
ಹೈದರಾಬಾದ್(ಫೆ.08): ‘ಬಾಹುಬಲಿ’ ಸಿನಿಮಾ ಮೂಲಕ ಗಲ್ಲಾಪೆಟ್ಟಿಗೆಯಲ್ಲಿ ಹೊಸ ದಾಖಲೆ ಬರೆದ ಪ್ರಸಿದ್ಧ ಚಿತ್ರ ನಿರ್ದೇಶಕ ಎಸ್.ಎಸ್. ರಾಜಮೌಳಿ ನಿರ್ದೇಶನದ ‘ಆರ್‌ಆರ್‌ಆರ್’ ಚಲನಚಿತ್ರ 2021ರ ಅ.13ರಂದು ತೆರೆ ಕಾಣಲಿದೆ. ವಿಶೇಷ ಎಂದರೆ, ಬಿಡುಗಡೆಗೆ ಇನ್ನೂ 8 ತಿಂಗಳು ಬಾಕಿ ಇರುವಾಗಲೇ ಬಿಡುಗಡೆ ಹಕ್ಕಿನ ಮೂಲಕವೇ ಚಿತ್ರ ತಂಡ 500 ಕೋಟಿ ರು. ಗಳಿಸುವ ಅಂದಾಜಿದೆ.
ಕನ್ನಡ, ತೆಲುಗು, ತಮಿಳು, ಮಲಯಾಳ ಭಾಷೆಯ ಸಿನಿಮಾ ಹಕ್ಕನ್ನು 348 ಕೋಟಿ ರು.ವರೆಗೂ ಖರೀದಿಸಲು ವಿತರಕರು ಬಂದಿದ್ದಾರೆ ಎನ್ನಲಾಗಿದೆ. ಬಾಹುಬಲಿ-2 ಸಿನಿಮಾದ ದಕ್ಷಿಣ ಭಾರತ ಬಿಡುಗಡೆ ಹಕ್ಕು 215 ಕೋಟಿ ರು.ಗೆ ಬಿಕರಿಯಾಗಿತ್ತು. ಅದಕ್ಕೆ ಹೋಲಿಸಿದರೆ ‘ಆರ್‌ಆರ್‌ಆರ್’ಗೆ ಅದಕ್ಕಿಂತಲೂ ಬೇಡಿಕೆ ಕಂಡುಬಂದಿದೆ ಎಂದು ಮೂಲಗಳು ತಿಳಿಸಿವೆ.
ಈ ನಡುವೆ ಹಿಂದಿ ಆವೃತ್ತಿಯ ಬಿಡುಗಡೆ ಮೂಲಕ ಚಿತ್ರ ತಂಡ 100 ಕೋಟಿ ರು. ಗಳಿಸುವ ವಿಶ್ವಾಸದಲ್ಲಿದೆ. ವಿದೇಶಿ ವಿತರಣೆ ಹಕ್ಕನ್ನು ಈಗಾಗಲೇ 70 ಕೋಟಿ ರು.ಗೆ ಮಾರಾಟ ಮಾಡಲಾಗಿದೆ. ಈ ಎಲ್ಲವನ್ನೂ ಸೇರಿಸಿದರೆ ಬಿಡುಗಡೆಗೆ ಮುನ್ನವೇ ಸಿನಿಮಾ ತಂಡಕ್ಕೆ ಅಂದಾಜು 500 ಕೋಟಿ ರು. ಗಳಿಕೆ ಖಚಿತವಾದಂತಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.
1900ರಲ್ಲಿದ್ದ ಸ್ವಾತಂತ್ರ್ಯ ಹೋರಾಟಗಾರರಾದ ಅಲ್ಲುರಿ ಸೀತಾರಾಮರಾಜು ಹಾಗೂ ಕೊಮರಮ್ ಭೀಮ್ ಅವರ ಕಥಾನಕ ಹೊಂದಿರುವ ಈ ಸಿನಿಮಾದಲ್ಲಿ ಜೂನಿಯರ್ ಎನ್‌ಟಿಆರ್, ರಾಮ್‌ಚರಣ್, ಅಲಿಯಾ ಭಟ್, ಅಜಯ್ ದೇವಗನ್ ನಟಿಸುತ್ತಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.