ಪರಿಸರ ಪ್ರೇಮ ಬಿತ್ತುವ ರಥದಲ್ಲಿ ಪ್ಲಾಸ್ಟಿಕ್​ ಗಿಡ-ಮರಗಳಾ? ಅಂಬಾನಿ ಪುತ್ರನ ಮದ್ವೆಯಲ್ಲಿ ಇದೆಂಥ ಅಪಸ್ವರ?

By Suchethana D  |  First Published Jul 4, 2024, 5:02 PM IST

ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್​ ಮದುವೆಯಲ್ಲಿ ಜಂಗಲ್​ ಥೀಮ್​ ರಥದಲ್ಲಿ  ಪ್ಲಾಸ್ಟಿಕ್​ ಗಿಡ-ಮರಗಳ ಕಾರುಬಾರಾ?  ಇದೆಂಥ ಅಪಸ್ವರ?
 


ಸದ್ಯ ಈಗ ಎಲ್ಲೆಲ್ಲೂ ಮುಖೇಶ್ ಅಂಬಾನಿ ಮತ್ತು ನೀತಾ ದಂಪತಿಯ ಪುತ್ರ ಅನಂತ್ ಅಂಬಾನಿ-ರಾಧಿಕಾ ಮರ್ಚೆಂಟ್​ ಮದುವೆಯ ವಿಷಯವೇ. ಇದೇ 12ರಂದು ನಡೆಯಲಿರುವ ಈ  ಶುಭ ಸಮಾರಂಭಕ್ಕೆ ಇದಾಗಲೇ ಭರದ ಸಿದ್ಧತೆ ನಡೆಸಲಾಗಿದ್ದು, ದಿನಕ್ಕೊಂದರಂತೆ  ಮದುವೆ ಕಾರ್ಯಕ್ರಮಗಳು ಜರಗುತ್ತಿವೆ. ಎರಡು ವಾರಗಳ ಮೊದಲೇ ವಿವಿಧ ರೀತಿಯ ಕಾರ್ಯಕ್ರಮಗಳು ನಡೆಯುತ್ತಿವೆ. ಇವರ ಮದುವೆಯ ಬಗ್ಗೆ ಇದಾಗಲೇ ಜಗತ್ತಿನ ಎಲ್ಲರ ಕಣ್ಣು ನೆಟ್ಟಿದೆ. ಇದಾಗಲೇ 50 ಕುಟುಂಬಗಳಿಗೆ  ಸಾಮೂಹಿಕ ವಿವಾಹ ಸಮಾರಂಭ ಏರ್ಪಡಿಸುವ ಮೂಲಕ ಅಂಬಾನಿ ಕುಟುಂಬ ಶ್ಲಾಘನೆಗೆ ಪಾತ್ರವಾಗಿದೆ.  ಇಲ್ಲಿ  ಭಾಗವಹಿಸಿರುವ ಪ್ರತಿ  ಜೋಡಿಗೂ ಮಂಗಳಸೂತ್ರ, ಮದುವೆಯ ಉಂಗುರಗಳು, ಮೂಗುತಿ ಸೇರಿ ಚಿನ್ನಾಭರಣ, ಕಾಲುಂಗುರ, ಕಾಲ್ಗೆಜ್ಜೆಯಂಥ ಬೆಳ್ಳಿ ಆಭರಣ ಸೇರಿದಂತೆ  ಪ್ರತಿ ವಧುವಿಗೆ ರೂ. ಒಂದು ಲಕ್ಷ ನಗದನ್ನು ನೀಡುವ ಮೂಲಕ ಕುಟುಂಬ ಶ್ಲಾಘನಾರ್ಹ ಕಾರ್ಯ ಮಾಡಿದೆ. 

ಮದುವೆಯ ಕುರಿತಂತೆ ದಿನಕ್ಕೊಂದು ರೀತಿಯಲ್ಲಿ ಹೊಸ ಹೊಸ ಅಪ್​ಡೇಟ್​ಗಳು ಬರುತ್ತಲೇ ಇವೆ. ಮದುವೆಯಲ್ಲಿ ಸ್ವಲ್ಪವೇ ಹೆಚ್ಚು ಕಡಿಮೆಯಾದರೆ ಕಾಲೆಳೆಯಲು ದೊಡ್ಡ ವರ್ಗವೇ ಕಾದು ಕುಳಿತಿದೆ. ಇದೀಗ ಮದುವೆಯ ರಥದ ಬಗ್ಗೆ ಅಪಸ್ವರ ಮೂಡಿದೆ. ಈ ಜೋಡಿಯ ಮದುವೆಯ ಅಂಗವಾಗಿ ಪರಿಸರ ಸ್ನೇಹವನ್ನು ಸಾರುವ ಮರಗಿಡಗಳು, ಪಕ್ಷಿ-ಪ್ರಾಣಿಗಳನ್ನು ಹೊತ್ತಿರುವ ರಥವೊಂದನ್ನು ಸಿದ್ಧಪಡಿಸಲಾಗಿದೆ. ಇದರ ವಿಡಿಯೋ ರಿಲೀಸ್​ ಆಗುತ್ತಲೇ ಕೆಲವರು ತಮಾಷೆ ಮಾಡುತ್ತಿದ್ದಾರೆ. ಇದರಲ್ಲಿ ಇರುವ ಗಿಡ-ಮರಗಳು ಪ್ಲಾಸ್ಟಿಕ್​ಗಳದ್ದು ಎನ್ನುವುದು ಹಲವರ ಆರೋಪ. ಮತ್ತೆ ಕೆಲವರು ಇದು ನಿಜವಾದ ಗಿಡ-ಮರಗಳು ಎನ್ನುತ್ತಿದ್ದರೂ, ವಿಡಿಯೋದಲ್ಲಿ ಅದು ಅಸಲಿಯದ್ದೋ, ಪ್ಲಾಸ್ಟಿಕ್​ನದ್ದೋ ಸರಿಯಾಗಿ ತಿಳಿಯದ ಕಾರಣ ಇದು ಪ್ಲಾಸ್ಟಿಕ್​ನದ್ದೇ ಎಂದು ಕಾಲೆಳೆಯುತ್ತಿದ್ದಾರೆ. 

Latest Videos

undefined

ಸೀತಾರಾಮರ ಮದ್ವೆ ಮೊದಲು ಮುಗಿಯತ್ತೋ, ಅಂಬಾನಿ ಜೋಡಿಯದ್ದೊ? ಹೀಗೊಂದು ಚಾಲೆಂಜ್​!

  ಅಷ್ಟಕ್ಕೂ ಈ ರಥವನ್ನು ಮಾಮೇರು ಸಮಾರಂಭಕ್ಕಾಗಿ ಅಣಿಗೊಳಿಸಲಾಗಿದೆ.  ವಧು ತನ್ನ ತಾಯಿಯ ಚಿಕ್ಕಪ್ಪನಿಂದ ಉಡುಗೊರೆಗಳು ಮತ್ತು ಪ್ರೀತಿಯ ಚಿಹ್ನೆಗಳನ್ನು ಪಡೆಯುವ ಪದ್ಧತಿ ಇದು.   ಈ ಮಹತ್ವದ ಸಂದರ್ಭಕ್ಕಾಗಿ ಇಡೀ ಅಂಬಾನಿ ನಿವಾಸವನ್ನು ಸುಂದರವಾಗಿ ಅಲಂಕರಿಸಿದ್ದರೂ  ವಿಶೇಷ ರಥವು ಗಮನ ಸೆಳೆದಿದೆ. ಅಷ್ಟಕ್ಕೂ ಜಂಗಲ್​ ಥೀಮ್​  ಮಾಡುವ ಹಿಂದೆ ಒಂದು ಕಾರಣವೂ ಇದೆ. ಅದೇನೆಂದರೆ,  ಅನಂತ್ ಅಂಬಾನಿ ಅವರ ಕನಸಿನ ಯೋಜನೆ ಮತ್ತು ಪ್ರಾಣಿಗಳ ಪುನರ್ವಸತಿ ಕೇಂದ್ರವಾದ ವಂತಾರವನ್ನು ಇದು ಪ್ರತಿಬಿಂಬಿಸುತ್ತದೆ. ಅನಂತ್ ಅವರು ಭಾರತದಲ್ಲಿ ಸ್ಥಳೀಯವಾಗಿ ಅಳಿವಿನಂಚಿನಲ್ಲಿರುವ ಪ್ರಭೇದಗಳನ್ನು ರಕ್ಷಿಸುವಲ್ಲಿ  ಗಮನಹರಿಸಿದ್ದಾರೆ.  ಪ್ರಮುಖ ಆವಾಸಸ್ಥಾನಗಳನ್ನು ಪುನಃಸ್ಥಾಪಿಸಲು ಮತ್ತು ಮತ್ತು ಅನೇಕ ವಿಧದ ಪ್ರಾಣಿಗಳನ್ನು ರಕ್ಷಿಸಲು ಯೋಜನೆ ಕೈಗೊಂಡಿದ್ದಾರೆ. ಇದೇ  ವಂತಾರ ಯೋಜನೆ. 

ಇದಾಗಲೇ ವಂತಾರ ಯೋಜನೆಯ ಕುರಿತು ಅನಂತ್​ ಅವರು ಮಾಹಿತಿ ನೀಡಿದ್ದರು. ಸರ್ಕಾರಿ ಸಂಸ್ಥೆಗಳು, ಸಂಶೋಧನೆ ಮತ್ತು ಶಿಕ್ಷಣ ಸಂಸ್ಥೆಗಳು, ತರಬೇತಿ, ಸಾಮರ್ಥ್ಯ ನಿರ್ಮಾಣ ಮತ್ತು ಪ್ರಾಣಿಗಳ ಆರೈಕೆಯ ಮೂಲಸೌಕರ್ಯಗಳ ವಿಷಯದಲ್ಲಿ ಭಾರತದಲ್ಲಿನ ಎಲ್ಲಾ 150-ಪ್ಲಸ್ ಮೃಗಾಲಯಗಳನ್ನು ಸುಧಾರಿಸುವಲ್ಲಿ ಝೂ ಅಥಾರಿಟಿ ಆಫ್ ಇಂಡಿಯಾ ಮತ್ತು ಇತರ ಸಂಬಂಧಿತ ಸರ್ಕಾರಿ ಸಂಸ್ಥೆಗಳೊಂದಿಗೆ ಪಾಲುದಾರರಾಗಲು ಈ ಯೋಜನೆಯನ್ನು ಪ್ರಾರಂಭಿಸಲಾಗುವುದು ಎಂದಿದ್ದರು. ಅದರ ಗೌರವಾರ್ಥ ಇಂಥದ್ದೊಂದು ರಥವನ್ನು ಸ್ಥಾಪಿಸಲಾಗಿದ್ದು, ಅದೀಗ ಟ್ರೋಲ್​ಗೆ ಒಳಗಾಗಿದೆ. ಪ್ಲಾಸ್ಟಿಕ್​ ಯಾಕೆ ಎಂದು ನೆಟ್ಟಿಗರು ಪ್ರಶ್ನಿಸುತ್ತಿದ್ದಾರೆ. 

ವೆಡ್ ಇನ್ ಇಂಡಿಯಾ ಸಖತ್ ಸೌಂಡ್ ಮಾಡ್ತಿದೆ, ಅಂಬಾನಿ ಫ್ಯಾಮಿಲಿ ವೆಡ್ಡಿಂಗ್ ಕಲ್ಚರ್‌ಗೆ ಜಗತ್ತೇ ಫಿದಾ..!
 

click me!