52 ವರ್ಷದ ಬಳಿಕ ಬಾಂಗ್ಲಾದೇಶದಲ್ಲಿ ಹಿಂದಿ ಸಿನಿಮಾ ರಿಲೀಸ್; ಶಾರುಖ್ ಅಭಿಮಾನಿಗಳು ಫುಲ್ ಖುಷ್

By Shruthi KrishnaFirst Published May 5, 2023, 5:15 PM IST
Highlights

52 ವರ್ಷದ ಬಳಿಕ ಬಾಂಗ್ಲಾದೇಶದಲ್ಲಿ ಹಿಂದಿ ಸಿನಿಮಾ ರಿಲೀಸ್ ಆಗುತ್ತಿದೆ. ಇದು ಶಾರುಖ್ ಅಭಿಮಾನಿಗಳ ಸಂತಸಕ್ಕೆ ಕಾರಣವಾಗಿದೆ. 

ಬಾಲಿವುಡ್ ಕಿಂಗ್ ಶಾರುಖ್ ಖಾನ್ ನಟನೆಯ ಪಠಾಣ್ ಸಿನಿಮಾ ದೊಡ್ಡ ಮಟ್ಟದಲ್ಲಿ ಸಕ್ಸಸ್ ಕಂಡಿದೆ. ಕಿಂಗ್ ಖಾನ್ ಅನೇಕ ವರ್ಷಗಳ ಬಳಿಕ ಪಠಾಣ್ ಮೂಲಕ ತೆರೆಮೇಲೆ ಬಂದಿದ್ದು ಅಭಿಮಾನಿಗಳ ಹೃದಯಗೆದ್ದಿದ್ದಾರೆ. ಸಾಲು ಸಾಲು ಸಿನಿಮಾಗಳ ಸೋಲಿನಲ್ಲಿ ಸಿಲುಕಿದ್ದ ಬಾಲಿವುಡ್‌ಗೆ ಪಠಾಣ್ ದೊಡ್ಡ ಸಕ್ಸಸ್ ತಂದುಕೊಟ್ಟಿತ್ತು. ಶಾರುಖ್ ಖಾನ್ ಕೂಡ ಮತ್ತೆ ದೊಡ್ಡ ಸಕ್ಸಸ್ ಮೂಲಕ ಬಾಲಿವುಡ್ ನಲ್ಲಿ ಗೆದ್ದು ಬೀಗಿದರು. ಬಾಕ್ಸ್ ಆಫೀಸ್ ನಲ್ಲೂ ಸಿನಿಮಾ ಕಮಾಯಿ ಮಾಡಿದೆ. ವಿಶ್ವದಾದ್ಯಂತ ಪಠಾಣ್ ಸಿನಿಮಾ 1000 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಈ ಸಿನಿಮಾದಲ್ಲಿ ಶಾರುಖ್ ಖಾನ್‌ಗೆ  ಜೋಡಿಯಾಗಿ ದೀಪಿಕಾ ಪಡುಕೋಣೆ ಮಿಂಚಿದ್ದರು. 

ಜನವರಿಯಲ್ಲಿ ತೆರೆಗೆ ಬಂದ ಈ ಸಿನಿಮಾದ ಬಗ್ಗೆ ಮತ್ತೊಂದು ಸುದ್ದಿ ಕೇಳಿ ಬರುತ್ತಿದೆ. ಪಠಾಣ್ ಸಿನಿಮಾ ಬಾಂಗ್ಲಾದೇಶದಲ್ಲಿ ರಿಲೀಸ್ ಆಗುತ್ತಿದೆ. ಈ ಮೂಲಕ ಬರೋಬ್ಬರಿ 52 ವರ್ಷಗಳ ನಂತರ ಹಿಂದಿ ಸಿನಿಮಾವೊಂದು ಬಾಂಗ್ಲಾದೇಶದಲ್ಲಿ ತೆರೆಗೆ ಬರುತ್ತಿದೆ. 1971ರ ನಂತರ ಭಾರತದ ಸಿನಿಮಾ ಬಾಂಗ್ಲದೇಶದ ಚಿತ್ರಮಂದಿರಗಳಲ್ಲಿ ರಿಲೀಸ್ ಆಗುತ್ತಿರುವುದು ವಿಶೇಷ. ಅಂದುಕೊಂಡಂತೆ ಆಗಿದ್ದರೆ ಈ ಸಿನಿಮಾ ಈಗಾಗಲೇ ಬಾಂಗ್ಲಾದಲ್ಲಿ ರಿಲೀಸ್ ಆಗಿಬೇಕಿತ್ತು. ಏಪ್ರಿಲ್ 24ಕ್ಕೆ ಸಿನಿಮಾ ರಿಲೀಸ್ ಮಾಡಲು ನಿರ್ಧರಿಸಲಾಗಿತ್ತು. ಇದೀಗ ಹೊಸ ಡೇಟ್ ಅನೌನ್ಸ್ ಆಗಿದೆ. 

NMACC: ಪಠಾಣ್​ ಜೊತೆ ಡಿಡಿಎಲ್​ಜೆ ಸ್ಟೆಪ್​ ಮಾಡಿ ಹುಚ್ಚೆಬ್ಬಿಸಿದ ಶಾರುಖ್​ ಖಾನ್​!

Latest Videos

ಮೇ 12ಕ್ಕೆ ಪಠಾಣ್ ಸಿನಿಮಾ ಬಾಂಗ್ಲದಲ್ಲಿ ತೆರೆಗೆ ಬರುತ್ತಿದೆ. ಈ ಬಗ್ಗೆ ಮಾತನಾಡಿರುವ ಯಶ್ ರಾಜ್ ಫಿಲ್ಮ್ಸ್‌ನ ನೆಲ್ಸನ್ ಡಿಸೋಜಾ, 'ಸಿನಿಮಾ ಯಾವಾಗಲೂ ರಾಷ್ಟ್ರ, ಜನಾಂಗ ಮತ್ತು ಸಂಸ್ಕೃತಿಯನ್ನು ಒಂದುಗೂಡಿಸುವ ಶಕ್ತಿ. ಇದು ಗಡಿಯನ್ನೂ ಮೀರುತ್ತದೆ. ಜನರನ್ನು ಪ್ರೇರೇಪಿಸುತ್ತದೆ, ಜನರನ್ನು ಒಟ್ಟುಗೂಡಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಈಗಾಗಲೇ ವಿಶ್ವದಾದ್ಯಂತ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿರುವ ಪಠಾಣ್ ಇದೀಗ ಬಾಂಗ್ಲದೇಶ ಪ್ರೇಕ್ಷಕರನ್ನು ರಂಜಿಸಲು ಸಜ್ಜಾಗಿದ್ದಾರೆ' ಎಂದು ಹೇಳಿದ್ದಾರೆ. 

'1971ರ ನಂತರ ಬಾಂಗ್ಲಾದೇಶದಲ್ಲಿ ಬಿಡುಗಡೆಯಾಗುತ್ತಿರುವ ಮೊದಲ ಹಿಂದಿ ಚಲನಚಿತ್ರ ಪಠಾಣ್ ಆಗಿದೆ. ಈ ನಿರ್ಧಾರಕ್ಕಾಗಿ ನಾವು ಅಧಿಕಾರಿಗಳಿಗೆ ಕೃತಜ್ಞರಾಗಿರುತ್ತೇವೆ. ಶಾರುಖ್ ಖಾನ್ ಬಾಂಗ್ಲಾದೇಶದಲ್ಲಿ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ ಎಂದು ನಾವು ಹಲವಾರು ವರ್ಷಗಳಿಂದ ತಿಳಿದುಕೊಂಡಿದ್ದೇವೆ' ಎಂದು ಹೇಳಿದರು. 

Shah Rukh Khan: 'ಪಠಾಣ್' ದಾಖಲೆ ಮುರಿಯಲಿವೆಯಂತೆ ಶಾರುಖ್​ ಈ 10 ಚಿತ್ರಗಳು!

ಬಾಂಗ್ಲಾದಲ್ಲಿ ಬಾಲಿವುಡ್ ಸಿನಿಮಾ ರಿಲೀಸ್‌ಗೆ ಅನೇಕ ನಿರ್ಬಂಧಗಳಿತ್ತು. ಇದೀಗ ಕೊಂಚ ಸಡಿಲ ಮಾಡಲಾಗಿದ್ದು ಪಠಾಣ್ ರಿಲೀಸ್‌ಗೆ ಅವಕಾಶ ಸಿಕ್ಕಿದೆ. ಫೆಬ್ರವರಿ 12 ರಂದು ಬಾಂಗ್ಲಾದೇಶ ಚಲನಚಿತ್ರ ಅಭಿವೃದ್ಧಿ ನಿಗಮದಲ್ಲಿ ನಡೆದ ಸಭೆಯಲ್ಲಿ ಚಲನಚಿತ್ರ ಸಂಘವು ಬಾಂಗ್ಲಾದೇಶದಲ್ಲಿ ಹಿಂದಿ ಚಲನಚಿತ್ರಗಳನ್ನು ಬಿಡುಗಡೆ ಮಾಡುವ ನಿರ್ಧಾರವನ್ನು ಮಾಡಿದೆ. ಪ್ರತಿ ವರ್ಷ 10 ಹಿಂದಿ ಚಲನಚಿತ್ರಗಳನ್ನು ಬಾಂಗ್ಲಾದೇಶದ ಥಿಯೇಟರ್‌ಗಳಲ್ಲಿ ಬಿಡುಗಡೆ ಮಾಡಬೇಕೆಂದು ಸಂಘವು ಸೂಚಿಸಿದೆ. 
 

click me!