ಐದು ತಿಂಗಳ ಬಳಿಕ ಮಗನನ್ನು ಪರಿಚಯಿಸಿದ 'ರಾಧಾ ಕಲ್ಯಾಣ' ನಟಿ ರಾಧಿಕಾ ರಾವ್

By Vinutha Perla  |  First Published Dec 17, 2023, 6:48 PM IST

ಮಂಗಳೂರು ಮೂಲದ ಚೆಲುವೆ, 'ರಾಧಾ ಕಲ್ಯಾಣ' ಧಾರಾವಾಹಿ ಖ್ಯಾತಿಯ ನಟಿ ರಾಧಿಕಾ ರಾವ್ ಗಂಡು ಮಗುವಿಗೆ ಜನ್ಮ ನೀಡಿ 5 ತಿಂಗಳಾಗಿದೆ. ಇದೀಗ ತಮ್ಮ ಮಗನ ನಾಮಕರಣವನ್ನು ನೆರವೇರಿಸಿದ್ದಾರೆ. ಮುದ್ದು ಕಂದಮ್ಮನ ಫೋಟೋವನ್ನು ಸೋಷಿಯಲ್‌ ಮೀಡಿಯಾದಲ್ಲಿ ಶೇರ್ ಮಾಡಿ ಹೆಸರನ್ನು ರಿವೀಲ್ ಮಾಡಿದ್ದಾರೆ.


ಮಂಗಳೂರು ಮೂಲದ ಚೆಲುವೆ, 'ರಾಧಾ ಕಲ್ಯಾಣ' ಧಾರಾವಾಹಿ ಖ್ಯಾತಿಯ ನಟಿ ರಾಧಿಕಾ ರಾವ್ ಗಂಡು ಮಗುವಿಗೆ ಜನ್ಮ ನೀಡಿ 5 ತಿಂಗಳಾಗಿದೆ. ಇದೀಗ ತಮ್ಮ ಮಗನ ನಾಮಕರಣವನ್ನು ನೆರವೇರಿಸಿದ್ದಾರೆ. ಮುದ್ದು ಕಂದಮ್ಮನ ಫೋಟೋವನ್ನು ಸೋಷಿಯಲ್‌ ಮೀಡಿಯಾದಲ್ಲಿ ರಿವೀಲ್ ಮಾಡಿದ್ದಾರೆ. ರಾಧಿಕಾ ಇಲ್ಲಿಯವರೆಗೆ ತಮ್ಮ ಮಗನ ಫೋಟೋವನ್ನು ರಿವೀಲ್ ಮಾಡಿರಲಿಲ್ಲ. ಐದು ತಿಂಗಳು ತುಂಬಿದ ಈ ಸಂದರ್ಭದಲ್ಲಿ ತಮ್ಮ ಮಗುವಿಗೆ ನಾಮಕರಣವನ್ನು ನೆರವೇರಿಸಿದ್ದಾರೆ ಎಂದು ತಿಳಿದುಬಂದಿದೆ.  ಸಿನಿ ಸ್ನೇಹಿತರು ಮತ್ತು ಆಪ್ತರು ದಂಪತಿಗೆ ಶುಭ ಕೋರಿದ್ದಾರೆ.  

ಕಂದನಿಗೆ ಹೆಸರಿಟ್ಟು, ಮಗುವಿನ (Baby) ಫೋಟೋ ಕೂಡ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ತಮ್ಮ ಮಗನಿಗೆ ಅಗಸ್ತ್ಯ ಎಂದು ಹೆಸರನ್ನಿಟ್ಟಿದ್ದಾರೆ. ಮುದ್ದು ಮಗುವಿನ ಫೋಟೋ ನೋಡಿ ಅಭಿಮಾನಿಗಳು (Fans) ಲೈಕ್ಸ್, ಕಾಮೆಂಟ್ ಮಾಡಿದ್ದಾರೆ. ಈ ಹಿಂದೆ ರಾಧಿಕಾ ಗರ್ಭಿಣಿಯಾದಾಗ 'You + Me = Three' ಎಂದು ಬರೆದುಕೊಂಡು ಪತಿ ಜೊತೆಗಿರುವ ಫೋಟೋ ಅಪ್ಲೋಡ್ ಮಾಡಿದ್ದಾರೆ. ನೇರಳೆ ಬಣ್ಣದ ಸೀರೆಯಲ್ಲಿ ರಾಧಿಕಾ ಹಾಗೂ ನೀಲಿ ಬಣ್ಣದ ಔಟ್‌ಫಿಟ್‌ನಲ್ಲಿ ಪತಿ (Husband) ಕಾಣಿಸಿಕೊಂಡಿದ್ದರು.

Tap to resize

Latest Videos

ರಾಧಾ ಕಲ್ಯಾಣ ನಟಿ ರಾಧಿಕಾ ರಾವ್ ಪ್ರೆಗ್ನೆನ್ಸಿ ಫೋಟೋ ಶೂಟ್

'ಮಂಗಳೂರ್ ಹುಡ್ಗಿ ಹುಬ್ಳಿ ಹುಡ್ಗ' ಸೀರಿಯಲ್‌ನಿಂದ ಫೇಮಸ್ ಆದ ನಟಿ
ನಟಿ ರಾಧಿಕಾ ರಾವ್ ರಾಧಾ ಕಲ್ಯಾಣ ಮತ್ತು 'ಮಂಗಳೂರ್ ಹುಡ್ಗಿ ಹುಬ್ಳಿ ಹುಡ್ಗ' ಸೀರಿಯಲ್‌ಗಳ ಮೂಲಕ ಮನೆ ಮಾತಾಗಿದ್ದರು. ತುಳು ಕಿರುತೆರೆಯಲ್ಲೂ ನಟಿಸಿ ಮನೆ ಮಾತಾಗಿದ್ದರು. ಮಂಗ್ಳೂರ್ ಹುಡ್ಗಿ, ಹುಬ್ಳಿ ಹುಡುಗ ಧಾರವಾಹಿ ಇವರ ಸಿನಿ ಬದುಕನ್ನೇ ಬದಲಾಯಿಸಿತ್ತು. ಭಾಷೆ ಬೇರೆ, ಸಂಸ್ಕೃತಿ ಸಂಪ್ರದಾಯ, ಆಚಾರ ವಿಚಾರಗಳೇ ಬೇರೆ ಬೇರೆಯಾಗಿರುವ ಈ ಕಥೆ ಕರ್ನಾಟಕದಲ್ಲಿ ಒಂದು ರೀತಿಯ ಹವಾ ಕ್ರಿಯೆಟ್ ಮಾಡಿತ್ತು.

ಇದಾದ ಬಳಿಕ ರಾಧಿಕಾ ಅವರು ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಯುವರಾಣಿ'ಯಲ್ಲಿ ಇಶಾ ಆಗಿ ನಟಿಸಿ ಸೈ ಎನಿಸಿಕೊಂಡರು. ಕೇವಲ ಧಾರಾವಾಹಿ ಅಲ್ಲದೇ, ಸಿನಿಮಾ ಹಾಗೂ ಮಾಡೆಲಿಂಗ್‌ ಕ್ಷೇತ್ರದಲ್ಲೂ ಬಣ್ಣ ಹಚ್ಚಿದರು. 'ಪುದರುಗೊಂಜಿ ಬುಡೆದಿ', 'ಏಸ' ಎಂಬ ತುಳು ಸಿನಿಮಾಗಳಲ್ಲೂ ರಾಧಿಕಾ ರಾವ್ ಅಭಿನಯಿಸಿದ್ದಾರೆ. ಸೃಜನ್ ಲೋಕೇಶ್ ಜೊತೆ'ಎಲ್ಲಿದ್ದೆ ಇಲ್ಲಿ ತನಕ' ಎಂಬ ಸಿನಿಮಾದಲ್ಲೂ ನಟಿಸಿದ್ದರು.ಜ್ಯುವೆಲ್ಲರಿ ಜಾಹೀರಾತು, ಧಾತ್ರಿ ಹೇರ್ ಆಯಿಲ್, 2016ರ ಹ್ಯಾಂಗ್ಯೂ ಕ್ಯಾಲೆಂಡರ್ ನಲ್ಲಿ ರೂಪದರ್ಶಿಯಾಗಿ ಮಿಂಚಿದರು. 

ಗಂಡು ಮಗುವಿಗೆ ಜನ್ಮ ನೀಡಿದ ಕಿರುತೆರೆ ನಟಿ ರಾಧಿಕಾ ರಾವ್

ಮಾರ್ಚ್‌ 11, 2020ರಲ್ಲಿ ರಾಧಿಕಾ ಮತ್ತು ಆಕರ್ಷ್‌ ವೈವಾಹಿಕ ಜೀವನಕ್ಕೆ ಕಾಲಿಟ್ಟರು.  2019ರ ಮಾರ್ಚ್‌ನಲ್ಲಿ ಕಾಮನ್ ಫ್ರೆಂಡ್ ಮೂಲಕ ಪರಿಚಯವಾದರು. ಪರಿಚಯವಾದ 6 ತಿಂಗಳಿಗೆ ಆಕರ್ಷ್‌ ಡಿಫರೆಂಟ್ ಆಗಿ ಪ್ರಪೋಸ್ ಮಾಡಿದ್ದರು. ಓಕೆ ಹೇಳಿದ ರಾಧಿಕಾ ಅಕ್ಟೋಬರ್‌ ತಿಂಗಳಿನಲ್ಲಿ ನಿಶ್ಚಿತಾರ್ಥ ಮಾಡಿಕೊಂಡರು. ಮದುವೆ ನಂತರ ಬಣ್ಣದ ಪ್ರಪಂಚದಿಂದ ಬ್ರೇಕ್ ತೆಗೆದುಕೊಂಡಿದ್ದರು. ರಾಧಿಕಾ ಪತಿ ಆಕರ್ಷ್ ಭಟ್ ಇಂಟರ್ನ್ಯಾಷನಲ್ ಮ್ಯಾಜೀಷಿಯನ್ ಮತ್ತು ಮೈಂಡ್ ರೀಡರ್ ಆಗಿದ್ದಾರೆ. ಆಕರ್ಷ್ ಕೂಡ ಮೂಲತಃ ಮಂಗಳೂರಿನವರು. ಕಳೆದ ಐದು ತಿಂಗಳ ಹಿಂದೆ ರಾಧಿಕಾ ಗಂಡು ಮಗುವಿಗೆ ಜನ್ಮ ನೀಡಿದರು. ಇತ್ತೀಚೆಗೆ ನಟಿ ರಾಧಿಕಾ ರಾವ್‌ ಎಲ್ಲೂ ಕಾಣಿಸಿಕೊಂಡಿರಲಿಲ್ಲ. ತಮ್ಮ ಮೊದಲ ಮಗುವಿನ ಆರೈಕೆಯಲ್ಲಿ ಬ್ಯುಸಿಯಾಗಿದ್ದರು.

click me!