ಪಂಚಭಾಷೆಗಳಲ್ಲೂ Pushpa ಹಾಡುಗಳು ಸಕ್ಸಸ್: ಧನ್ಯವಾದ ಅರ್ಪಿಸಿದ ದೇವಿಶ್ರೀ ಪ್ರಸಾದ್

By Suvarna News  |  First Published Nov 18, 2021, 5:43 PM IST

ಪುಷ್ಪ ಚಿತ್ರದ ಹಾಡುಗಳು ಪ್ರೇಕ್ಷಕರ ಮನಸ್ಸನ್ನು ಗೆದ್ದಿರುವುದರಿಂದ ಸಂತಸಗೊಂಡಿರುವ ಚಿತ್ರದ ಸಂಗೀತ ನಿರ್ದೇಶಕ ದೇವಿಶ್ರೀ‌ ಪ್ರಸಾದ್ 2021ನೇ ವರ್ಷ ತನಗೆ ಯಶಸ್ವಿ ವರ್ಷವಾಗಿದೆ ಎಂದಿದ್ದಾರೆ. ಹಾಗೂ ಹಾಡುಗಳನ್ನು ಮೆಚ್ಚಿದ ಎಲ್ಲಾ ವೀಕ್ಷಕರಿಗೆ ಧನ್ಯವಾದಗಳನ್ನು ತಿಳಿಸಿದ್ದಾರೆ.


'ಸ್ಟೈಲಿಶ್ ಸ್ಟಾರ್' ಅಲ್ಲು ಅರ್ಜುನ್ (Allu Arjun)  ವಿಭಿನ್ನವಾಗಿ ಕಾಣಿಸಿಕೊಂಡಿರುವ  'ಪುಷ್ಪ' (Pushpa) ಚಿತ್ರ ಸಖತ್ ಕ್ರೇಜ್ ಕ್ರಿಯೇಟ್ ಮಾಡಿದ್ದು, 'ಬಾಹುಬಲಿ' (Bahubali), 'ಕೆಜಿಎಫ್' (KGF) ಹಾದಿಯಲ್ಲಿ ಸಾಗಿರುವ ಚಿತ್ರ 2 ಭಾಗಗಳಲ್ಲಿ ಬಿಡುಗಡೆಯಾಗಲಿದೆ. ವಿಶೇಷವಾಗಿ ಈ ಚಿತ್ರದ ಹಾಡುಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್ ಸೌಂಡ್ ಮಾಡುತ್ತಿದೆ. ದೇವಿಶ್ರೀ ಪ್ರಸಾದ್ (Devi Sri Prasad) ಚಿತ್ರದ ಹಾಡುಗಳಿಗೆ ಸಂಗೀತ ಸಂಯೋಜಿಸಿದ್ದಾರೆ. ಈಗಾಗಲೇ ಕನ್ನಡ, ತೆಲುಗು, ಹಿಂದಿ ಸೇರಿದಂತೆ ಪಂಚ ಭಾಷೆಗಳಲ್ಲೂ ಚಿತ್ರದ ಹಾಡುಗಳು ಭಾರಿ ಜನಪ್ರಿಯತೆ ಪಡೆದು ಸೂಪರ್‌ಹಿಟ್‌ ಆಗಿರುವುದರಿಂದ ಸಖತ್‌ ಖುಷಿಯಾಗಿರುವ ಸಂಗೀತ ನಿರ್ದೇಶಕ ದೇವಿಶ್ರೀ ಪ್ರಸಾದ್‌ 'ಪುಷ್ಪ' ಮ್ಯೂಸಿಕ್‌ ಸಕ್ಸಸ್‌ ಮಾಡಿದ ಸಂಗೀತಪ್ರಿಯರಿಗೆ ಧನ್ಯವಾದಗಳನ್ನು ತಿಳಿಸಿದ್ದಾರೆ. 

'ಪುಷ್ಪ' ಚಿತ್ರದ 'ಜೋಕೆಜೋಕೆ ಮೇಕೆ', 'ಶ್ರೀವಲ್ಲಿ' ಹಾಗೂ 'ಸಾಮಿ ಸಾಮಿ' ಈ ಮೂರು ಹಾಡುಗಳು ಈಗಾಗಲೇ 250 ಮಿಲಿಯನ್‌ ವೀವ್ಸ್‌ ಪಡೆದು ಮುನ್ನುಗುತ್ತಿವೆ. ಅಲ್ಲದೇ ಈ ಚಿತ್ರದ ನಾಲ್ಕನೇ ಹಾಡು 'ಏ ಮಗಾ ಇದು ನನ್ನ ಜಾಗ' ಇದೇ ನವೆಂಬರ್‌ 19 ಕ್ಕೆ ಬಿಡುಗಡೆಯಾಗಲಿದೆ. 'ಪುಷ್ಪ' ಚಿತ್ರದ ಹಾಡುಗಳು ಪ್ರೇಕ್ಷಕರ ಮನಸ್ಸನ್ನು ಗೆದ್ದಿರುವುದರಿಂದ ಸಂತಸಗೊಂಡಿರುವ ಚಿತ್ರದ ಸಂಗೀತ ನಿರ್ದೇಶಕ ದೇವಿಶ್ರೀ‌ ಪ್ರಸಾದ್ 2021ನೇ ವರ್ಷ ತನಗೆ ಯಶಸ್ವಿ ವರ್ಷವಾಗಿದೆ ಎಂದಿದ್ದಾರೆ. ಇದೇ ವೇಳೆ ಹಿಂದಿಯ 'ರಾಧೆ' (Radhe) ಚಿತ್ರದ ಸಿಟಿಮಾರ್‌, ತೆಲುಗಿನ 'ಉಪ್ಪೆನ' (Uppena) ಚಿತ್ರದ ಹಾಡುಗಳನ್ನು ಸಹ ಮೆಚ್ಚಿದ ಎಲ್ಲಾ ವೀಕ್ಷಕರಿಗೆ ಧನ್ಯವಾದಗಳನ್ನು ತಿಳಿಸಿದ್ದಾರೆ.

Tap to resize

Latest Videos

undefined

'ಸಾಮಿ ಸಾಮಿ' ಹಾಡಿಗೆ ಬೊಂಬಾಟ್ ಸ್ಟೆಪ್ಸ್ ಹಾಕಿದ ಅಲ್ಲು-ರಶ್ಮಿಕಾ

ದೇವಿಶ್ರೀ ಪ್ರಸಾದ್ ತೆಲುಗು ಮತ್ತು ತಮಿಳು ಚಿತ್ರರಂಗದ ಪ್ರಮುಖ ಸಂಗೀತ ನಿರ್ದೇಶಕ, ಸಾಹಿತ್ಯ ರಚಿಸುವ ಜೊತೆಗೆ ಗಾಯಕ ಕೂಡಾ ಹೌದು. ತೆಲುಗಿನ 'ದೇವಿ' (devi) ಚಿತ್ರದಿಂದ  ತಮ್ಮ ಸಂಗೀತ ಪಯಣವನ್ನು ಆರಂಭಿಸಿದ ಇವರು ಈಗ ದಕ್ಷಿಣ ಭಾರತ ಚಿತ್ರರಂಗದ ಬಹು ಬೇಡಿಕೆಯ ಸಂಗೀತ ನಿರ್ದೇಶಕರಲ್ಲಿ ಒಬ್ಬರು. 20 ವರ್ಷಗಳ ಅವಧಿಯಲ್ಲಿ ಅವರು 100 ಕ್ಕೂ ಹೆಚ್ಚು ಚಿತ್ರಗಳಲ್ಲಿ ಕೆಲಸ ಮಾಡಿದ್ದು, ಒಂಬತ್ತು ಫಿಲ್ಮ್‌ಫೇರ್ ಪ್ರಶಸ್ತಿ (Filmfare Awards), ಐದು ಸೈಮಾ ಪ್ರಶಸ್ತಿ (Siima Awards), ಒಂದು ನಂದಿ ಪ್ರಶಸ್ತಿಯನ್ನು (Nandi Award) ಪಡೆದಿದ್ದಾರೆ. ಟಾಲಿವುಡ್‌ನಲ್ಲಿ (Tollywood) ಅತಿ ಹೆಚ್ಚು ಸಂಭಾವನೆ ಪಡೆಯುವ ಸಂಗೀತ ಸಂಯೋಜಕರಲ್ಲಿ ದೇವಿಶ್ರೀ ಒಬ್ಬರು. ವಿಶೇಷವಾಗಿ ಕನ್ನಡದಲ್ಲಿ ಇವರು ಗೋಲ್ಡನ್ ಸ್ಟಾರ್ ಗಣೇಶ್ (Ganesh) ಅಭಿನಯದ 'ಸಂಗಮ' (Sangama) ಚಿತ್ರಕ್ಕೆ ಸಂಗೀತ ನೀಡಿದ್ದಾರೆ.

ಇನ್ನು, 'ಪುಷ್ಪ' ಚಿತ್ರದ ನನ್ನ ಫೇವರೇಟ್ ಹಾಡು 'ಏ ಮಗಾ ಇದು ನನ್ನ ಜಾಗ' ಇದೇ ನವೆಂಬರ್‌ 19 ಕ್ಕೆ ಬಿಡುಗಡೆಯಾಗಲಿದ್ದು, ಈ ಬಗ್ಗೆ ಉತ್ಸುಕನಾಗಿದ್ದೇನೆ ಎಂದು ಚಿತ್ರದ ಸ್ಪೆಷಲ್ ಪೋಸ್ಟರ್‌ವೊಂದನ್ನು ಅಲ್ಲು ಅರ್ಜುನ್ ಈ ಹಿಂದೆ ಇನ್‌ಸ್ಟಾಗ್ರಾಮ್‌ನಲ್ಲಿ ಶೇರ್ ಮಾಡಿಕೊಂಡಿದ್ದರು. ಪೋಸ್ಟರ್‌ನಲ್ಲಿ ಅಲ್ಲು ಅರ್ಜುನ್ ಮಾಸ್ ಲುಕ್‌ನಲ್ಲಿ ಹಣೆಗೆ ಕೆಂಪು ತಿಲಕವನ್ನಿಟ್ಟುಕೊಂಡು ಸನ್‌ಗ್ಲಾಸ್ ತೊಟ್ಟು, ಕುತ್ತಿಗೆಗೆ ಚಿನ್ನದ ಸರಗಳನ್ನು ಹಾಕಿಕೊಂಡು ಹೊಸ ಅವತಾರದಲ್ಲಿ ಕಾಣಿಸಿಕೊಂಡಿದ್ದರು. ಸುಕುಮಾರ್ (Sukumar) ನಿರ್ದೇಶನದಲ್ಲಿ ಮೈತ್ರಿ ಮೂವೀ ಮೇಕರ್ಸ್ ಸಂಸ್ಥೆ (Mythri Movie Makers) ಈ ಚಿತ್ರವನ್ನು ಅದ್ದೂರಿಯಾಗಿ ನಿರ್ಮಾಣ ಮಾಡುತ್ತಿದೆ.

Pushpa: ಮಾಸ್ ಅವತಾರದ ಪೋಸ್ಟರ್ ಹಂಚಿಕೊಂಡ ನಟ ಅಲ್ಲು ಅರ್ಜುನ್

'ಪುಷ್ಪ' ಚಿತ್ರದಲ್ಲಿ ಅಲ್ಲು ಅರ್ಜುನ್ ರಕ್ತ ಚಂದನ ಕಳ್ಳಸಾಗಾಣಿಕೆ ಮಾಡುವ ಲಾರಿ ಚಾಲಕನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಡಿಗ್ಲಾಮರಸ್ ಪಾತ್ರದಲ್ಲಿ ಶ್ರೀವಲ್ಲಿಯಾಗಿ ನ್ಯಾಷನಲ್ ಕ್ರಷ್‌ ರಶ್ಮಿಕಾ ಮಂದಣ್ಣ (Rashmika Mandanna) ಅಲ್ಲು ಅರ್ಜುನ್‌ಗೆ ಜೋಡಿಯಾಗಿ ನಟಿಸಿದ್ದಾರೆ. ಡಾಲಿ ಧನಂಜಯ್ (Dolly Dhananjay), ಟಾಲಿವುಡ್ ವಿಲನ್ ಜಗಪತಿ ಬಾಬು (Jagapati Babu), ಪ್ರಕಾಶ್ ರಾಜ್ (Prakash Raj), ಸುನೀಲ್, ವೆನ್ನೆಲ್ಲಾ ಕಿಶೋರ್ ಸೇರಿದಂತೆ ಚಿತ್ರದಲ್ಲಿ ದೊಡ್ಡ ತಾರಾಬಳಗವಿದೆ. ಕನ್ನಡ, ತೆಲುಗು, ಹಿಂದಿ, ತಮಿಳು ಮತ್ತು ಮಲಯಾಳಂ ಭಾಷೆಗಳಲ್ಲಿ ಡಿಸೆಂಬರ್‌ 17ಕ್ಕೆ 'ಪುಷ್ಪ' ಚಿತ್ರ ಬಿಡುಗಡೆಯಾಗಲಿದೆ.

click me!