ಏನಾಗ್ತಿದೆ ಶಿವಾ.. ಮೋಡ ಕವಿದ ವಾತಾವರಣ, ಪ್ರಿಯಾಂಕಾ-ನಿಕ್ ದಾಂಪತ್ಯಕ್ಕೆ ಬಿತ್ತಾ ಕಾಕದೃಷ್ಟಿ?

By Shriram Bhat  |  First Published Jul 14, 2024, 3:03 PM IST

ನಿಕ್ ಜೊನಾಸ್ ಅವರು ನನಗೆ ನಮ್ಮಿಬ್ಬರ, ಅಂದರೆ ಪ್ರಿಯಾಂಕಾ ಹಾಗೂ ನನ್ನ ಮದುವೆ ನಡೆದ ಬಗ್ಗೆ ರಿಗ್ರೆಟ್ ಇದೆ. ಕಾರಣ, ನಾವು ಅಂದು ನಮ್ಮ ಮದುವೆಯನ್ನು ಜೋಧಪುರದಲ್ಲಿ ಮಾಡುವ ವೇಳೆ...


ಬಾಲಿವುಡ್‌ನಲ್ಲಿ ಸ್ಟಾರ್ ನಟಿಯಾಗಿ ಮೆರೆದು ಅಮೆರಿಕದ ನಿಕ್ ಜೊನಾಸ್ (Nick Jonas) ಹೆಸರಿನ ಪಾಪ್ ಸಿಂಗರ್ ಮದುವೆಯಾಗಿ ಅಮೆರಿಕಾದಲ್ಲಿಯೇ ನೆಲೆಸಿದ್ದಾರೆ ನಟಿ ಪ್ರಿಯಾಂಕಾ ಚೋಪ್ರಾ. ನಿಕ್ ಜೊನಾಸ್ ಹಾಗು ಪ್ರಿಯಾಂಕಾ ಚೋಪ್ರಾ (Priyanka Chopra) ನಡುವೆ ಬರೋಬ್ಬರಿ ಹತ್ತು ವರ್ಷಗಳ ವಯಸ್ಸಿನ ಅಂತರವಿದೆ. ಅವರಿಬ್ಬರೂ ಪ್ರೀತಿಸಿ ಮದುವೆಯಾಗಿದ್ದಾರೆ. ಆದರೆ, ಪರಸ್ಪರರ ವಯಸ್ಸಿನ ಅಂತರದ ಬಗ್ಗೆ, ಭವಿಷ್ಯದಲ್ಲಿ ಅದರಿಂದ ಆಗಬಹುದಾದ ಸಮಸ್ಯೆಯ ಬಗ್ಗೆ ಅಂದೇ ಚರ್ಚೆ ನಡೆದಿತ್ತು. ಆದರೆ, ಅದ್ಯಾವುದನ್ನೂ ಲೆಕ್ಕಿಸದೇ ಅವರಿಬ್ಬರೂ ಲವ್ ಮಾಡಿ ಮದುವೆ ಆಗಿದ್ದೂ ಆಗಿದೆ. 

ಮತ್ತೆ ಇನ್ನೇನಿದೆ ಸಮಸ್ಯೆ ಎಂದು ನೀವು ಕೇಳಬಹುದು. ಸದ್ಯಕ್ಕೆ ಸಮಸ್ಯೆ ಏನಿಲ್ಲ, ಆದರೆ, ನಿಕ್ ಜೊನಾಸ್ ಅವರು ನನಗೆ ನಮ್ಮಿಬ್ಬರ, ಅಂದರೆ ಪ್ರಿಯಾಂಕಾ ಹಾಗೂ ನನ್ನ ಮದುವೆ ನಡೆದ ಬಗ್ಗೆ ರಿಗ್ರೆಟ್ ಇದೆ. ಕಾರಣ, ನಾವು ಅಂದು ನಮ್ಮ ಮದುವೆಯನ್ನು ಜೋಧಪುರದಲ್ಲಿ ಮಾಡುವ ವೇಳೆ ಭಾರೀ ಖರ್ಚು ಮಾಡಿದ್ದೇವೆ. ಅದೊಂದು ಗ್ರಾಂಡ್ ಮ್ಯಾರೇಜ್ ಆಗಬೇಕು ಎಂಬುದಷ್ಟೇ ಅಂದು ನಮ್ಮಿಬ್ಬರಲ್ಲೂ ಇದ್ದ ಏಕರೂಪ ಮೆಂಟಾಲಿಟಿ. ಆದರೆ, ಇಂದು ನನಗೆ ಆ ಬಗ್ಗೆ ರೀಗ್ರೆಟ್ ಇದೆ' ಎಂದಿದ್ದಾರೆ ನಿಕ್ ಜೊನಾಸ್. 

Tap to resize

Latest Videos

ತಿಂಗಳ ಬಳಿಕ ಡಿವೋರ್ಸ್ ಸತ್ಯ ಸಂಗತಿ ಬಿಚ್ಚಿಟ್ಟ ಚಂದನ್‌ ಶೆಟ್ಟಿ, Loversಗೆ ಇದು ಹೊಸ ಲೆಸನ್ ಆಗಬಹುದೇ?

ಪ್ರಿಯಾಂಕಾ ಚೋಪ್ರಾ ಅವರು ತಮ್ಮ ಪತಿ ನಿಕ್ ಜೊನಾಸ್ ಮಾತಿಗೆ ಏನೂ ರಿಯಾಕ್ಟ್ ಮಾಡಿಲ್ಲ. ಆದರೆ, ತಮ್ಮಿಬ್ಬರ ಮದುವೆಯಲ್ಲಿ ಮಾಡಿರುವ ಖರ್ಚು ಅತಿಯಾಯಿತು ಎಂದು ಹೇಳಿರುವ ಪತಿಯ ಮಾತು ಪಿಗ್ಗಿ ಪಾಲಿಗೆ ನುಂಗಲಾರದ ತುತ್ತಾಗಿದೆಯಂತೆ. ಏಕೆಂದರೆ, ಅಂದು ಎಲ್ಲವೂ ಓಕೆ ಆಗಿತ್ತು. ಆದರೆ, ಇಂದು ಆ ಬಗ್ಗೆ ನಿಕ್ ಅಪಸ್ವರ ತೆಗೆದಿರುವುದು ಪ್ರಿಯಾಂಕಾಗೆ ಸಹಜವಾಗಿಯೇ ಇಷ್ಟವಾಗಿಲ್ಲವಂತೆ. ಆದರೆ, ನಿಕ್ ಮಾತನ್ನು ನಟಿ ಪ್ರಿಯಾಂಕಾ ಚೋಪ್ರಾಗೆ ಅಲ್ಲಗಳೆಯಲೂ ಆಗುತ್ತಿಲ್ಲವಂತೆ, ಕಾರಣ, ನಿಕ್ ಜೊನಾಸ್ ಹೇಳಿದ್ದು ಫ್ಯಾಕ್ಟ್ ಎಂಬುದು ಸ್ವತಃ ಪ್ರಿಯಾಂಕಾಗು ಅರ್ಥವಾಗಿದೆ. 

ಇಷ್ಟಕ್ಕೂ 2018ರಲ್ಲಿ ಆಗಿರುವ ಮದುವೆಗೆ ಈಗ ರಿಗ್ರೆಟ್ ಯಾಕೆ? ಅಲ್ಲೇ ಇರುವುದು ವಿಷಯ. ಮದುವೆಯನ್ನು ಭರ್ಜರಿ ಆಡಂಬರದಿಂದ ಮಾಡಿಕೊಂಡಿದ್ದಾರೆ ಪ್ರಿಯಾಂಕಾ ಹಾಗು ನಿಕ್ ಜೊನಾಸ್. ಆದರೆ, ಅಮೆರಿಕಾದಲ್ಲಿ ಮದುವೆ ಬಳಿಕ ಇಬ್ಬರೂ ಲೈಫ್ ಲೀಡ್ ಮಾಡಲು ಸಂಪಾದನೆಗೆ ಸಾಕಷ್ಟು ಚಾನ್ಸ್ ಸಿಗಬೇಕಲ್ಲ? ಅಲ್ಲಿಯೇ ಹುಟ್ಟಿ ಬೆಳೆದ ನಿಕ್‌ಗೆ ಅದು ಅಷ್ಟೊಂದು ಕಷ್ಟವಾಗಿಲ್ಲ. ಆದರೆ, ಅಲ್ಲಿಗೆ ಹೋದ ಬಳಿಕ ಬಾಲಿವುಡ್ ಇಂಡಸ್ಟ್ರಿ ಕನೆಕ್ಷನ್ ತಪ್ಪಿಸಿಕೊಂಡ ನಟಿ ಪ್ರಿಯಾಂಕಾಗೆ ಹಾಲಿವುಡ್‌ ಸಿನಿಮಾಗಳಲ್ಲಿ ಅವಕಾಶ ಗಿಟ್ಟಿಸುವುದು ಅಷ್ಟು ಸುಲಭದ ಮಾತಾಗಿರಲಿಲ್ಲ. 

 

ಈ ಕಾರಣಕ್ಕೆ ನಟಿ ಪ್ರಿಯಾಂಕಾಗೆ ಕೆಲಸ ಹುಡುಕುವುದು ಅನಿವಾರ್ಯವಾಯಿತು. ಜೊತೆಗೆ, ಬೇಗ ಹಾಲಿವುಡ್ ಆಫರ್ ಕೂಡ ಬರಲಿಲ್ಲ. ಅಷ್ಟೇ ಅಲ್ಲ, ಅಮೆರಿಕಾದಲ್ಲಿ ಇಬ್ಬರೂ ಸೇರಿ ಒಂದು ಮನೆಯನ್ನು ಕೊಂಡುಕೊಂಡರು. ಆದರೆ, ಅದು ಕಟ್ಟಿವಾಗಲೇ ಸಮಸ್ಯೆ ಆಗಿದ್ದರಿಂದ, ಮಳೆ ಬಂದಾಗ ಸೋರುತ್ತಿತ್ತು. ಹೀಗಾಗಿ ಮನೆ ತೆಗೆದುಕೊಂಡರೂ ಅಲ್ಲಿರಲಾಗದೇ ಬೇರೆ ಫ್ಲಾಟ್‌ನಲ್ಲಿ ಜೀವನ ಸಾಗಿಸಬೇಕಾಯ್ತು. ಕೊಟ್ಟ ದುಡ್ಡು ಸ್ವಂತ ಮನೆಗೆ ಆಗಿದ್ದರೂ ಅದರಲ್ಲಿ ಇರಲಾಗದೇ ಬಾಡಿಗೆ ಕಟ್ಟುವಾಗ ಇಬ್ಬರಿಗೂ ಕಷ್ಟವಾಗಿದೆ. 

ಕ್ಯಾಮೆರಾ ಎದುರೇ ಕಿತ್ತಾಡ್ಕೊಂಡ ಗಾಯತ್ರಿ-ಅನಂತ್‌ ನಾಗ್, ಬೆಂಕಿಗೆ ತುಪ್ಪ ಸುರಿದಿದ್ಯಾಕೆ ರಮೇಶ್ ಅರವಿಂದ್..?!

ಹೀಗಾಗಿ, ಈಗ ನಿಕ್ ಆ ಬಗ್ಗೆ ಬಾಯಿ ಬಿಟ್ಟಿದ್ದಾರೆ. ಸ್ವಂತ ಮನೆ ತೆಗೆದುಕೊಂಡಿದ್ದು ಬಿಸಿತುಪ್ಪದಂತಾಗಿದೆ. ಸಂಪಾದನೆ ಸಡನ್ನಾಗಿ ಏನೂ  ಏರುವುದಿಲ್ಲವಲ್ಲ! ಆದರೆ, ಮದುವೆಗೆ ಅಂತ ಮಾಡಿರುವ ಖರ್ಚು ವೇಸ್ಟ್ ಆದಂತಾಗಿದೆ. ಕಾರಣ, ಅದು ಬ್ಯಾಂಕ್‌ ಸೇವಿಂಗ್‌ನಂತೆ ಬಡ್ಡಿಯನ್ನೇನೂ ಕೊಡುವುದಿಲ್ಲ. ಆಗಿಹೋದ ಖರ್ಚಿಗೆ ಲೆಕ್ಕ ಮಾಡುವುದನ್ನು ಬಿಟ್ಟರೆ ಬೇರೇನು ಮಾಡಲು ಸಾಧ್ಯ? ಹೀಗಾಗಿ, ನಿಕ್ ಆ ಬಗ್ಗೆ ರಿಗ್ರೇಟ್ ವ್ಯಕ್ತಪಡಿಸಿದ್ದಾರೆ ಅಷ್ಟೇ. ಸದ್ಯ ಅವರಿಬ್ಬರ ದಾಂಪತ್ಯ ಚೆನ್ನಾಗಿದೆ, ಬೇರೇನೂ ಮ್ಯಾಟರ್ ಇಲ್ಲ, ಗಾಬರಿ ಆಗ್ಬೇಡಿ..! 

click me!