ಸಂಕಷ್ಟದಲ್ಲಿ ನೆರವಾದ ನಟ ಸೋನು ಸೂದ್‌ಗೆ ಕೊರೋನಾ ಪಾಸಿಟೀವ್!

Published : Apr 17, 2021, 06:37 PM ISTUpdated : Apr 17, 2021, 08:33 PM IST
ಸಂಕಷ್ಟದಲ್ಲಿ ನೆರವಾದ ನಟ ಸೋನು ಸೂದ್‌ಗೆ ಕೊರೋನಾ ಪಾಸಿಟೀವ್!

ಸಾರಾಂಶ

ಕೊರೋನಾ ವೈರಸ್ ವಕ್ಕರಿಸಿ ಸಂಕಷ್ಟದ ಸಮಯದಲ್ಲಿ ವಲಸೆ ಕಾರ್ಮಿಕರು, ಬಡವರು, ನಿರ್ಗತಿಕರು ಸೇರಿದಂತೆ ಸಂಕಷ್ಟಕ್ಕೆ ಸಿಲುಕಿದವರಿಗೆ ನೆರವು ನೀಡಿದ್ದ ಬಾಲಿವುಡ್ ನಟ ಸೊನು ಸೂದ್‌ಗೆ ಕೊರೋನಾ ಅಂಟಿಕೊಂಡಿದೆ.  ಸುದ್ದಿ ತಿಳಿಯುತ್ತಿದ್ದಂತೆ ಇಡೀ ದೇಶವೇ ಶೀಘ್ರ ಚೇತರಿಕೆಗೆ ಹಾರೈಸಿದೆ.

ಮುಂಬೈ(ಏ.17): ಕೊರೋನಾ ಸಮಯದಲ್ಲಿ  ಸಂಕಷ್ಟದಲ್ಲಿದ್ದವರಿಗೆ ನೆರವು ನೀಡಿದ ಬಾಲಿವುಡ್ ನಟ ಸೋನು ಸೂದ್‌ಗೆ ಇದೀಗ ಕೊರೋನಾ ವೈರಸ್ ತಗುಲಿದೆ. ಈ ಕುರಿತ ಸ್ವಥ ಸೋನ್ ಸ್ಪಷ್ಟಪಡಿಸಿದ್ದಾರೆ. ತಮಗೆ ಕೊರೋನಾ ಅಂಟಿಕೊಂಡಿದ್ದರೂ ಯಾರೂ ಆತಂಕ ಪಡುವ ಅಗತ್ಯವಿಲ್ಲ, ನಿಮ್ಮ ಕಷ್ಟಗಳಿಗೆ ನೆರವಾಗಲು ಸದಾ ಸಿದ್ದ ಎಂದು ಸೋನು ಸೂದ್ ಟ್ವೀಟ್ ಮಾಡಿದ್ದಾರೆ.

 

ಸೋನು ಸೂದ್ ಆ್ಯಂಬುಲೆನ್ಸ್ ಸೇವೆ: ಇದಕ್ಕಿದೆ ಒಂದು ವಿಶೇಷತೆ

ಕಳೆದ ವರ್ಷ ಕೊರೋನಾ ನಿಯಂತ್ರಣಕ್ಕೆ ಲಾಕ್‌ಡೌನ್ ಹೇರಲಾಗಿತ್ತು. ಈ ವೇಳೆ ವಲಸೆ ಕಾರ್ಮಿಕರು, ನಿರ್ಗತಿಕರು, ಬಡವರು, ಅಗತ್ಯವಿರುವ ಎಲ್ಲರಿಗೂ ಸೋನು ಸೂದ್ ನೆರವು ನೀಡಿದ್ದರು. ಬಳಿಕ ತಂಡಗಳನ್ನು ರಚಿಸಿ ದೇಶದ ಎಲ್ಲಾ ಭಾಗದ ಜನರಿಗೆ ನೆರವಾಗಿದ್ದರು. ಇದೀಗ ತಮಗೆ ಕೋವಿಡ್ ಅಂಟಿಕೊಂಡಿದ್ದರು, ತಾನು ನಿಮ್ಮ ಕಷ್ಟಗಳಿಗೆ ನೆರವಾಗಲಿದ್ದೇನೆ ಎಂದಿದ್ದಾರೆ. ಸೋನು ಸೂದ್‌ಗೆ ಕೊರೋನಾ ಎಂದ ತಕ್ಷಣ ಇಡೀ ಭಾರತವೇ ಶೀಘ್ರ ಚೇತರಿಕಿಗೆ ಹಾರೈಸಿದೆ.

ಕಾರ್ಮಿಕರ, ನಿರುದ್ಯೋಗಿಗಳ, ಅನಾಥರ ಬಂಧುವಾದ ಸೋನು ಸೂದ್​​ಗಾಗಿ ದೇವಾಲಯ!.

ನನಗೆ ಕೊರೊನಾ ತಗುಲಿರುವುದು ದೃಢಪಟ್ಟಿದೆ. ಮುಂಜಾಗ್ರತಾ ಕ್ರಮವಾಗಿ ಕ್ವಾರಂಟೈನ್‌ಗೆ ಒಳಗಾಗಿದ್ದೇನೆ. ಆರೋಗ್ಯ ಕುರಿತು ಹೆಚ್ಚಿನ ಕಾಳಜಿ ವಹಿಸಲಿದ್ದೇನೆ. ಯಾರೂ ಆತಂಕ ಪಡುವ ಅಗತ್ಯವಿಲ್ಲ. ಈಗ ನನಗೆ ಹೆಚ್ಚಿನ ಸಮಯ ಸಿಗಲಿದೆ. ನಿಮ್ಮಲ್ಲೆರ ಕಷ್ಟಗಳಿಗೆ ನೆರವಾಗುತ್ತೇನೆ ಎಂದು ಸೋನು ಸೂದ್ ಟ್ವೀಟ್ ಮಾಡಿದ್ದಾರೆ.

ಸೋನು ಸೂದ್ ಕೊರೋನಾ ಲಸಿಕೆ ಪಡೆದ 10 ದಿನಗಳ ಬಳಿಕ ಇದೀಗ ಕೋವಿಡ್ ವೈರಸ್‌ ತಗುಲಿದೆ.  ಈ ಕುರಿತು ಅಭಿಮಾನಿಗಳು ಸೋನು ಸೂದ್‌ಗೆ ಟ್ವೀಟ್ ಮೂಲಕ ಶೀಘ್ರ ಚೇತರಿಕೆಗೆ ಹಾರೈಸಿದ್ದಾರೆ. ನಿಮ್ಮ ಸೇವೆ ಈ ದೇಶಕ್ಕೆ ಅಗತ್ಯವಿದೆ. ದೇಶದ ಕಷ್ಟಕ್ಕೆ ಸ್ಪಂದಿಸಿದ ನೀವು, ಇದೀಗ ನಿಮ್ಮ ಆರೋಗ್ಯದ ಕುರಿತು ಮೊದಲು ಕಾಳಜಿ ವಹಿಸಿ ಎಂದಿದ್ದಾರೆ

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

'ರೀನಾ, ಕಿರಣ್ & ಲವರ್ ಗೌರಿ.. 'ನಾವೆಲ್ಲರೂ ಒಂದೇ ಫ್ಯಾಮಿಲಿ' ಎಂದ ಅಮೀರ್ ಖಾನ್; ಒಳಗೊಳಗೇ ನಕ್ಕ ನೆಟ್ಟಿಗರು!
ಆರ್ಯನ್ ಖಾನ್‌ಗೆ ಝೈದ್ ಖಾನ್ ಸಪೋರ್ಟ್; ಆದ್ರೂ ಪಬ್ಲಿಕ್‌ ಪ್ಲೇಸ್‌ನಲ್ಲಿ 'ಮಿಡ್ಲ್ ಫಿಂಗರ್' ಎತ್ತಿದ್ದು ತಪ್ಪು ಅಂತಿರೋ ನೆಟ್ಟಿಗರು!