
ಕೊರೋನಾ ಲಾಕ್‌ಡೌನ್ (Covid19 lockdown) ನಿಂದ ವಿವಿಧ ಕ್ಷೇತ್ರಗಳಿಗೆ ನಷ್ಟವಾಗಿ ಆದರೆ ಎಲ್ಲವೂ ಕಡಿಮೆ ಸಮಯದಲ್ಲಿ ಬಲು ಬೇಗ ಚೇತರಿಸಿಕೊಳ್ಳುವ ಸಾಮರ್ಥ್ಯ ಹೊಂದಿದೆ ಆದರೆ ಮನೋರಂಜನೆ (Entertainment) ಕ್ಷೇತ್ರ ಮಾತ್ರ ಎರಡೂ ಲಾಕ್‌ಡೌನ್‌ನಲ್ಲಿ ದೊಡ್ಡ ಪೆಟ್ಟು ತಿಂದಿದೆ. ಮಾಲಿವುಡ್ (Mollywood), ಟಾಲಿವುಡ್ (Tollywood), ಕಾಲಿವುಡ್ (kollywood) , ಸ್ಯಾಂಡಲ್‌ವುಡ್ (Sandalwood) ಹಾಗೂ ಬಾಲಿವುಡ್ (Bolywood) ಚೇರಿಸಿಕೊಳ್ಳುವ ಸಮಯದಲ್ಲಿ ಈಗ ಗುಜರಾತಿ (Gujarati) ಸಿನಿಮಾಗಳು ಕೂಡ ನಿಧಾನಕ್ಕೆ ಚೇರಿಸಿಕೊಳ್ಳುವ ಸೂಚನೆ ಕಾಣಿಸುತ್ತಿದೆ. ಕಡಿಮೆ ಕೆಲಸ ಇರುವ ಕಾರಣ ಸ್ಟಾರ್ ನಟ, ನಟಿಯರು ಕಿರುತೆರೆಗೆ ಎಂಟ್ರಿ ಕೊಡುತ್ತಿದ್ದಾರೆ.
ನಟ ವಿಕಿ ಶಾ (Vikee Shah) ಕೂಡ ಕಿರುತೆರೆ ಲೋಕಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ (Social Media) ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳು ಹೊಂದಿರುವ ವಿಕಿ ಅವರ ವೃತ್ತಿ ಜೀವನದ ಅಪ್ಡೇಟ್ ತಿಳಿಯುತ್ತಿದ್ದಂತೆ ಅಭಿಮಾನಿಗಳು ಸಂತಸ ವ್ಯಕ್ತಪಡಿಸಿದ್ದಾರೆ.
'ಸದ್ಯಕ್ಕೆ ಸಿನಿಮಾ ಕ್ಷೇತ್ರದಲ್ಲಿ ಕಡಿಮೆ ಕೆಲಸಗಳು ನಡೆಯುತ್ತಿದೆ ಎಲ್ಲವೂ ನಾರ್ಮಲ್ ಆಗುವವರೆಗೂ ನಾನು ಕಾಯುವುದಕ್ಕೆ ಕಷ್ಟವಾಗುತ್ತದೆ. ಟಿವಿ ಶೋಗಳ (TV show) ಜೊತೆ ನನಗೆ ಒಳ್ಳೆಯ ಅವಕಾಶಗಳಿದ್ದವು, ನಾನು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವೆ. ಈ ಹೊಸ ಚಾಲೆಂಜನ್‌ನ ನಾನು ಸ್ವೀಕರಿಸಿದ್ದೀನಿ. ಇತ್ತೀಚಿನ ದಿನಗಳಲ್ಲಿ ಸಿನಿಮಾ ರೀತಿ ಟಿವಿ ಒಳ್ಳೆಯ ಪ್ರತಿಕ್ರಿಯೆ ಪಡೆಯುತ್ತಿದೆ' ಎಂದು ವಿಕಿ ಶಾ ಖಾಸಗಿ ಸಂದರ್ಶನದಲ್ಲಿ ಮಾತನಾಡಿದ್ದಾರೆ.
ಬ್ಯುಸಿನೆಸ್ (Bussiness) ಬ್ಯಾಕ್‌ಗ್ರೌಂಡ್‌ನಿಂದ ಬಂದಿರುವ ವಿಕಿ ಶಾಗೆ ಯಾವುದೇ ರೀತಿಯ ಹಣ ಕಾಸಿನ ಚಿಂತೆ ಇಲ್ಲ ಆದರೆ ಕ್ಯಾಮೆರಾ ತುಂಬಾ ಇಷ್ಟ ಪಡುವ ಕಾರಣ ಈ ವೃತ್ತಿ ಆಯ್ಕೆ ಮಾಡಿಕೊಂಡಿದ್ದಾರೆ. ' ನಾನು ಮಾಡುವ ಕೆಲಸ ನನಗೆ ತುಂಬಾನೇ ಖುಷಿ ಕೊಡುತ್ತದೆ ಆದರೆ ಕೆಲಸ ಕಡಿಮೆ ಇರುವ ಕಾರಣ ನಾನು ಕ್ಯಾಮೆರಾ ಮಿಸ್ ಮಾಡಿಕೊಳ್ಳುತ್ತಿರುವೆ. ಹೀಗಾಗಿ ನಾನು ಈ ಶೋ ಒಪ್ಪಿಕೊಂಡೆ' ಎಂದು ವಿಕಿ ಹೇಳಿದ್ದಾರೆ.
Manmilaap.com, ಬಾಲಿಕಾ ವಧು, ಅದಾಲತ್, ಶಾರ್ಟ್ ಸರ್ಕ್ಯೂಟ್, 24 ಕ್ಯಾರೆಟ್ ಪಿತ್ತಲ್, ಸೂರ್ಯಂಶ್ ಸಿನಿಮಾದಲ್ಲಿ ನಟಿಸಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.