'ವಿಲನ್' ನಟಿ ಮಗ ಹೀಗಿದ್ದಾನೋ ನೋಡಿ..

Published : Nov 22, 2019, 04:17 PM IST
'ವಿಲನ್' ನಟಿ ಮಗ ಹೀಗಿದ್ದಾನೋ ನೋಡಿ..

ಸಾರಾಂಶ

  ಬೋಲ್ಡ್ ಬ್ಯೂಟಿ ಆ್ಯಮಿ ಚಾಕ್ಸನ್ ತನ್ನ ಲಿಟಲ್ ಪ್ರಿನ್ಸ್ ಜೊತೆಗಿರುವ ಫೋಟೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದು ಎಲ್ಲೆಡೆ ವೈರಲ್ ಆಗುತ್ತಿದೆ. ಹೇಗಿದ್ದಾನ ನೋಡಿ ಸ್ಯಾಂಡಲ್‌ವುಡ್ ಚಿತ್ರ ವಿಲನ್‌ನಲ್ಲಿ ನಟಿಸಿದ ನಟಿಮಣಿಯ ಪುತ್ರ...

'ವಿಲನ್' ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ಆ್ಯಮಿ ಚಾಕ್ಸನ್ ತಾಯಿತನವನ್ನು ಸಂಭ್ರಮಿಸುತ್ತಿದ್ದು, ಸಾಮಾಜಿಕ ಜಾಲತಾಣದಲ್ಲಿ ಮಗನೊಂದಿಗೆ ಹಲವು ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದಾರೆ. ಮಗು ಹುಟ್ಟುವ ಮೊದಲೇ ಲ್ಯಾವೀಶ್ ಜೆಂಡರ್ ಪಾರ್ಟಿ ಮಾಡಿ ವಿಡಿಯೋ ಮೂಲಕ ತನ್ನ ಅಭಿಮಾನಿಗಳಿಗೆ ಹುಟ್ಟುವುದು ಮಗನೇ ಎಂದು ಬಹಿರಂಗಪಡಿಸಿದ್ದರು. ಇಷ್ಟು ದಿನ ಹಾಟ್ ಸೆಲೆಬ್ರಿಟಿ ಪಟ್ಟದಲ್ಲಿದ್ದ ಆ್ಯಮಿ ಇದೀಗ ಹಾಟ್ ಮಮ್ಮಿ ಸೆಲೆಬ್ರಿಟಿ ಪಟ್ಟಿಗೆ ಸೇರಿದ್ದಾರೆ.

 

ಸೆಪ್ಟೆಂಬರ್ 23ರಂದು ಹೊಸ ಅಥಿತಿಯನ್ನು ಬರ ಮಾಡಿಕೊಂಡ 'ಮಿಸ್ ವರ್ಲ್ಡ್ ಟೀನ್' ಪಟ್ಟ ಗಿಟ್ಟಿಸಿಕೊಂಡ ಮಾಡಲೆ ಕಮ್ ನಟಿ, ಮಗ ಆ್ಯಂಡ್ರಿಯಾನನ್ನು ಪ್ರಪಂಚಕ್ಕೆ ಪರಿಚಯಿಸಿದ್ದಾರೆ. ಮೊದಲ ಮಗುವಾದ ಕಾರಣ ಆ್ಯಂಡ್ರಿಯಾ ತಮ್ಮ ಪೋಷಕರ ಸಂಪೂರ್ಣ ಗಮನ ಪಡೆದುಕೊಳ್ಳುತ್ತಿದ್ದಾನೆ.

ಪ್ರಗ್ನೆನ್ಸಿಯಲ್ಲಿ ಇವೆಲ್ಲಾ ಕಾಮನ್; ಟಾಪ್‌ಲೆಸ್ ಆಗಿ ನಿಂತ ಹೆಬ್ಬುಲಿ ನಟಿ!

ಜಾರ್ಜ್‌ ಜೊತೆ ಡೇಟಿಂಗ್ ಮಾಡುತ್ತಿರುವ ವಿಚಾರವನ್ನು ಆ್ಯಮಿ ಚಾಕ್ಸನ್ ಈ ವರ್ಷದ ಆದಿಯಲ್ಲಿಯೇ ಬಹಿರಂಗ ಪಡಿಸಿದ್ದರು. ಕೆಲವು ಮೂಲಗಳ ಪ್ರಕಾರ 2020ರಲ್ಲಿ ಆ್ಯಮಿ ಚಾಕ್ಸನ್ ಮತ್ತು ಜಾರ್ಜ್‌ ಸಂಪ್ರದಾಯದ ಪ್ರಕಾರ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ಇವರಿಬ್ಬರ ಟ್ರೆಡಿಷನಲ್‌ ಮದುವೆಗೆ ಮಗನೂ ಸಾಕ್ಷಿಯಾಗಲಿದ್ದಾನೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ರಗಡ್‌ ಕಾಪ್‌, ಮ್ಯಾಕ್ಸಿಮಮ್‌ ಮಾಸ್‌.. 'ಮಾರ್ಕ್' ಕಥೆ ಬಗ್ಗೆ ಸ್ಫೋಟಕ ಸತ್ಯ ಬಿಚ್ಚಿಟ್ಟ ಕಿಚ್ಚ ಸುದೀಪ್!
ನನ್ನ ತಂದೆ ಕೂಡ ಗುಮ್ಮಡಿ ನರಸಯ್ಯ ಅವರಂತೆಯೇ ಜನರ ಸೇವೆ ಮಾಡಿದವರು: ನಟ ಶಿವಣ್ಣ ಹೇಳಿದ್ದೇನು?