ಈ ನಟಿ ಕ್ರಿಕೆಟ್ ಟೀಂ ಇಂಡಿಯಾದ ಮಾಜಿ ಕ್ಯಾಪ್ಟನ್ ಅವರ ಸೊಸೆ. ಮದುವೆಯಾದ ಆರೇ ತಿಂಗಳಿಗೆ ಮುದ್ದಾದ ಮಗುವನ್ನು ಬರಮಾಡಿಕೊಂಡಿದ್ದರು. ಮದುವೆ ಸಹ ದೆಹಲಿಯ ನಿವಾಸದಲ್ಲಿ ತುಂಬಾ ಸರಳವಾಗಿ ನಡೆದಿತ್ತು.
ಮುಂಬೈ: ಈ ನಟಿ ತನ್ನ ಪ್ರತಿಭೆಯಿಂದಲೇ ಬಾಲಿವುಡ್‌ನಿಂದ ರಂಗು ಮೂಡಿಸಿದ ಚೆಲುವೆ. ಹಂತ ಹಂತವಾಗಿ ಬಾಲಿವುಡ್ ಹಿರೋಯಿನ್ ಆದವರು. ಸದ್ಯ ಮದುವೆಯಾಗಿ ಮಗುವಿನ ತಾಯಿಯಾಗಿರುವ ನಟಿ ಕಿರುತೆರೆ ಹಾಗೂ ತಮ್ಮದೇ ಕೆಲ ಸಂದರ್ಶನದ ಕಾರ್ಯಕ್ರಮಗಳನ್ನು ನಿರೂಪಣೆ ಮಾಡುತ್ತಾರೆ. ಈ ಕಾರ್ಯಕ್ರಮಗಳಲ್ಲಿ ಬಾಲಿವುಡ್ ಕಲಾವಿದರನ್ನು ಸಂದರ್ಶನ ಮಾಡುತ್ತಾರೆ. ಬಿ ಗ್ರೇಡ್ ಸಿನಿಮಾಗಳಲ್ಲಿಯೂ ನಟಿಸಲು ಸಹ ಹಿಂದೇಟು ಹಾಕಿಲ್ಲ.
ನಾವು ಹೇಳುತ್ತಿರೋದು ಮಳೆಯಲ್ಲಿ ಕಿಚ್ಚು ಹಚ್ಚಿದ ಹಾಟ್ ಚೆಲುವೆ ನೇಹಾ ಧುಪಿಯಾ. ಹಾಟ್ ಲುಕ್ ಹಾಗೂ ಮಾದಕ ಡ್ಯಾನ್ಸ್‌ನಿಂದಲೇ ಚಿತ್ರಗಳ ಯಶಸ್ಸಿಗೆ ಕಾರಣರಾಗಿದ್ದರು. ನೇಹಾ ಧುಪಿಯಾ 2018ರ ಮೇನಲ್ಲಿ ನಟ ಅಂಗದ್ ಬೇಡಿಯವರನ್ನು ಮದುವೆಯಾಗಿದ್ದಾರೆ. ಮದುವೆಯಾದ ಆರು ತಿಂಗಳಿಗೆ ಮುದ್ದಾದ ಮಗುವನ್ನು ಬರಮಾಡಿಕೊಂಡಿದ್ದರು. ಅಂಗದ್ ಬೇಡಿ ಟೀಂ ಇಂಡಿಯಾದ ಮಾಜಿ ಕ್ಯಾಪ್ಟನ್, ಕ್ರಿಕೆಟಿಗ ಭೂಷನ್ ಸಿಂಗ್ ಬೇಡಿಯವರ ಪುತ್ರರಾಗಿದ್ದಾರೆ.
ಆ ನಟಿಯಷ್ಟು ನನ್ನ ಎದೆಭಾಗ ದೊಡ್ಡದಿಲ್ಲ ಎಂದ ಬಾಲಿವುಡ್ ನಟಿ
27ನೇ ಆಗಸ್ಟ್ 1980ರಲ್ಲಿ ಕೇರಳದಲ್ಲಿ ಜನಿಸಿದ ನೇಹಾ ಧುಪಿಯಾವರ ತಂದೆ ಪ್ರದೀಪ್ ಸಿಂಗ್ ಧುಪಿಯಾ ಸೇನೆಯಲ್ಲಿ ಸೇವೆ ಸಲ್ಲಿಸಿದ್ದಾರೆ. ನೇಹಾ ತಾಯಿ ಗೃಹಿಣಿ. ನೇಹಾ ಅವರ ಆರಂಭಿಕ ಶಿಕ್ಷಣ ದೆಹಲಿಯಲ್ಲಾಗಿದೆ. ನಂತರ ಪದವಿಯನ್ನು ದೆಹಲಿ ವಿಶ್ವವಿದ್ಯಾಲಯದಿಂದ ಪಡೆದಕೊಂಡಿದ್ದಾರೆ. ಶಿಕ್ಷಣ ಪಡೆಯುತ್ತಲೇ ಗ್ಲಾಮರ್ ದುನಿಯಾ ನೇಹಾವರನ್ನು ಕೈ ಬೀಸಿ ಕರೆದಿತ್ತು. ಮಿಸ್ ಇಂಡಿಯಾ ಸ್ಪರ್ಧೆಯಲ್ಲಿ ಭಾಗವಹಿಸಿದ ನೇಹಾ ಧುಪಿಯಾ ಕಿರೀಟ ಮುಡಿಗೇರಿಸಿಕೊಳ್ಳಲು ತುಂಬಾ ಶ್ರಮವಹಿಸಿದ್ದರು. ಶ್ರಮಪಟ್ಟರೇ ಗೆಲುವು ನಮ್ಮದಾಗುತ್ತೆ ಎಂದು ಹೇಳುವ ನೇಹಾ ಧುಪಿಯಾ 2002ರಲ್ಲಿ ಫೆಮಿನಾ ಮಿಸ್ ಇಂಡಿಯಾ ಕಿರೀಟ ತಮ್ಮದಾಗಿಸಿಕೊಂಡಿದ್ದರು. ನಂತರ ಅದೇ ವರ್ಷ ಮಿಸ್ ಯುನಿವರ್ಸ್ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಿದ್ದ ನೇಹಾ ಧುಪಿಯಾ ಟಾಪ್ 10ರಲ್ಲಿ ಸ್ಥಾನ ಪಡೆದುಕೊಂಡಿದ್ದರು.
ಮಿಸ್ ಯುನಿವರ್ಸ್ ಸ್ಪರ್ಧೆಯಲ್ಲಿ ಭಾಗವಹಿಸಿದ ಬಳಿಕ ಬಾಲಿವುಡ್ ನಲ್ಲಿ ಅವಕಾಶಗಳು ಅರಸಿ ಬರಲಾರಂಭಿಸಿದವು. 2003ರಲ್ಲಿ 'ಕಯಾಮತ್: ಸಿಟಿ ಅಂಡರ್ ಥ್ರೆಟ್' ಚಿತ್ರದ ಮೂಲಕ ಬಾಲಿವುಡ್ ಪ್ರವೇಶಿಸಿದರು. 2004ರಲ್ಲಿ ಬಿಡುಗಡೆಯಾದ ಜೂಲಿ ಚಿತ್ರ ನೇಹಾ ಧುಪಿಯಾವರಿಗೆ ದೊಡ್ಡಮಟ್ಟದ ಹಿಟ್ ತಂದುಕೊಟ್ಟಿತು. ಈ ಚಿತ್ರದಲ್ಲಿ ಎಲ್ಲಾ ಎಲ್ಲೆಗಳನ್ನು ಮೀರಿ ಬೋಲ್ಡ್ ದೃಶ್ಯಗಳಲ್ಲಿ ನೇಹಾ ಧುಪಿಯಾ ನಟಿಸಿದ್ದರು. ಸಿಸಕಿಯಾ, ಶೀಶಾ ಸಿನಿಮಾದ ಬೆಡ್‌ರೂಮ್ ದೃಶ್ಯಗಳಲ್ಲಿ ನಟಿಸಲು ನೇಹಾ ಹಿಂದೇಟು ಹಾಕಿರಲಿಲ್ಲ.
ರಣಬೀರ್ ಕಪೂರ್ ನನ್ನ ಮನೆಗೆ ಬಂದು ಪ್ಲೀಸ್...? ಹೊಸ ವಿಷಯ ಬಿಚ್ಚಿಟ್ಟ ಕಂಗನಾ ರಣಾವತ್
ಕಪಿಲ್ ಶರ್ಮಾ ಶೋದಲ್ಲಿ ಭಾಗಿಯಾಗಿದ್ದ ಸಂದರ್ಭದಲ್ಲಿ ಮಾತನಾಡಿದ್ದ ನೇಹಾ ಧುಪಿಯಾ, 'ದಸ್ ಕಹಾನಿಯಾ' ಸಿನಿಮಾದಲ್ಲಿ ಕಿಸ್ಸಿಂಗ್ ಸೀನ್ ಇತ್ತು. ಸೀನ್‌ಗೂ ಮುನ್ನ ಐದು ಬಾರಿ ನಟನ ಕೈಗಳನ್ನು ತೊಳೆಸಿದ್ದೆ. ಕಿಸ್ಸಿಂಗ್ ಸೀನ್ ಮಾಡುವಾಗ ಹೈಜೀನ್ ಮುಖ್ಯವಾಗುತ್ತದೆ ಎಂದು ಹೇಳಿದ್ದರು. ಇನ್ನು ಮದುವೆಗೂ ಮುನ್ನ ಅಂಗದ್ ಬೇಡಿ 75 ಗೆಳತಿಯರನ್ನು ಹೊಂದಿದ್ದರಂತೆ. ನೇಹಾ ಜೊತೆ ಮದುವೆ ಬಳಿಕ ಎಲ್ಲರಿಂದ ದೂರವಾಗಿದ್ದಾರೆ ಎಂದು ವರದಿಯಾಗಿದೆ.