ಡಿಸೆಂಬರ್‌ನಿಂದ ಶೂಟಿಂಗ್ ಆರಂಭ; KGF 3 ಬಗ್ಗೆ ಇಂಟ್ರೆಸ್ಟಿಂಗ್ ಮಾಹಿತಿ ಬಿಚ್ಚಿಟ್ಟ ವಿಜಯ್ ಕಿರಗಂದೂರು

Published : May 14, 2022, 03:36 PM IST
ಡಿಸೆಂಬರ್‌ನಿಂದ ಶೂಟಿಂಗ್ ಆರಂಭ; KGF 3 ಬಗ್ಗೆ ಇಂಟ್ರೆಸ್ಟಿಂಗ್ ಮಾಹಿತಿ ಬಿಚ್ಚಿಟ್ಟ ವಿಜಯ್ ಕಿರಗಂದೂರು

ಸಾರಾಂಶ

ಕೆಜಿಎಫ್-3 ಯಾವಾಗ ಎನ್ನುವ ಪ್ರಶ್ನೆ ಅಭಿಮಾನಿಗಳಲ್ಲಿತ್ತು. ಇದೀಗ ಅಭಿಮಾನಿಗಳ ಕುತೂಹಲ ಮತ್ತು ಪ್ರಶ್ನೆ ನಿರ್ಮಾಪಕ ವಿಜಯ್ ಕಿರಗಂದೂರು(Vijay Kiragandur) ತೆರೆ ಎಳೆದಿದ್ದಾರೆ. ಬಹುನಿರೀಕ್ಷೆಯ ಕೆಜಿಎಫ್ 3 ಸಿನಿಮಾ ಈ ವರ್ಷದ ಕೊನೆಯಲ್ಲಿ ಅಂದರೆ ಡಿಸೆಂಬರ್ ನಲ್ಲಿ ಚಿತ್ರೀಕರಣ ಪ್ರಾರಂಭವಾಗಲಿದೆ ಎಂದು ನಿರ್ಮಾಪಕ ವಿಜಯ್ ಕಿರಗಂದೂರು ಬಹಿರಂಗ ಪಡಿಸಿದ್ದಾರೆ.

ಸದ್ಯ ಭಾರತದಾದ್ಯಂತ ಕೆಜಿಎಫ್-2 (KGF 2) ಸಿನಿಮಾದ್ದೆ ಹವಾ. ರಾಕಿಂಗ್ ಯಶ್(Yash) ಮತ್ತು ಪ್ರಶಾಂತ್ ನೀಲ್(Prashanth Neel) ಕಾಂಬಿನೇಷನ್ ನಲ್ಲಿ ಬಂದ ಕೆಜಿಎಫ್-2 ದೊಡ್ಡ ಮಟ್ಟದಲ್ಲಿ ಯಶಸ್ಸು ಕಂಡಿದೆ. ಭಾರತೀಯ ಸಿನಿಮಾರಂಗದಲ್ಲಿ ದಾಖಲೆಗಳ ಮೇಲೆ ದಾಖಲೆ ಬರೆದಿರುವ ಕೆಜಿಎಫ್-2 ವಿಶ್ವಮಟ್ಟದಲ್ಲೂ ಸದ್ದು ಮಾಡಿದೆ. ಸಿನಿಮಾ ಬಿಡುಗಡೆಯಾಗಿ ತಿಂಗಳ ಮೇಲಾದರೂ ಸಿನಿ ಪ್ರಿಯರು ಮುಗಿಬಿದ್ದು ಚಿತ್ರವೀಕ್ಷಿಸುತ್ತಿದ್ದಾರೆ. ಅನೇಕ ಚಿತ್ರಮಂದಿರಗಳಲ್ಲಿ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ. ಹಿಂದಿಯಲ್ಲಿ ಅತೀ ಹೆಚ್ಚು ಕಲೆಕ್ಷನ್ ಮಾಡಿದ 2ನೇ ಸಿನಿಮಾವಾಗಿ ಹೊರಹೊಮ್ಮಿದೆ ಕೆಜಿಎಫ್-2. ಬಾಹುಬಲಿ-2 ದಾಖಲೆ ಮುರಿಯಲು ಇನ್ನು ಕೆಲವೇ ಕೋಟಿ ಅಂತರದಲ್ಲಿದೆ.

ವಿಶ್ವಮಟ್ಟದಲ್ಲೂ 3ನೇ ಸ್ಥಾನದಲ್ಲಿದೆ ಕೆಜಿಎಫ್-2. ರಾಕಿಂಗ್ ಸ್ಟಾರ್ ಅಬ್ಬರಕ್ಕೆ ಭಾರತೀಯ ಸಿನಿಮಾರಂಗವೇ ಮಂಕಾಗಿದೆ. ಕೆಜಿಎಫ್-2 ಆರ್ಭಟ ಹಿಂದಿ ಮಂದಿಗೆ ಆಘಾತ ತಂದಿದೆ. ಎಲ್ಲಿ ನೋಡಿದ್ರು ಕೆಜಿಎಫ್-2 ಸಿನಿಮಾದೆ ಸದ್ದು. ಈ ನಡುವೆ ಇದೀಗ ಕೆಜಿಎಫ್-3(KGF 3) ಸಿನಿಮಾ ಸದ್ದು ಮಾಡುತ್ತಿದೆ. ಕೆಜಿಎಫ್ ಸರಣಿ ಮುಂದುವರೆಯಲಿದೆ ಎಂದು ಈಗಾಗಲೇ ಪ್ರಶಾಂತ್ ನೀಲ್ ಹೇಳಿದ್ದರು. ಅದರಂತೆ ಕೆಜಿಎಫ್-3 ಯಾವಾಗ ಎನ್ನುವ ಪ್ರಶ್ನೆ ಅಭಿಮಾನಿಗಳಲ್ಲಿತ್ತು. ಇದೀಗ ಅಭಿಮಾನಿಗಳ ಕುತೂಹಲ ಮತ್ತು ಪ್ರಶ್ನೆ ನಿರ್ಮಾಪಕ ವಿಜಯ್ ಕಿರಗಂದೂರು(Vijay Kiragandur) ತೆರೆ ಎಳೆದಿದ್ದಾರೆ.

ಬಹುನಿರೀಕ್ಷೆಯ ಕೆಜಿಎಫ್ 3 ಸಿನಿಮಾ ಈ ವರ್ಷದ ಕೊನೆಯಲ್ಲಿ ಅಂದರೆ ಡಿಸೆಂಬರ್ ನಲ್ಲಿ ಚಿತ್ರೀಕರಣ ಪ್ರಾರಂಭವಾಗಲಿದೆ ಎಂದು ನಿರ್ಮಾಪಕ ವಿಜಯ್ ಕಿರಗಂದೂರು ಬಹಿರಂಗ ಪಡಿಸಿದ್ದಾರೆ. ಈ ಬಗ್ಗೆ ದೈನಿಕ್ ಭಾಸ್ಕರ್‌ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿ ಕೆಜಿಎಫ್-3 ಬಗ್ಗೆ ಇಂಟ್ರಸ್ಟಿಂಗ್ ಮಾಹಿತಿ ರಿವೀಲ್ ಮಾಡಿದ್ದಾರೆ. 'ನಿರ್ದೇಶಕ ಪ್ರಶಾಂತ್ ನೀಲ್ ಸದ್ಯ ಪ್ರಭಾಸ್ ನಟನೆಯ ಸಲಾರ್ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಈ ಸಿನಿಮಾದ ಚಿತ್ರೀಕರಣ ಸದ್ಯ 30ರಿಂದ 35ರಷ್ಟು ಮುಕ್ತಾಯವಾಗಿದೆ. ಮುಂದಿನ ಶೆಡ್ಯೂಲ್ ಮುಂದಿನ ವಾರ ಪ್ರಾರಂಭವಾಗಲಿದೆ. ಈ ವರ್ಷದ ಅಕ್ಟೋಬರ್ ಅಥವಾ ನವೆಂಬರ್ ವೇಳೆಗೆ ಚಿತ್ರೀಕರಣ ಮುಗಿಯಲಿದೆ. ಬಳಿಕ ಕೆಜಿಎಫ್-3 ಪ್ರಾರಂಭವಾಗಲಿದೆ. 2024ಕ್ಕೆ ಸಿನಿಮಾವನ್ನು ಬಿಡುಗಡೆ ಮಾಡುವ ಯೋಜನೆ ಮಾಡಿದ್ದೇವೆ' ಎಂದು ನಿರ್ಮಾಪಕರು ಹೇಳಿದ್ದಾರೆ.

5.5 ಕೋಟಿಗೂ ಅಧಿಕ ಜನರಿಂದ ಕೆಜಿಎಫ್‌ 2 ವೀಕ್ಷಣೆ!

    ವಿಜಯ್ ಕಿರಗಂದೂರು ನೀಡಿದ ಮಾಹಿತಿ ಕೇಳಿ ಫ್ಯಾನ್ಸ್ ಫುಲ್ ಖುಷ್ ಆಗಿದ್ದಾರೆ. ಅಷ್ಟೆಯಲ್ಲ ಸಿನಿಮಾ ಯಾವ ರೀತಿ ಇರಲಿದೆ ಎನ್ನುವ ಸೂಚನೆಯನ್ನು ನೀಡಿದ್ದಾರೆ. 'ನಾವು ಮಾರ್ವೆಲ್ ರೀತಿಯ ವಿಶ್ವ ರಚಿಸಲಿದ್ದೇವೆ. ಸ್ಪೈಡರ್ ಮ್ಯಾನ್, ಡಾಕ್ಟರ್ ಸ್ಟ್ರೇಂಜ್ ಮತ್ತು ಹೋಮ್ ಕಮ್ಮಿಂಗ್ ಸಿನಿಮಾಗಳಂತಹ ವಿಭಿನ್ನ ಪಾತ್ರಗಳಂತೆ ನಾವು ಕೂಡ ವಿಭಿನ್ನವಾಗಿ ಚಿಂತಿಸಿದ್ದೇವೆ. ಇದು ಅತೀ ಹೆಚ್ಚು ಪ್ರೇಕ್ಷಕರನ್ನು ಸುಲಭವಾಗಿ ರೀಚ್ ಆಗಲು ಸಾಧ್ಯವಾಗುತ್ತದೆ' ಎಂದು ಹೇಳಿದ್ದಾರೆ.

    ಅಂದಹಾಗೆ ಈಗಾಗಲೇ ಕೆಜಿಎಫ್-3 ಸಿನಿಮಾದ ಪಾತ್ರವರ್ಗ ಸಿಕ್ಕಾಪಟ್ಟೆ ಚರ್ಚೆಯಾಗುತ್ತಿದೆ. ಮೂರನೇ ಭಾಗದಲ್ಲಿ ಖಳನಟನ ಪಾತ್ರಕ್ಕೆ ತೆಲುಗು ಸ್ಟಾರ್ ನಟ ರಾಣಾದಗ್ಗುಬಾಟಿ ಅವರನ್ನು ಅಪ್ರೋಚ್ ಮಾಡಲಾಗಿದೆ ಎನ್ನುವ ಮಾತು ಕೇಳಿಬರುತ್ತಿದೆ. ಆದರೆ ಬಗ್ಗೆ ಸಿನಿಮಾತಂಡಯಾವುದೇ ಅಧಿಕೃತ ಮಾಹಿತಿ ಬಹಿರಂಗ ಪಡಿಸಿಲ್ಲ. ಪಾರ್ಟ್-2ನಲ್ಲಿ ಬಾಲಿವುಡ್ ಸ್ಟಾರ್ ಕಲಾವಿದರಾದ ಸಂಜಯ್ ದತ್ ಮತ್ತು ರವೀನಾ ಟಂಡನ್ ಇದ್ದರು. ಪಾರ್ಟ್-3ನಲ್ಲಿ ಇವರೆಲ್ಲ ಇರ್ತಾರಾ ಅಥವಾ ಬೇರೆ ಬೇರೆ ಕಲಾವಿದರು ಕಾಣಿಸಿಕೊಳ್ಳುತ್ತಾರಾ ಎನ್ನುವ ಕುತೂಹಲ ಅಭಿಮಾನಿಗಳಲ್ಲಿದೆ.

    ಯಶ್ ಆ್ಯಕ್ಟಿಂಗ್ ನೋಡಿ ಓಡಿ ಹೋದ ಮಗ; ಓಡಿದ ಗಣೇಶ ಎಂದು ನಕ್ಕಿದ ಅಪ್ಪ-ಮಗಳು- ವಿಡಿಯೋ ವೈರಲ್

    ಇನ್ನು ಏಪ್ರಿಲ್ 14ರಂದು ತೆರೆಗೆ ಬಂದ ಕೆಜಿಎಫ್-2 ಸಿನಿಮಾ ಭರ್ಜರಿ ಒಪನಿಂಗ್ ಪಡೆದುಕೊಂಡಿತ್ತು. ಕನ್ನಡದ ಜೊತೆಗೆ ತಮಿಳು, ತೆಲುಗು, ಮಲಯಾಳಂ ಮತ್ತು ಹಿಂದಿಯಲ್ಲಿ ಸಿನಿಮಾ ಬಿಡುಗಡೆಯಾಗಿದ್ದು ಎಲ್ಲಾ ಭಾಷೆಯಲ್ಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಅಲ್ಲದೆ ಬಾಕ್ಸ್ ಆಫೀಸ್ ನಲ್ಲೂ ಭರ್ಜರಿ ಕಮಾಯಿ ಮಾಡಿದೆ. ಹಿಂದಿಯಲ್ಲಿ ಸಿನಿಮಾ ಬರೋಬ್ಬರಿ 420 ಕೋಟಿ ರೂ. ಗಳಿಕೆ ಮಾಡಿದೆ ಎಂದು ವರದಿಯಾಗಿದೆ.

    PREV

    ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

    Read more Articles on
    click me!

    Recommended Stories

    ರಶ್ಮಿಕಾ- ಸ್ಮೃತಿ ಇಬ್ಬರ ಎಂಗೇಜ್​ಮೆಂಟೂ ಮುರಿದುಬಿತ್ತು: ಮಂದಣ್ಣ- ಮಂಧಾನ ಹೆಸರಲ್ಲಿ ಏನಿದೆ ಗ್ರಹಚಾರ?
    ಕೊನೆಗೂ ಅದಿತಿ ರಾವ್ ಹೈದರಿ ಗುಟ್ಟು ರಟ್ಟಾಯ್ತು.. ಎಷ್ಟು ದಿನ ಅಂತ ಮುಚ್ಚಿಡೋಕಾಗುತ್ತೆ ಹೇಳಿ..!?