Priyanka chopra Favorite Food: ಬಹುತೇಕ ಭಾರತೀಯರ ನೆಚ್ಚಿನ ಆಹಾರವೇ ಪ್ರಿಯಾಂಕಾಗೂ ಇಷ್ಟ

By Suvarna News  |  First Published Dec 17, 2021, 6:45 PM IST

Priyanka chopra Favorite Food: ಬಹುತೇಕ ಭಾರತೀಯರ ಫೇವರೇಟ್ ಆಹಾರ ಯಾವುದು ? ಅದೇ ಆಹಾರ ಪ್ರಿಯಾಂಕಾಗೂ ಫೇವರೇಟ್. ಹೌದು. ದೇಸಿ ಗರ್ಲ್‌ ಇಷ್ಟಪಡೋ ಆಹಾರವಿದು


ಭಾರತೀಯರು ರುಚಿಸುವಷ್ಟು ವೈವಿಧ್ಯಮಯ ಆಹಾರ(Food) ಬೇರೆಲ್ಲೂ ಸಿಗದು. ಪ್ರತಿ ಪ್ರದೇಶದಲ್ಲೂ ಭಿನ್ನವಾದ ಅತ್ಯಂತ ರುಚಿಕಟ್ಟಾದ ಆಹಾರವನ್ನು ಭಾರತದಲ್ಲಿ ಸವಿಯಬಹುದು. ಹಾಗಾಗಿಯೇ ಭಾರತದ ಆಹಾರ ಪದ್ಧತಿ ವಿದೇಶಗಳಲ್ಲೂ ಪ್ರಸಿದ್ಧ. ದೇಸಿ ಆಹಾರಗಳನ್ನು(Desi Food) ಭಾರತೀಯರು ಮರೆಯಲಾರರು, ಹಾಗಾಗಿಯೇ ನಮ್ಮ ದೇಶದ ಉದ್ಯಮಿಗಳು ವಿದೇಶದಲ್ಲಿ ಸಕ್ಸಸ್‌ಫುಲ್ ಆಗಿ ಹೊಟೆಲ್ ಉದ್ಯಮ ನಡೆಸುತ್ತಾರೆ.

ಬಾಲಿವುಡ್(Bollywod) ನಟಿ ಪ್ರಿಯಾಂಕಾ ಚೋಪ್ರಾ ಜೋನಾಸ್(Priyanka chopra jonas) ಅವರು ದೇಸಿ ಗರ್ಲ್ ಎನ್ನುವುದರಲ್ಲಿ ನೋ ಡೌಟ್. ವಿಮಾನದಲ್ಲಿ ಚಕ್ಕಳ ಮಕ್ಕಳ ಹಾಕಿ ಕೂರುವುದರಿಂದ ತೊಡಗಿ ತಮ್ಮ ರೆಸ್ಟೋರೆಂಟ್‌ ಮೆನುವಲ್ಲಿ ಗೋಲ್ಗಪ್ಪ ಸೇರಿಸೋ ತನಕ ಅಪ್ಪಟ ದೇಸಿ ಅವರು. ಬಾಲಿವುಡ್‌ನ(Bollywood) ಯಶಸ್ವಿ ನಟಿಯಾಗಿ ಹಾಲಿವುಡ್(Hollywood) ಸೆನ್ಸೇಷನ್ ಆಗುವವರೆಗೆ, ಪ್ರಿಯಾಂಕಾ ಚೋಪ್ರಾ ಯಾವುದೇ ಅವಕಾಶ ಮಿಸ್ ಮಾಡಿಕೊಂಡಿಲ್ಲ. ಇತ್ತೀಚೆಗೆ, ಅವರು ಮೆಗಾ-ಹಿಟ್ ಫಿಲ್ಮ್ ಫ್ರ್ಯಾಂಚೈಸ್ 'ಮ್ಯಾಟ್ರಿಕ್ಸ್' ನ ಸೀಕ್ವೆಲ್‌ನಲ್ಲಿ ರೋಲ್ ಪಡೆದಿದ್ದಾರೆ. ಸಿನಿಮಾದ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ ನಟಿ. ತನ್ನ ಚಲನಚಿತ್ರ ವೃತ್ತಿಜೀವನದ ಹೊರತಾಗಿ, ಪ್ರಿಯಾಂಕಾ ಚೋಪ್ರಾ ನ್ಯೂಯಾರ್ಕ್ ನಗರದಲ್ಲಿ ತನ್ನ ಮೊದಲ ರೆಸ್ಟೋರೆಂಟ್ ಅನ್ನು ತೆರೆದಿದ್ದಾರೆ. 'ಸೋನಾ' ನಟಿಯ ಆಹಾರದ ಮೇಲಿನ ಪ್ರೀತಿಯನ್ನು ತೋರಿಸುತ್ತದೆ.

Latest Videos

ಬಾಹುಬಲಿ ಕಳಿಸಿದ ಬಿರಿಯಾನಿ ಸೂಪರ್ ಎಂದ ಬೇಬೋ

ಆಹಾರದ ಬಗ್ಗೆ ಮಾತನಾಡುತ್ತಾ ಇತ್ತೀಚೆಗೆ ಪ್ರಿಯಾಂಕ ಚೋಪ್ರಾ "ಆಸ್ಕ್ ಮಿ ಎನಿಥಿಂಗ್" ಮಾಡುವ ಮೂಲಕ ತನ್ನ ಅಭಿಮಾನಿಗಳೊಂದಿಗೆ ಸಂಪರ್ಕ ಸಾಧಿಸಲು ತನ್ನ ಬಿಡುವಿಲ್ಲದ ವೇಳಾಪಟ್ಟಿಯಿಂದ(Schedule) ಸ್ವಲ್ಪ ಬ್ರೇಕ್ ತೆಗೆದುಕೊಂಡಿದ್ದಾರೆ. ನಟಿಯ ಜೀವನ, ಅವಳ ದಿನಚರಿ ಮತ್ತು ಅವಳ ಆಹಾರದ ಬಗ್ಗೆ ಕೆಲವು ಆಸಕ್ತಿದಾಯಕ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ. ಇನ್‌ಸ್ಟಾಗ್ರಾಮ್‌ನಲ್ಲಿ 71.5 ಮಿಲಿಯನ್‌ಗಿಂತಲೂ ಹೆಚ್ಚು ಅನುಯಾಯಿಗಳನ್ನು ಹೊಂದಿರುವ ಪ್ರಿಯಾಂಕಾ ತಮ್ಮ ದೈನಂದಿನ ಜೀವನದ ಸ್ನೀಕ್ ಪೀಕ್ ನೀಡಲು ಇಷ್ಟಪಡುತ್ತಾರೆ.

undefined

'ಆಸ್ಕ್ ಮಿ ಎನಿಥಿಂಗ್' ನಲ್ಲಿ, ಆಹಾರದ ಬಗ್ಗೆ ಮೊದಲ ಪ್ರಶ್ನೆಗಳೆಂದರೆ: ನೀವು ರೂಂ ಸರ್ವೀಸ್ ಅಥವಾ ಹೊರಗಿನ ಊಟವನ್ನು ಇಷ್ಟಪಡುತ್ತೀರಾ? ಎಂದು ಕೇಳಿದಾಗ ಪ್ರಿಯಾಂಕಾ ತಕ್ಷಣವೇ ಉತ್ತರಿಸಿದ್ದಾರೆ. ಖಂಡಿತವಾಗಿಯೂ ಯಾವುದೇ ದಿನ, ರೂಮ್ ಸೇವೆ. ನಾನು ಊಟಕ್ಕೆ ಹೋಗುತ್ತೇನೆ, ಆದರೆ ಕೆಲವು ಬಾರಿ ಹೊರಗೆ ಹೋಗುತ್ತೇನೆ. ನಾನು ಟೇಕ್‌ಔಟ್, ರೂಂ ಸರ್ವೀಸ್, ಸಿನಿಮಾವನ್ನು ನೋಡುತ್ತೇನೆ. ಸಾಮಾನ್ಯವಾಗಿ ಆರಾಮದಾಯಕ ಆಹಾರ ನನಗಿಷ್ಟ. ನಾನು ಏಷ್ಯನ್ ಆಹಾರ ಇಷ್ಟಪಡುತ್ತೇನೆ. ಹಾಗಾಗಿ ಮೆನುವಿನಲ್ಲಿ ಥಾಯ್ ಇದ್ದರೆ, ಭಾರತೀಯ, ಚೈನೀಸ್, ವಿಯೆಟ್ನಾಮೀಸ್, ಕೊರಿಯನ್, ಅದು ನನ್ನ ಸುರಕ್ಷಿತ ತಾಣ ಎಂದಿದ್ದಾರೆ ನಟಿ.

ಚಿಕನ್ ಬಿರಿಯಾನಿ ಜೊತೆ ಮೊಟ್ಟೆ ತಿಂತೀರಾ..? ಹಾಗಾದ್ರೆ ಇಲ್ಲಿ ಓದಿ

ಮುಂದಿನ ಪ್ರಶ್ನೆ ಅವಳ ನೆಚ್ಚಿನ ಡ್ರಿಂಕ್ ಫುಡ್ ಬಗ್ಗೆ ಆಗಿತ್ತು. ಬ್ರೆಡ್‌ನೊಂದಿಗೆ ಏನಾದರೂ ಸರಿ. ಬರ್ಗರ್‌ಗಳು, ಪಿಜ್ಜಾ, ದೋಸೆ, ರೊಟ್ಟಿಗಳು, ಟೋಸ್ಟ್‌ನೊಂದಿಗೆ ಆಮ್ಲೆಟ್, ಟ್ಯಾಕೋ ಬೆಲ್, ಚಿಕ್-ಫಿಲ್-ಎ ಸರಿಯಾಗುತ್ತದೆ ಎಂದಿದ್ದಾರೆ. ನಂತರ ಅಭಿಮಾನಿಯೊಬ್ಬರು ನಟಿಗೆ ಅತ್ಯಂತ ಸ್ಪಷ್ಟವಾದ ಪ್ರಶ್ನೆಯನ್ನು ಕೇಳಿದ್ದಾರೆ. ಖಾರದ ಮತ್ತು ಸಿಹಿಯ ನಡುವೆ ಆಯ್ಕೆ ಮಾಡಲು ಕೇಳಿದರೆ ಇಡೀ ದಿನ ಖಾರ ತಿನ್ನುತ್ತೇನೆ ಎಂದಿದ್ದಾರೆ. ಅವಳು ನಾನು ಸಿಹಿತಿಂಡಿ ಮೆಚ್ಚುವ ಹುಡುಗಿ ಅಲ್ಲ ಎಂದು ಹೇಳಿದ್ದಾರೆ.

ನಟಿಯ ನೆಚ್ಚಿನ ಆಹಾರ ಯಾವುದು ಎಂದು ಕೇಳಿದಾಗ 90% ಭಾರತೀಯರಂತೆ ಪ್ರಿಯಾಂಕಾ ಕೂಡ ಬಿರಿಯಾನಿಯನ್ನು ಇಷ್ಟಪಡುತ್ತಾರೆ ಎಂದಿದ್ದಾರೆ. ನನ್ನ ನೆಚ್ಚಿನ ಆಹಾರವು ಏಷ್ಯನ್, ಅದರಲ್ಲೂ ಬಿರಿಯಾನಿ(Biriyani), ಇದು ಮನೆ ಭಾವನೆ ಕೊಡುತ್ತದೆ. ನೀವು ಎಲ್ಲಿದ್ದರೂ ಪರವಾಗಿಲ್ಲ, ಪ್ರತಿ ಭಾರತೀಯ ಆಹಾರಪ್ರಿಯರ ಹೃದಯಕ್ಕೆ ಬಿರಿಯಾನಿ ಮೆಚ್ಚು ಎಂದಿದ್ದಾರೆ.

click me!