ವಿಶ್ವ ಸುಂದರಿಯನ್ನೇ ಅಸಹಜ ಲೈಂಗಿಕ ಕ್ರಿಯೆಗೆ ಒತ್ತಾಯಿಸುತ್ತಿದ್ದನಂತೆ ಆಕೆಯ ಗಂಡ!

By Bhavani Bhat  |  First Published Nov 24, 2024, 2:13 PM IST

ಮಾಜಿ ವಿಶ್ವ ಸುಂದರಿ ಯುಕ್ತಾ ಮುಖಿ ತಮ್ಮ ಪತಿಯ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಅವರು ತಮ್ಮ ಪತಿಯಿಂದ ಅಸ್ವಾಭಾವಿಕ ಲೈಂಗಿಕತೆ ಮತ್ತು ದೈಹಿಕ ಹಿಂಸೆಗೆ ಒಳಗಾಗಿದ್ದಾಗಿ ಹೇಳಿಕೊಂಡಿದ್ದಾರೆ. ಈ ಬಗ್ಗೆ ಮುಂಬೈನ ಅಂಬೋಲಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.



ಹಾಸಿಗೆಯಲ್ಲಿ ಪತಿ ತನ್ನೊಂದಿಗೆ ಪ್ರಾಣಿಯಂತೆ ವರ್ತಿಸುತ್ತಿದ್ದ. ಅಸ್ವಾಭಾವಿಕ ಲೈಂಗಿಕತೆಗೆ ಒತ್ತಾಯಿಸುತ್ತಿದ್ದ. ಇದನ್ನು ವಿರೋಧಿಸಿದರೆ ತನ್ನ ಮೇಲೆ ಹಲ್ಲೆ ನಡೆಸುತ್ತಿದ್ದ ಅಂತ ಮಾಜಿ ವಿಶ್ವ ಸುಂದರಿಯೊಬ್ಬಳು ಹೇಳಿಕೊಂಡಿದ್ದಾಳೆ. ಇವಳು ಬಾಲಿವುಡ್ ನಟಿ ಕೂಡ. 

ಅಂದ ಹಾಗೆ ಈಕೆ ಐಶ್ವರ್ಯ ರೈ ಅಲ್ಲ, ಸುಶ್ಮಿತಾ ಸೇನ್‌ ಕೂಡ ಅಲ್ಲ. ಈಕೆ ಯುಕ್ತಾ ಮುಖಿ (Yukta Mukhi). ತನ್ನ ಪತಿ ಪ್ರಿನ್ಸ್ ತುಲಿ ವಿರುದ್ಧ ಈಕೆಯ ಗಂಭೀರ ಆರೋಪವಿದೆ. ಮದುವೆಯ ಬಳಿಕ ತನ್ನ ಜೀವನ ಸರಪಳಿಯಲ್ಲಿ ಕಟ್ಟಿದಂತಾಗಿತ್ತು. ತಾನು ಬಹುದೊಡ್ಡ ಅಗ್ನಿ ಪರೀಕ್ಷೆಯನ್ನು ಎದುರಿಸಬೇಕಾಯಿತು ಎಂದಿದ್ದಾಳೆ ಯುಕ್ತಾ. ಈ ಬಗ್ಗೆ ಈಕೆ ಮುಂಬೈನ ಅಂಬೋಲಿ ಪೊಲೀಸ್ ಠಾಣೆಯಲ್ಲಿ ಪತಿ ವಿರುದ್ಧ ಎಫ್‌ಐಆರ್ ಕೂಡ ದಾಖಲಿಸಿರುವುದಾಗಿ ತಿಳಿಸಿದ್ದಾರೆ. 

Tap to resize

Latest Videos

ಪತಿ ಹಾಸಿಗೆಯಲ್ಲಿ ತನ್ನೊಂದಿಗೆ ಅಸಹಜ, ಅಸ್ವಾಭಾವಿಕ ಕೃತ್ಯಗಳನ್ನು ಮಾಡುತ್ತಿದ್ದ. ನಿರಾಕರಿಸಿದಾಗ ತನಗೆ ಹೊಡೆಯುತ್ತಿದ್ದ ಎಂದು ಯುಕ್ತಾ ಆರೋಪಿಸಿದ್ದಾಳೆ. ಯುಕ್ತಾ ಮುಖಿ 1999ರಲ್ಲಿ ವಿಶ್ವ ಸುಂದರಿ ಕಿರೀಟವನ್ನು ಗೆದ್ದಿದ್ದಳು. 2008ರಲ್ಲಿ ಪ್ರಿನ್ಸ್ ತುಲಿ ಎಂಬಾತನನ್ನು ವಿವಾಹವಾಗಿದ್ದಳು. 2014ರಲ್ಲಿ ಇವರಿಬ್ಬರೂ ವಿವಾಹ ವಿಚ್ಛೇದನ ಪಡೆದಿದ್ದರು. ಈವರೆಗೆ ಭಾರತ 6 ಬಾರಿ ವಿಶ್ವ ಸುಂದರಿ ಕಿರೀಟವನ್ನು ಗೆದ್ದಿದೆ. ಈ ನಡುವೆ ಇತ್ತೀಚೆಗಷ್ಟೇ ತನ್ನ ಪತಿಯ ವಿರುದ್ಧ ಗಂಭೀರ ಆರೋಪ ಮಾಡಿರುವ ವಿಶ್ವ ಸುಂದರಿ ಯುಕ್ತಾ ಮುಖಿ ಮದುವೆಯ ಬಳಿಕ ತಾವು ಅನುಭವಿಸಿದ ಸಂಕಷ್ಟಗಳ ಬಗ್ಗೆ ಹೇಳಿಕೊಂಡಿದ್ದಾರೆ.

ಹಾಸಿಗೆಯಲ್ಲಿ ತಮ್ಮ ಪತಿ ತನ್ನೊಂದಿಗೆ ಪ್ರಾಣಿಯಂತೆ ವರ್ತಿಸುತ್ತಿದ್ದನು. ತಾನು ವಿರೋಧಿಸಿದಾಗ ಥಳಿಸುತ್ತಿದ್ದ ಎಂದು ಯುಕ್ತಾ ಹೇಳಿಕೊಂಡಿದ್ದಾರೆ. ಯುಕ್ತಾ ತಮ್ಮ ವೈವಾಹಿಕ ಜೀವನದ ಬಗ್ಗೆ ಕೆಲವು ಆಘಾತಕಾರಿ ವಿಷಯಗಳನ್ನು ಬಹಿರಂಗಪಡಿಸಿದ್ದು, ಇದರಲ್ಲಿ ವರದಕ್ಷಿಣೆ ಕಿರುಕುಳ ಮತ್ತು ಅಸ್ವಾಭಾವಿಕ ಲೈಂಗಿಕತೆಯ ಆರೋಪಗಳೂ ಸೇರಿವೆ. 1999ರಲ್ಲಿ ವಿಶ್ವ ಸುಂದರಿ ಕಿರೀಟವನ್ನು ಗೆದ್ದ ಯುಕ್ತಾ ಮುಖಿ ಬಾಲಿವುಡ್‌ನಲ್ಲಿ ಹೆಚ್ಚಿನ ಯಶಸ್ಸು ಸಾಧಿಸಲು ಸಾಧ್ಯವಾಗಲಿಲ್ಲ. ಬಳಿಕ ಅವರು 2008ರಲ್ಲಿ ನಾಗ್ಪುರದ ಉದ್ಯಮಿ ಪ್ರಿನ್ಸ್ ತುಲಿಯನ್ನು ವಿವಾಹವಾದರು. ಆದರೆ ಇವರ ದಾಂಪತ್ಯ ಜೀವನವು ಹೆಚ್ಚು ಕಾಲ ಉಳಿಯಲಿಲ್ಲ.

ಕಿರಿಯರ ಜೊತೆ ಕೆಲ್ಸ ಮಾಡೋಕೆ ನಿಮ್ಗೆ ಸಂಕೋಚ ಆಗೋದಿಲ್ವೇ ಅಂದಿದ್ದಕ್ಕೆ ಅಣ್ಣಾವ್ರು ಏನಂದಿದ್ರು?
 

ಪತಿಯ ಅಸಹ್ಯ ವರ್ತನೆಯ ಬಗ್ಗೆ ಬಹಿರಂಗ ಪಡಿಸಿದ ಯುಕ್ತಾ, ಸಿನಿಮಾದಲ್ಲಿ ಕೆಲಸ ಮಾಡಲು ಆತ ಬಿಡುತ್ತಿರಲಿಲ್ಲ ಎಂದು ದೂರಿದ್ದಾರೆ. ಯುಕ್ತಾ ತಮ್ಮ ಪತಿಯ ಬಗ್ಗೆ ಮತ್ತೊಂದು ಆಘಾತಕಾರಿ ಸಂಗತಿಯನ್ನು ಬಹಿರಂಗಪಡಿಸಿದ್ದಾರೆ. ಮದುವೆಯ ಅನಂತರ ತಾವು ಗಂಡನ ಮನೆಗೆ ಬಂದಾಗ ವಿಚಿತ್ರವಾಗಿ ಸ್ವಾಗತಿಸಿದ. ಆತ ತನ್ನ ಗೆಳತಿಯರೊಂದಿಗೆ ನನ್ನನ್ನು ಸ್ವಾಗತಿಸಿದ್ದ. ಆಗ ನಾನು ಅದನ್ನು ತಮಾಷೆ ಎಂದುಕೊಂಡಿದ್ದೆ. ಆದರೆ ಬಳಿಕ ತಿಳಿಯಿತು ಆತನಿಗೆ ಅನೇಕ ಗೆಳತಿಯರು ಇದ್ದಾರೆಂದು ಎಂಬುದಾಗಿ ಯುಕ್ತ ಹೇಳಿಕೊಂಡಿದ್ದಾರೆ.

ಪತಿಯಿಂದ ವಿಚ್ಛೇದನ ಪಡೆದ ಬಳಿಕ ಯುಕ್ತಾ ಮುಖಿ ಆಧ್ಯಾತ್ಮಿಕತೆಯತ್ತ ಮುಖ ಮಾಡಿದ್ದಾರೆ. ಅವರು ಈಗ ರೆಸ್ಟೋರೆಂಟ್ ಒಂದನ್ನು ನಡೆಸುತ್ತಿದ್ದು, ವೈಯಕ್ತಿಕ ಜೀವನದಲ್ಲಿ ಶಾಂತಿಯನ್ನು ಕಂಡುಕೊಳ್ಳಲು ಪ್ರಯತ್ನಿಸುತ್ತಿದ್ದಾರೆ.

ಅರುಂಧತಿ, ರುದ್ರಮದೇವಿ ಸಿನಿಮಾಗೆ ಮೊದಲ ಆಯ್ಕೆ ಈ ನಟಿ: ಆದರೆ ಅನುಷ್ಕಾ ಶೆಟ್ಟಿಗೆ ಸಿಕ್ಕಿದ್ಹೇಗೆ?
 

click me!