ಸಲ್ಮಾನ್ ಖಾನ್‌ಗೆ ಸುದೀಪ್ ನಿರ್ದೇಶನ; ಎಕ್ಸ್‌ಕ್ಲೂಸಿವ್ ಮಾಹಿತಿ ರಿವೀಲ್ ಮಾಡಿದ ಕಿಚ್ಚ

Published : Jul 29, 2022, 06:46 PM IST
ಸಲ್ಮಾನ್ ಖಾನ್‌ಗೆ ಸುದೀಪ್ ನಿರ್ದೇಶನ; ಎಕ್ಸ್‌ಕ್ಲೂಸಿವ್ ಮಾಹಿತಿ ರಿವೀಲ್ ಮಾಡಿದ ಕಿಚ್ಚ

ಸಾರಾಂಶ

ಸುದೀಪ್ ನಿರ್ದೇಶನದ ಸಿನಿಮಾದಲ್ಲಿ ಬಾಲಿವುಡ್ ಸ್ಟಾರ್ ಸಲ್ಮಾನ್ ಖಾನ್ ನಟಿಸುತ್ತಿದ್ದಾರೆ. ಈ ಬಗ್ಗೆ ಸುದೀಪ್ ಅವರೇ ಖಚಿತಪಡಿಸಿದ್ದಾರೆ. ಅಂದಹಾಗೆ2019ರಲ್ಲಿ ರಿಲೀಸ್ ಆಗಿದ್ದ ಸಲ್ಮಾನ್ ಖಾನ್ ನಟನೆಯ ದಬಂಗ್-3 ಸಿನಿಮಾದಲ್ಲಿ ಸುದೀಪ್​ ವಿಲನ್ ಆಗಿ ಅಬ್ಬರಿಸಿದ್ದರು. ಚಿತ್ರದ ಶೂಟಿಂಗ್ ವೇಳೆ ಸಲ್ಮಾನ್ ಖಾನ್ ಹಾಗೂ ಸುದೀಪ್​ ನಡುವೆ ಒಳ್ಳೆಯ ಬಾಂಧವ್ಯ ಬೆಳೆದಿದೆ. ಸಿನಿಮಾ ಬಳಿಕವೂ ಇಬ್ಬರ ನಡುವೆ ಅದೇ ಸ್ನೇಹ ಮುಂದುವರೆದಿದೆ. ಇದೀಗ ಸಲ್ಮಾನ್ ಖಾನ್, ಕಿಚ್ಚ ಸುದೀಪ್ ಅವರಿಗೆ ಕಾಲ್ ಶೀಟ್ ನೀಡುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. 

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಸದ್ಯ ವಿಕ್ರಾಂತ್ ರೋಣ ರಿಲೀಸ್‌ನ ಬ್ಯುಸಿಯಲ್ಲಿದ್ದಾರೆ. ಬಹುನಿರೀಕ್ಷೆಯ ಸಿನಿಮಾ ಜುಲೈ 28ರಂದು ತೆರೆಗೆ ಬಂದಿದೆ.  ವಿಕ್ರಾಂತ್ ರೋಣ ವಿಶ್ವದಾದ್ಯಂತ ರಿಲೀಸ್ ಆಗಿದ್ದು ಹೌಸ ಫುಲ್ ಪ್ರದರ್ಶನ ಕಾಣುತ್ತಿದೆ. ಮೊದಲ ದಿನ  ವಿಕ್ರಾಂತ್ ರೋಣ ಉತ್ತಮ ಕಲೆಕ್ಷನ್ ಮಾಡಿದೆ. 2ನೇ ದಿನವೂ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ. ಕರ್ನಾಟಕ ಮಾತ್ರವಲ್ಲದೇ ಬೇರೆ ಬೇರೆ ರಾಜ್ಯಗಳಲ್ಲಿಂದನೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಈ ನಡುವೆ ಸುದೀಪ್ ಕಡೆಯಿಂದ ಮತ್ತೊಂದು ಸಖತ್ ಸುದ್ದಿ ರಿವೀಲ್ ಆಗಿದೆ. ಕಿಚ್ಚ ಸುದೀಪ್ ಸದ್ಯದಲ್ಲೇ ನಿರ್ದೇಶನಕ್ಕೆ ಮರಳುತ್ತಿದ್ದಾರೆ. ಸುದೀಪ್ ಅದ್ಭುತ ನಟ ಜೊತೆಗೆ ನಿರ್ದೇಶಕ ಕೂಡ ಹೌದು. ಇದನ್ನು ತನ್ನ ಮೊದಲ ನಿರ್ದೇಶನದ ಮೈ ಆಟೋಗ್ರಾಫ್ ಸಿನಿಮಾದಲ್ಲೇ ನಿರೂಪಿಸಿದ್ದಾರೆ. ಸುದೀಪ್ ನಿರ್ದೇಶನದ ಸಿನಿಮಾ ನೋಡಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಯಾವಾಗ ಎನ್ನುವ ಪ್ರಶ್ನೆ ಎದುರಾಗುತ್ತಲೇ ಇತ್ತು. ಇದೀಗ ಈ ಬಗ್ಗೆ ಸ್ವಸಃ ಸುದೀಪ್ ಅವರೇ ಮಾಹಿತಿ ರಿವೀಲ್ ಮಾಡಿದ್ದಾರೆ. ಅಂದಹಾಗೆ ಕಿಚ್ಚನ ನಿರ್ದೇಶನದ ಸಿನಿಮಾದಲ್ಲಿ ಬಾಲಿವುಡ್ ಸ್ಟಾರ್ ನಟ ಹೀರೋ ಆಗಿ ನಟಿಸುತ್ತಿದ್ದಾರೆ. 

ಹೌದು, ಸುದೀಪ್ ನಿರ್ದೇಶನದ ಸಿನಿಮಾದಲ್ಲಿ ಬಾಲಿವುಡ್ ಸ್ಟಾರ್ ಸಲ್ಮಾನ್ ಖಾನ್ ನಟಿಸುತ್ತಿದ್ದಾರೆ. ಈ ಬಗ್ಗೆ ಸುದೀಪ್ ಅವರೇ ಖಚಿತಪಡಿಸಿದ್ದಾರೆ. ಅಂದಹಾಗೆ2019ರಲ್ಲಿ ರಿಲೀಸ್ ಆಗಿದ್ದ ಸಲ್ಮಾನ್ ಖಾನ್ ನಟನೆಯ ದಬಂಗ್-3 ಸಿನಿಮಾದಲ್ಲಿ ಸುದೀಪ್​ ವಿಲನ್ ಆಗಿ ಅಬ್ಬರಿಸಿದ್ದರು. ಚಿತ್ರದ ಶೂಟಿಂಗ್ ವೇಳೆ ಸಲ್ಮಾನ್ ಖಾನ್ ಹಾಗೂ ಸುದೀಪ್​ ನಡುವೆ ಒಳ್ಳೆಯ ಬಾಂಧ

'ವಿಕ್ರಾಂತ್ ರೋಣ' ಪರಾಕ್ರಮಕ್ಕೆ ಜೈ ಹೋ ಎಂದ ಚಿತ್ರರಂಗದ ಬಿಗ್ ಸ್ಟಾರ್ಸ್!

ಈ ವಿಚಾರವನ್ನು ಸುದೀಪ್ ಆಂಗ್ಲ ವೆಬ್ ಸೈಟ್ ಪಿಂಕ್‌ವಿಲ್ಲಾ ಜೊತೆ ಹಂಚಿಕೊಂಡಿದ್ದಾರೆ. ವಿಕ್ರಾಂತ್ ರೋಣ ಚಿತ್ರವನ್ನು ಹಿಂದಿಯಲ್ಲಿ ಸಲ್ಮಾನ್ ಪ್ರೆಸೆಂಟ್ ಮಾಡಿದ್ದಾರೆ. ಪ್ರಿ ರಿಲೀಸ್ ಈವೆಂಟ್ ನಲ್ಲೂ ಸಲ್ಮಾನ್ ಖಾನ್ ಭಾಗಿಯಾಗಿದ್ದರು. ಈ ವೇಳೆ ಸುದೀಪ್ ಅವರಿಗೆ ಸಲ್ಮಾನ್ ಜೊತೆ ಸಿನಿಮಾ ಯಾವಾಗ ಎನ್ನುವ ಪ್ರಶ್ನೆ ಎದುರಾಗಿದೆ. ಇದಕ್ಕೆ ಉತ್ತರಿಸಿದ ಸುದೀಪ್, 'ಕಳೆದ ವರ್ಷವೇ ಈ ಬಗ್ಗೆ ಪ್ರಕ್ರಿಯೆ ಆರಂಭವಾಗಿದೆ. ಇನ್ನೂ ಸ್ವಲ್ಪ ಸಮಯ ಇದಕ್ಕಾಗಿ ಕಾಯಬೇಕಾಗುತ್ತದೆ. ನಾನು ಅವರಿಗಿನ್ನು ಕಥೆ ಹೇಳಬೇಕು. ಅವರು ಅದಕ್ಕೆ ಓಕೆ ಹೇಳಬೇಕು. ನಂತರ ಅವರು ಸೆಟ್​ಗೆ ಬರಬೇಕು. ಈಗಾಲೇ ಅವರು ಬ್ಯುಸಿ ಇದದ್ದಾರೆ. ಈ ಬಗ್ಗೆ ನಾವು ಚರ್ಚಿಸುತ್ತಲೇ ಇರುತ್ತೇವೆ. ಸರಿಯಾದ ಸಮಯಕ್ಕೆ ಎಲ್ಲವೂ ನಡೆಯಲಿದೆ. ಎಂದು ಸುದೀಪ್ ಹೇಳಿದರು. 

ವೀರೇಂದ್ರ ಹೆಗ್ಗಡೆ ಭೇಟಿಯಾಗಿ ಶುಭಾಶಯ ತಿಳಿಸಿದ ಸುದೀಪ್ ದಂಪತಿ

ವಿಕ್ರಾಂತ್ ರೋಣ ಸಿನಿಮಾವನ್ನು ಹಿಂದಿಯಲ್ಲಿ ಹಂಚಿಕೆ ಮಾಡಲು ಸಲ್ಮಾನ್ ಖಾನ್ ಒಪ್ಪಿಕೊಂಡಿದ್ದು ತುಂಬಾ ಖುಷಿಯ ವಿಚಾರ ಎಂದು ಸುದೀಪ್ ಹೇಳಿದರು. ಸುದೀಪ್, ಸಲ್ಮಾನ್ ಗೆ ಸಿನಿಮಾ ಮಾಡುತ್ತಿದ್ದಾರೆ ಎನ್ನುವ ವಿಚಾರ ಕೇಳಿ ಕಿಚ್ಚನ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ. ಅಭಿಮಾನಿಗಳಲ್ಲಿ ಕುತೂಹಲ ಮತ್ತಷ್ಟು ಹೆಚ್ಚಾಗಿದೆ. ಇಬ್ಬರ ಕಾಂಬಿನೇಷನ್ ಸಿನಿಮಾ ಯಾವಾಗ ಸೆಟ್ಟೇರಲಿದೆ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ನಟನೆಗಿಂತ ಜಾಸ್ತಿ ಡೈಪರ್‌ ಬದಲಾಯಿಸೋದ್ರಲ್ಲಿ ನನಗೆ ಪರಿಣಿತಿ ಬಂದಿದೆ: Actor Vicky Kaushal
3 ವರ್ಷದ ಮಗಳಿಗೆ 'ನಿನ್ನ ಲವ್ವರ್ ಹೀಗೆ ಇರಬೇಕು, ಆಣೆ ಮಾಡು' ಎಂದ ಖ್ಯಾತ ನಟ;‌ ಕಂಡೀಷನ್‌ ಕೇಳಿ ಅನೇಕರಿಂದ ಛೀಮಾರಿ