ಮಾಲೆ ಧರಿಸಿ ಮಹಾಕಾಲ್​ ​ದೇಗುಲದಲ್ಲಿ ಮಂತ್ರಘೋಷಗಳ ನಡುವೆ ಪರಿಣಿತಿ-ರಾಘವ್​ ಜೋಡಿ!

Published : Aug 26, 2023, 05:11 PM IST
ಮಾಲೆ ಧರಿಸಿ ಮಹಾಕಾಲ್​ ​ದೇಗುಲದಲ್ಲಿ ಮಂತ್ರಘೋಷಗಳ ನಡುವೆ ಪರಿಣಿತಿ-ರಾಘವ್​ ಜೋಡಿ!

ಸಾರಾಂಶ

ಮದುವೆಗೆ ಕೆಲ ದಿನಗಳು ಇರುವ ಬೆನ್ನಲ್ಲೆ ಬಾಲಿವುಡ್​​ ನಟಿ ಪರಿಣಿತಿ ಚೋಪ್ರಾ  ಮತ್ತು ಆಪ್​ ಸಂಸದ ರಾಘವ್​ ಚಡ್ಡಾ ಉಜ್ಜೈನಿಯ ಮಹಾಕಾಲ್​ ದೇಗುಲದಲ್ಲಿ ಹೀಗೆ ಕಾಣಿಸಿಕೊಂಡರು.   

ಬಾಲಿವುಡ್ ನಟಿ ಪರಿಣಿತಿ ಚೋಪ್ರಾ ಅವರು ಆಮ್ ಆದ್ಮಿ ಪಕ್ಷದ ನಾಯಕ ಮತ್ತು ರಾಜ್ಯಸಭಾ ಸಂಸದ ರಾಘವ್ ಚಡ್ಡಾ ಅವರೊಂದಿಗೆ ಮೇ 13 ರಂದು ದೆಹಲಿಯಲ್ಲಿ ನಿಶ್ಚಿತಾರ್ಥ (Engagement) ಮಾಡಿಕೊಂಡಿದ್ದು, ಕೆಲ ದಿನಗಳ ಹಿಂದಷ್ಟೇ ಅವರ ಮದುವೆಯ ಬಗ್ಗೆಯೂ ಸುದ್ದಿ ಹೊರಬಂದಿದೆ. ಬರುವ ಸೆಪ್ಟೆಂಬರ್ 25ರಂದು ಈ ಜೋಡಿ  ದಾಂಪತ್ಯ ಜೀವನಕ್ಕೆ ಕಾಲಿಡಲಿದೆ.  ರಾಜಸ್ಥಾನದಲ್ಲಿ ಅದ್ಧೂರಿ ಸಮಾರಂಭದಲ್ಲಿ ಪರಿಣಿತಿ ಮತ್ತು ರಾಘವ್ ಮದುವೆಯಾಗಲು ತಯಾರಿ ನಡೆಸುತ್ತಿದ್ದಾರೆ.  ಎಂಗೇಜ್​ಮೆಂಟ್​ಗಳು ಮೊದಲು ಈ ಪ್ರೇಮ ಪಕ್ಷಿಗಳು ಸ್ವಲ್ಪ ಸಮಯದವರೆಗೆ ಪರಸ್ಪರ ಡೇಟಿಂಗ್ ನಡೆಸುತ್ತಿದ್ದಾರೆ ಎಂದು ಹಲವು ತಿಂಗಳುಗಳಿಂದ ಸುದ್ದಿಯಾಗಿದ್ದರೂ,  ಜೋಡಿ ಮಾತ್ರ   ಇದರ ಬಗ್ಗೆ ತುಟಿಕ್​ ಪಿಟಿಕ್​ ಎಂದಿರಲಿಲ್ಲ. ನಂತರ ಮುಂಬೈನ ರೆಸ್ಟೋರೆಂಟ್ ಒಂದರಲ್ಲಿ ಪರಿಣಿತಿ (Parineeti Chopra) ಮತ್ತು ಎಎಪಿ ಸಂಸದ ರಾಘವ್ ಚಡ್ಡಾ ಒಟ್ಟಿಗೆ ಕಾಣಿಸಿಕೊಂಡಿದ್ದಾಗ ಸುದ್ದಿ ಮತ್ತಷ್ಟು ಹರಡಿತ್ತು.  ಕೊನೆಗೆ  ಆಮ್ ಆದ್ಮಿ ಪಕ್ಷದ (AAP) ನಾಯಕ ಸಂಜೀವ್ ಅರೋರಾ  ಟ್ವೀಟ್ ಮಾಡಿ ಸುದ್ದಿಯನ್ನು ಕನ್​ಫರ್ಮ್​ ಮಾಡಿದ್ದರೂ ಜೋಡಿ ಮಾತ್ರ ಮೌನ ತಾಳಿತ್ತು. ನಂತರ ನಿಶ್ಚಿತಾರ್ಥ ಮಾಡಿಕೊಳ್ಳುವ ಮೂಲಕ ಎಲ್ಲರ ಕುತೂಹಲಕ್ಕೆ ತೆರೆ ಎಳೆದಿದ್ದರು. 

ಈ ನಡುವೆಯೇ, ತಮ್ಮ ನಿಶ್ಚಿತಾರ್ಥರ ಬಳಿಕ ತಮ್ಮ ಬದುಕಿನಲ್ಲಿ ಆಗಿರುವ ಬದಲಾವಣೆಯ ಕುರಿತು ರಾಘವ್​ ಚಡ್ಡಾ (Raghav Chadda) ಮಾತನಾಡಿದ್ದರು. ಪರಿಣಿತಿ ಚೋಪ್ರಾ ಅವರ ಜತೆ ನಿಶ್ಚಿತಾರ್ಥವಾದ ಮೇಲೆ  ಸಹೋದ್ಯೋಗಿಗಳು ಮತ್ತು ಹಿರಿಯರು ಮಾಡುತ್ತಿರುವ ಟೀಕೆ ಕಡಿಮೆಯಾಗಿದೆ ಎಂದಿದ್ದಾರೆ. ಇಷ್ಟೇ ಅಲ್ಲದೇ ನನ್ನ ಜಿವನದಲ್ಲಿ ಸಾಕಷ್ಟು ಬದಲಾಗಿದೆ. ನನ್ನ ಬದುಕಿನ ಅರ್ಥವೂ ಬದಲಾಗಿದೆ. ನಾನು ಈಗ ಹೆಚ್ಚು ಮುಕ್ತವಾಗಿ ತೆರೆದುಕೊಳ್ಳುತ್ತಿದ್ದೇನೆ ಎಂದಿದ್ದಾರೆ.  ಸಹೋದ್ಯೋಗಿಗಳು ಮತ್ತು ಹಿರಿಯರು  ಯಾವಾಗ ಮದುವೆ, ಏನೋ ಮದುವೆಯಾಗೋಲ್ವ ಎಂದೆಲ್ಲ ಕಿಚಾಯಿಸುತ್ತಿದ್ದರು. ಅಷ್ಟೇ ಅಲ್ಲದೇ  ಪರಿಣಿತಿ ಜೊತೆ  ತಿರುಗಾಡಿದ್ದ ತಿಳಿದಾಗ ತಮಾಷೆ ಮಾಡುತ್ತಿದ್ದರು. ಎಂಗೇಜ್​ಮೆಂಟ್​ ಬಳಿಕ ಕಿಚಾಯಿಸುವುದು ಕಡಿಮೆಯಾಗಿದೆ ಎಂದಿದ್ದರು.

ಅಮಾನತಿಗೂ ಮೊದಲು ಪರಿಣಿತಿ ಚೋಪ್ರಾ ಜೊತೆ ರಾಘವ್ ಚಡ್ಡಾ, ವಿಡಿಯೋ ವೈರಲ್! 

ಇದೀಗ ಮದುವೆಯ ತಯಾರಿಯಲ್ಲಿ ಎರಡೂ ಕುಟುಂಬಗಳು ಇವೆ. ಇದರ ಮಧ್ಯೆಯೇ ಪರಿಣಿತಿ ಚೋಪ್ರಾ ಮತ್ತು ರಾಘವ್​ ಚಡ್ಡಾ ಉಜ್ಜಯಿನಿಯ ಮಹಾಕಾಲ್​ ದೇವಾಲಯಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದಾರೆ. ಇದರ ವಿಡಿಯೋ ವೈರಲ್​ ಆಗಿದೆ. ಸೀರೆಯುಟ್ಟ ಪರಿಣಿತಿ ಅಪ್ಪಟ ಗೃಹಿಣಿಯಂತೆಯೇ ವಿಡಿಯೋದಲ್ಲಿ ಕಂಗೊಳಿಸುತ್ತಿದ್ದರೆ, ರಾಘವ್​ ಚಡ್ಡಾ ಅವರೂ ರಾಜಕಾರಣಿ ಹೊರತಾಗಿ ಪಂಚೆತೊಟ್ಟು ಮಂದಿರಲ್ಲಿ ಕಾಣಿಸಿಕೊಂಡಿದ್ದಾರೆ. ಇಬ್ಬರೂ ಮಾಲೆ ಧರಿಸಿ ಕುಂಕುಮ ಹಚ್ಚಿಕೊಂಡು  ದೇವಸ್ಥಾನದಲ್ಲಿ ಪೂಜೆ ಸಲ್ಲಿಸುವುದು ಹಾಗೂ ನಂತರ ಹೊರಕ್ಕೆ ಬಂದಿರುವ ದೃಶ್ಯ ವೈರಲ್​ ಆಗಿದೆ. 

 

ಅಂದಹಾಗೆ ನಟಿ (Parineeti Chopra), ಈ ಮೊದಲು ರಾಜಕಾರಣಿಯನ್ನು ಮದುವೆಯಾಗುವುದಿಲ್ಲ ಎಂದಿದ್ದರು. ಅದರ ವಿಡಿಯೋ ಈಚೆಗೆ ಸಕತ್​ ವೈರಲ್​ ಆಗಿತ್ತು.  ಸಿನಿಮಾವೊಂದರ  ಪ್ರಚಾರದ ಸಂದರ್ಭದಲ್ಲಿ   ಪತ್ರಕರ್ತರು ಮದುವೆಯ ಕುರಿತು ಕೇಳಿದ್ದ ಪ್ರಶ್ನೆಗೆ ನಟಿ ಪರಿಣಿತಿ, ಒಬ್ಬ ರಾಜಕಾರಣಿ ನನ್ನ ಗಂಡನಾಗಲು ಸಾಧ್ಯವಿಲ್ಲ. ಅದು ನನ್ನ  ಮೊದಲ ಆಯ್ಕೆಯಾಗುವುದಿಲ್ಲ ಎಂದಿದ್ದರು.  ನಾನು ರಾಜಕಾರಣಿಯನ್ನು ಮದುವೆಯಾಗಲು ಬಯಸುವುದಿಲ್ಲ. ಹಲವು ಉತ್ತಮ ಆಯ್ಕೆಗಳು ಇರುವಾಗ ರಾಜಕಾರಣಿಯನ್ನು ಯಾರು ಮದುವೆಯಾಗುತ್ತಾರೆ ಎಂದಿದ್ದರು. ಸ್ವಯಂ ನಿರ್ಮಿತ ಪುರುಷನನ್ನು ಜೀವನ ಸಂಗಾತಿಯನ್ನಾಗಿ ಬಯಸುತ್ತೇನೆ.  ನಾನು ಸ್ವಾಭಿಮಾನ ಹೊಂದಿರುವ, ತಮ್ಮನ್ನು ತಾವು ರೂಪಿಸಿಕೊಂಡ ಪುರುಷರನ್ನು ಇಷ್ಟಪಡುತ್ತೇನೆ. ರಾಜಕಾರಣಿ ನನ್ನ ಆಯ್ಕೆಯಾಗಲು ಸಾಧ್ಯವಿಲ್ಲ ಎಂದಿದ್ದರು. ಆದರೆ ಮದುವೆ ಸ್ವರ್ಗದಲ್ಲಿಯೇ ಆಗಿರುತ್ತದೆ ಎನ್ನುವ ಮಾತಿನಂತೆ ಈಗ ರಾಜಕಾರಣಿಗೇ ನಟಿ ಒಲಿದಿದ್ದಾರೆ. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ರಶ್ಮಿಕಾ- ಸ್ಮೃತಿ ಇಬ್ಬರ ಎಂಗೇಜ್​ಮೆಂಟೂ ಮುರಿದುಬಿತ್ತು: ಮಂದಣ್ಣ- ಮಂಧಾನ ಹೆಸರಲ್ಲಿ ಏನಿದೆ ಗ್ರಹಚಾರ?
ಕೊನೆಗೂ ಅದಿತಿ ರಾವ್ ಹೈದರಿ ಗುಟ್ಟು ರಟ್ಟಾಯ್ತು.. ಎಷ್ಟು ದಿನ ಅಂತ ಮುಚ್ಚಿಡೋಕಾಗುತ್ತೆ ಹೇಳಿ..!?