Biggboss15: ಅನಾರೋಗ್ಯದಿಂದ ಮನೆಯಿಂದ ಹೊರ ಬಂದ ಶಮಿತಾ; ಅಭಿಮಾನಿಗಳಿಗೆ ಉತ್ತರಿಸಿದ ತಾಯಿ

Suvarna News   | Asianet News
Published : Nov 18, 2021, 04:22 PM IST
Biggboss15: ಅನಾರೋಗ್ಯದಿಂದ ಮನೆಯಿಂದ ಹೊರ ಬಂದ ಶಮಿತಾ; ಅಭಿಮಾನಿಗಳಿಗೆ ಉತ್ತರಿಸಿದ ತಾಯಿ

ಸಾರಾಂಶ

ಶಮಿತಾ ಶೆಟ್ಟಿ ಆರೋಗ್ಯದ ಬಗ್ಗೆ ತಾಯಿ ಸುನಂದಾರನ್ನು ಪ್ರಶ್ನಿಸಿದ ಅಭಿಮಾನಿಗಳು. ಶೀಘ್ರದಲ್ಲಿ ಮತ್ತೆ ಕಮ್ ಬ್ಯಾಕ್?  

ಹಿಂದಿಯಲ್ಲಿ (Hindi) ಪ್ರಸಾರವಾಗುತ್ತಿರುವ ಬಿಗ್ ಬಾಸ್ ಸೀಸನ್ 15 (Bigg boss 15) ನಾನಾ ಕಾರಣಗಳಿಂದ ಸದಾ ಸುದ್ದಿಯಲ್ಲಿರುತ್ತದೆ. ಸ್ಪರ್ಧಿಗಳ ಹೊಂದಾಣಿಕೆ, ಕಿತ್ತಾಟ (Fight), ಅರೋಗ್ಯದ (Health) ಸಮಸ್ಯೆ ಒಂದಾ ಎರಡಾ? ನಿರೂಪಕ ಸಲ್ಮಾನ್ ಖಾನ್‌ಗೆ (Salman Khan) ಇವರ ಆಟ ನೋಡಿ ಬೇಸರವಾಗಿದೆ ಎಂದೆನಿಸುತ್ತದೆ, ವೀಕೆಂಡ್ ಮಾತುಕತೆಯಲ್ಲಿ ಕೆಲವು ಸ್ಪರ್ಧಿಗಳಿಗೆ ಅರ್ಥ ಮಾಡಿಸುವಷ್ಟರಲ್ಲಿ ಒಂದು ಗಂಟೆ ಸಮಯ ಹಿಡಿಯುತ್ತದೆ. ಹೀಗೆ ಪ್ರತಿಯೊಬ್ಬರಿಗೂ ಘಟನೆ ವಿವರಿಸಿ ಸರಿ ತಪ್ಪು ಹೇಳುವಷ್ಟರಲ್ಲಿ ಇಡೀ ಸಂಚಿಕೆ ಪೂರ್ತಿಯಾಗುತ್ತದೆ. 

ಕರಣ್ ಜೋಹಾರ್ (Karan Johar) ನಿರೂಪಣೆ ಮಾಡಿದ್ದ ಓಟಿಟಿ (OTT) ಬಿಗ್ ಬಾಸ್‌ನಲ್ಲಿ ಶಮಿತಾ ಶೆಟ್ಟಿ (Shamitha Shetty) ಸ್ಪರ್ಧಿಸಿದ್ದರು. ಅಕ್ಕ ಶಿಲ್ಪಾ ಶೆಟ್ಟಿಗಿಂತ (Shilpa Shetty) ನಾನು ವಿಭಿನ್ನ ಎಂದು ತೋರಿಸಿಕೊಳ್ಳುವುದರಲ್ಲಿ ಯಶಸ್ವಿಯಾಗಿ ಟಿವಿ ಬಿಗ್ ಬಾಸ್‌ಗೆ ಪ್ರವೇಶ ಪಡೆದುಕೊಂಡರು. ಓಟಿಟಿಯಲ್ಲಿ ಜಗಳವಾಡುತ್ತಿದ್ದಂತೆಯೇ ಇಲ್ಲಿಯೂ ಹಾಗೆ ಮಾಡುತ್ತಾರೆ ಆದರೆ ಸ್ವಲ್ಪ ಕಡಿಮೆ ಪ್ರಮಾಣವಷ್ಟೇ. ಆದರೆ ಕೆಲವು ದಿನಗಳ ಹಿಂದೆ ಶಮಿತಾ ಅನಾರೋಗ್ಯ ಸಮಸ್ಯಯಿಂದ ಬಿಬಿ ಮನೆಯಿಂದ ಹೊರ ನಡೆದಿದ್ದಾರೆ. ಅಲ್ಲದೆ ಟಿವಿಯಲ್ಲಿ ಇಡಿ ಮನೆ ತೋರಿಸುವಾಗ ಶಮಿತಾಗೆ ಸಂಬಂಧ ಪಟ್ಟ ಯಾವ ವಸ್ತುವೂ (Kit bags) ಇಲ್ಲದ ಕಾರಣ ಅಭಿಮಾನಿಗಳು ಗಾಬರಿಗೊಂಡು ಅವರ ತಾಯಿ ಸುನಂದಾ (Sunanda) ಅವರಿಗೆ ಕಾಮೆಂಟ್ ಮತ್ತು ಮೆಸೇಜ್ ಮಾಡುವ ಮೂಲಕ ಪ್ರಶ್ನೆ ಕೇಳಿದ್ದಾರೆ. 

ಶಿಲ್ಪಾ ಶೆಟ್ಟಿ ತಂಗಿ ಶಮಿತಾಗೆ 'ಅಮ್ಮನಷ್ಟು ವಯಸ್ಸು' ಎಂದು ಹಂಗಿಸಿದ ನಟಿ?

'ಮೇಡಂ ಶಮಿತಾ ಶೆಟ್ಟಿ ಅವರು ಲಗೇಜ್‌ನ (Luggage) ಬಿಗ್ ಬಾಸ್ ಮನೆಯಿಂದ ತೆಗೆದುಕೊಂಡು ಹೋಗಲಾಗಿದೆ. ಅವರು ಮತ್ತೆ ಬರುತ್ತಾರಾ ಇಲ್ವಾ?' ಎಂದು ಪ್ರಶ್ನೆ ಕೇಳಿದ್ದಾರೆ. 'ಹೌದು. ಶಮಿತಾ ಮತ್ತೆ ಬರುತ್ತಾಳೆ' ಎಂದು ಸುನಂದಾ ಉತ್ತರ ನೀಡಿದ್ದಾರೆ. 

Bigg Boss 15: ಸಹಸ್ಪರ್ಧಿಗೆ ಚಪ್ಪಲಿ ಕೊಟ್ಟ ಶಮಿತಾ

ಓಟಿಟಿ ಬಿಗ್ ಬಾಸ್‌ನಲ್ಲಿ ಶಮಿತಾ ಮತ್ತು ರಾಕೇಶ್ (Rakesh) ಒಳ್ಳೆಯ ಸ್ನೇಹಿತರಾಗಿದ್ದರು. ಹೀಗಾಗಿ ರಾಕೇಶ್ ಸೀಸನ್15ರಲ್ಲಿ ವೈಲ್ಡ್‌ ಕಾರ್ಡ್‌ ಸ್ಪರ್ಧಿಯಾಗಿ (Wildcard contestant) ಆಗಮಿಸಿದ್ದರು ಆದರೆ ರಾಕೇಶ್‌ಗೆ ಕಿಡ್ನಿ ಸ್ಟೋನ್ (Kidney Stone) ಆಗಿದ್ದ ಕಾರಣ ಅರ್ಧದಲ್ಲಿ ಮನೆಯಿಂದ ಹೊರ ಬಂದರು. ಹೀಗಾಗಿ ರಾಕೇಶ್ ಅಭಿಮಾನಿಗಳು ಕೂಡ ಕಾಮೆಂಟ್ ಮಾಡುತ್ತಿದ್ದಾರೆ. 'ಶಮಿತಾ ಹಿಂತಿರುಗಿ ಬರುತ್ತಾರೆ ಅಂದ್ರೆ ರಾಕೇಶ್ ಕೂಡ ಬರಬೇಕು. ಅವರಿಗೆ ಒಂದು ನ್ಯಾಯ ಇವರಿಗೆ ಒಂದು ನ್ಯಾಯ ಯಾಕೆ?' ಎಂದು ನೆಟ್ಟಿಗರು ಪ್ರಶ್ನೆ ಮಾಡಿದ್ದಾರೆ. ಅಲ್ಲದೆ #ShaRa ಎಂದು ಟ್ಟಿಟರ್‌ನಲ್ಲಿ ಟ್ರೆಂಡ್ ಕ್ರಿಯೇಟ್ ಮಾಡುತ್ತಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ರಗಡ್‌ ಕಾಪ್‌, ಮ್ಯಾಕ್ಸಿಮಮ್‌ ಮಾಸ್‌.. 'ಮಾರ್ಕ್' ಕಥೆ ಬಗ್ಗೆ ಸ್ಫೋಟಕ ಸತ್ಯ ಬಿಚ್ಚಿಟ್ಟ ಕಿಚ್ಚ ಸುದೀಪ್!
ನನ್ನ ತಂದೆ ಕೂಡ ಗುಮ್ಮಡಿ ನರಸಯ್ಯ ಅವರಂತೆಯೇ ಜನರ ಸೇವೆ ಮಾಡಿದವರು: ನಟ ಶಿವಣ್ಣ ಹೇಳಿದ್ದೇನು?