ಈ ನಟಿ ಬಾಯ್​ಫ್ರೆಂಡ್​ನನ್ನು ಬಿಡಲು ಕಾರಣವಾಗಿದ್ದು ಮೂತ್ರವಂತೆ! ಕೈನಾತ್ ಹೇಳಿದ್ದೇನು ಕೇಳಿ...

By Suchethana D  |  First Published Oct 16, 2024, 3:41 PM IST

ತಮ್ಮ ಬಾಯ್​ಫ್ರೆಂಡ್​ನನ್ನು ತ್ಯಜಿಸಲು ಮೂತ್ರ ವಿಸರ್ಜನೆಯ ಕಾರಣ ಕೊಟ್ಟಿದ್ದಾರೆ ನಟಿ ಕೈನಾತ್​ ಅರೋರಾ. ಅವರು ಹೇಳಿದ್ದೇನು? 
 


ಕೆಲವೇ ವರ್ಷ ಬದುಕಿ, ಬಾಲಿವುಡ್​ನಲ್ಲಿ ಕೀರ್ತಿಯ ಶಿಖರದಲ್ಲಿ ಇರುವಾಗಲೇ ನಿಗೂಢ ಸಾವನ್ನಪ್ಪಿದ ನಟಿ ದಿವ್ಯಾ ಭಾರತಿ ಅವರ ಬಗ್ಗೆ ಸಿನಿಪ್ರಿಯರಿಗೆ ತಿಳಿದದ್ದೇ. 1993 ರಲ್ಲಿ 8 ಅಂತಸ್ತಿನ ಕಟ್ಟಡದಿಂದ ಬಿದ್ದು ಮೃತಪಟ್ಟ ದಿವ್ಯಾ ಭಾರತಿ ಸಾವು ಇಂದಿಗೂ ನಿಗೂಢವೇ.  ಆದರೆ ಅವರನ್ನೇ ಹೋಲುವ, ಅವರ ರಕ್ತ ಸಂಬಂಧಿ ನಟಿಯೊಬ್ಬರ ಬಗ್ಗೆ ಬಹುತೇಕರಿಗೆ ತಿಳಿದಿರಲಾರದು. ಅವರೇ   ರೂಪದರ್ಶಿ ಮತ್ತು ದಿವ್ಯಾ ಭಾರತಿ ಅವರ ಸೋದರ ಸಂಬಂಧಿ ಕೈನಾತ್ ಅರೋರಾ. ನಟಿ  ಕೈನಾತ್ ಅರೋರಾ ಅವರು ಬಾಲಿವುಡ್ ಬ್ಲಾಕ್‌ಬಸ್ಟರ್ ಹಾಸ್ಯ ಚಲನಚಿತ್ರ ಗ್ರ್ಯಾಂಡ್ ಮಸ್ತಿಯಲ್ಲಿ ಮಾರ್ಲೋ ಪಾತ್ರವನ್ನು ನಿರ್ವಹಿಸಿ ಜನಮನದಲ್ಲಿ ನೆಲೆಗೊಂಡವರು. ಈ ಚಿತ್ರ  100 ಕೋಟಿಗೂ ಹೆಚ್ಚು ಆದಾಯ ಮಾಡಿದೆ.  

ಇದೀಗ ನಟಿಯ ಕುರಿತು ಒಂದು ಇಂಟರೆಸ್ಟಿಂಗ್​ ವಿಷಯ ಹೊರಬಂದಿದೆ. ಅದೇನೆಂದರೆ, ಸದ್ಯ ನಟಿ ಮೂತ್ರ ವಿಸರ್ಜನ್​ ವರ್ಜಿತ್​ ಹೈ (ಮೂತ್ರ ವಿಸರ್ಜನೆ ನಿಷೇಧ) ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾದ ಕುರಿತು ಮಾತನಾಡುವ ಸಂದರ್ಭದಲ್ಲಿ ಕೈನಾತ್​ ಅವರು ತಮ್ಮ ಮಾಜಿ ಬಾಯ್​ಫ್ರೆಂಡ್​ ಬಗ್ಗೆ ಮಾತನಾಡಿದ್ದಾರೆ. ತಾವು ತಮ್ಮ ಬಾಯ್​ಫ್ರೆಂಡ್​ನನ್ನು ತೊರೆದದ್ದು ಯಾಕೆ ಎಂಬ ಬಗ್ಗೆ ಅವರು ಈ ಸಂದರ್ಶನದಲ್ಲಿ ಹೇಳಿದ್ದಾರೆ. ಅದೇನೆಂದರೆ, ನಾನು ಯಾವಾಗಲೂ ನನ್ನ ಜೊತೆ ಸ್ಯಾನಿಟೈಸರ್​ ತೆಗೆದುಕೊಂಡು ಹೋಗುತ್ತೇನೆ. ಆದರೆ ನನ್ನ ಬಾಯ್​ಫ್ರೆಂಡ್​ಗೆ ಕೆಟ್ಟ ಅಭ್ಯಾಸವಿತ್ತು. ಪಬ್ಲಿಕ್​ ಪ್ಲೇಸ್​ನಲ್ಲಿ ಮೂತ್ರ ವಿಸರ್ಜನೆ ಮಾಡುತ್ತಿದ್ದ. ಸ್ಯಾನಿಟೈಸರ್​ ಕೊಟ್ಟರೂ ಅದನ್ನು ಹಚ್ಚಿಕೊಳ್ತಿರಲಿಲ್ಲ. ಕೈಯನ್ನು ತೊಳೆದುಕೊಳ್ಳುತ್ತಾ ಇರಲಿಲ್ಲ. ಅದಕ್ಕಾಗಿಯೇ ನಾನು ಅವನನ್ನು ಬಿಟ್ಟುಬಿಟ್ಟೆ ಎಂದಿದ್ದಾರೆ.

Tap to resize

Latest Videos

undefined

ಸೈಫ್​ ಅಲಿ ಮಕ್ಕಳು, ರವೀಂದ್ರನಾಥ್​ ಟ್ಯಾಗೋರ್​ರ ಮರಿಮೊಮ್ಮಕ್ಕಳು! ಮತಾಂತರದ ಕುತೂಹಲದ ಇತಿಹಾಸ

ಇದಕ್ಕೆ ಥಹರೇವಾರಿ ಕಮೆಂಟ್ಸ್​ ಸುರಿಮಳೆಯಾಗುತ್ತಿದೆ. ಇಂಥ ಯುವತಿಗಾಗಿ ನಾನು ದಿನವೂ ಸ್ಯಾನಿಟೈಸರ್​ನಲ್ಲಿ ಸ್ನಾನ ಮಾಡಲು ಸಿದ್ಧ ಇದ್ದೇನೆ ಎಂದು ಒಬ್ಬಾತ ಹೇಳಿದರೆ, ಪಬ್ಲಿಕ್​ ಪ್ಲೇಸ್​ ಯಾಕೆ, ಇವಳು ಹೂಂ ಅಂದ್ರೆ ಮೂತ್ರ ಮಾಡೋದನ್ನೇ ಬಿಡುತ್ತೇನೆ ಎಂದು ಮತ್ತೊಬ್ಬ ಹೇಳಿದ್ದಾನೆ! ಅಂದಹಾಗೆ, ಕೈನಾತ್​ ಜೀವನದ ಕುರಿತು ಒಂದಿಷ್ಟು ಮಾಹಿತಿ ನೀಡುವುದಾದರೆ, ಈಕೆ ಹುಟ್ಟಿದ್ದು  1986 ರಂದು  ಉತ್ತರ ಪ್ರದೇಶದ ಸಹರಾನ್‌ಪುರದಲ್ಲಿ ಪಂಜಾಬಿ ಕುಟುಂಬದಲ್ಲಿ. ನಟಿ ದಿವ್ಯಾ ಭಾರ್ತಿ ಅವರ  ಸೋದರಸಂಬಂಧಿ. ಕೈನಾತ್ ಅವರು 2012 ರಲ್ಲಿ ವಯಸ್ಸಾದ ಮಹಿಳೆಯೊಬ್ಬರನ್ನು  ದತ್ತು ಪಡೆದು ಅವರನ್ನು  ನೋಡಿಕೊಳ್ಳುತ್ತಿದ್ದಾರೆ.
 
ಕೈನಾತ್ ಹಲವಾರು ಪಂಜಾಬಿ ಚಲನಚಿತ್ರಗಳಲ್ಲಿ ಕಾಣಿಸಿಕೊಂಡಿರುವ ಪ್ರಸಿದ್ಧ ಪಂಜಾಬಿ ನಟಿ. ಆಕೆ ದೊಡ್ಡ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಪಂಜಾಬಿ ಮನರಂಜನಾ ಉದ್ಯಮದಲ್ಲಿ, ಅವರು ಫರಾರ್ (2015), ಜಗ್ಗಾ ಜಿಯುಂಡಾ ಇ (2018), ಕಿಟ್ಟಿ ಪಾರ್ಟಿ (2019) ಮತ್ತು ಟಿಪ್ಸಿ (2020) ನಲ್ಲಿ ಕಾಣಿಸಿಕೊಂಡಿದ್ದಾರೆ. ಬಳಿಕ ಪಂಜಾಬಿ ಚಿತ್ರೋದ್ಯಮವನ್ನು ತೊರೆದ ನಂತರ ಅವರು ಬಾಲಿವುಡ್‌ನಲ್ಲಿ ತಮ್ಮದೇ ಆದ ಹೆಸರನ್ನು ಸೃಷ್ಟಿಸಿದ್ದಾರೆ.  2010 ರಲ್ಲಿ ಖಟ್ಟಾ ಮೀಠಾ ಚಿತ್ರದ ಮೂಲಕ ಬಾಲಿವುಡ್‌ಗೆ ಪದಾರ್ಪಣೆ ಮಾಡಿದರು. ಈ  ಚಿತ್ರದಲ್ಲಿ ಒಂದು ಹಾಡಿನಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.  2013 ರಲ್ಲಿ ಬಿಡುಗಡೆಗೊಂಡ  ಗ್ರ್ಯಾಂಡ್ ಮಸ್ತಿ ಚಿತ್ರ ಇವರಿಗೆ ಬ್ರೇಕ್​ ನೀಡಿತು.  ನಟನೆ ಮತ್ತು ಗಾಯನ ವೃತ್ತಿಜೀವನದ ಜೊತೆಗೆ, ನಟಿ ಸಾಮಾಜಿಕ ಮಾಧ್ಯಮದಲ್ಲಿ ಹೆಚ್ಚು ಸಕ್ರಿಯರಾಗಿದ್ದಾರೆ. ಆಕೆ ತನ್ನ ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ ಆಗಾಗ್ಗೆ ಸುಂದರವಾದ ಚಿತ್ರಗಳನ್ನು ಪೋಸ್ಟ್ ಮಾಡುತ್ತಾರೆ.  

ರಶ್ಮಿಕಾ ಮಂದಣ್ಣ ಈಗ ಸೈಬರ್ ಕ್ರೈಂ ರಾಷ್ಟ್ರೀಯ ರಾಯಭಾರಿ! ಲೈವ್​ನಲ್ಲಿ ಬಂದ ನಟಿ ಹೇಳಿದ್ದೇನು?

click me!