UT 69: ಜೈಲಲ್ಲಿ ರಾಜ್​​ಕುಂದ್ರಾ- ಪೊಲೀಸ್ರು ನಗ್ನಗೊಳಿಸಿದ್ರು, ಕೈದಿಗಳು ಛೀಮಾರಿ ಹಾಕಿದ್ರು! ವಿಡಿಯೋ ರಿಲೀಸ್​

Published : Oct 19, 2023, 11:33 AM ISTUpdated : Oct 21, 2023, 10:20 AM IST
UT 69: ಜೈಲಲ್ಲಿ ರಾಜ್​​ಕುಂದ್ರಾ- ಪೊಲೀಸ್ರು ನಗ್ನಗೊಳಿಸಿದ್ರು,  ಕೈದಿಗಳು ಛೀಮಾರಿ ಹಾಕಿದ್ರು! ವಿಡಿಯೋ ರಿಲೀಸ್​

ಸಾರಾಂಶ

ಜೈಲಲ್ಲಿ ರಾಜ್​​ಕುಂದ್ರಾ ಹೇಗಿದ್ರು? ಪೊಲೀಸ್ರು ಅವರನ್ನು ನಗ್ನಗೊಳಿಸಿದ್ರು,  ಕೈದಿಗಳು ಛೀಮಾರಿ ಹಾಕಿದ್ರು, ಸಂಪೂರ್ಣ ಜೈಲಿನ ಕಥೆ ಆಧರಿತ UT 69 ಟ್ರೇಲರ್​ ಬಿಡುಗಡೆಯಾಗಿದೆ.  

ಬಾಲಿವುಡ್​ ಎವರ್​ಗ್ರೀನ್​ ತಾರೆ ಶಿಲ್ಪಾ ಶೆಟ್ಟಿ ಮತ್ತು ಅವರ ಪತಿ ಉದ್ಯಮಿ ರಾಜ್​ ಕುಂದ್ರಾ ಅಶ್ಲೀಲ ವಿಡಿಯೋ ನಿರ್ಮಾಣ ಕೇಸ್​ನಲ್ಲಿ ಸಿಕ್ಕಿಬಿದ್ದಿರುವ ವಿಷಯ ಎಲ್ಲರಿಗೂ ತಿಳಿದದ್ದೇ. ಅದು 2021ರ ಘಟನೆ.  ಶಿಲ್ಪಾ ಬಾಳಲ್ಲಿ ಬಿರುಗಾಳಿ ಬಂದಿತ್ತು.  ಇವರ ಪತಿ, ಖ್ಯಾತ ಉದ್ಯಮಿ ರಾಜ್​ ಕುಂದ್ರಾ ನೀಲಿ ಚಿತ್ರ (porn film) ಕೇಸ್​ನಲ್ಲಿ ಸಿಲುಕಿ ಬಿದ್ದಿದ್ದರು. ನಟಿಯರನ್ನು ಮತ್ತು ಮಾಡೆಲ್​ಗಳನ್ನು ಬಳಸಿಕೊಂಡು ರಾಜ್​ ಕುಂದ್ರಾ ಅವರು ನೀಲಿ ಚಿತ್ರಗಳನ್ನು ತಯಾರಿಸುತ್ತಿದ್ದರು ಎಂಬುದಕ್ಕೆ ಪೊಲೀಸರು ಹಲವು ಸಾಕ್ಷ್ಯಗಳನ್ನು ಒದಗಿಸಿದ್ದರು.  ಬ್ಲೂ ಫಿಲ್ಮ್​ ಆರೋಪದ ಮೇಲೆ ಅವರು 63 ದಿನಗಳವರೆಗೆ ಅರ್ತೂರು ಜೈಲಿನಲ್ಲಿ ಇದ್ದರು. ನೀಲಿ ಚಿತ್ರಗಳ  ನಿರ್ಮಾಣ ದಂಧೆಯಲ್ಲಿ ತೊಡಗಿದ್ದ ಆರೋಪವನ್ನು ಇಂದಿಗೂ ರಾಜ್​ ಕುಂದ್ರಾ ಇಂದಿಗೂ ಎದುರಿಸುತ್ತಿದ್ದಾರೆ.   ‘ನಾನು ಮಾಡಿದ್ದು ನೀಲಿ ಚಿತ್ರ ಅಲ್ಲ, ಕಾಮೋದ್ರೇಕದ ಸಿನಿಮಾ ಮಾತ್ರ’ ಎಂದು ರಾಜ್​ ಕುಂದ್ರಾ ಹೇಳಿಕೆ ನೀಡಿದ್ದರು. ತಾವು ಬ್ಲೂಫಿಲ್ಮ್​ ಮಾಡುವುದನ್ನು ಅವರು ಒಪ್ಪಿಕೊಂಡಿರಲಿಲ್ಲ. ಆದರೆ ಈ ಪ್ರಕರಣದಲ್ಲಿ ಹಲವು ನಟಿಯರ ಜೊತೆ ಖುದ್ದು ಶಿಲ್ಪಾ ಶೆಟ್ಟಿಯವರ (Shilpa Shetty) ಹೆಸರೂ ಥಳಕು ಹಾಕಿಕೊಂಡಿತ್ತು. 

ಈ 63 ದಿನ ಜೈಲಿನಲ್ಲಿ ಇವರ ಜೀವನ ಜೈಲಿನಲ್ಲಿ ಹೇಗಿತ್ತು? ಅಲ್ಲಿ ಅನುಭವಿಸಿದ್ದ ಕಷ್ಟಗಳೇನು? ಕಳೆದ ದಿನಗಳು ಹೇಗಿದ್ದವು? ಊಟ ಹೇಗಿತ್ತು? ಇವುಗಳ ಸಂಪೂರ್ಣ ವಿಡಿಯೋ ರಿಲೀಸ್​ ಆಗಿದೆ. ಅಷ್ಟಕ್ಕೂ ಇದು ಅವರ ರಿಯಲ್​ ಲೈಫ್​ನ ರೀಲ್​ ಸ್ಟೋರಿ. ಹೌದು. ರಾಜ್​ ಕುಂದ್ರಾ ಅವರ ಜೈಲಿನ ನೈಜ ಕಥೆ ಎನ್ನುವ UT 69. UT ಎಂದರೆ Under Trial  ಅರ್ಥಾತ್​ ವಿಚಾರಣಾಧೀನ ಕೈದಿ ನಂಬರ್​ 69. ಇದರ ಟ್ರೇಲರ್​ ರಿಲೀಸ್​ ಆಗಿದೆ. ರಾಜ್ ಕುಂದ್ರಾ ಅವರ ಜೀವನ ಮತ್ತು ಅದಕ್ಕೆ ಸಂಬಂಧಿಸಿದ ಪ್ರಮುಖ ಘಟನೆಗಳನ್ನು ಆಧರಿಸಿದ 'ಯುಟಿ 69' ಚಿತ್ರ ಇದಾಗಿದೆ.  ವಿಶೇಷವೆಂದರೆ ಚಿತ್ರದಲ್ಲಿ ಅವರ ಪಾತ್ರವನ್ನು ಸ್ವತಃ ರಾಜ್ ಕುಂದ್ರಾ ನಿರ್ವಹಿಸಿದ್ದಾರೆ.  ಎಎ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ತಯಾರಾದ ಈ ಚಿತ್ರವನ್ನು ಶಾನವಾಜ್ ಅಲಿ ನಿರ್ದೇಶಿಸಿದ್ದಾರೆ. 'UT 69' ನವೆಂಬರ್ 3 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.

ಓಟಿಟಿಯಲ್ಲಿ ಎಗ್ಗಿಲ್ಲದ ಸೆಕ್ಸ್, ಬೋಲ್ಡ್​​ ದೃಶ್ಯಗಳು- ಜನರೂ ರಿಪೋರ್ಟ್​ ಮಾಡಲ್ಲ: ನಟಿ ಸುಹಾಸಿನಿ ಹೇಳಿದ್ದೇನು?

'UT 69' ಚಿತ್ರದ ಟ್ರೇಲರ್‌ನಲ್ಲಿ, ರಾಜ್ ಕುಂದ್ರಾ ವಿರುದ್ಧ ವಯಸ್ಕ ಚಿತ್ರಗಳನ್ನು ನಿರ್ಮಿಸಿದ ಆರೋಪಗಳು ಮತ್ತು ನಂತರ ಜೈಲಿನಲ್ಲಿ ಕಳೆದ ಅವರ ಜೀವನದ ಒಂದು ನೋಟವನ್ನು ತೋರಿಸಲಾಗಿದೆ. ವಯಸ್ಕ ಚಿತ್ರ ನಿರ್ಮಿಸಿದ ಆರೋಪದ ಮೇಲೆ ರಾಜ್ ಕುಂದ್ರಾ ಹೇಗೆ ಜೈಲಿಗೆ ಹೋಗುತ್ತಾರೆ ಮತ್ತು ಅಲ್ಲಿನ ಪೊಲೀಸರು ಮತ್ತು ಕೈದಿಗಳು ಅವರನ್ನು ಹೇಗೆ ನಡೆಸಿಕೊಳ್ಳುತ್ತಾರೆ ಎಂಬುದನ್ನು ಟ್ರೇಲರ್‌ನಲ್ಲಿ ತೋರಿಸಲಾಗಿದೆ. ಪೊಲೀಸರು ಬಟ್ಟೆ ಬಿಚ್ಚಿಸಿ  ವಿವಸ್ತ್ರಗೊಳಿಸುವುದನ್ನು ಅದರಲ್ಲಿ ತೋರಿಸಲಾಗಿದೆ.  ಒಬ್ಬ ಕೈದಿ ಈತ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಪತಿ ಎಂದರೆ, ಇನ್ನೊಂದು ಅಷ್ಟು ಸುಂದರಿಗೆ ಇಂಥವನಾ ಎಂದು ಕೇಳುತ್ತಾನೆ. ಉಳಿದವರು ಶಿಲ್ಪಾ ಪತಿ ಎಂದರೆ ನಂಬುವುದಿಲ್ಲ.  

ಇದೇ ವೇಳೆ ಟಿ.ವಿಯಲ್ಲಿ ಶಿಲ್ಪಾ ಅವರ ಹಾಟ್​ ವಿಡಿಯೋ ಬರುತ್ತಿರುತ್ತದೆ. ಈ ಸುಂದರಿ ಸಕತ್​ ಇದ್ದಾಳೆ ಎಂದು ಒಬ್ಬ ಕೈದಿ ಹೇಳಿದಾಗ, ರಾಜ್​ ಕುಂದ್ರಾಗೆ ಇರುಸು ಮುರುಸು ಆಗುತ್ತದೆ. ಆಗ ಇನ್ನೊಬ್ಬ ಇವಳು ಇವನ ಹೆಂಡ್ತಿ ಕಣೋ ಎನ್ನುತ್ತಾನೆ. ನಂತರ ಅಲ್ಲಿಯ ಆಹಾರ, ಶೌಚಾಲಯಕ್ಕೆ ಹೋಗುವಾಗಿನ ಸಮಸ್ಯೆ, ರಾಜ್​ ಕುಂದ್ರಾ ಚಿತ್ರ ನಿರ್ಮಾಣ ಮಾಡುತ್ತಾರೆಂದು ಅರಿತ ಕೈದಿಗಳು ತಮಗೊಂದು ಛಾನ್ಸ್​ ನೀಡುವಂತೆ ಒತ್ತಾಯಿಸುವುದು... ಎಲ್ಲವೂ ಈ ಟ್ರೇಲರ್​ನಲ್ಲಿ ತೋರಿಸಲಾಗಿದೆ. ಶಿಲ್ಪಾ ಶೆಟ್ಟಿ ತಮ್ಮ ಪತಿಯ ಬಯೋಪಿಕ್‌ನ ಟ್ರೇಲರ್ ಅನ್ನು ತಮ್ಮ ಅಧಿಕೃತ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ಇದರೊಂದಿಗೆ ಶೀರ್ಷಿಕೆಯನ್ನೂ ಬರೆದಿದ್ದಾರೆ.  'ಆಲ್ ದಿ ಬೆಸ್ಟ್, ಕುಕೀ. ನೀವು ಧೈರ್ಯಶಾಲಿ ವ್ಯಕ್ತಿ. ನಾನು ನಿಮ್ಮ ಬಗ್ಗೆ ಹೆಚ್ಚು ಮೆಚ್ಚುವುದು ಅದನ್ನೇ! ನಿಮ್ಮ ಧೈರ್ಯ ಮತ್ತು ಸಕಾರಾತ್ಮಕತೆ ಇಲ್ಲಿದೆ ಎಂದು ಹೇಳಿದ್ದಾರೆ. 

ಜನರಿಗೆ ಮುಖ ತೋರಿಸದ ಕೆಲ್ಸ ಯಾಕೆ ಮಾಡ್ಕೊಂಡ್ರಿ ಅಂತ ಶಿಲ್ಪಾ ಶೆಟ್ಟಿಗೆ ಕೇಳ್ತಿದ್ದಾರೆ ಫ್ಯಾನ್ಸ್​!

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಯಾವುದೇ ಹಿನ್ನೆಲೆ ಇಲ್ಲದೆ ಸ್ಟಾರ್ ಆದ ನಟ.. ಮಗ ಹುಟ್ಟಿದಾಗ ಜಾತಕ ಹೇಳಿದ್ರು ಚಿರಂಜೀವಿ: ಅಷ್ಟಕ್ಕೂ ಯಾರು ಆ ಹೀರೋ?
ಮದುವೆ ಬಳಿಕ ಹನಿಮೂನ್ ಕ್ಯಾನ್ಸಲ್ ಮಾಡಿದ ಸಮಂತಾ? ಈ ಹೊಸ ನಿರ್ಧಾರ ತಗೊಂಡು ಶಾಕ್ ಕೊಟ್ಟಿದ್ಯಾಕೆ?