Couple Goals: ನಿನ್ನ ಬಿಟ್ಟಿರಲಾರೆ ಅಂತಾರೆ ಕತ್ರೀನಾ, ಗಂಡನ ಜೊತೆ ಶೂಟಿಂಗ್ ಸೆಟ್‌ನಲ್ಲಿ ನಟಿ

By Suvarna News  |  First Published Jan 17, 2022, 11:54 AM IST
  • Couple Goals: ನಿನ್ನ ಬಿಟ್ಟಿರಲಾರೆನು ಅಂತಿದ್ದಾರೆ ಕತ್ರೀನಾ ಕೈಫ್
  • ಗಂಡನ ಜೊತೆಗೇ ಶೂಟಿಂಗ್ ಸೆಟ್‌ಗೆ ಹೋದ ನಟಿ

ನಟಿ ಕತ್ರೀನಾ ಕೈಫ್(Katrina Kaif) ಇಂದೋರ್‌(Indore)ನಲ್ಲಿದ್ದಾರೆ. ಹೌದು, ಮುಂಬೈನಲ್ಲಿರುವ ನಟಿ ಸಡನ್ನಾಗಿ ಇಂದೋರ್‌ಗೆ ಹೋಗೋಕೆ ಕಾರಣ ಪತಿ ವಿಕ್ಕಿ ಕೌಶಲ್(Vicky Kaushal). ಸಾರಾ ಅಲಿ ಖಾನ್ ಜೊತೆ ಮುಂದಿನ ಸಿನಿಮಾ ಶೂಟಿಂಗ್ ಮಾಡುತ್ತಿರುವ ವಿಕ್ಕಿ ಕೌಶಲ್ ಅವರಿಗೆ ಕಂಪನಿ ಕೊಟ್ಟಿದ್ದಾರೆ ಕತ್ರೀನಾ. ಪತಿಯ ಶೂಟಿಂಗ್(Shooting) ನಡೆಯುವ ಸ್ಥಳಕ್ಕೆ ಕತ್ರೀನಾ ಕೂಡಾ ಹೋಗಿದ್ದಾರೆ. ಈ ಮೂಲಕ ವಿಕ್ಕಿಯನ್ನು ಬಿಟ್ಟಿರೋಕಾಗಲ್ಲ ಅಂದಿದ್ದಾರೆ ನಟಿ. ಭಾನುವಾರ ಒಂದಷ್ಟು ಸೆಲ್ಫೀಗಳನ್ನು ಶೇರ್ ಮಾಡಿದ ನಟಿ ಇಂದೋರ್‌ನಲ್ಲಿದ್ದೇನೆ ಎಂದು ಕ್ಯಾಪ್ಶನ್ ಕೊಟ್ಟಿದ್ದಾರೆ.

ಬ್ರೈಟ್ ರೆಡ್ ಡ್ರೆಸ್ ಧರಿಸಿದ್ದ ನಟಿ ಸುಂದರವಾಗಿ ಕಾಣುತ್ತಿದ್ದರು. ನಟಿ ಮುಖದಲ್ಲಿ ಖುಷಿಯ ಕಳೆಯನ್ನು ಸ್ಪಷ್ಟವಾಗಿ ಕಾಣಬಹುದು. ನೆಟ್ಟಿಗರು ಕಮೆಂಟ್ ಮಾಡಿ ನಿಮ್ಮ ಮುಖದಲ್ಲಿ ಕಳೆ ಹಾಗೂ ಸಂತಸವನ್ನು ಕಾಣುತ್ತಿದ್ದೇವೆ ಎಂದಿದ್ದಾರೆ. ಇನ್ನೊಬ್ಬರು ಖುಷಿ ಹಾಗೂ ಕ್ಯೂಟ್‌ನೆಸ್‌ನ ಬಂಡಲ್ ಎಂದಿದ್ದಾರೆ. ಇನ್ನೋ ಕೆಲವು ವಿಕ್ಕಿ ಅಭಿಮಾನಿಗಳು ಕಮೆಂಟ್ ಮಾಡಿ ವಿಕ್ಕಿಯನ್ನು ಚೆನ್ನಾಗಿ ನೋಡ್ಕೊಳ್ಳಿ ಎಂದಿದ್ದಾರೆ.

Tap to resize

Latest Videos

undefined

ಪತಿಯ ತೋಳಲ್ಲಿ ಕತ್ರೀನಾ ಹ್ಯಾಪಿ ಸೆಲ್ಫಿ..!

ಕತ್ರಿನಾ ಅವರು ವಿಕ್ಕಿಯೊಂದಿಗೆ ಲೋಹ್ರಿಯನ್ನು ಆಚರಿಸುತ್ತಿರುವ ಸಂತೋಷದ ಫೋಟೋಗಳನ್ನು ಶೇರ್ ಮಾಡಿದ್ದಾರೆ. ಈ ತಿಂಗಳ ಆರಂಭದಲ್ಲಿ ಇಬ್ಬರೂ ತಮ್ಮ ಮದುವೆಯ ಒಂದು ತಿಂಗಳ ಸಂಭ್ರಮವನ್ನು ಆಚರಿಸಿದರು. 'Happppyyyyy one month my heart' ಎಂಬ ಶೀರ್ಷಿಕೆಯೊಂದಿಗೆ ಸೆಲ್ಫಿಯನ್ನು ಕತ್ರಿನಾ ಹಂಚಿಕೊಂಡಿದ್ದಾರೆ. ವಿಕ್ಕಿ ಮತ್ತು ಕತ್ರಿನಾ ಡಿಸೆಂಬರ್‌ನಲ್ಲಿ ವಿವಾಹವಾದರು.

ಕೆಲಸದ ವಿಚಾರವಾಗಿ ವಿಕ್ಕಿ ಅವರು ಸಾರಾ ಅಲಿ ಖಾನ್ ಅವರೊಂದಿಗೆ ತಮ್ಮ ಮುಂದಿನ ಚಿತ್ರೀಕರಣದಲ್ಲಿದ್ದಾರೆ. ಹೆಸರಿಡದ ಈ ಪ್ರಾಜೆಕ್ಟ್‌ನ್ನು ಮಿಮಿ ಖ್ಯಾತಿಯ ಲಕ್ಷ್ಮಣ್ ಉಟೇಕರ್ ನಿರ್ದೇಶಿಸುತ್ತಿದ್ದಾರೆ ಎಂದು ಹೇಳಲಾಗಿದೆ. ಮತ್ತೊಂದೆಡೆ, ಕತ್ರಿನಾ ಕೊನೆಯದಾಗಿ ಸೂರ್ಯವಂಶಿಯಲ್ಲಿ ಕಾಣಿಸಿಕೊಂಡರು. ಅವರು ನಿರ್ದೇಶಕ ಶ್ರೀರಾಮ್ ರಾಘವನ್ ಅವರ ಹೊಸ ಚಿತ್ರವಾದ ಮೆರ್ರಿ ಕ್ರಿಸ್‌ಮಸ್‌ನಲ್ಲಿ ವಿಜಯ್ ಸೇತುಪತಿ ಜೊತೆ ಕೆಲಸವನ್ನು ಪ್ರಾರಂಭಿಸಿದ್ದಾರೆ. ನಟ ಟೈಗರ್ 3 ಮತ್ತು ಜೀ ಲೆ ಜರಾದಲ್ಲಿ ಕೂಡ ನಟಿಸಿದ್ದಾರೆ. ಟೈಗರ್ 3 ಚಿತ್ರದಲ್ಲಿ ಸಲ್ಮಾನ್ ಖಾನ್ ನಟಿಸಿದರೆ, ಜೀ ಲೆ ಜರಾದಲ್ಲಿ, ಕತ್ರಿನಾ ಪ್ರಿಯಾಂಕಾ ಚೋಪ್ರಾ ಮತ್ತು ಆಲಿಯಾ ಭಟ್ ಅವರೊಂದಿಗೆ ಪರದೆಯನ್ನು ಹಂಚಿಕೊಂಡಿದ್ದಾರೆ. ಈ ಚಿತ್ರವನ್ನು ಫರ್ಹಾನ್ ಅಖ್ತರ್ ನಿರ್ದೇಶಿಸಲಿದ್ದಾರೆ.

ಕಾಮನ್‌ ಫ್ರೆಂಡ್‌ ಮನೆಯಲ್ಲಿ ಶುರುವಾದ ವಿಕ್ಕಿ - ಕತ್ರಿನಾ ಲವ್‌ ಸ್ಟೋರಿ

ಇಂದೋರ್ ಶೂಟಿಂಗ್ ವೇಳೆಯೇ ಕೇಸ್ ದಾಖಲು

ಇತ್ತೀಚೆಗಷ್ಟೇ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಬಾಲಿವುಡ್ ನಟ ವಿಕ್ಕಿ ಕೌಶಲ್(Vicky Kaushal) ಈಗ ಕೇಸ್‌ನಲ್ಲಿ ಸಿಕ್ಕಿಹಾಕಿಕೊಂಡಿದ್ದರು. ನಟಿ ಕತ್ರೀನಾ ಕೈಫ್(Katrina Kaif) ಅವರನ್ನು ವರಿಸಿದ ನಟ ವಿಕ್ಕಿ ವಿರುದ್ಧ ಇಂದೋರ್‌ನ ನಿವಾಸಿಯೊಬ್ಬರು ಕೇಸು ದಾಖಲಿಸಿದ್ದಾರೆ. ತಮ್ಮ ನಂಬರ್ ಪ್ಲೇಟ್‌ನ್ನು ಸಿನಿಮಾದಲ್ಲಿ ವಿಕ್ಕಿ ಕೌಶಲ್ ಬಳಸಿಕೊಂಡಿದ್ದಾರೆ ಎಂದು ವ್ಯಕ್ತಿ ಆರೋಪಿಸಿದ್ದಾರೆ. ಬಾಲಿವುಡ್ (Bollywood) ನಟಿ ಸಾರಾ ಅಲಿ ಖಾನ್(Sara Ali Khan) ಜೊತೆಗೆ ವಿಕ್ಕಿ ಕೌಶಲ್ ಬೈಕ್ ರೈಡ್(Bike Ride) ಮಾಡುತ್ತಿರುವಾಗ ತೆಗೆದಿರುವ ಫೋಟೋ ಪೋಸ್ಟ್ ಮಾಡಿದ ವ್ಯಕ್ತಿ ಅದರಲ್ಲಿರುವ ನಂಬರ್ ಪ್ಲೇಟ್(Number Plate) ತಮ್ಮದು ಎಂದು ಹೇಳಿದ್ದಾರೆ. ಫೋಟೋ ಹಾಗೂ ದಾಖಲೆ ಸಮೇತ ಕೇಸು ದಾಖಲಿಸಲಾಗಿದೆ.

 
 
 
 
 
 
 
 
 
 
 
 
 
 
 

A post shared by Katrina Kaif (@katrinakaif)

ದೂರು ನೀಡಿದ ಜೈ ಸಿಂಗ್ ಯಾದವ್ ಅವರು ಈ ಬಗ್ಗೆ ಪ್ರತಿಕ್ರಿಯಿಸಿ, ಸಿನಿಮಾದಲ್ಲಿ ಬಳಸಿರುವ ವಾಹನದ ನಂಬರ್ ನನ್ನದು. ಇದು ಸಿನಿಮಾ ತಂಡಕ್ಕೆ ತಿಳಿದಿದೆಯಾ ಇಲ್ಲವಾ ಎಂಬುದು ಗೊತ್ತಿಲ್ಲ. ಆದರೆ ಇದು ಕಾನೂನು ಪ್ರಕಾರ ತಪ್ಪು. ನನ್ನ ನಂಬರ್ ಪ್ಲೇಟ್ ನಂಬರನ್ನು ನನ್ನ ಅನುಮತಿ ಇಲ್ಲದೆ ಬಳಸಬಾರದು. ನಾನು ಈ ಬಗ್ಗೆ ದೂರು ಕೊಟ್ಟಿದ್ದೇನೆ. ಈ ವಿಚಾರವಾಗಿ ಕ್ರಮ ಕೈಗೊಳ್ಳಬೇಕು ಎಂದಿದ್ದಾರೆ.

click me!