ಪುನೀತ್ 'PRK' ಬ್ಯಾನರ್ ನಿಂದ ಹೊಸ ಸಿನಿಮಾ ಘೋಷಣೆ; ಇಲ್ಲಿದೆ ವಿವರ

Published : Apr 06, 2022, 03:24 PM IST
ಪುನೀತ್ 'PRK' ಬ್ಯಾನರ್ ನಿಂದ ಹೊಸ ಸಿನಿಮಾ ಘೋಷಣೆ; ಇಲ್ಲಿದೆ ವಿವರ

ಸಾರಾಂಶ

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್(Puneeth Rajkumar) ಅವರ ಪಿ ಆರ್ ಕೆ ಪ್ರೊಡಕ್ಷನ್ಸ್ (PRK Productions)ನಿಂದ ಹೊಸ ಸಿನಿಮಾ ಘೋಷಣೆಯಾಗಿದೆ. ಅಪ್ಪು ನಿಧನದ ಬಳಿಕ ಪಿ ಆರ್ ಕೆ ಬ್ಯಾನರ್ ನಿಂದ ಅನೌನ್ಸ್ ಮೊದಲ ಸಿನಿಮಾ ಇದಾಗಿದೆ. 

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್(Puneeth Rajkumar) ಅವರ ಪಿ ಆರ್ ಕೆ ಪ್ರೊಡಕ್ಷನ್ಸ್ (PRK Productions)ನಿಂದ ಹೊಸ ಸಿನಿಮಾ ಘೋಷಣೆಯಾಗಿದೆ. ಅಪ್ಪು ನಿಧನದ ಬಳಿಕ ಪಿ ಆರ್ ಕೆ ಬ್ಯಾನರ್ ನಿಂದ ಅನೌನ್ಸ್ ಮೊದಲ ಸಿನಿಮಾ ಇದಾಗಿದೆ. ಈ ಬ್ಯಾನರ್ ನಲ್ಲಿ ಈಗಾಗಲೇ ಹಲವು ಚಿತ್ರಗಳು ತೆರೆಕಂಡಿದ್ದು ಸೂಪರ್ ಹಿಟ್ ಆಗಿವೆ. ಯುವ ಪ್ರತಿಭೆಗಳಿಗೆ ಬೆನ್ನೆಲುಬಾಗಿ ನಿಲ್ಲುವ ಪಿ ಆರ್ ​ಕೆ ಪ್ರೊಡಕ್ಷನ್ಸ್ ಇದೀಗ ಮತ್ತೊಂದು ವಿಭಿನ್ನ ಸಿನಿಮಾ ಮೂಲಕ ಬರ್ತಿದೆ. ಈ ಬಗ್ಗೆ ನಿರ್ಮಾಪಕಿ ಅಶ್ವಿನಿ ಪುನೀತ್ ರಾಜ್ ​ಕುಮಾರ್ ಟ್ವೀಟ್ ಮಾಡಿ ಹೊಸ ಸಿನಿಮಾದ ಬಗ್ಗೆ ಬಹಿರಂಗ ಪಡಿಸಿದ್ದಾರೆ.

ವಿಶೇಷವೆಂದರೆ ಹೊಸ ಚಿತ್ರದ ಮೂಲಕ ಹಲವು ಹೊಸ ಪ್ರಯತ್ನಕ್ಕೆ ಸಂಸ್ಥೆ ಮುಂದಾಗಿದೆ. ಅಂದಹಾಗೆ ಚಿತ್ರಕ್ಕೆ ಆಚಾರ್ & ಕೋ.(Achar & Co.) ಎಂದು ವಿಭಿನ್ನ ಟೈಟಲ್ ಇಡಲಾಗಿದೆ. ಇದು ರೆಟ್ರೋ ಶೈಲಿಯಲ್ಲಿ ಮೂಡಿಬರುತ್ತಿದೆ ಎನ್ನುವ ಸುಳಿವು ನೀಡಿದೆ ಸಿನಿಮಾತಂಡ. ಈ ಬಗ್ಗೆ ಅಶ್ವಿನಿ ಪುನೀತ್ ರಾಜ್ ಕುಮಾರ್ ಮಾಹಿತಿ ನೀಡಿದ್ದು, 60ರ ದಶಕದ ಬೆಂಗಳೂರಿನಲ್ಲಿ ನಡೆಯುವ ಕಧೆ ಇದಾಗಿರಲಿದೆ ಎಂದಿದ್ದಾರೆ. ಅಂದಹಾಗೆ ಇದು ಪಿ ಆರ್ ಕೆ ಬ್ಯಾನರ್ ನಲ್ಲಿ ತಯಾರಾಗುತ್ತಿರುವ ಮೊದಲ ಮಹಿಳಾ ನಿರ್ದೇಶನದ ಚಿತ್ರವಾಗಿದೆ.

'ನಮ್ಮ ಪಿ.ಆರ್.ಕೆ. ಪ್ರೊಡಕ್ಷನ್ಸ್ ನ 10 ನೇ ಚಿತ್ರ ಆಚಾರ್ & ಕೋ.ದ ಮೂಲಕ 60ನೇ ದಶಕದ ಬೆಂಗಳೂರನ್ನು ನಿಮ್ಮ ಮುಂದೆ ತರಲು ಒಂದು ಪ್ರಯತ್ನ. ಇದು ನಮ್ಮ ಸಂಸ್ಥೆಯಿಂದ ಮಹಿಳಾ ನಿರ್ದೇಶನದ ಮೊದಲ ಚಿತ್ರವಾಗಿದ್ದು, ಮುಂಚೂಣಿಯಲ್ಲಿ ಹಲವಾರು ಮಹಿಳೆಯರನ್ನು ಸಹ ಒಳಗೊಂಡಿದೆ' ಎಂದು ಹೇಳಿದ್ದಾರೆ.

ಅಪ್ಪು ಆಭಿಮಾನಿಗಳಿಗೆ ಪತ್ರ ಬರೆದ ಅಶ್ವಿನಿ ಪುನೀತ್‌ ರಾಜ್ ಕುಮಾರ್!

ಚಿತ್ರಕ್ಕೆ ಸಿಂಧು ಶ್ರೀನಿವಾಸ ಮೂರ್ತಿ ನಿರ್ದೇಶನ ಮಾಡುತ್ತಿದ್ದಾರೆ. ಇದು ಸಿಂಧು ನಿರ್ದೇಶನದ ಮೊದಲ ಸಿನಿಮಾವಾಗಿದೆ. ಬಿಂದು ಮಾಲಿನಿ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ. ಬಿಂದು ಮಾಲಿನಿ ಈಗಾಗಲೇ ಹಲವು ಸಿನಿಮಾಗಳಿಗೆ ಸಂಗೀತ ಸಂಯೋಜನೆ ಮಾಡಿದ್ದು, ರಾಷ್ಟ್ರಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ. ಇದೀಗ ಪಿ ಆರ್ ಕೆ ಬ್ಯಾನರ್ ನಲ್ಲಿ ಬರ್ತಿರುವ ಸಿನಿಮಾಗೆ ಕೆಲಸ ಮಾಡುತ್ತಿರುವುದು ಅಪ್ಪು ಅಭಿಮಾನಿಗಳಿಗೆ ಸಂತಸ ತಂದಿದೆ.

ಅಂದಹಾಗೆ ಪಿ ಆರ್ ಕೆ ಬ್ಯಾನರ್ ಬಗ್ಗೆ ಹೇಳುವುದಾದರೆ ಇದು ಅಪ್ಪು ಕನಸಿನ ಕೂಸು. 2017ರಲ್ಲಿ ಸ್ಥಾಪನೆಮಾಡಲಾಯಿತು. ವಿಭಿನ್ನ, ವಿನೂತನ ಸಿನಿಮಾಗಳು ಮತ್ತು ಯುವ ಪ್ರತಿಭೆಗಳಿಗೆ ಅವಕಾಶ ನೀಡುವ ಪಿ ಆರ್ ಕೆ ಸಂಸ್ಥೆಯಿಂದ ಬಂದ ಮೊದಲ ಚಿತ್ರ ಕವಲುದಾರಿ. ಈ 2019ರಲ್ಲಿ ತೆರೆಕಂಡ ಈ ಚಿತ್ರ ದೊಡ್ಡ ಮಟ್ಟದಲ್ಲಿ ಯಶಸ್ಸು ಕಂಡಿತ್ತು. ಇನ್ನು 2020ರಲ್ಲಿ ಪಿ ಆರ್ ಕೆಯಿಂದ ಮೂರು ಚಿತ್ರಗಳು ನಿರ್ಮಾಣವಾಗಿ ರಿಲೀಸ್ ಆಗಿದ್ದವು. ಮಾಯಾಬಜಾರ್ 2016, ಲಾ ಹಾಗೂ ಫ್ರೆಂಚ್ ಬಿರಿಯಾನಿ ಚಿತ್ರಗಳು ಜನರ ಗಮನ ಸೆಳೆದಿದ್ದವು. 2022ರಲ್ಲಿ ಈ ನಿರ್ಮಾಣ ಸಂಸ್ಥೆಯ ಎರಡು ಚಿತ್ರಗಳು ನೇರವಾಗಿ ಅಮೆಜಾನ್ ಪ್ರೈಮ್​ನಲ್ಲಿ ರಿಲೀಸ್ ಆಗಿವೆ. ಫ್ಯಾಮಿಲಿ ಪ್ಯಾಕ್ ಮತ್ತು ಒನ್ ಕಟ್ ಟು ಕಟ್ ಸಿನಿಮಾ ಒಟಿಟಿಯಲ್ಲಿ ಬಿಡುಗಡೆಯಾಗಿದೆ.

ಪುನೀತ್ ರಾಜ್‌ಕುಮಾರ್ ಪುತ್ರಿಯರ ಹೆಸರಿನಲ್ಲಿ ಫ್ಯಾನ್‌ ಪೇಜ್;ಫೋಟೋ ವೈರಲ್!

ಸದ್ಯ ಪಿ ಆರ್ ಕೆಯಿಂದ ಸತ್ಯ ಪ್ರಕಾಶ್ ನಿರ್ದೇಶನದ ಮ್ಯಾನ್ ಆಫ್ ದಿ ಮ್ಯಾಚ್, ಒ2 ಹಾಗೂ ಪುನೀತ್ ಕಾಣಿಸಿಕೊಂಡಿರುವ ಗಂಧದಗುಡಿ ಸಿನಿಮಾಗಳ ಕೆಲಸ ನಡೆಯುತ್ತಿದ್ದು ಸದ್ಯದಲ್ಲೇ ಅಭಿಮಾನಿಗಳ ಮುಂದೆ ಬರಲಿದೆ. ಈ ಎಲ್ಲಾ ಚಿತ್ರಗಳ ಜೊತೆಗೆ ಇದೀಗ ಮತ್ತೊಂದು ಹೊಸ ಸಿನಿಮಾ ಅನೌನ್ಸ್ ಆಗಿರುವುದು ಅಪ್ಪು ಅಭಿಮಾನಿಗಳಿಗೆ ಸಂತಸ ತಂದಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ವೃತ್ತಿಜೀವನದಲ್ಲಿ 2 ಬಾರಿ ದೊಡ್ಡ ತಪ್ಪು ಮಾಡಿದ ರಾಮ್ ಚರಣ್.. ಚಿರಂಜೀವಿಯೂ ಏನೂ ಮಾಡಲಾಗಲಿಲ್ಲವೇ?
10 ಭಾಷೆಗಳಲ್ಲಿ 90 ಸಿನಿಮಾಗಳು, ಗಂಗೂಲಿ ಜೊತೆ ಅಫೇರ್ ವದಂತಿ.. 50 ವರ್ಷವಾದರೂ ಮದುವೆಯಾಗದ ನಟಿ ಯಾರು?