ಸಲಾರ್‌ನಲ್ಲಿ ಪ್ರಭಾಸ್ ಜೊತೆ ಪ್ರಿಯಾಂಕ ಚೋಪ್ರಾ..?

By Suvarna News  |  First Published Feb 7, 2021, 3:41 PM IST

ಬಹು ನಿರೀಕ್ಷಿತ ಸಿನಿಮಾ ಸಲಾರ್‌ನಲ್ಲಿ ಅಭಿನಯಿಸಲಿದ್ದಾರೆ ಪ್ರಿಯಾಂಕ ಚೋಪ್ರಾ ? ಪ್ರಭಾಸ್‌ಗೆ ಬಾಲಿವುಡ್‌ ಬ್ಯೂಟಿ ಜೋಡಿ


ಕೆಜಿಎಫ್ ನಿರ್ದೇಶಕ ಪ್ರಶಾಂತ್ ನೀಲ್ ಅವರು ಪ್ರಿಯಾಂಕ ಚೋಪ್ರಾ ಅವರನ್ನು ತಮ್ಮ ಬಹು ನಿರೀಕ್ಷಿತ ಸಿನಿಮಾ ಸಲಾರ್‌ನಲ್ಲಿ ಪ್ರಭಾಸ್‌ಗೆ ಜೋಡಿ ಮಾಡಲಿದ್ದಾರೆ ಎನ್ನಲಾಗುತ್ತಿದೆ. ಪ್ರಭಾಸ್ ಮತ್ತು ಪ್ರಶಾಂತ್ ಒಂದಾಗಲಿರುವ ಈ ಸಿನಿಮಾ ಈಗಾಗಲೇ ಹವಾ ಸೃಷ್ಟಿಸಿದೆ.

ಪ್ರಶಾಂತ್ ಅವರು ಸಲಾರ್‌ಗಾಗಿ ದಿ ವೈಟ್‌ ಟೈಗರ್ ನಟಿ ಪ್ರಿಯಾಂಕ ಅವರ ಜೊತೆ ಮಾತುಕತೆ ನಡೆಸಲಿದ್ದಾರೆ ಎನ್ನಲಾಗಿದೆ. ಹಾಲಿವುಡ್‌ನಲ್ಲಿಯೂ ಮಿಂಚುತ್ತಿರುವ ಇಂಟರ್‌ನ್ಯಾಷನಲ್ ಸ್ಟಾರ್ ಪ್ರಿಯಾಂಕ ಚೋಪ್ರಾ ಜೋನಸ್ ಕನ್ನಡ ಸಿನಿಮಾದಲ್ಲಿ ನಟಿಸಲಿದ್ದಾರೆ ಎನ್ನಲಾಗುತ್ತಿದೆ.

Tap to resize

Latest Videos

undefined

KGF ನಿರ್ದೇಶಕರ ನೆಕ್ಸ್ಟ್ ಸಿನಿಮಾ ಸಲಾರ್‌ನಲ್ಲಿ ಪ್ರಭಾಸ್ ಜೊತೆ ಶ್ರುತಿ ರೊಮ್ಯಾನ್ಸ್

ಬಾಲಿವುಡ್ ಮತ್ತು ಹಾಲಿವುಡ್‌ನಲ್ಲಿ ದೊಡ್ಡ ಪ್ರಾಜೆಕ್ಟ್‌ಗಳನ್ನು ಮಾಡುತ್ತಿರುವ ನಟಿ ಸಿನಿಮಾ ನಿರ್ಮಾಣದಲ್ಲಿಯೂ ಬ್ಯುಸಿ ಇದ್ದಾರೆ. ಸದ್ಯ ರಾಮಗುಂಡಂನಲ್ಲಿ ಸಲಾರ್ ಶೂಟಿಂಗ್ ನಡೆಯುತ್ತಿದೆ. ಇದರಲ್ಲಿ ಪ್ರಭಾಸ್ ಮೆಕ್ಯಾನಿಕ್ ಪಾತ್ರ ಮಾಡುತ್ತಿದ್ದಾರೆ. ನಟಿ ಎರಡು ಹಾಲಿವುಡ್ ಸಿನಿಮಾ ಮ್ಯಾಟ್ರಿಕ್ಸ್ ಮತ್ತು ಟೆಕ್ಸ್ಟ್ ಯು ಬಿಡುಗಡೆಯ ನಿರೀಕ್ಷೆಯಲ್ಲಿದ್ದಾರೆ.

ಕಾಲಿವುಡ್ ನಟಿ ಶ್ರುತಿ ಹಾಸನ್ ಪ್ರಭಾಸ್ ಸಿನಿಮಾದಲ್ಲಿ ನಟಿಸುತ್ತಿರೋದಾಗಿ ದೃಢಪಡಿಸಿದ್ದಾರೆ. ಸಿನಿಮಾದಲ್ಲಿ ನಟಿಯ ಫಸ್ಟ್‌ ಲುಕ್ ಆಕೆಯ ಬರ್ತ್‌ಡೇ ದಿನವೇ ರಿಲೀಸ್ ಆಗಿತ್ತು.

click me!