Puppy Movie: ಉತ್ತರ ಕರ್ನಾಟಕದವರೇ ಅಭಿನಯಿಸಿ, ನಿರ್ಮಿಸಿದ ಪಪ್ಪಿ ಚಿತ್ರ ನಾಳೆ ತೆರೆಗೆ

Published : Apr 30, 2025, 04:34 AM ISTUpdated : Apr 30, 2025, 04:52 AM IST
Puppy Movie: ಉತ್ತರ ಕರ್ನಾಟಕದವರೇ ಅಭಿನಯಿಸಿ, ನಿರ್ಮಿಸಿದ ಪಪ್ಪಿ ಚಿತ್ರ ನಾಳೆ ತೆರೆಗೆ

ಸಾರಾಂಶ

ಕೊಪ್ಪಳದ ಜಗದೀಶ, ಸಿಂಧನೂರಿನ ಆದಿತ್ಯ ಅಭಿನಯದ ಪಪ್ಪಿ ಚಿತ್ರ ಮೇ 1ರ ಗುರುವಾರ ಬಿಡುಗಡೆಯಾಗುತ್ತಿದೆ. ಅಪ್ಪಟ ಉತ್ತರ ಕರ್ನಾಟಕದ ಭಾಷೆ ಒಳಗೊಂಡ ಕೌಟುಂಬಿಕ ಚಿತ್ರ ಇದಾಗಿದೆ ಎಂದು ಚಿತ್ರದ ನಿರ್ದೇಶಕ ಆಯೂಷ್ ಮಲ್ಲಿ ತಿಳಿಸಿದ್ದಾರೆ.

ಹುಬ್ಬಳ್ಳಿ (ಏ.30): ಕೊಪ್ಪಳದ ಜಗದೀಶ, ಸಿಂಧನೂರಿನ ಆದಿತ್ಯ ಅಭಿನಯದ ಪಪ್ಪಿ ಚಿತ್ರ ಮೇ 1ರ ಗುರುವಾರ ಬಿಡುಗಡೆಯಾಗುತ್ತಿದೆ. ಅಪ್ಪಟ ಉತ್ತರ ಕರ್ನಾಟಕದ ಭಾಷೆ ಒಳಗೊಂಡ ಕೌಟುಂಬಿಕ ಚಿತ್ರ ಇದಾಗಿದೆ ಎಂದು ಚಿತ್ರದ ನಿರ್ದೇಶಕ ಆಯೂಷ್ ಮಲ್ಲಿ ತಿಳಿಸಿದ್ದಾರೆ.

ಮಂಗಳವಾರ ಚಿತ್ರದ ಕುರಿತಂತೆ ಸುದ್ದಿಗೋಷ್ಠಿಯಲ್ಲಿ ಅವರು ಮಾಹಿತಿ ನೀಡಿದರು.
ಚಿತ್ರದ ಟ್ರೇಲರ್ ಈಗಾಗಲೇ ಜನಮೆಚ್ಚಿದ್ದು, ನಟ ರಾಣಾ ದಗ್ಗುಬಾಟಿ ಟ್ರೇಲರ್‌ ಮೆಚ್ಚಿ ತೆಲಗು ಭಾಷೆಯ ಹಕ್ಕುಗಳನ್ನು ಖರೀದಿಸಿದ್ದಾರೆ. ಉತ್ತರ ಕರ್ನಾಟದ ಜವಾರಿ ಭಾಷೆಯ 'ಪಪ್ಪಿ' ಮೂಲಕ ಉತ್ತಮವಾದ ಕಥೆಯೊಂದನ್ನು ಹೇಳುವುದಕ್ಕೆ ಹೊರಟಿರುವ ಯುವ ಪ್ರತಿಭೆಗಳಿಗೆ ನಟ ಧ್ರುವ ಸರ್ಜಾ ಸಾಥ್‌ ಕೊಟ್ಟಿದ್ದಾರೆ. 

ಇದನ್ನೂ ಓದಿ: ಕನ್ನಡಿಗರ ನಿದ್ದೆ ಕೆಡಿಸಿದೆ ಮಲೈಕಾ ಎಂಬ ಮಸ್ತಾನಿಯ ಕಣ್ಣೋಟ

ಸಿನಿಮಾವನ್ನು ಅವರು ಅರ್ಪಿಸುತ್ತಿದ್ದು, ಇಬ್ಬರು ಚಿಕ್ಕ ಹುಡುಗರು ಹಾಗೂ ಒಂದು ಶ್ವಾನದ ಸುತ್ತ ಚಿತ್ರದ ಕಥೆ ಸಾಗುತ್ತದೆ. ಕೇವಲ 15 ದಿನದಲ್ಲಿ ಚಿತ್ರೀಕರಣಗೊಂಡ ಚಿತ್ರ ರಾಜ್ಯಾದ್ಯಂತ ತೆರೆ ಕಾಣಲಿದ್ದು, 'ಸಿನೆಮಾದ ಕಾಲ ಕೆಟ್ಟೈತಂತ' ಹಾಡು ಈಗಾಗಲೇ ಯೂಟ್ಯೂಬ್‌ನಲ್ಲಿ ಸದ್ದು ಮಾಡುತ್ತಿದೆ. ಜನತೆ ಉತ್ತರ ಕರ್ನಾಟಕದವರ ಚಿತ್ರ ನೋಡಿ ಪ್ರೋತ್ಸಾಹಿಸುವಂತೆ ಆಯುಷ್ ಮಲ್ಲಿ ಕೋರಿದರು.

ಬಾಲ ಕಲಾವಿದರಾದ ಜಗದೀಶ ಮತ್ತು ಆದಿತ್ಯ ಮಾತನಾಡಿ, ಚಿತ್ರೀಕರಣ ವೇಳೆ ತಮಗಾದ ಅನುಭವ ಬಿಚ್ಚಿಟ್ಟರು. ಅಲ್ಲದೇ ಕುಟುಂಬ ಸಮೇತ ಚಿತ್ರ ನೋಡಿ ಹರಸುವಂತೆ ಕೋರಿದರು.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಕೊಳಕು ಪ್ಯಾಂಟ್‌ ಬಗ್ಗೆ ಮಾತನಾಡಿದ್ರು, ಮೊಮ್ಮಗನ ಸಿನಿಮಾಕ್ಕೆ ಸಮಸ್ಯೆ ತಂದ್ರು: Jaya Bachchan ಬಾಯ್ಕಾಟ್‌ ಆಗ್ತಾರಾ?
ಅತ್ತ ಪಂಚೆ ಉದುರಿ ಹೋಗುತ್ತಿದೆ.. ಇತ್ತ ಕುಣಿದು ಕುಪ್ಪಳಿಸಿ ಇಳಯರಾಜಾ ಕಂಪೋಸ್ ಮಾಡಿದ ಮಜವಾದ ಹಾಡು ಯಾವುದು?