ಕೋಲಾಹಲ ಸೃಷ್ಟಿಸಿದ ಆಗ್ರಾ ಸಿನಿಮಾ, ರುಹಾನಿ ಬೆನ್ನಲ್ಲೇ ಪ್ರಿಯಾಂಕಾ ನಗ್ನ ದೃಶ್ಯ ಲೀಕ್!

By Chethan Kumar  |  First Published Aug 27, 2024, 10:14 PM IST

ವಿವಾದ ಜೊತೆ ತೀವ್ರ ಕುತೂಹಲ ಕೆರಳಿಸಿರುವ ಆಗ್ರಾ ಸಿನಿಮಾದ ಕೆಲ ದೃಶ್ಯಗಳು ಲೀಕ್ ಆಗಿದೆ. ಕೇನ್ಸ್ ಫಿಲ್ಮ್ ಫೆಸ್ಟಿವಲ್‌ನಲ್ಲಿ ಪ್ರದರ್ಶನಕಂಡ ಈ ಸಿನಿಮಾ ಭಾರತದಲ್ಲಿ ಬಿಡುಗಡೆಯಾಗಿಲ್ಲ. ಆದರೆ ಈ ಚಿತ್ರದಲ್ಲಿನ ನಟಿಯರ ನಗ್ನ ದೃಶ್ಯಗಳು ಲೀಕ್ ಆಗಿದೆ.
 


ಮುಂಬೈ(ಆ.27) ಕಾನು ಬೆಹೆಲ್ ನಿರ್ದೇಶನದ ಆಗ್ರಾ ಸಿನಿಮಾ ಇದೀಗ ದೇಶಾದ್ಯಂತ ಕೋಲಾಹಲ ಸೃಷ್ಟಿಸಿದೆ. 2023ರ ಕೇನ್ಸ್ ಫಿಲ್ಮ್ ಫೆಸ್ಟಿವಲ್‌ನಲ್ಲಿ ಈ ಚಿತ್ರ ಪ್ರದರ್ಶನಗೊಂಡರೂ ಭಾರತದಲ್ಲಿ ಬಿಡುಗಡೆಯಾಗಿಲ್ಲ. ಅತೀರೇಖದ ಲೈಂಗಿಕ ಬಯಕೆ, ಸಂಬಂಧಗಳಲ್ಲಿ ಸಮಸ್ಯೆ ಸೇರಿದಂತೆ ಹಲವು ಮಾನಸಿಕ ತುಮಲಗಳ ಕುರಿತ ಈ ಆಗ್ರಾ ಚಿತ್ರದ ಕೆಲ ನಗ್ನ ದೃಶ್ಯಗಳು ಸೋಶಿಯಲ್ ಮೀಡಿಯಾದಲ್ಲಿ ಲೀಕ್ ಆಗಿವೆ. ಚಿತ್ರದ ನಟಿ ರುಹಾನಿ ಶರ್ಮಾ ಕೆಲ ದೃಶ್ಯಗಳು ಲೀಕ್ ಆದ ಬೆನ್ನಲ್ಲೇ ಇದೀಗ ಪ್ರಿಯಾಂಕಾ ಬೋಸ್ ನಗ್ನ ದೃಶ್ಯಗಳು ಲೀಕ್ ಆಗಿವೆ.

ರಾಹುಲ್ ರಾಯ್, ವಿಭಾ ಚಿಬ್ಬರ್, ಪ್ರಿಯಾಂಕ ಬೋಸ್, ರುಹಾನಿ ಶರ್ಮಾ, ಸೋನಾಲ್ ಝಾ ಹಾಗೂ ಅಂಚಲ್ ಗೋಸ್ವಾಮಿ ತಾರಾಗಣ ಹೊಂಜಿರುವ ಈ ಚಿತ್ರ ಇದೀಗ ಕುತೂಹಲದ ಕೇಂದ್ರಬಿಂದುವಾಗಿದೆ. ಆಗ್ರಾ ಸಿನಿಮಾದಲ್ಲಿ ಹಲವು ಬೋಲ್ಡ್ ದೃಶ್ಯಗಳಿವೆ. ಪ್ರಮುಖಲಾಗಿ ಈ ಸಿನಿಮಾ ಯುವಕನ ಲೈಂಗಿಕ ಬಯಕೆ ಸುತ್ತ ಸುತ್ತುವ ಕಾರಣ ಈ ರೀತಿಯ ಹಲವು ದೃಶ್ಯಗಳು ಚಿತ್ರದಲ್ಲಿದೆ. ಈ ಪೈಕಿ ಪ್ರಿಯಾಂಕಾ ಬೋಸ್ ಕೆಲ ದೃಶ್ಯಗಳು ಲೀಕ್ ಆಗಿವೆ. 

Tap to resize

Latest Videos

ನಟಿಯ ಬೆಡ್ ರೂಂ ದೃಶ್ಯ ಲೀಕ್ ಬೆನ್ನಲ್ಲೇ ಕೋಲಾಹಲ ಸೃಷ್ಟಿಸಿದ ದಿ ಬಾಯ್ಸ್ ಸೀರಿಸ್!

ಪ್ರಿಯಾಂಕಾ ಬೋಸ್ ದೃಶ್ಯಗಳು ಹೊರಬೀಳುವ ಮೊದಲೇ ರುಹಾನಿ ಶರ್ಮಾ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ಲೀಕ್ ಆಗಿತ್ತು. ಪೈರಸಿ ಸುಳಿಗೆ ಸಿಲಿಕಿದ ಈ ಚಿತ್ರದ ದೃಶ್ಯಗಳು ಲೀಕ್, ಚಿತ್ರತಂಡಕ್ಕೆ ತಲೆನೋವಾಗಿ ಪರಿಣಿಮಿಸಿದೆ. ರುಹಾನಿ ಶರ್ಮಾ ಹಾಗೂ ನಾಯಕನ ಬೋಲ್ಡ್ ದೃಶ್ಯಗಳು ಲೀಕ್ ಆಗಿತ್ತು. ಇದೀಗ ಪ್ರಿಯಾಂಕ ಬೋಸ್ ಜೊತೆಗಿನ ದೃಶ್ಯಗಳು ಹೊರಬಿದ್ದಿದೆ.

ಚಿತ್ರದ ಕೆಲ ದೃಶ್ಯಗಳನ್ನು ನೋಡಿ ಜನ ಪರ ವಿರೋಧ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಸಮಾಜದಲ್ಲಿ ನಡೆಯುತ್ತಿರುವ ವಿಷಗಳಿಗೆ ಹಿಡಿದ ಕೈಗನ್ನಡಿ ಎಂದು ಕೆಲವರು ಅಭಿಪ್ರಾಯ ವ್ಯಕ್ತಪಡಿಸಿದ್ದರೆ, ಮತ್ತೆ ಕೆಲವರು ಈ ಚಿತ್ರದ ಬೋಲ್ಡ್ ದೃಶ್ಯಗಳು ಮತ್ತಷ್ಟು ಜನರಿಗೆ ಪ್ರಚೋಜನೆ ನೀಡಿದರೆ ಮುಂದಾಗುವ ಅನಾಹುತಕ್ಕೆ ಯಾರು ಜವಾಬ್ದಾರಿ ಎಂಬ ಪ್ರಶ್ನೆಗಳನ್ನು ಎತ್ತಿದ್ದಾರೆ. 

2023ರ ಕೇನ್ಸ್ ಫಿಲ್ಮ್ ಫೆಸ್ಟಿವಲ್‌ನಲ್ಲಿ ಆಗ್ರಾ ಸಿನಿಮಾ ಪ್ರದರ್ಶನಗೊಂಡಿತ್ತು. ಚಿತ್ರೋತ್ಸವದಲ್ಲಿ ಆಗ್ರಾ ಸಿನಿಮಾಗೆ ಉತ್ತಮ ಅಭಿಪ್ರಾಯ ವ್ಯಕ್ತವಾಗಿತ್ತು. ಆದರೆ ಭಾರತದಲ್ಲಿ ಕೆಲ ದೃಶ್ಯಗಳೇ ಚಿತ್ರದ ಪರ ವಿರೋಧಕ್ಕೆ ಕಾರಣಾಗಿದೆ. ಚಿತ್ರ ಬಿಡುಗಡೆಗೆ ಭಾರಿ ತಯಾರಿ ನಡೆಯುತ್ತಿರುವಾಗಲೇ ದೃಶ್ಯಗಳು ಲೀಕ್ ಆಗಿವೆ. 

ಇಬ್ಬರ ಜೊತೆ ರೋಮ್ಯಾನ್ಸ್, 'ಚಾಲೆಂಜರ್ಸ್' ಹಾಟ್ ಸೀನ್ ಸೋಶಿಯಲ್ ಮಿಡಿಯಾದಲ್ಲಿ ಲೀಕ್!

click me!