
ಕಾಲಿವುಡ್ ತಲೈವಾ, ಸೂಪರ್ ಸ್ಟಾರ್ ರಜಿನಿಕಾಂತ್ ಸಿನಿ ಜರ್ನಿಯನ್ನೇ ಬದಲಾಯಿಸಿದ 'ಭಾಷ' ಚಿತ್ರವನ್ನು ಡಿಸಂಬರ್ 11 ರಂದು ರೀ-ರಿಲೀಸ್ ಮಾಡುವ ಮೂಲಕ ಅಭಿಮಾನಿಗಳಿಗೆ ಗುಡ್ ನ್ಯೂಸ್ ನೀಡಿದ್ದಾರೆ. ಹಾಗೂ ಎಂದಿನಂತೆ ಡಿಸೆಂಬರ್ 12 ರಂದು ಅಭಿಮಾನಿಗಳೊಂದಿಗೆ ಕೇಕ್ ಕಟ್ ಸಂಭ್ರಮಾಚರಣೆಯಲ್ಲಿ ಪಾಲ್ಗೊಳ್ಳುತ್ತಾರೆ.
ಖಾಕಿ ತೊಟ್ಟು ರಜನಿಕಾಂತ್ 'ದರ್ಬಾರ್' ಶುರು; ಇಲ್ಲಿದೆ ಫೋಟೋಗಳಿವು!
ಸುರೇಶ್ ಕೃಷ್ಣ ಆ್ಯಕ್ಷನ್ ಕಟ್ ಹೇಳಿರುವ 'ಭಾಷ' ಚಿತ್ರದಲ್ಲಿ ರಜಿನಿಕಾಂತ್‌ಗೆ ಜೋಡಿಯಾಗಿ ನಗ್ಮಾ ಮಿಂಚಿದ್ದರು. ಮುಂಬೈನಾ ಮಾಫಿಯಾದಲ್ಲಿ ಖ್ಯಾತ ವಿಲನ್ ಆದವನನ್ನು ಅನ್ಯಾಯ ವಿರುದ್ಧ ಹೋರಾಡಬೇಕೆಂದು ಮತ್ತೊಂದು ಊರಿಗೆ ಬಂದು ಆಟೋ ಡ್ರೈವರ್ ಮಣಿಕ್ಕಂನಾಗಿ ಕಾರ್ಯ ನಿರ್ವಹಿಸಿ ತನ್ನ ತಂಗಿಯರನ್ನು ದುಷ್ಟರಿಂದ ರಕ್ಷಿಸಬೇಂದು ಪಡುವ ಸಹಾಯ ಒಂದೆರಡಲ್ಲ. 12 ಜನವರಿ 1995 ರಲ್ಲಿ ತೆರೆಕಂಡ ಈ ಸಿನಿಮಾ ಸುಮಾರು ಒಂದೂವರೆ ವರ್ಷಗಳ ಕಾಲ ಚಿತ್ರಮಂದಿರದಲ್ಲಿ ಹೌಸ್ ಫುಲ್ ಪ್ರದರ್ಶನ ಕಂಡಿತ್ತು. ಈ ಚಿತ್ರಕ್ಕೆ ಫಿಲ್ಮ್ ಫ್ಯಾನ್ ಅಸೋಸಿಯೇಷನ್ ಅವಾರ್ಡ್ ಮತ್ತು ಸಿನಿಮಾ ಎಕ್ಸ್‌ಪ್ರೆಸ್ ಅವಾರ್ಡನ್ನು ರಜಿನಿ ತನ್ನ ಮುಡಿಗೇರಿಸಿಕೊಂಡಿದ್ದಾರೆ.
ಅಪ್ಪನಂತೆಯೇ ಮಗ; ರಜನಿ ಪುತ್ರಿ ಸಂಭ್ರಮ
ರಜಿನಿಕಾಂತ್ 'ದರ್ಬಾರ್' ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದು ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿಂದು ಮೋಷನ್ ಪೋಸ್ಟರ್ ರಿಲೀಸ್ ಮಾಡುವ ಮೂಲಕ ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಿಸಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.