ಸೊಂಟದ ಭಾಗ ಜೀರೋಸೈಜ್‌, ಉಳಿದ ಭಾಗ ದೊಡ್ಡದಾಗಿಸಲು ಶಸ್ತ್ರಚಿಕಿತ್ಸೆ: ನಟಿ ಪ್ರಿಯಾಮಣಿ ಹೇಳಿದ್ದೇನು?

By Suvarna News  |  First Published Apr 16, 2024, 1:00 PM IST

ನಟಿಯರು ಎಂದರೆ ಸೊಂಟದ ಭಾಗ ಜೀರೋ ಆಗಿರಲೇಬೇಕು ಎನ್ನುವ ಮಾತಿದೆ. ಈ ಕುರಿತು ನಟಿ ಪ್ರಿಯಾಮಣಿ ಹೇಳಿದ್ದೇನು? 
 


ಚಿತ್ರ ನಟಿ ಎಂದಾಕ್ಷಣ ಎಲ್ಲರ ಕಣ್ಣಮುಂದೆ ಬರುವುದು ಬಳುಕು ಬಳ್ಳಿಯಂತೆ ಇರುವ ಸುಂದರ ಯುವತಿ, ಜೀರೋ ಸೈಜ್‌ ಮಸ್ಟ್‌. ಅಗತ್ಯಕ್ಕೆ ತಕ್ಕಂತೆ ದೇಹದ ಭಾಗಗಳಿಗೆ ಸರ್ಜರಿ ಮಾಡಿಸಿ ದೊಡ್ಡದಾಗಿ ಕಾಣುವಂತೆ ಮಾಡಿದರೂ, ಸೊಂಟದ ಸೈಜ್‌ ಮಾತ್ರ ಜೀರೋ ಇರಬೇಕು. ಇದೇ ಕಾರಣಕ್ಕೆ, ಇಂದು ಬಹುತೇಕ ನಟಿಯರು ಶಸ್ತ್ರಚಿಕಿತ್ಸೆಯ ಮೊರೆ ಹೋಗುವುದು ಒಂದೆಡೆಯಾದರೆ, ಸೊಂಟದ ಸೈಜ್‌ ಜೀರೋ ಮಾಡಿಕೊಳ್ಳಲು ಇನ್ನಿಲ್ಲದ ಸರ್ಕಸ್‌ ಮಾಡುತ್ತಾರೆ. ಡಯೆಟ್‌, ಜಿಮ್‌ ಅಂತೂ ಹೇಳುವುದೇ ಬೇಡ. ತಮ್ಮ ಜೀವನದ ಬಹುತೇಕ ಭಾಗವನ್ನು ದೇಹವನ್ನು ಫಿಟ್‌ ಆಗಿಟ್ಟುಕೊಳ್ಳಲೇ ಕಳೆಯುತ್ತಾರೆ. ಇದೀಗ ಈ ಬಗ್ಗೆ ಬಹುಭಾಷಾ ತಾರೆ ಪ್ರಿಯಾಮಣಿ ಮಾತನಾಡಿದ್ದಾರೆ.

ಕನ್ನಡ, ತೆಲುಗು, ಹಿಂದಿ, ಮಲಯಾಳಂ, ತಮಿಳು ಭಾಷೆಗಳ ಚಿತ್ರಗಳ ಜನಪ್ರಿಯ ನಾಯಕಿಯಾಗಿರುವ ನಟಿ  ಪ್ರಿಯಾಮಣಿ (Priyamani) ಅವರು 2003ರಲ್ಲಿ ತೆಲುಗು ಚಿತ್ರ ಇವರೇ ಆಟಗಾಡು ಮೂಲಕ ನಟನೆಗೆ ಪದಾರ್ಪಣೆ ಮಾಡಿದ ನಟಿ, ಕನ್ನಡದಲ್ಲಿ ಪುನೀತ್ ರಾಜಕುಮಾರ್ ಅವರ ರಾಮ್ ಚಿತ್ರದಿಂದ ಸ್ಯಾಂಡಲ್​ವುಡ್​ ಸಿನಿಪಯಣ ಆರಂಭಿಸಿದವರು.  ತಮಿಳು ಚಿತ್ರ ರಂಗದ ಹೆಸರಾಂತ ನಿರ್ದೇಶಕ ಭರತ್ ರಾಜ್ ಅವರು ಸಿನಿಮಾರಂಗಕ್ಕೆ ಕರೆ ತಂದವರು. 2007ರ ತಮಿಳು ರೋಮ್ಯಾಂಟಿಕ್ (Romantic) ಸಿನಿಮಾ ಪರುತಿವೀರನ್‌ನಲ್ಲಿ ಮುತ್ತಜಗು ಎಂಬ ಹಳ್ಳಿ ಹುಡುಗಿಯ ಪಾತ್ರಕ್ಕಾಗಿ ಅವರು ವ್ಯಾಪಕ ಮೆಚ್ಚುಗೆ ಪಡೆದರು. ಅತ್ಯುತ್ತಮ ನಟನೆಗಾಗಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಮತ್ತು ವಿಭಿನ್ನ ಭಾಷೆಯ ಚಲನಚಿತ್ರಗಳಲ್ಲಿ ಮೂರು ಫಿಲ್ಮ್‌ಫೇರ್ ಪ್ರಶಸ್ತಿಗಳನ್ನು ಪಡೆದಿದ್ದಾರೆ. 2008ರಲ್ಲಿ  ಪ್ರಿಯಾಮಣಿ ಮಲಯಾಳಂ ಪ್ರಣಯ ತಿರಕ್ಕಾಥಾದಲ್ಲಿ ಮಾಳವಿಕಾ ಪಾತ್ರಕ್ಕಾಗಿ ಮತ್ತಷ್ಟು ವಿಮರ್ಶಾತ್ಮಕ ಮೆಚ್ಚುಗೆಯನ್ನು ಪಡೆದರು ಮತ್ತು ಅತ್ಯುತ್ತಮ ನಟಿ ಮಲಯಾಳಂನಲ್ಲಿ ಫಿಲ್ಮ್‌ಫೇರ್ (Filmfare) ಪ್ರಶಸ್ತಿಯನ್ನು ಗೆದ್ದರು. 

Tap to resize

Latest Videos

ಮುಸ್ಲಿಂ ಯುವಕನನ್ನು ಮದ್ವೆಯಾದ ಕುರಿತು ಪ್ರಿಯಾಮಣಿ ಓಪನ್‌ ಮಾತು: ನಟಿ ಹೇಳಿದ್ದೇನು?

ಇದೀಗ ಅವರು ಸಂದರ್ಶನವೊಂದರಲ್ಲಿ ಜೀರೋ ಸೈಜ್‌ ಕುರಿತು ಮಾತನಾಡಿದ್ದಾರೆ. ಅವರ ಪ್ರಕಾರ, ಈ ಕಲ್ಪನೆ ಬಾಲಿವುಡ್‌ನಲ್ಲಿ ಹೆಚ್ಚು ಎನ್ನುವುದು. ಅವರೇ ಹೇಳುವಂತೆ, ಬಾಲಿವುಡ್​ನಲ್ಲಿ ಗ್ಲಾಮರ್​ಗೆ ಹೆಚ್ಚು ಒತ್ತು ನೀಡಲಾಗುತ್ತದೆ. ಆದರೆ, ಮಲಯಾಳಂ ಸೇರಿ ದಕ್ಷಿಣದ ಕೆಲವು ಭಾಷೆಗಳ ಸಿನಿಮಾಗಳಲ್ಲಿ ಗ್ಲಾಮರ್​ಗಿಂತ ನಟನೆಗೆ ಹೆಚ್ಚು ಒತ್ತು ನೀಡಲಾಗುತ್ತದೆ ಎನ್ನುವುದು. ಸಿನಿಮಾ ಇಂಡಸ್ಟ್ರಿಯಲ್ಲಿ ಹೋಲಿಕೆ ಸಾಮಾನ್ಯ. ಆದರೆ ದಕ್ಷಿಣದ ಬಹುತೇಕ ಚಿತ್ರಗಳಲ್ಲಿ ಜೀರೋ ಸೈಜ್‌ಗೆ ಇಷ್ಟೆಲ್ಲಾ ಒತ್ತು ಕೊಡುವುದಿಲ್ಲ.  ನೀವು ಉತ್ತಮವಾಗಿ ಕಾಣಬೇಕು ಎಂದಿದ್ದರೆ ಅದಕ್ಕೆ ಬೇಕಾದದ್ದನ್ನು ನೀವೇ ಮಾಡಬೇಕು. ಅದು ನಿಮ್ಮ ವೈಯಕ್ತಿಕ ಆಯ್ಕೆ.  ಜೀರೋ ಸೈಜ್ ಮಾಡಿಕೊಳ್ಳಿ ಎಂದು ನನಗೆ ಯಾರೂ ಹೇಳಿಲ್ಲ ಎಂದು ಪ್ರಿಯಾಮಣಿ ಹೇಳಿದ್ದಾರೆ.

 ಒಂದು ಕಾಲದಲ್ಲಿ ಅಷ್ಟೊಂದು ಜಾಗೃತರಾಗಿದ್ದ ನಟಿಯರು ಕಡಿಮೆ. ಅವರು ಏನು ಬೇಕೋ ಅದನ್ನು ತಿನ್ನುತ್ತಿದ್ದರು.  ಆದರೆ ಇತ್ತೀಚೆಗೆ ಪ್ರೇಕ್ಷಕರೂ ಸೈಜ್ ಜೀರೋ ಇರಬೇಕು ಎಂದು ಇಷ್ಟಪಡುತ್ತಾರೆ. ಇದೇ ಕಾರಣಕ್ಕೆ ಇಂದು ನಮ್ಮ ನಟಿಯರು ತುಂಬಾ ಫಿಟ್ ಆಗಿದ್ದಾರೆ. ತಿನ್ನುವ ಆಹಾರದ ಬಗ್ಗೆ ಮತ್ತು ಹೇಗೆ ಕಾಣಿಸಿಕೊಳ್ಳಬೇಕು ಎಂಬ ಬಗ್ಗೆ ತುಂಬಾ ಜಾಗೃತರಾಗಿದ್ದಾರೆ. ಯಾವ ಸೈಜ್‌ಗಳು ಹೇಗೆ ಇರಬೇಕು ಎನ್ನುವ ಕಲ್ಪನೆ ನಟಿಯರಲ್ಲಿ ಹೆಚ್ಚಾಗಿದೆ.  ಬಾಲಿವುಡ್‌ನಲ್ಲಿ ಇದು ಅನಿವಾರ್ಯವಾಗಿದೆ ಎಂದಿದ್ದಾರೆ.  

ಬಾಲಿವುಡ್​ ಬಳಿಕ ಟಾಲಿವುಡ್​ಗೂ ಕಾಂತಾರಾ ಬೆಡಗಿ ಎಂಟ್ರಿ! ಸಪ್ತಮಿ ಗೌಡ ಹೇಳಿದ್ದೇನು?

click me!