ಆಕೆ ಎಲ್ಲಾ ಸಂತೋಷಕ್ಕೂ ಅರ್ಹ; ಮಾಜಿ ಪತ್ನಿ ಸಮಂತಾ ಬಗ್ಗೆ ನಾಗ ಚೈತನ್ಯ ಮಾತು

Published : May 05, 2023, 05:49 PM IST
ಆಕೆ ಎಲ್ಲಾ ಸಂತೋಷಕ್ಕೂ ಅರ್ಹ; ಮಾಜಿ ಪತ್ನಿ ಸಮಂತಾ ಬಗ್ಗೆ ನಾಗ ಚೈತನ್ಯ ಮಾತು

ಸಾರಾಂಶ

ಆಕೆ ಎಲ್ಲಾ ಸಂತೋಷಕ್ಕೂ ಅರ್ಹ ಎಂದು ಮಾಜಿ ಪತ್ನಿ ಸಮಂತಾ ಬಗ್ಗೆ ನಾಗ ಚೈತನ್ಯ ಮಾತನಾಡಿದ್ದಾರೆ. 

ಸೌತ್ ಸ್ಟಾರ್ ಸಮಂತಾ ಮತ್ತು ನಾಗ ಚೈತನ್ಯ ವಿಚ್ಛೇದನ ಪಡೆದು ವರ್ಷದ ಮೇಲಾದರೂ ಸದಾ ಸುದ್ದಿಯಲ್ಲಿರುತ್ತಾರೆ. ಇಬ್ಬರೂ ಒಂದಲ್ಲೊಂದು ವಿಚಾರಕ್ಕೆ ಸದ್ದು ಮಾಡುತ್ತಿರುತ್ತಾರೆ. ನಾಗ ಚೈತನ್ಯ ಸದ್ಯ ಕಸ್ಟಡಿ ಸಿನಿಮಾದ ಪ್ರಮೋಷನ್ ನಲ್ಲಿ ಬ್ಯುಸಿಯಾಗಿದ್ದಾರೆ. ಈ ವೇಳೆ ಮಾಜಿ ಪತ್ನಿ ಬಗ್ಗೆ ಮಾತನಾಡಿದ್ದಾರೆ. ವಿಚ್ಛೇದನದ ಬಳಿಕ ಇಬ್ಬರೂ ಮುಂದೆ ಸಾಗಿರುವುದಾಗಿ ಹೇಳಿದ್ದಾರೆ. ಅಷ್ಟೆಯಲ್ಲ ಸಮಂತಾ ಲವ್ಲಿ ಪರ್ಸನ್ ಎಂದು ಹೇಳಿದ್ದಾರೆ. ಸಂದರ್ಶನದಲ್ಲಿ ನಾಗ ಚೈತನ್ಯ ಅವರಿಗೆ ಇಬ್ಬರೂ ಮುಂದಕ್ಕೆ ಸಾಗಿದ್ದೀರಾ ಎನ್ನುವವ ಪ್ರಶ್ನೆ ಎದುರಾಯಿತು. ವಿಚ್ಧೇನಕ್ಕೂ ಮೊದಲೇ ನಾವು ಬೇರೆ ಆಗಿದ್ದೆವು ಎನ್ನುವ ಶಾಕಿಂಗ್ ವಿಚಾರ ರಿವೀಲ್ ಮಾಡಿದ್ದಾರೆ ನಾಗಚೈತನ್ಯ. 

'ನಾವು ಬೇರೆಯಾಗಿ ಎರಡು ವರ್ಷಗಳಿಗಿಂತ ಹೆಚ್ಚಾಗಿದೆ. ಔಪಚಾರಿಕವಾಗಿ ವಿಚ್ಛೇದನ ಪಡೆದು ಒಂದು ವರ್ಷವಾಗಿದೆ. ನ್ಯಾಯಾಲಯವು ನಮಗೆ ವಿಚ್ಛೇದನಕ್ಕೆ ಅನುಮತಿ ನೀಡಿದೆ. ನಾವಿಬ್ಬರೂ ನಮ್ಮ ಜೀವನದಲ್ಲಿ ಮುಂದೆ ಸಾಗಿದ್ದೇವೆ. ನನ್ನ ಜೀವನದ ಆ ಹಂತದ ಬಗ್ಗೆ ನನಗೆ ಅಪಾರ ಗೌರವವಿದೆ' ಎಂದು ನಾಗ ಚೈತನ್ಯ ಹೇಳಿದ್ದಾರೆ. 

ಇದೇ ಸಮಯದಲ್ಲಿ ನಾಗ ಚೈತನ್ಯ ಮಾಜಿ ಪತ್ನಿ ಬಗ್ಗೆಯೂ ಮಾತನಾಡಿದ್ದಾರೆ. 'ಲವ್ಲಿ ವ್ಯಕ್ತಿ ಮತ್ತು ಎಲ್ಲಾ ಸಂತೋಷಕ್ಕೆ ಅರ್ಹರು. ಮಾಧ್ಯಮಗಳು ನಮ್ಮ ನಡುವೆ ವಿಚಿತ್ರವಾದ ಸಂಗತಿಗಳನ್ನು ಮಾಡುತ್ತಿವೆ. ಸಾರ್ವಜನಿಕರ ದೃಷ್ಟಿಯಲ್ಲಿ ಪರಸ್ಪರ ಗೌರವವು ದೂರವಾಗುತ್ತದೆ. ಅದು ನನಗೆ ಬೇಸರವಾಗಿದೆ' ಎಂದು ಹೇಳಿದ್ದಾರೆ. 

ಎಷ್ಟು ಜನರ ಜೊತೆ ಡೇಟ್ ಮಾಡಿದ್ರೂ ಕಣ್ಣೀರು ಹಾಕ್ತಾರೆ: ಶೋಭಿತಾ-ನಾಗ ಚೈತನ್ಯ ಡೇಟಿಂಗ್‌ಗೆ ಸಮಂತಾ ರಿಯಾಕ್ಷನ್

ಜೀವನ ಈಗ ಹೇಗಿದೆ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ನಾಗ್, ತುಂಬಾ ತುಂಬಾ ಸಂತೋಷವಾಗಿದ್ದೀನಿ. ಜೀವನದ ಪ್ರತಿ ಹಂತವೂ ಪಾಠವಾಗಿದೆ. ನಾನು ನನ್ನ ಜೀವನವನ್ನು ಸಕಾರಾತ್ಮಕತೆಯಿಂದ ನೋಡುತ್ತೇನೆ. ಎಲ್ಲದಕ್ಕೂ ತುಂಬಾ ಧನ್ಯವಾದ ಹೇಳುತ್ತೇನೆ' ಎಂದು ನಾಗ ಚೈತನ್ಯ ಹೇಳಿದ್ದಾರೆ.  

ನಾಗ ಚೈತನ್ಯ ಸದ್ಯ ಕಸ್ಟಡಿ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬರ್ತಿದ್ದಾರೆ. ಲವ್ ಸ್ಟೋರಿ ಸಿನಿಮಾ ಬಳಿಕ ನಾಗ ಚೈತನ್ಯ ಅವರಿಗೆ ದೊಡ್ಡ ಮಟ್ಟದ ಸಕ್ಸಸ್ ಸಿಕ್ಕಿಲ್ಲ. ಹಾಗಾಗಿ ಒಂದು ದೊಡ್ಡ ಹಿಟ್ ಗಾಗಿ ಕಾಯುತ್ತಿದ್ದಾರೆ. ಆಮೀರ್ ಖಾನ್ ಜೊತೆ ಹಿಂದಿಯಲ್ಲಿ ನಟಿಸಿದ್ರೂ ದೊಡ್ಡ ಸಕ್ಸಸ್ ಸಿಕ್ಕಲ್ಲ, ಸದ್ಯ ಕಸ್ಟಡಿ ಮೂಲಕ ಅಭಿಮಾನಿಗಳ ಹೃದಯ ಗೆಲ್ಲಲು ಸಜ್ಜಾಗಿದ್ದಾರೆ. 

ನಾನು ಯಾವುದನ್ನೂ ಮರೆಯಲ್ಲ; ನಾಗ್ ಚೈತನ್ಯ ಜೊತೆಗಿನ ವಿಚ್ಛೇದನ ಬಗ್ಗೆ ಸಮಂತಾ ರಿಯಾಕ್ಷನ್

ಶೋಭಿತಾ ಜೊತೆ ಡೇಟಿಂಗ್ ವದಂತಿ 

ಗಚೈತನ್ಯ, ಸಮಂತಾ ಅವರಿಂದ ದೂರ ಆದ ಬಳಿಕ ಡೇಟಿಂಗ್ ವಿಚಾರಕ್ಕೆ ಸುದ್ದಿಯಲ್ಲಿದ್ದಾರೆ. ಸಮಂತಾ ಅವರಿಂದ ವಿಚ್ಛೇದನ ಪಡೆದ ಬಳಿಕ ನಾಗ ಚೈತನ್ಯ ಮತ್ತೋರ್ವ ನಟಿ ಶೋಭಿತಾ ಜೊತೆ ಪ್ರೀತಿಯಲ್ಲಿ ಬಿದ್ದಾರೆ ಎನ್ನುವ ಸುದ್ದಿ ಕಳೆದ ಕೆಲವು ತಿಂಗಳಿಂದ ಹರಿದಾಡುತ್ತಿದೆ. ಇಬ್ಬರೂ ಆಗಾಗ ಪ್ರವಾಸ, ಔಟಿಂಗ್ ಅಂತ ಸುತ್ತಾಡುತ್ತಿದ್ದಾರೆ ಎನ್ನಲಾಗಿದೆ. ಒಂದೆರಡು ಬಾರಿ ಕ್ಯಾಮರಾ ಕಣ್ಣಿಗೂ ಸೆರೆಯಾಗಿದ್ದರು. ಇತ್ತೀಚಿಗಷ್ಟೆ ಇಬ್ಬರೂ ಲಂಡನ್ ಹೋಟೆಲ್‌ನಲ್ಲಿ ರೆಂಡ್ ಹ್ಯಾಂಡ್ ಆಗಿ ಸಿಕ್ಕಿಬೀಳುವ ಮೂಲಕ ಮತ್ತಷ್ಟು ಅಚ್ಚರಿ ಮೂಡಿಸಿದ್ದರು. ಲಂಡನ್‌ನ ಹೋಟೆಲ್‌ನಲ್ಲಿ ಶೋಭಿತಾ ಜೊತೆ ಡಿನ್ನರ್‌ಗೆ ತೆರಳಿದ್ದ ನಾಗಚೈತನ್ಯ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

3 idiots 2 : ಬಾಕ್ಸ್ ಆಫೀಸ್ ನಲ್ಲಿ ಸುನಾಮಿ, ಬರ್ತಿದೆ 3 ಈಡಿಯಟ್ಸ್ ಸೀಕ್ವೆಲ್
ಚಿರಂಜೀವಿ ನಂತರ ಜೂ.ಎನ್‌ಟಿಆರ್ ಟಾರ್ಗೆಟ್? ಸಂಚಲನ ಮೂಡಿಸಿದ ನಿರ್ಧಾರ, ಇನ್ಮುಂದೆ ಹೀಗೆ ಮಾಡಿದ್ರೆ ಕಷ್ಟ!