ಮೊನ್ನೆಗಿಂತ ಪರಿಸ್ಥಿತಿ ಸುಧಾರಣೆ: ವೈದ್ಯರು | ಡಿಸ್ಚಾಜ್‌ರ್ ಕುರಿತು ಇಂದು ನಿರ್ಧಾರ
ಪಿಟಿಐ ಹೈದರಾಬಾದ್/ ಚೆನ್ನೈ(ಡಿ.27): ರಕ್ತದೊತ್ತಡದಲ್ಲಿ ತೀವ್ರ ಏರಿಳಿತವಾಗಿ ಆಸ್ಪತ್ರೆಗೆ ದಾಖಲಾಗಿರುವ ತಮಿಳು ಸೂಪರ್‌ಸ್ಟಾರ್ ರಜನಿಕಾಂತ್ (70) ಅವರ ರಕ್ತದೊತ್ತಡ ಇನ್ನೂ ಇಳಿಕೆಯಾಗಿಲ್ಲ, ಆದರೆ ಶುಕ್ರವಾರಕ್ಕಿಂತ ಪರಿಸ್ಥಿತಿ ಸುಧಾರಿಸಿದೆ. ಡಿಸ್ಚಾಜ್‌ರ್ ಕುರಿತು ಭಾನುವಾರ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ವೈದ್ಯರು ತಿಳಿಸಿದ್ದಾರೆ.
ಶುಕ್ರವಾರ ಬೆಳಿಗ್ಗೆ ಹೈದರಾಬಾದ್‌ನ ಅಪೋಲೋ ಆಸ್ಪತ್ರೆಗೆ ದಾಖಲಾಗಿದ್ದ ರಜನಿಕಾಂತ್ ಅವರಿಗೆ ಶನಿವಾರ ತಮಿಳುನಾಡು ಮುಖ್ಯಮಂತ್ರಿ ಕೆ.ಪಳನಿಸ್ವಾಮಿ ಕರೆ ಮಾಡಿ ಆರೋಗ್ಯ ವಿಚಾರಿಸಿದರು.
undefined
ರಜನಿ ಸೆಟ್‌ನಲ್ಲಿ ನಾಲ್ವರಿಗೆ ಕೊರೋನಾ: ಬಿಪಿ ಏರುಪೇರು, ಸೌತ್ ಸೂಪರ್‌ಸ್ಟಾರ್ ಆಸ್ಪತ್ರೆಗೆ ದಾಖಲು
ಶನಿವಾರ ಇನ್ನಷ್ಟುವೈದ್ಯಕೀಯ ಪರೀಕ್ಷೆಗಳನ್ನು ನಡೆಸಲಾಗಿದ್ದು, ಅವುಗಳ ವರದಿ ನೋಡಿಕೊಂಡು ಮುಂದಿನ ಚಿಕಿತ್ಸೆ ನೀಡಲಾಗುತ್ತದೆ. ಇಲ್ಲಿಯವರೆಗಿನ ಯಾವುದೇ ಪರೀಕ್ಷೆಯಲ್ಲಿ ದೊಡ್ಡ ಸಮಸ್ಯೆಗಳೇನೂ ಕಾಣಿಸಿಲ್ಲ. ರಕ್ತದೊತ್ತಡ ಈಗಲೂ ಹೆಚ್ಚೇ ಇದೆ. ಆದರೆ, ರಾತ್ರಿ ಏನೂ ಸಮಸ್ಯೆಯಾಗಲಿಲ್ಲ. ಆರೋಗ್ಯ ಸುಧಾರಿಸುತ್ತಿದೆ ಎಂದು ಆಸ್ಪತ್ರೆಯ ಹೆಲ್ತ್ ಬುಲೆಟಿನ್ ತಿಳಿಸಿದೆ.
ರಕ್ತದೊತ್ತಡ ನಿಯಂತ್ರಣಕ್ಕೆ ಔಷಧಿಗಳನ್ನು ನೀಡಲಾಗಿದೆ. ಅವರನ್ನು ಸತತವಾಗಿ ನಿಗಾದಲ್ಲಿಡಲಾಗುವುದು. ಸಂಪೂರ್ಣ ವಿಶ್ರಾಂತಿ ತೆಗೆದುಕೊಳ್ಳಲು ಸೂಚಿಸಲಾಗಿದ್ದು, ಅವರನ್ನು ಭೇಟಿ ಮಾಡಲು ಯಾರಿಗೂ ಅವಕಾಶ ನೀಡುತ್ತಿಲ್ಲ. ಶನಿವಾರ ನಡೆಸಿದ ಪರೀಕ್ಷೆಗಳ ಫಲಿತಾಂಶ ಹಾಗೂ ಅವರ ಆರೋಗ್ಯದಲ್ಲಿನ ಪ್ರಗತಿ ನೋಡಿಕೊಂಡು ಡಿಸ್‌ಚಾಜ್‌ರ್ ಮಾಡುವ ಬಗ್ಗೆ ನಂತರ ನಿರ್ಧರಿಸಲಾಗುವುದು ಎಂದೂ ಬುಲೆಟಿನ್‌ನಲ್ಲಿ ಹೇಳಲಾಗಿದೆ.