
ಮಲಯಾಳಂ ಖ್ಯಾತ ನಟ ಶರತ್ ಚಂದ್ರ ಶವವಾಗಿ ಪತ್ತೆಯಾಗಿದ್ದಾರೆ. ಜುಲೈ 29 ಶುಕ್ರವಾರ ಶರತ್ ಶವ ಪತ್ತೆಯಾಗಿದೆ. ಸ್ಟಾರ್ ಆಗಿ ಮರೆಯಬೇಕಿದ್ದ ನಟ ಶರತ್ ಚಂದ್ರ ನಿಗೂಢ ಸಾವು ಮಾಲಿವುಡ್ ಅನ್ನು ಬೆಚ್ಚಿಬೀಳಿಸಿದೆ. 37 ವರ್ಷದ ನಟ ಶರತ್ ಸಾವಿಗೆ ಕಾರಣವೇನು ಎನ್ನುವುದು ಇನ್ನು ಪತ್ತೆಯಾಗಿಲ್ಲ. ಉದಯೋನ್ಮುಕ ನಟನ ನಿಧನಕ್ಕೆ ಅಭಿಮಾನಿಗಳು, ಆಪ್ತರು ಮತ್ತು ಸಿನಿಗಣ್ಯರು ಸಂತಾಪ ಸೂಚಿಸುತ್ತಿದ್ದಾರೆ. 2017ರಲ್ಲಿ ರಿಲೀಸ್ ಆಗಿದ್ದ ಕ್ರೈಮ್ ಥ್ರಿಲ್ಲರ್ ಅಂಗಮಾಲಿ ಡೈರೀಸ್ ಸಿನಿಮಾದಲ್ಲಿ ಶರತ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. ಈ ಚಿತ್ರದಲ್ಲಿನ ಶರತ್ ಅದ್ಭುತ ನಟನೆಗೆ ಭಾರಿ ಮೆಚ್ಚುಗೆ ಪಡೆದಿದ್ದರು. ಈ ಚಿತ್ರಕ್ಕೆ ಲಿಜೊ ಜೋಶ್ ಆಕ್ಷನ್ ಕಟ್ ಹೇಳಿದ್ದರು.
ಅಂಗಮಾಲಿ ಡೈರೀಸ್ ಸಿನಿಮಾದಲ್ಲಿ ಶರತ್ ಜೊತೆ ನಟಿಸಿದ್ದ ಸಹ ನಟ ಆಂಟೋನಿ ವರ್ಗೀನ್ ಸಾಮಾಜಿಕ ಜಾಲತಾಣದಲ್ಲಿ ಸಂತಾಪ ಸೂಚಿಸಿ ತೀವ್ರ ದುಃಖವಾಗಿದೆ ಎಂದು ಹೇಳಿದ್ದಾರೆ. ಅಧಿಕೃತ ಫೇಸ್ ಬುಕ್ ಖಾತೆಯಲ್ಲಿ ಆಪ್ತ ಮತ್ತು ಸಹನಟನ ಅಗಲಿಯ ನೋವನ್ನು ಹೊರಹಾಕಿದ್ದಾರೆ. RIP ಬ್ರದರ್ ಎಂದು ಬರೆದುಕೊಂಡಿದ್ದಾರೆ. ಆಂಟೋನಿ ಪೋಸ್ಟ್ ಗೆ ಅಭಿಮಾನಿಗಳು ಕಾಮೆಂಟ್ ಮಾಡಿ ದುಃಖಿತರಾಗಿದ್ದಾರೆ.
ಲೈಂಗಿಕ ದೌರ್ಜನ್ಯ: ಮಲಯಾಳಂ ನಟ ವಿಜಯ್ ಬಾಬು ಬಂಧನ
ಕೊಚ್ಚಿ ಮೂಲದ ಶರತ್ ಚಂದ್ರ ಸಿನಿಮಾರಂಗಕ್ಕೆ ಎಂಟ್ರಿ ಕೊಡುವ ಮೊದಲು ಐಟಿ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದರು. ಬಳಿಕ ಡಬ್ಬಿಂಗ್ ಕಲಾವಿದನಾಗಿ ಬಣ್ಣದ ಲೋಕ ಪ್ರವೇಶ ಮಾಡಿದರು. ಬಳಿಕ ಶರತ್ ಮಲಯಾಳಂ ಅನೀಸ್ಯ ಸಿನಿಮಾ ಮೂಲಕ ದೊಡ್ಡ ಪರದೆ ಮೇಲೆ ಮಿಂಚಿದರು. ನಂತರ ಅಂಗಮಾಲಿ ಡೈರೀಸ್ ಸಿನಿಮಾ ದೊಡ್ಡ ಮಟ್ಟದ ಖ್ಯಾತಿ ತಂದುಕೊಟ್ಟಿತ್ತು. ಶರತ್, ಒರು ಮೆಕ್ಸಿಕನ್ ಅಪರಾತ, ಸಿಐಎ ಕಾಮ್ರೇಡ್ ಇನ್ ಅಮೆರಿಕ, ಕೂಡೆ, ಒರು ತಾತ್ವಿಕ ಅವಲೋಕನಂ ಸಿನಿಮಾ ಸೇರಿದಂತೆ ಅನೇಕ ಸಿನಿಮಾಗಳಲ್ಲಿ ನಟಿಸಿದ್ದಾರೆ.
Edava Basheer ಹಾಡುತ್ತಲೇ ಕುಸಿದು ಬಿದ್ದು ನಿಧನರಾದ ಖ್ಯಾತ ಹಿನ್ನಲೆ ಗಾಯಕ!
ಶರತ್ ತಂದೆ ಚಂದ್ರನ್, ತಾಯಿ ಲೀಲಾ ಮತ್ತು ಸಹೋದರ ಶ್ಯಾಮ್ ಚಂದ್ರನ್ ಅವರನ್ನು ಅಗಲಿದ್ದಾರೆ. ಇಂದು ಶರತ್ ಅಂತ್ಯಕ್ರಿಯೆ ನಡೆಸಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ನಟನ ಸಾವಿಗೆ ನಿಜವದ ಕಾರಣವೇನು ಎನ್ನುವುದು ಇನ್ನಷ್ಟೆ ಬಹಿರಂಗವಾಗಬೇಕಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.