
ಡಾರ್ಲಿಂಗ್ ಕೃಷ್ಣ (Darling Krishna) ನಟನೆಯ ಮತ್ತು ನಿರ್ದೇಶನದ ಸೂಪರ್ ಹಿಟ್ ಲವ್ ಮಾಕ್ಟೇಲ್-2(Love Mocktail2) ಸಿನಿಮಾ ಟಿವಿಯಲ್ಲಿ ಬರ್ತಿದೆ. ಇದು ಬ್ಲಾಕ್ ಬಾಸ್ಟರ್ ಹಿಟ್ ಲವ್ ಮಾಕ್ಟೇಲ್(Love Mocktail) ಸಿನಿಮಾದ ಸೀಕ್ವೆಲ್ ಆಗಿದೆ. ಮೊದಲ ಭಾಗಕ್ಕೆ ಅಭಿಮಾನಿಗಳಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಗಿತ್ತು, ಜೊತೆಗೆ ಬಾಕ್ಸ್ ಆಫೀಸ್ ನಲ್ಲಿ ಒಳ್ಳೆಯ ಕಮಾಯಿ ಮಾಡಿತ್ತು. ಮೊದಲ ಭಾಗ ಸೂಪರ್ ಹಿಟ್ ಆದ ಬಳಿಕ ಅದೇ ಖುಷಿಯಲ್ಲಿ ಪಾರ್ಟ್-2 ಮಾಡಿ ಬಿಡುಗಡೆ ಮಾಡಿದ್ದರು. 2ನೇ ಭಾಗವೂ ಪ್ರೇಕ್ಷಕರಿಂದ ಉತ್ತಮ ಮೆಚ್ಚುಗೆ ಗಳಿಸಿತು. ಚಿತ್ರಮಂದಿರಗಳಲ್ಲಿ ಮತ್ತು ಒಟಿಟಿಯಲ್ಲೂ ಈ ಸಿನಿಮಾ ಸಾಕಷ್ಟು ಸದ್ದು ಮಾಡಿತ್ತು. ಇದೀಗ ಕಿರುತೆರೆಯಲ್ಲಿ ಪ್ರಸಾರವಾಗುತ್ತಿದೆ.
ಚಿತ್ರಮಂದಿರ ಮತ್ತು ಒಟಿಟಿಯಲ್ಲಿ ನೋಡಲು ಸಾಧ್ಯವಾಗದೆ ಇರುವವರು ಮನೆಯಲ್ಲೇ ಟಿವಿ ಮುಂದೆ ಕುಳಿತು ಆದಿ ಲವ್ ಸ್ಟೋರಿಯ ಮುಂದಿನ ಭಾಗ ವೀಕ್ಷಸಬಹುದು. ಮೊದಲ ಭಾಗದಲ್ಲಿ ಆದಿ (ಡಾರ್ಲಿಂಗ್ ಕೃಷ್ಣ) ಹಾಗೂ ನಿಧಿ (ಮಿಲನಾ ನಾಗರಾಜ್) ಮದುವೆ ಆಗಿತ್ತು. ಆದರೆ, ನಿಧಿ ಕ್ಯಾನ್ಸರ್ ನಿಂದ ಸಾಯುತ್ತಾಳೆ. ಆ ಬಳಿಕ ಆದಿ ಒಬ್ಬಂಟಿಯಾಗುತ್ತಾನೆ. ಆದರೆ ಆದಿ ಸ್ನೇಹಿತರು ಆದಿಗೆ ಮತ್ತೊಂದು ಮದುವೆ ಮಾಡಿಲು ಪ್ರಯತ್ನ ಪಡುತ್ತಿರುತ್ತಾರೆ. 2ನೇ ಭಾಗದಲ್ಲಿ ಆದಿ ಮತ್ತೊಂದು ಮದುವೆ ಆಗ್ತಾನಾ ಎನ್ನುವ ಕುತೂಹಲದೊಂದಿದೆ ಸಿನಿಮಾ ಮೂಡಿ ಬಂದಿತ್ತು.
ಆದಿಯ ಮುಂದುವರೆದ ಕಥೆಗೂ ಅಭಿಮಾನಿಗಳು ಫುಲ್ ಮಾರ್ಕ್ಸ್ ನೀಡಿದ್ದರು. ಚಿತ್ರಮಂದಿರದಲ್ಲಿ ದೂಳ್ ಎಬ್ಬಿಸಿದ್ದ ಲವ್ ಮಾಕ್ಟೇಲ್-2 ಬಳಿಕ ಅಮೇಜಾನ್ ಪ್ರೈಮ್ ಗೆ ಎಂಟ್ರಿ ಕೊಟ್ಟಿತ್ತು. ವಿಶೇಷ ಎಂದರೆ ಹಲವು ದಿನಗಳ ಕಾಲ ಅಮೇಜಾನ್ ಪ್ರೈಮ್ ಲ್ಲಿ ಟ್ರೆಂಡಿಂಗ್ ನಲ್ಲಿ ಇತ್ತು. ಇದೀಗ ಟಿವಿಯಲ್ಲಿ ಪ್ರಸಾರವಾಗುತ್ತಿದೆ. ಅಂದಹಾಗೆ ಸ್ಯಾಂಡಲ್ ವುಡ್ ನ ಸೂಪರ್ ಹಿಟ್ ಲವ್ ಮಾಕ್ಟೇಲ್-2 ಸಿನಿಮಾ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದೆ. ಇಂದೇ ಅಂದರೆ ಏಪ್ರಿಲ್ 6 ಸಂಜೆ ಕಿರುತೆರೆ ಪ್ರೇಕ್ಷಕರ ಮುಂದೆ ಬರ್ತಿದೆ. ಆದಿ ಮತ್ತು ನಿಧಿಮಾ ಸ್ಟೋರಿಯನ್ನು ಮನೆಮಂದಿಯಲ್ಲ ಒಟ್ಟಿಗೆ ಕುಳಿತು ನೋಡಿ ಎಂಜಾಯ್ ಮಾಡಬಹುದು.
James: ಜೇಮ್ಸ್ ಜಾತ್ರೆ ಶುರು, ಮೊದಲ ದಿನ ಮೊದಲ ಶೋ ವೀಕ್ಷಿಸಿದ ಡಾರ್ಲಿಂಗ್ ಕೃಷ್ಣ-ಮಿಲನಾ ನಾಗರಾಜ್
ಲವ್ ಮಾಕ್ಟೇಲ್ ಸಿನಿಮಾ ಡಾರ್ಲಿಂಗ್ ಕೃಷ್ಣಗೆ ದೊಡ್ಡ ಮಟ್ಟದ ಸಕ್ಸಸ್ ತಂದು ಕೊಟ್ಟ ಸಿನಿಮಾವಾಗಿದೆ. ನಿಜ ಜೀವನದ ದಂಪತಿ ಕೃಷ್ಣ ಮತ್ತು ಮಿಲನಾ ಇಬ್ಬರು ಸೇರಿ ಮಾಡಿರುವ ಸಿನಿಮಾ ಲವ್ ಮಾಕ್ಟೇಲ್. ಚಿತ್ರದಲ್ಲಿ ಅನೇಕ ವರ್ಷಗಳ ಬಳಿಕ ಈ ಸಿನಿಮಾ ಇಬ್ಬರಿಗೂ ದೊಡ್ಡ ಮಟ್ಟದ ಬ್ರೇಕ್ ತಂದುಕೊಟ್ಟಿತ್ತು. ಕೃಷ್ಣ ನಾಯಕನಾಗಿ ಮಿಂಚುವ ಜೊತೆಗೆ ನಿರ್ದೇಶನದ ಜವಾಬ್ದಾರಿಯನ್ನು ವಹಿಸಿಕೊಂಡಿದ್ದರು. ಎರಡರಲ್ಲೂ ಸಕ್ಸಸ್ ಆಗಿ ಹೊರಹೊಮ್ಮಿದ್ದಾರೆ.
ಈ ಸಿನಿಮಾ ಬಳಿಕ ಇಬ್ಬರಿಗೂ ಬೇಡಿಕೆ ಹೆಚ್ಚಾಯಿತು. ಸಾಲು ಸಾಲು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಜೊತೆಗೆ ಲವ್ ಮಾಕ್ಟೇಲ್ -2 ಮಾಡಿಯೂ ಗೆದ್ದಿದ್ದಾರೆ. ಈ ಜೋಡಿಯ ಮೇಲೆ ನಿರೀಕ್ಷೆ ಮತ್ತಷ್ಟು ಹೆಚ್ಚಾಗಿದೆ. ಮತ್ತೆ ಯಾವಾಗಾ ಸಿನಿಮಾ ಮಾಡಲಿದ್ದಾರೆ ಎಂದು ಅಭಿಮಾನಿಗಳು ಕಾಯುತ್ತಿದ್ದಾರೆ. ಆದರೆ ಈ ಬಗ್ಗೆ ಡಾರ್ಲಿಂಗ್ ಜೋಡಿ ಯಾವುದೇ ಸುಳಿವು ನೀಡಿಲ್ಲ. ಸದ್ಯ ಇಬ್ಬರೂ ಬೇರೆ ಬೇರೆ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.
Love Mocktail 2: ಡಾರ್ಲಿಂಗ್ ಕೃಷ್ಣ - ಮಿಲನಾ ರೊಮ್ಯಾಂಟಿಕ್ ಜೋಡಿ ಜನರಿಗೇಕಿಷ್ಟ?
ಇನ್ನು ಲವ್ ಮಾಕ್ಟೇಲ್-2 ಬಗ್ಗೆ ಹೇಳುವುಾದರೇ ಸಿನಿಮಾದಲ್ಲಿ ಡಾರ್ಲಿಂಗ್ ಕೃಷ್ಣ ನಾಯಕನಾಗಿ ಮಿಂಚಿದ್ದಾರೆ. ಮಿಲನಾ ನಾಗರಾಜ್, ರೇಚಲ್, ಅಮೃತಾ ಐಯ್ಯರ್ ನಾಯಕಿಯರಾಗಿ ಕಾಣಿಸಿಕೊಂಡಿದ್ದಾರೆ. ಕೃಷ್ಣ ಸ್ನೇಹಿತರ ಪಾತ್ರದಲ್ಲಿ ಮೋಡಿ ಮಾಡಿದ್ದ ಅಭಿಲಾಷ್ ಮತ್ತು ಖುಷಿ ಇಬ್ಬರು ಪಾರ್ಟ್-2ನಲ್ಲೂ ಮಿಂಚಿದ್ದಾರೆ. ಡಾರ್ಲಿಂಗ್ ಕೃಷ್ಣ ನಿರ್ಮಾಣದಲ್ಲಿ ಮೂಡಿಬಂದ ಪಾರ್ಟ್-2ಗೆ ನಕುಲ್ ಸಂಗತ ಸಂಯೋಜನೆ ಮಾಡಿದ್ದರು. ಸಿನಿಮಾ ಫೆಬ್ರವರಿ 11ರಂದು ಅದ್ದೂರಿಯಾಗಿ ತೆರೆಗೆ ಬಂದಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.