ಅಲ್ಲಿನ ಸಂದರ್ಶನಗಳಲ್ಲಿ ಭಾರತದ ಬಗ್ಗೆ, ಇಲ್ಲಿನ ಸಂಸ್ಕೃತಿ ಹಾಗು ಆಹಾರದ ಬಗ್ಗೆ ಮಾತನಾಡುವ ನಟಿ ಪ್ರಿಯಾಂಕಾ ಚೋಪ್ರಾ, ಸಂದರ್ಶನಗಳಲ್ಲಿ ಯಾಕೆ ಹಾಗೆ ಆಲ್‌ಮೋಸ್ಟ್ ಆಲ್ ಮೈ ಕಾಣಿಸುವಂತಿರುತ್ತಾರೆ?
ಬಾಲಿವುಡ್‌ನಲ್ಲಿ ಮೆರೆದು ಹಾಲಿವುಡ್‌ಗೆ ಹಾರಿ ಅಲ್ಲಿಯೇ ಸೆಟ್ಲ್ ಆಗಿರುವ ಪ್ರಿಯಾಂಕಾ ಚೋಪ್ರಾ (Priyanka Chopra) ಯಾರಿಗೆ ಗೊತ್ತಿಲ್ಲ ಹೇಳಿ? ವಿಶ್ವಸುಂದರಿ ಪಟ್ಟ ಪಡೆದು ಬಾಲಿವುಡ್ ಸಿನಿಮಾರಂಗಕ್ಕೆ ಕಾಲಿಟ್ಟವರು ನಟಿ ಪ್ರಿಯಾಂಕಾ ಚೋಪ್ರಾ. ಬಾಲಿವುಡ್ ಚಿತ್ರರಂಗದಲ್ಲಿ ಸ್ಟಾರ್ ನಟಿಯಾಗಿ ಮೆರೆದು ಸಾಕಷ್ಟು ಹೆಸರು ಮಾಡಿದ್ದಾರೆ ಪ್ರಿಯಾಂಕಾ ಚೋಪ್ರಾ. ಆದರೆ, ಅವರೇ ಹೇಳಿರುವಂತೆ ಹಿಂದಿ ಚಿತ್ರರಂಗದಲ್ಲಿ ಅವರು ಬಹಳಷ್ಟು ಅವಮಾನ ಎದುರಿಸಿದ್ದಾರೆ, ಭೇದಭಾವ ಅನುಭವಿಸಿದ್ದಾರೆ.
ಅಮೆರಿಕಾದ ಪಾಪ್ ಸಿಂಗರ್ ನಿಕ್ ಜೊನಾಸ್ ಅವರನ್ನು ಲವ್ ಮಾಡಿ, ಅವರನ್ನು ಮದುವೆಯಾದ ಬಳಿಕ ನಟಿ ಪ್ರಿಯಾಂಕಾ ಚೋಪ್ರಾ ಅವರು ಸಹಜವಾಗಿ ಅಮೇರಿಕಕ್ಕೆ ಹಾರಿದ್ದಾರೆ. ಗಂಡನೊಂದಿಗೆ ಸುಖ-ಸಂಸಾರ ಮಾಡಿಕೊಂಡಿರುವ ನಟಿ ಪ್ರಿಯಾಂಕಾ ಚೋಪ್ರಾ ಅವರು ಅಲ್ಲಿನ ಹಾಲಿವುಡ್ ಸಿನಿಮಾಗಳಲ್ಲಿ ನಟಿಸಲು ಶತಪ್ರಯತ್ನ ಮಾಡಿದ್ದಾರೆ. ಆದರೆ, ಬರೋಬ್ಬರಿ ಹತ್ತು ವರ್ಷಗಳ ಬಳಿಕ ಅಲ್ಲಿ ಅವಕಾಶ ಗಿಟ್ಟಿಸಿಕೊಂಡು ಈಗ ಹಾಲಿವುಡ್ ಚಿತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ.
ಶ್ರೀಮುರಳಿ 'ಬಘೀರ' ಮೇಲೆ ಸೈಲೆಂಟ್ ಅಟ್ಯಾಕ್? ಯಾಕಿನ್ನೂ ಪ್ರಮೋಶನ್ ಶುರುವಾಗಿಲ್ಲ?
ಇದೀಗ ಓಡಾಡುತ್ತಿರುವ ವಿಷಯ ಅದಲ್ಲ, ಬದಲಿಗೆ ಅವರ ಡ್ರೆಸ್ ಕುರಿತಾಗಿದ್ದು. ಹಾಲಿವುಡ್ ಸಂದರ್ಶಕರ ಜೊತೆ ಬಹಳಷ್ಟು ಸಂದರ್ಶನಗಳಲ್ಲಿ ಕಾಣಿಸಿಕೊಳ್ಳುವ ನಟಿ ಪ್ರಿಯಾಂಕಾ ಚೋಪ್ರಾ ಅವರು ಸರಿಯಾಗಿ ಬಟ್ಟೆ ಹಾಕಿಕೊಳ್ಳುವುದಿಲ್ಲ. ಅಲ್ಲಿನ ಸೆಲೆಬ್ರಿಟಿಗಳಿಗೆ ಅದು ಸಹಜ ಎನ್ನಬಹುದು. ಅವರು ಸಿನಿಮಾಗಳಲ್ಲೂ ನಿಜಜೀವನದಲ್ಲೂ ಕಡಿಮೆ ಬಟ್ಟೆ ತೊಟ್ಟು ಓಡಾಡುವುದನ್ನೇ ಟ್ರೆಂಡ್ ಮಾಡಿಕೊಂಡಿದ್ದಾರೆ. ಅಲ್ಲಿನ ಹವಾಮಾನ ಕೂಡ ಅದಕ್ಕೆ ಪೂರಕವಾಗಿದೆ ಎನ್ನಬಹುದು.
ಆದರೆ, ಅಲ್ಲಿನ ಸಂದರ್ಶನಗಳಲ್ಲಿ ಭಾರತದ ಬಗ್ಗೆ, ಇಲ್ಲಿನ ಸಂಸ್ಕೃತಿ ಹಾಗು ಆಹಾರದ ಬಗ್ಗೆ ಮಾತನಾಡುವ ನಟಿ ಪ್ರಿಯಾಂಕಾ ಚೋಪ್ರಾ, ಸಂದರ್ಶನಗಳಲ್ಲಿ ಯಾಕೆ ಹಾಗೆ ಆಲ್‌ಮೋಸ್ಟ್ ಆಲ್ ಮೈ ಕಾಣಿಸುವಂತೆ, ಅದರಲ್ಲೂ ಮುಖ್ಯವಾಗಿ ಎಲ್ಲಿ ಬಟ್ಟೆಯಿಂದ ಮುಚ್ಚಿಕೊಳ್ಳಬೇಕೋ ಅಲ್ಲಿ ಮುಚ್ಚಿಕೊಳ್ಳದೇ ತೆರೆದೆದೆ ಪ್ರದರ್ಶನ ಮಾಡುವುದು ಅದೆಷ್ಟು ಸರಿ ಎಂಬ ಚರ್ಚೆ ಸೋಷಿಯಲ್ ಮೀಡಿಯಾಗಳಲ್ಲಿ ಜೋರಾಗಿದೆ. ಭಾರತೀಯ ಸಂಸ್ಕೃತಿ ಬಗ್ಗೆ ಮಾತನ್ನಾಡಿದರೆ ಮಾತ್ರ ಸಾಕೇ? ಭಾರತದ ಪ್ರತಿನಿಧಿ ಎಂಬಂತಿರುವ ಪ್ರಿಯಾಂಕಾ, ಅಲ್ಲಿನವರಂತೆ ಇರಬೇಕಾ ಎಂದು ಕೆಲವರು ಪ್ರಶ್ನಿಸುತ್ತಿದ್ದಾರೆ.
ಆದರೆ, ಕಲೆವರು ನಟಿ ಪ್ರಿಯಾಂಕಾ ಚೋಪ್ರಾ ಪರವಾಗಿ ಬ್ಯಾಟ್ ಬೀಸುತ್ತಿದ್ದಾರೆ. ಅವರೀಗ ಅಮೆರಿಕಾದ ಸೊಸೆ. ಅಲ್ಲಿ ಹೇಗೆ ಬೇಕೋ ಹಾಗೆ ಇರುತ್ತಾರೆ. ಅಷ್ಟೇ ಅಲ್ಲ, ಅವರೊಬ್ಬರು ಹಾಲಿವುಡ್ ಸಿನಿಮಾ ನಟಿ, ಸೆಲೆಬ್ರಿಟಿ. ಅಲ್ಲಿನ ಸಂಪ್ರದಾಯವೇ ಮೈ ಪ್ರದರ್ಶನ ಮಾಡುವುದು, ಅದರಿಂದಲೇ ಖ್ಯಾತಿ-ಬದುಕು ನಡೆಸುವುದು. ಹೀಗಿರುವಾಗ ಪ್ರಿಯಾಂಕಾ ಚೋಪ್ರಾ ಇಲ್ಲಿರುವಂತೆ ಇದ್ದರೆ ಅವರಿಗೆ ಚಾನ್ಸ್ ಹಾಗೂ ಖ್ಯಾತಿ ಎಲ್ಲಿಂದ ಸಿಗಬೇಕು ಅಂತಿದ್ದಾರೆ ಕೆಲವರು. ಹಲವರು ಹೀಗೆ ಕೆಲವರು ಹಾಗೆ!
ನಂದೆಲ್ಲಾ ಒರಿಜಿನಲ್ ಅಂದಿದ್ರು ಜಯಪ್ರದಾ! ಆದ್ರೂ ಕೌಂಟರ್ ಕೊಡದೇ ಯಾಕೆ ಸುಮ್ನಿದ್ರು ಶ್ರೀದೇವಿ?
ಒಟ್ಟಿನಲ್ಲಿ, ನಟಿ ಪ್ರಿಯಾಂಕಾ ಚೋಪ್ರಾ ಎಲ್ಲಿದ್ದರೂ ಹೇಗಿದ್ದರೂ ಸದಾ ಸುದ್ದಿಯಲ್ಲಂತೂ ಇರುತ್ತಾರೆ. ತಮಗಿಂತ ಹಿರಿಯನಾದ ನಿಕ್ ಜೊನಾಸ್ ಅವರನ್ನು ಮದುವೆಯಾಗಿರುವ ಪ್ರಿಯಾಂಕಾ ಚೋಪ್ರಾ ಅವರು ಸದ್ಯ ಭಾರತೀಯ ಚಿತ್ರರಂಗದಲ್ಲಿ ಸಕ್ರಿಯರಾಗಿಲ್ಲ. ಅವರೇ ಹೇಳಿರುವಂತೆ, ಅವರಿಗಿನ್ನೂ ಬಾಲಿವುಡ್‌ನಲ್ಲಿ ಅವಕಾಶಗಳು ಇವೆಯಂತೆ, ಕಾಲ್‌ಶೀಟ್ ಕೇಳುತ್ತಿದ್ದಾರಂತೆ. ಆದರೆ, ತುಂಬಾ ದಿನ ಗಂಡನನ್ನು ಬಿಟ್ಟು ಶೂಟಿಂಗ್ ಸಲುವಾಗಿಯೂ ನಾನು ಹೊರಗೆ ಇರಲಾಗದು ಎನ್ನುತ್ತಾರೆ ನಟಿ ಪ್ರಿಯಾಂಕಾ ಚೋಪ್ರಾ. ಒಟ್ಟಿನಲ್ಲಿ, ಸದ್ಯ ಹಾಲಿವುಡ್‌ನಲ್ಲಿ ಹಾಯಾಗಿದ್ದಾರೆ!