೆ ಆದ್ ದಿ ಬೆಸ್ಟ್, ದೇವರು ಆಶೀರ್ವದಿಸಲಿ' ಎಂದು ಟ್ವೀಟ್ ಮಾಡಿದ್ದರು. ರಜನಿಕಾಂತ್ ಅವರು ಚೆಸ್ ಆಡುತ್ತಿುವ ಫೋಟೋವನ್ನು ಶೇರ್ ಮಾಡಿದ್ದರು. ಚೆಸ್ ಆಡುವಾಗ ತುಂಬಾ ಚಿಂತನಶೀಲರಾಗಿರುವ ಫೋಟೋವನ್ನು ಹಂಚಿಕೊಂಡಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.