ಪತಿ, ಮಗಳ ಜೊತೆ ಬೀಚ್​ನಲ್ಲಿ ಹೀಗೆ ಕಾಣಿಸಿಕೊಂಡ ನಟಿ ಪ್ರಿಯಾಂಕಾ! ತರ್ಲೆ ನೆಟ್ಟಿಗರು ಸುಮ್ನೆ ಇರ್ಬಾದಾ?

Published : Jul 04, 2024, 05:34 PM IST
ಪತಿ, ಮಗಳ ಜೊತೆ ಬೀಚ್​ನಲ್ಲಿ ಹೀಗೆ ಕಾಣಿಸಿಕೊಂಡ ನಟಿ ಪ್ರಿಯಾಂಕಾ! ತರ್ಲೆ ನೆಟ್ಟಿಗರು ಸುಮ್ನೆ ಇರ್ಬಾದಾ?

ಸಾರಾಂಶ

ಪತಿ, ಮಗಳ ಜೊತೆ ಬೀಚ್​ನಲ್ಲಿ ಹೀಗೆ ಕಾಣಿಸಿಕೊಂಡ ಪ್ರಿಯಾಂಕಾ! ತರ್ಲೆ ನೆಟ್ಟಿಗರು ಥಹರೇವಾರಿ ಕಮೆಂಟ್ಸ್​ ಮೂಲಕ ಹೀಗೆ ನಟಿಯ ಕಾಲೆಳೆಯುತ್ತಿದ್ದಾರೆ.   

ಪ್ರಿಯಾಂಕಾ ಚೋಪ್ರಾ ಮತ್ತು ನಿಕ್ ಜೋನಸ್ (Nick Jonas) ಅವರು ತಮ್ಮ ಪುತ್ರಿ ಮಾಲ್ತಿ ಮೇರಿಯ ಜೊತೆ ಲೈಫ್​ ಎಂಜಾಯ್​ ಮಾಡುತ್ತಿದ್ದಾರೆ.  ಪ್ರಿಯಾಂಕಾ ಚೋಪ್ರಾ ಈಗ ಅಮೆರಿಕ ವಾಸಿ. ಅಲ್ಲಿನ ಪಾಪ್ ಸಿಂಗರ್ ನಿಕ್ ಜೋನಸ್ ಅವರನ್ನು 2018ರಲ್ಲಿ ಮದುವೆಯಾದ ಬಳಿಕ ನಟಿ, ಬಾಲಿವುಡ್ ಜಗತ್ತಿನಿಂದ  ದೂರವೇ ಉಳಿದಿದ್ದಾರೆ. ಹಾಲಿವುಡ್ ವೆಬ್ ಸಿರೀಸ್ ಮಾಡುತ್ತಾ, ಅಲ್ಲಿ ಹಲವಾರು ಟಿವಿ ಶೋ, ಸಂದರ್ಶನಗಳು ಹಾಗೂ ಸುತ್ತಾಟಗಳಲ್ಲಿ ನಟಿ ಪ್ರಿಯಾಂಕಾ ಚೋಪ್ರಾ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ.   2022ರಲ್ಲಿ  ಬಾಡಿಗೆ ತಾಯ್ತನದ (Surrogacy) ಮೂಲಕ ಪ್ರಿಯಾಂಕಾ ಚೋಪ್ರಾ ಹೆಣ್ಣು ಮಗುವಿನ  ತಾಯಿಯಾಗಿದ್ದಾರೆ. ಇದೀಗ ತಮ್ಮ ಲೈಫ್​ ಎಂಜಾಯ್​ ಮಾಡುತ್ತಿದ್ದರೂ, ಇವರು ಹೋದಲ್ಲಿ, ಬಂದಲ್ಲಿ ಪಾಪರಾಜಿಗಳ ಕಣ್ಣು ನೆಟ್ಟೇ ಇರುತ್ತದೆ. ಇದೀಗ ಪ್ರಿಯಾಂಕಾ ಅವರು ತಮ್ಮ ಪತಿ ನಿಕ್​ ಮತ್ತು ಮಗಳು ಮಾಲ್ತಿ ಜೊತೆ ಬೀಚ್​ನಲ್ಲಿ ಕಾಣಿಸಿಕೊಂಡಿರುವ ಫೋಟೋ ವೈರಲ್​ ಆಗುತ್ತಿದ್ದಂತೆಯೇ ಇದಕ್ಕೆ ಥಹರೇವಾರಿ ಕಮೆಂಟ್​ಗಳ ಸುರಿಮಳೆಯಾಗುತ್ತಿದೆ.

ಅಷ್ಟಕ್ಕೂ ಇದರಲ್ಲಿ ಪ್ರಿಯಾಂಕಾ ಅವರು ಬೀಚ್​ ಡ್ರೆಸ್​ ಹಾಕಿದ್ದಾರೆ. ಇದಕ್ಕಾಗಿಯೇ ಹಲವರು ಟ್ರೋಲ್​  ಮಾಡುತ್ತಿದ್ದಾರೆ. ನಿಮ್ಮ ಈ ಅವತಾರವನ್ನು ನೋಡಲು ಆಗುತ್ತಿಲ್ಲ ಎಂದು ಹೇಳುತ್ತಿದ್ದಾರೆ. ಇಷ್ಟಕ್ಕೇ ಸುಮ್ಮನಾಗದ ಮತ್ತೆ ಕೆಲವು ತರ್ಲೆ ನೆಟ್ಟಿಗರು, ಇದಕ್ಕೆ ಕ್ಯಾಪ್ಷನ್​ ಹೀಗಲ್ಲ, ಬದಲಿಗೆ ಪ್ರಿಯಾಂಕಾ ಚೋಪ್ರಾ ತಮ್ಮ ದೊಡ್ಡ ಮಗ ಮತ್ತು ಚಿಕ್ಕ ಮಗಳ ಜೊತೆ ಎಂಜಾಯ್​ ಮಾಡುತ್ತಿದ್ದಾರೆ ಎಂದು ಕೊಡಬೇಕು ಎಂದು ಹೇಳುತ್ತಿದ್ದಾರೆ. ಅವರು ಹೀಗೆ ಹೇಳಲು ಕಾರಣವೂ ಇದೆ. ಅದೇನೆಂದರೆ, ನಟಿ ಪ್ರಿಯಾಂಕಾ  ಮತ್ತು ನಿಕ್​ ಜೋನಸ್​ ಅವರಿಗೆ ಹತ್ತು ವರ್ಷಗಳ ಅಂತರ. ಅಂದರೆ ನಿಕ್​ ಅವರಿಗಿಂತಲೂ ಪ್ರಿಯಾಂಕಾ ಹತ್ತು ವರ್ಷ ಚಿಕ್ಕವರು. 2000ನೇ ಸಾಲಿನಲ್ಲಿ ಪ್ರಿಯಾಂಕಾ ಅವರು ಮಿಸ್​ ವರ್ಲ್ಡ್ ಗೆದ್ದಾಗ ನಿಕ್​ ಅವರು ಆಗಿನ್ನೂ ಏಳು ವರ್ಷದವರಾಗಿದ್ದರು. ಇದೇ ಕಾರಣಕ್ಕೆ ಈ ಜೋಡಿ ಸದಾ ಟ್ರೋಲ್​ ಆಗುತ್ತಲೇ ಇರುತ್ತದೆ. ಈಗಲೂ ಅದನ್ನೇ ಹೇಳುವ ಮೂಲಕ ನೆಟ್ಟಿಗರು ನಟಿಯ ಕಾಲೆಳೆಯುತ್ತಿದ್ದಾರೆ. 

ಬ್ರಾ ಧರಿಸಲ್ಲ ಎಂದು ಹಠ ಮಾಡಿದ್ದ ಮಾಧುರಿ- ರೇಪ್​ ಸೀನ್​ ಮಾಡಿಸುವಷ್ಟರಲ್ಲಿ ಸುಸ್ತಾದ ನಟ, ನಿರ್ದೇಶಕ!

ಇದು ಒಂದೆಡೆಯಾದರೆ, ಪ್ರಿಯಾಂಕಾ ಅವರು ತಮ್ಮ ಬಣ್ಣದಿಂದಲೂ ಹಿಂದೆ ಟ್ರೋಲ್​ಗೆ ಒಳಗಾದವರು. ಅದಾದ ಬಳಿಕ ಬಾಡಿಗೆ  ತಾಯ್ತನದಿಂದ ಮಗು ಪಡೆದಾಗಲೂ  ಸಾಕಷ್ಟು ಟ್ರೋಲ್‌ಗೆ ಕೂಡ ಒಳಗಾಗಿದ್ದರು. ಮಗುವಾದರೆ ಸೌಂದರ್ಯ ಕೆಡುತ್ತೆ, ದೇಹ ಬದಲಾಗುತ್ತೆ ಎಂದು ನಟಿಯರು ಬಾಡಿಗೆ ತಾಯ್ತನ ಆರಿಸಿಕೊಳ್ಳುತ್ತಾರೆ ಎಂದು ಹಲವರು ಪ್ರಿಯಾಂಕಾ ಅವರಿಗೆ ಅಂದದ್ದುಂಟು. ಬಹಳ ದಿನಗಳ ನಂತರ ಪ್ರಿಯಾಂಕಾ ಚೋಪ್ರಾ (Priyanka Chopra) ಈ ಬಗ್ಗೆ ಮೌನ ಮುರಿದಿದ್ದರು.  'ನನಗೂ ಬಾಡಿಗೆ ತಾಯ್ತನದ ಮೂಲಕ ಮಗು ಮಾಡಿಕೊಳ್ಳುವ ಇಷ್ಟವಿರಲಿಲ್ಲ. ಆದರೆ ಪರಿಸ್ಥಿತಿ ನಮ್ಮ ಕೈಯಲ್ಲಿ ಇರಲಿಲ್ಲ.  ಹಲವಾರು ವೈದ್ಯಕೀಯ ಸಮಸ್ಯೆಗಳು (Medical Problems) ಇದ್ದವು. ಆರೋಗ್ಯ ಸಮಸ್ಯೆ ಇದ್ದ ಕಾರಣ ಗರ್ಭಿಣಿಯಾಗಲು ಸಾಧ್ಯವಾಗಲಿಲ್ಲ. ಆದ್ದರಿಂದಲೇ ಬಾಡಿಗೆ ತಾಯ್ತನದ ಮೂಲಕ ಮಗುವನ್ನು ಪಡೆಯಲು ಇಚ್ಛಿಸಿದೆವು ಎಂದಿದ್ದರು.

ಇನ್ನು, ಈ ಜೋಡಿಯ ಕುರಿತು ಹೇಳುವುದಾದರೆ, ಇವರದ್ದು ಪ್ರೇಮ ವಿವಾಹ. ಪ್ರಿಯಾಂಕಾ ಹಿಂದೂ ಹುಡುಗಿಯಾಗಿದ್ದರೆ ನಿಕ್ ಜೊನಸ್ ಕ್ರಿಶ್ಚಿಯನ್ ಹುಡುಗ. ಈ ಜೋಡಿ ತಮ್ಮ ಧರ್ಮಗಳ ಅನುಸಾರವೇ ಮದುವೆಯಾಗಲು ತೀರ್ಮಾನಿಸಿದ್ದರಂತೆ.  ಪ್ರಿಯಾಂಕಾ ಮತ್ತು ನಿಕ್ ಮದುವೆ ಮಾತುಕತೆಯಲ್ಲಿ ಹಿಂದೂ ಮತ್ತು ಕ್ರಿಶ್ಚಿಯನ್ ಎರಡೂ ಸಂಪ್ರದಾಯಗಳಲ್ಲಿ ಮದುವೆ ಮಾಡಿಕೊಳ್ಳುವ ತೀರ್ಮಾನಕ್ಕೆ ಬಂದರಂತೆ. ಅದರಂತೆ ಹಿಂದೂ ಸಂಪ್ರದಾಯದಂತೆ ಜಾತಕ, ಮುಹೂರ್ತ ಎಲ್ಲವನ್ನೂ ನೋಡಿ ಅದಕ್ಕೂ ಮೊದಲು ಹಿಂದಿನ ದಿನ ಕ್ರಿಶ್ಚಿಯನ್ ಸಂಪ್ರದಾಯದಂತೆ ಮದುವೆ ಆಗಿದ್ದಾರೆ.   

ಜ್ವರದಲ್ಲೇ ಸೆಟ್​ಗೆ ಹೋಗಿದ್ದೆ- ಮೊದಲ ಬಾರಿ ಉಪೇಂದ್ರ ನೋಡಿ ಅವಳು ಬೇಕು ಅಂದ್ರು... ಪ್ರಿಯಾಂಕಾ ಮೆಲುಕು

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಕೊಳಕು ಪ್ಯಾಂಟ್‌ ಬಗ್ಗೆ ಮಾತನಾಡಿದ್ರು, ಮೊಮ್ಮಗನ ಸಿನಿಮಾಕ್ಕೆ ಸಮಸ್ಯೆ ತಂದ್ರು: Jaya Bachchan ಬಾಯ್ಕಾಟ್‌ ಆಗ್ತಾರಾ?
ಅತ್ತ ಪಂಚೆ ಉದುರಿ ಹೋಗುತ್ತಿದೆ.. ಇತ್ತ ಕುಣಿದು ಕುಪ್ಪಳಿಸಿ ಇಳಯರಾಜಾ ಕಂಪೋಸ್ ಮಾಡಿದ ಮಜವಾದ ಹಾಡು ಯಾವುದು?