* ಬಿಗ್ ಬಿ ಅಮಿತಾಭ್ ಬಚ್ಚನ್ ಮತ್ತು ಪಾನ್ ಮಸಾಲ ಜಾಹೀರಾತು
* ಪಾನ್ ಮಸಾಲ ಕಂಪನಿಗೆ ಲೀಗಲ್ ನೋಟಿಸ್ ಕಳಿಸಿದ ಬಚ್ಚನ್
* ತಮ್ಮನ್ನು ಒಳಗೊಂಡ ಜಾಹೀರಾತು ಪ್ರಸಾರ ನಿಲ್ಲಿಸಿ
* ಒಪ್ಪಂದ ಮುರಿದುಕೊಂಡು ಹಣ ಹಿಂದಿರುಗಿಸಿದ್ದ ನಟ
ಮುಂಬೈ(ನ. 20) ಬಾಲಿವುಡ್(Bollywood) ಬಿಗ್ ಬಿ ಅಮಿತಾಭ್ ಬಚ್ಚನ್(Amitabh Bachchan) ಪಾನ್ ಮಸಾಲಾ(Pan Masala) ಸಂಸ್ಥೆಗೆ ಇದೀಗ ಲೀಗಲ್ ನೋಟಿಸ್ (legal notice) ಕಳಿಸಿದ್ದಾರೆ. ಒಪ್ಪಂದ ಮುರಿದುಕೊಂಡು ಸಂಭಾವನೆ ರೂಪದಲ್ಲಿ ಪಡೆದುಕೊಂಡಿದ್ದ ಹಣ ಹಿಂದಕ್ಕೆ ನೀಡಿದ್ದರೂ ಕಂಪನಿ ಮಾಧ್ಯಮಗಳಲ್ಲಿ ಅಮಿತಾಭ್ ಒಳಗೊಂಡಿರುವ ಜಾಹೀರಾತು ಪ್ರಸಾರ ಮಾಡುವುದನ್ನು ನಿಲ್ಲಿಸಿರಲಿಲ್ಲ. ಇದೇ ಕಾರಣಕ್ಕೆ ಬಚ್ಚನ್ ನೋಟಿಸ್ ಕಳುಹಿಸಿದ್ದಾರೆ.
‘Kamla Pasand’ ಪಾನ್ ಮಸಾಲ ಕಂಪನಿಗೆ ಈಗಾಗಲೇ ಲೀಗಲ್ ನೋಟಿಸ್ ಕಳುಹಿಸಲಾಗಿದೆ. ಈ ಕೂಡಲೇ ತಮ್ಮನ್ನು ಒಳಗೊಂಡಿರುವ ಜಾಹೀರಾತು ಪ್ರಸಾರ ನಿಲ್ಲಿಸಬೇಕು ಎಂದು ಅಮಿತಾಭ್ ತಿಳಿಸಿದ್ದಾರೆ. ಆದರೆ ಕಂಪನಿ ಮಾತ್ರ ಇದನ್ನು ತಲೆಗೆ ಹಾಕಿಕೊಂಡಂತೆ ಕಂಡಿಲ್ಲ. ಬಿಗ್ ಬಿ ಒಳಗೊಂಡ ಜಾಹೀರಾತನ್ನು ಪ್ರಸಾರ ಮಾಡುತ್ತಲೇ ಇದೆ.
undefined
ಬಿಗ್ ಬಿ ಪಾನ್ ಮಸಾಲ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದಕ್ಕೆ ಭಾರೀ ಟೀಕೆ ವ್ಯಕ್ತವಾಗಿತ್ತು. ಬಿಗ್ ಬಿ ಪಾನ್ ಮಸಾಲಾ ಜಾಹೀರಾತು ಹಿಂಪಡೆಯಬೇಕೆಂದು ಸೋಷಿಯಲ್ ಮೀಡಿಯಾದಲ್ಲೂ ಟ್ರೆಂಡ್ ಆಗಿತ್ತು
ಪಾನ್ ಮಸಾಲ ಜಾಹೀರಾತು ಕ್ಯಾನ್ಸಲ್: ಕಂಪನಿಗೆ ಹಣ ಮರಳಿಸಿದ ಅಮಿತಾಭ್
ರಾಷ್ಟ್ರ ತಂಬಾಕು ವಿರೋಧಿ ಸಂಘಟನೆ ಹಿರಿಯ ನಟನಲ್ಲಿ ತಂಬಾಕಿನ ಜಾಹೀರಾತು ರದ್ದುಗೊಳಿಸಲು ಮನವಿ ಮಾಡಿತ್ತು. ಪಾನ್ ಮಸಾಲವನ್ನು ಬೆಂಬಲಿಸುವ ನಟನ ನಡೆಯನ್ನು ಅಭಿಮಾನಿಗಳು ಪ್ರಶ್ನೆ ಮಾಡಿದ್ದರು.
ಅವರ ತಂಡವು ಹೇಳಿರುವಂತೆ, ಜಾಹೀರಾತು ಪ್ರಸಾರವಾದ ಕೆಲವು ದಿನಗಳ ನಂತರ, ಶ್ರೀ ಬಚ್ಚನ್ ಬ್ರ್ಯಾಂಡ್ ಅನ್ನು ಸಂಪರ್ಕಿಸಿದ್ದಾರೆ. ಕಳೆದ ವಾರ ಅದರಿಂದ ಹೊರಬಂದಿದ್ದಾರೆ. ಶ್ರೀ ಬಚ್ಚನ್ ಬ್ರಾಂಡ್‌ನೊಂದಿಗೆ ಒಪ್ಪಂದ ಮಾಡಿದಾಗ ಅದು ಸರೋಗೇಟ್ ಜಾಹೀರಾತಿನ ಅಡಿಯಲ್ಲಿ ಬರುತ್ತದೆ ಎಂದು ಅವರಿಗೆ ತಿಳಿದಿರಲಿಲ್ಲ ಎಂದು ತಿಳಿದುಬಂದಿದೆ.
ಅಭಿಮಾನಿಗಳ ಭಾವನೆಗೆ ಬೆಲೆ ನೀಡಿದ್ದ ಬಚ್ಚನ್ ಮಾಡಿಕೊಂಡಿದ್ದ ಒಪ್ಪಂದ ರದ್ದು ಮಾಡಿದ್ದರು. ಅಲ್ಲದೇ ಪಡೆದುಕೊಂಡಿದ್ದ ಸಂಭಾವನೆಯನ್ನು ಮರಳಿ ನೀಡಿದ್ದರು.
ಅಭಿಮಾನಿಯೊಬ್ಬರು ಫೇಸ್‌ಬುಕ್‌ನಲ್ಲಿ, 'ಹಲೋ ಸರ್, ನಾನು ನಿಮಗೆ ಒಂದು ಪ್ರಶ್ನೆಯನ್ನು ಕೇಳುತ್ತೇನೆ. ನೀವು ಪಾನ್ ಮಸಾಲಾ ಬ್ರಾಂಡ್ ಬಗ್ಗೆ ಜಾಹೀರಾತು ನೀಡುವ ಅವಶ್ಯಕತೆ ಏನು? ಹಾಗಾದರೆ ನಿಮ್ಮ ಮತ್ತು ಈ ಸಣ್ಣ ಕಲಾವಿದರ ನಡುವಿನ ವ್ಯತ್ಯಾಸವೇನು? ಎಂದು ನೇರವಾಗಿ ಪ್ರಶ್ನೆ ಮಾಡಿದ್ದರು.
ಇದಕ್ಕೆ ಉತ್ತರಿಸಿದ್ದ ಬಿಗ್ ಬಿ, ನಾನು ನಿಮ್ಮ ಕ್ಷಮೆ ಕೇಳುತ್ತೇನೆ. ಯಾರಾದರೂ ತಮ್ಮ ಉದ್ಯಮದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದರೆ, ನಾವು ನಮ್ಮ ವ್ಯವಹಾರದ ಬಗ್ಗೆಯೂ ಯೋಚಿಸಬೇಕು. ಈಗ, ನಾನು ಇದನ್ನು ಮಾಡಬಾರದಿತ್ತು ಎಂದು ನೀವು ಭಾವಿಸುತ್ತೀರಿ, ಆದರೆ ಇದನ್ನು ಮಾಡುವುದರಿಂದ ನನಗೆ ವೇತನ ಸಿಗುತ್ತದೆ. ನಮ್ಮ ವೃತ್ತಿಯಲ್ಲಿ ಕೆಲಸ ಮಾಡುವ ಅನೇಕ ಜನರಿದ್ದಾರೆ ಎಂದು ವಿವರಣೆ ನೀಡಿದ್ದರು.
KBC 13 - ಕೋಟಿ ಗೆದ್ದ ಈ ಗೀತಾ ಸಿಂಗ್ lifeline ಬಳಸದೇ ಗೆದ್ದಿದ್ದು, ಹೇಗೆ?
ಜಾಹೀರಾತು ಮತ್ತು ವಾಸ್ತವ: ಹಲವು ಕಂಪನಿಗಳು ಪಾನ್ ಮಸಾಲ ಮತ್ತು ಸೋಡಾ ಹೆಸರಿನಲ್ಲಿ ತಮ್ಮ ಜಾಹೀರಾತು ಪ್ರಸಾರ ಮಾಡುತ್ತವೆ. ಆದರೆ ಅವರ ಮುಖ್ಯ ಉದ್ದೇಶ ತಮ್ಮ ಬ್ರ್ಯಾಂಡ್ ನ ಗುಟ್ಕಾ, ಖೈನಿ, ಸಿಗರೇಟ್ ಜತೆಗೆ ಮದ್ಯದ ಬ್ರ್ಯಾಂಡ್ ಗಳನ್ನು ಪರಿಚಯಿಸುವುದೇ ಆಗಿರುತ್ತದೆ. ಪ್ರಮುಖ ಮಾಧ್ಯಮಗಳಲ್ಲಿ ಇಂಥ ಜಾಹೀರಾತು ಪ್ರಸಾರವಾದಾಗ ಅದರಲ್ಲಿಯೂ ಅತ್ಯುತ್ತಮ ಹೆಸರು ಸಂಪಾದನೆ ಮಾಡಿಕೊಂಡಿರುವ ನಟರು ಕಾಣಿಸಿಕೊಂಡಾಗ ವಿರೋಧ ವ್ಯಕ್ತವಾಗುವುದನ್ನು ಕಂಡಿದ್ದೇವೆ.
ಆನ್ ಲೈನ್ ಗೇಮ್; ಕರ್ನಾಟಕದಲ್ಲಿ ಬ್ಯಾನ್ ಆಗಿರುವ ಆನ್ ಲೈನ್ ಗೇಮ್ ಗಳನ್ನು ಪ್ರಚಾರ ಮಾಡಿದ್ದಕ್ಕೆ ಸ್ಯಾಂಡಲ್ ವುಡ್ ನಟ ಮತ್ತು ಕ್ರಿಕೆಟ್ ಆಟಗಾರರು ವ್ಯಾಪಕ ಟೀಕೆಗೆ ಗುರಿಯಾಗಿದ್ದರು. ಒಂದು ಹಂತದ ವಿವಾದಕ್ಕೂ ಕಾರಣವಾಗಿತ್ತು. ಶಾರುಖ್ ಖಾನ್ ಮತ್ತು ಅಜಯ್ ದೇವಗನ್ ಕಾಣಿಸಿಕೊಂಡಿರುವ ಪಾನ್ ಮಸಾಲ ಜಾಹೀರಾತು ಪ್ರಸಾರವಾಗುತ್ತಲೇ ಇರುತ್ತದೆ.