Reality shows: ಬಾಲಿವುಡ್ ಸೆಲೆಬ್ರಿಟಿ ಸಂಭಾವನೆ ಪಡೆಯೋದು ಕೋಟಿಯಲ್ಲಿ, ಅದೂ ಒಂದು ಸಂಚಿಕೆಗೆ!

By Suvarna News  |  First Published Dec 17, 2021, 5:33 PM IST

ಬಾಲಿವುಡ್ ಕೆಲವು ಸೆಲೆಬ್ರಿಟಿಗಳು  ತಮ್ಮ ಚಲನಚಿತ್ರಗಳಿಂದಲೂ ಹೆಚ್ಚು ಹಣವನ್ನು ರಿಯಾಲಿಟಿ ಶೋಗಳಿಂದ ಗಳಿಸುತ್ತಾರೆ. ಯಾರ್ಯಾರು ಎಷ್ಟೆಷ್ಟು ಪಡೆಯುತ್ತಾರೆ ಎಂಬುದು ನಿಮಗೆ ಗೊತ್ತೆ?
 


ನಮ್ಮ ಬಾಲಿವುಡ್ ಸೆಲೆಬ್ರಿಟಿಗಳು ಕೇವಲ ಚಲನಚಿತ್ರಗಳಿಂದ ಮಾತ್ರ ಹಣ ಗಳಿಸುವುದಲ್ಲ. ತಮ್ಮ ಸೋಶಿಯಲ್ ಮೀಡಿಯಾ ಮತ್ತು ಖಾಸಗಿ ಕಾರ್ಯಕ್ರಮಗಳಿಂದಲೂ ಕಾಸು ಗಳಿಸುತ್ತಾರೆ. ಇದರ ಜೊತೆಗೆ ರಿಯಾಲಿಟಿ ಶೋಗಳಿಂದಲೂ ಭಾರಿ ಕಮಾಯ ಮಾಡುತ್ತಾರೆ. ಮಾಧುರಿ ದೀಕ್ಷಿತ್, ಶಿಲ್ಪಾ ಶೆಟ್ಟಿ, ಕರಣ್ ಜೋಹರ್, ಅಮಿತಾಭ್‌ ಬಚ್ಚನ್, ಸಲ್ಮಾನ್ ಖಾನ್ ಮತ್ತು ಇತರ ಅನೇಕ ಸೆಲೆಬ್ರಿಟಿಗಳು ರಿಯಾಲಿಟಿ ಶೋ ಅನ್ನು ಹೋಸ್ಟ್ ಮಾಡಲು ಅಥವಾ ತೀರ್ಪುಗಾರರಾಗಿ ಆಗಮಿಸಲು ಭಾರಿ ಶುಲ್ಕ ವಿಧಿಸುತ್ತಾರೆ. ಈ ಸೆಲೆಬ್ರಿಟಿಗಳು ಚಲನಚಿತ್ರಗಳನ್ನು ಮಾಡದಿದ್ದರೂ ರಿಯಾಲಿಟಿ ಶೋಗಳಿಂದಲೇ ಹೆಚ್ಚು ಚೆನ್ನಾಗಿ ಗಳಿಸುತ್ತಾರೆ.

ಯಾವ್ಯಾವ ಬಾಲಿವುಡ್ ಸೆಲೆಬ್ರಿಟಿಗಳು ರಿಯಾಲಿಟಿ ಶೋ ತೀರ್ಪುಗಾರರಾಗಿ ಅಥವಾ ಹೋಸ್ಟ್ ಆಗಿ ಎಷ್ಟು ಸಂಭಾವನೆ ಪಡೆಯುತ್ತಾರೆ ಎಂಬುದು ಇಲ್ಲಿದೆ.

Tap to resize

Latest Videos

1. ಶಿಲ್ಪಾ ಶೆಟ್ಟಿ ಕುಂದ್ರಾ (Shilpa Shetty Kundra) : ಸೂಪರ್ ಡ್ಯಾನ್ಸರ್ 1 ಸೀಸನ್‌ಗೆ ₹14 ಕೋಟಿ
ಶಿಲ್ಪಾ ಶೆಟ್ಟಿ ಕೆಲವು ಸಮಯದಿಂದ ರೊಯಾಲಿಟಿ ಶೋಗಳ ತೀರ್ಪುಗಾರರಾಗಿದ್ದಾರೆ. ಅವರ ಅಸಾಧಾರಣ ವ್ಯಕ್ತಿತ್ವ ಮತ್ತು ನೃತ್ಯ ಕೌಶಲ್ಯದಿಂದ, ನಾಚ್ ಬಲಿಯೆ, ಜರಾ ನಾಚ್ ಕೆ ದಿಖಾ ಮತ್ತು ಸೂಪರ್ ಡ್ಯಾನ್ಸರ್‌ಗಳಲ್ಲಿ ಕಾಣಿಸಿಕೊಂಡಿದ್ದಾರೆ. ವರದಿಗಳ ಪ್ರಕಾರ, ಶಿಲ್ಪಾ ಶೆಟ್ಟಿ ಸೂಪರ್ ಡ್ಯಾನ್ಸರ್ ಶೋನ ಒಂದು ಸೀಸನ್‌ಗೆ 14 ಕೋಟಿ ರೂಪಾಯಿ ಗಳಿಸಿದ್ದಾರೆ.

2. ಮಾಧುರಿ ದೀಕ್ಷಿತ್ (Madhuri dixit) : ನಾಚ್ ಬಲಿಯೇ ಸಂಚಿಕೆಗೆ ₹ 1 ಕೋಟಿ
ಒಂದು ಕಾಲದ ನೃತ್ಯ ರಾಣಿ ಮಾಧುರಿ ದೀಕ್ಷಿತ್ ಅವರು ಈಗ ನೃತ್ಯ ರಿಯಾಲಿಟಿ ಶೋಗಳ ಪರ್ಮನೆಂಟ್ ತೀರ್ಪುಗಾರರು. ಧಕ್-ಧಕ್ ಹುಡುಗಿ ನಾಚ್ ಬಲಿಯೆ, ಝಲಕ್ ದಿಖ್ಲಾ ಜಾ, ಡ್ಯಾನ್ಸ್ ದೀವಾನೆ ಮುಂತಾದ ಕಾರ್ಯಕ್ರಮಗಳಿಗೆ ತೀರ್ಪುಗಾರರಾಗಿದ್ದಾರೆ. ಕಾರ್ಯಕ್ರಮಕ್ಕೆ ಮಾಧುರಿ ಪ್ರತಿ ಸಂಚಿಕೆಗೆ 1 ಕೋಟಿ ರೂ. ಪಡೆಯುತ್ತಾರಂತೆ.

3. ಕರಣ್ ಜೋಹರ್ (Karan Johar): ಝಲಕ್ ದಿಖ್ಲಾ ಜಾ ಪ್ರತಿ ಸೀಸನ್‌ಗೆ ₹ 10 ಕೋಟಿ
ಬಾಲಿವುಡ್‌ನಲ್ಲಿ ಪ್ರತಿಭೆಗಳನ್ನು ತೆರೆಗೆ ತರುವುದು, ಕಾಫಿ ವಿತ್ ಕರಣ್ ಹೋಸ್ಟ್ ಮಾಡುವುದರ ಜೊತೆಗೆ, ಕರಣ್ ಅವರು ಜಲಖ್ ದಿಖ್ಲಾ ಜಾ, ಇಂಡಿಯಾಸ್ ಗಾಟ್ ಟ್ಯಾಲೆಂಟ್, ಬಿಗ್ ಬಾಸ್ (OTT) ಯಂತಹ ರಿಯಾಲಿಟಿ ಶೋಗಳನ್ನು ನಿರ್ಣಯಿಸುವುದನ್ನು ನಾವು ನೋಡಿದ್ದೇವೆ. ಕರಣ್ ಝಲಕ್ ದಿಖ್ಲಾ ಜಾ ಪ್ರತಿ ಸೀಸನ್‌ಗೆ 10 ಕೋಟಿ ರೂ. ಪಡೆಯುತ್ತಾರೆ. ಅವರ ಇತ್ತೀಚಿನ Instagram ಪೋಸ್ಟ್ ಪ್ರಕಾರ ಹೊಸ ರಿಯಾಲಿಟಿ ಶೋ ಹುನರ್ಬಾಜ್ ದೇಶ್ ಕಿ ಶಾನ್ ತೀರ್ಪುಗಾರರಾಗಿದ್ದಾರೆ.

4. ಅಮಿತಾಭ್‌ ಬಚ್ಚನ್ (Amitabh bachchan): ಕೌನ್ ಬನೇಗಾ ಕರೋಡ್‌ಪತಿಯ ಪ್ರತಿ ಸಂಚಿಕೆಗೆ ₹ 3.5 ಕೋಟಿ
ಲೆಜೆಂಡರಿ ಸ್ಟಾರ್ ಅಮಿತಾಭ್‌ ಬಚ್ಚನ್ ವರ್ಷಗಳಿಂದ ಅನೇಕ ಶೋಗಳನ್ನು ಮಾಡಿದ್ದಾರೆ. ಹಲವು ವರ್ಷಗಳಿಂದ ಕೌನ್ ಬನೇಗಾ ಕರೋಡ್‌ಪತಿ ಎಂಬ ಪ್ರಖ್ಯಾತ ರಸಪ್ರಶ್ನೆ ಕಾರ್ಯಕ್ರಮವನ್ನು ಇವರು ನಡೆಸಿಕೊಡುತ್ತಿದ್ದಾರೆ. ಬಿಗ್ ಬಿ ಶುಲ್ಕದ ಮೊತ್ತ ಮಾತ್ರ ಬೆಳೆಯುತ್ತಿದೆ. ಸೀಸನ್ 1ರಲ್ಲಿ ಅವರು ಪ್ರತಿ ಸಂಚಿಕೆಗೆ ರೂ. 25 ಲಕ್ಷಗಳನ್ನು ತೆಗೆದುಕೊಂಡರು. ಇದು ಸೀಸನ್ 11 ರ ಹೊತ್ತಿಗೆ ಪ್ರತಿ ಸಂಚಿಕೆಗೆ ರೂ 3.5 ಕೋಟಿಗಳಷ್ಟು ಆಗಿದೆ.

5. ಸಲ್ಮಾನ್ ಖಾನ್ (Salman khan): ಬಿಗ್ ಬಾಸ್ ಸಂಚಿಕೆಗೆ ₹ 8.5 ಕೋಟಿ
ಸಲ್ಮಾನ್ ಖಾನ್ ಇಲ್ಲದ ಬಿಗ್ ಬಾಸ್ ಅನ್ನು ನಾವು ಊಹಿಸಿಕೊಳ್ಳಲು ಸಾಧ್ಯವಿಲ್ಲ. ಕರಣ್ ಜೋಹರ್ ಬಿಗ್ ಬಾಸ್ OTT ಅನ್ನು ಹೋಸ್ಟ್ ಮಾಡಿದರೂ, ಸಲ್ಮಾನ್ ಖಾನ್ ಅನ್ನು ಯಾರೂ ಬದಲಾಯಿಸಲು ಸಾಧ್ಯವಿಲ್ಲ. ವರದಿಗಳ ಪ್ರಕಾರ, ಅವರು ಪ್ರಾರಂಭದಲ್ಲಿ ಪ್ರತಿ ಸಂಚಿಕೆಗೆ ರೂ 6.5 ಕೋಟಿ ವಿಧಿಸಿದರು, ನಂತರ ಅದು ರೂ. 8.5 ಕೋಟಿಗೆ ಏರಿತು ಮತ್ತು ಅವರ ಒಟ್ಟು ಸಂಭಾವನೆ 200 ಕೋಟಿ ರೂ.ಗಳು.

6. ಮಲೈಕಾ ಅರೋರಾ (Malaik Arora): ಝಲಕ್ ದಿಖ್ಲಾ ಜಾ ಸೀಸನ್‌ಗೆ ₹ 1 ಕೋಟಿ
ತನ್ನ ಅಸಾಧಾರಣ ವ್ಯಕ್ತಿತ್ವದಿಂದ ನಮ್ಮನ್ನು ಆಕರ್ಷಿಸುವುದರ ಜೊತೆಗೆ, ಮಲೈಕಾ ಇಂಡಿಯಾಸ್ ಗಾಟ್ ಟ್ಯಾಲೆಂಟ್, MTV ಸೂಪರ್ ಮಾಡೆಲ್ ಆಫ್ ದಿ ಇಯರ್, ನಾಚ್ ಬಲಿಯೆ, ಝಲಕ್ ದಿಖ್ಲಾ ಜಾ ಶೋಗಳಲ್ಲಿ ತೀರ್ಪು ನೀಡಿದ್ದಾರೆ. ಅವರು ಪ್ರಸ್ತುತ ಭಾರತದ ಅತ್ಯುತ್ತಮ ನೃತ್ಯ ತೀರ್ಪುಗಾರರಾಗಿದ್ದಾರೆ. ಮಲೈಕಾ ಝಲಕ್ ದಿಖ್ಲಾ ಜಾ ಸೀಸನ್‌ಗೆ 1 ಕೋಟಿ ರೂ.ಗಳನ್ನು ವಿಧಿಸಿದರು. ಈಗ ಪ್ರತಿ ಸಂಚಿಕೆಗೆ 8.5 ಲಕ್ಷ ರೂ. ಪಡೆಯುತ್ತಾರೆ.

7. ಹೃತಿಕ್ ರೋಷನ್ (Hrithik Roshan): ಜಸ್ಟ್ ಡ್ಯಾನ್ಸ್‌ನ ಒಂದು ಸೀಸನ್‌ಗೆ ₹ 112 ಕೋಟಿ
ನೃತ್ಯ ಪ್ರದರ್ಶನವನ್ನು ಯಾರು ಉತ್ತಮವಾಗಿ ನಿರ್ಣಯಿಸಬಹುದು? ಹೃತಿಕ್ ಬಾಲಿವುಡ್‌ನ ಅತ್ಯುತ್ತಮ ನೃತ್ಯಗಾರರಲ್ಲಿ ಒಬ್ಬರು. ಅವರು ಜಸ್ಟ್ ಡ್ಯಾನ್ಸ್ ಎಂಬ ರಿಯಾಲಿಟಿ ಶೋಗೆ ತೀರ್ಪುಗಾರರಾಗಿದ್ದರು. ಹೃತಿಕ್ ಒಂದು ಸೀಸನ್‌ಗೆ ತೀರ್ಪು ನೀಡಲು 112 ಕೋಟಿ ರೂ. ಪಡೆಯುತ್ತಾರೆ.

8. ಅನುರಾಗ್ ಬಸು (Anurag Basu): ಸೂಪರ್ ಡ್ಯಾನ್ಸರ್ ತೀರ್ಪುಗಾರರಿಗೆ ₹ 7 ಕೋಟಿ
ಬಾಲಿವುಡ್‌ನ ನನ್ನ ಮೆಚ್ಚಿನ ನಿರ್ದೇಶಕರಲ್ಲಿ ಒಬ್ಬರಾದ ಅನುರಾಗ್ ಬಸು ಸೋನಿ ಎಂಟರ್‌ಟೈನ್‌ಮೆಂಟ್‌ನಲ್ಲಿ ಸೂಪರ್ ಡ್ಯಾನ್ಸರ್ ಎಂಬ ನೃತ್ಯ ಕಾರ್ಯಕ್ರಮಕ್ಕೆ ತೀರ್ಪುಗಾರರಾಗಿದ್ದಾರೆ. ಕಾರ್ಯಕ್ರಮದ ತೀರ್ಪುಗಾರರಾಗಿ ಅನುರಾಗ್ ಬಸು 7 ಕೋಟಿ ರೂ. ಪಡೆಯುತ್ತಾರೆ.

8. ಅರ್ಚನಾ ಪೂರಣ್‌ ಸಿಂಗ್ (Archana Puran singh): ಕಾಮಿಡಿ ಸರ್ಕಸ್‌ನ ಪ್ರತಿ ಸೀಸನ್‌ಗೆ ₹ 2 ಕೋಟಿ
ಮಿಸ್ ಬ್ರಗಾಂಜಾ ಅಥವಾ ಅರ್ಚನಾ ಪುರಣ್ ಸಿಂಗ್ ಅವರು ಜಡ್ಜ್ ಮತ್ತು ಹೋಸ್ಟ್ ಮಾಡಿದ ಶೋಗಳು ಝಲಕ್ ದಿಖ್ಲಾ ಜಾ, ಕಾಮಿಡಿ ಸರ್ಕಸ್. ಅವರು ಪ್ರಸ್ತುತ ಕಪಿಲ್ ಶರ್ಮಾ ಶೋನ ಅತಿಥಿ ಸ್ಥಾನವನ್ನು ಪಡೆದಿದ್ದಾರೆ. ಕಾಮಿಡಿ ಸರ್ಕಸ್‌ನ ಪ್ರತಿ ಸೀಸನ್‌ಗೆ ಅರ್ಚನಾ ರೂ 2 ಕೋಟಿ ಗಳಿಸಿದರು. ಕಪಿಲ್ ಶರ್ಮಾ ಶೋಗಾಗಿ ಪ್ರತಿ ಸಂಚಿಕೆಗೆ ರೂ. 10 ಲಕ್ಷ ಶುಲ್ಕ ವಿಧಿಸುತ್ತಾರೆ.

Year Ender 2021: ಕತ್ರಿನಾ - ವರುಣ್‌ ಧವನ್‌ ಈ ವರ್ಷ ಮದುವೆಯಾದ ಜೋಡಿಗಳು!

9. ಶಾಹಿದ್ ಕಪೂರ್ (Shahid Kapoor): ಜಲಕ್ ದಿಖ್ಲಾ ಜಾ ಸಂಚಿಕೆಗೆ ₹ 1.75 ಕೋಟಿ
ಶಾಹಿದ್ ಅವರು 2015ರಲ್ಲಿ ಝಲಕ್ ದಿಖ್ಲಾ ಜಾಗೆ ತೀರ್ಪುಗಾರರಾಗಿದ್ದರು ಮತ್ತು ಪ್ರತಿ ಸಂಚಿಕೆಗೆ 1.75 ಕೋಟಿ ರೂ. ಗಳಿಸಿದರು.

10. ಜಾಕ್ವೆಲಿನ್ ಫರ್ನಾಂಡೀಸ್ (Jaquelin Fernades): ಝಲಕ್ ದಿಖ್ಲಾ ಜಾ ಸಂಚಿಕೆಗೆ ₹ 1.25 ಕೋಟಿ
ಬಾಲಿವುಡ್ ಸೆಲೆಬ್ರಿಟಿಗಳ ಮೆರವಣಿಗೆಯಲ್ಲಿ ಜಾಕ್ವೆಲಿನ್ ಝಲಕ್ ದಿಖ್ಲಾ ಜಾಗೆ ತೀರ್ಪು ನೀಡಿದ್ದಾರೆ. ಅವರು ಒಂಬತ್ತನೇ ಸೀಸನ್‌ಗೆ ತೀರ್ಪುಗಾರರಾಗಿದ್ದರು ಮತ್ತು ಪ್ರತಿ ಸಂಚಿಕೆಗೆ 1.25 ಕೋಟಿ ಶುಲ್ಕ ವಿಧಿಸಿದರು.

11. ಸೋನಾಕ್ಷಿ ಸಿನ್ಹಾ (Sonakshi Sinha): ನಾಚ್ ಬಲಿಯೇ ಸಂಚಿಕೆಗೆ ₹ 1 ಕೋಟಿ
ಸೋನಾಕ್ಷಿ ಸಿನ್ಹಾ ಕೂಡ ರಿಯಾಲಿಟಿ ಶೋಗಳಿಗೆ ತೀರ್ಪುಗಾರರಾಗಿದ್ದಾರೆ. ಅವರು ನಾಚ್ ಬಲಿಯೆ 8ಕ್ಕೆ ತೀರ್ಪುಗಾರರಾಗಿ ಕಾಣಿಸಿಕೊಂಡರು ಮತ್ತು ಪ್ರತಿ ಸಂಚಿಕೆಗೆ 1 ಕೋಟಿ ಶುಲ್ಕ ವಿಧಿಸಿದರು

12. ರವೀನಾ ಟಂಡನ್ (Raveena Tandon):  ಶೈನ್ ಆಫ್ ಇಂಡಿಯಾದ ಪ್ರತಿ ಸಂಚಿಕೆಗೆ ₹ 1.25 ಕೋಟಿ
ರವೀನಾ ಅವರ ಹೊಸ ನೆಟ್‌ಫ್ಲಿಕ್ಸ್ ಸರಣಿ ಆರಣ್ಯಕ್‌ನಲ್ಲಿ ಭಾಗವಹಿಸಿದ್ದಾರೆ. ಅದಲ್ಲದೆ ಅವರು ನಾಚ್ ಬಲಿಯೆ, ಶೈನ್ ಆಫ್ ಇಂಡಿಯಾದಂತಹ ಕಾರ್ಯಕ್ರಮಗಳನ್ನು ನಿರ್ಣಯಿಸಿದ್ದಾರೆ. ರವೀನಾ ಶೈನ್ ಆಫ್ ಇಂಡಿಯಾಕ್ಕಾಗಿ ಪ್ರತಿ ಸಂಚಿಕೆಗೆ 1.25 ಕೋಟಿ ಶುಲ್ಕ ವಿಧಿಸಿದ್ದಾರೆ.

Google Most Searched: ಗೂಗಲ್‌ನಲ್ಲಿ ಅತಿ ಹೆಚ್ಚು ಹುಡುಕಲ್ಪಟ್ಟ ನಟರ ಪೈಕಿ ನಮ್ಮ ಪುನೀತ್ ರಾಜ್‌ಕುಮಾರ್!

click me!