ಕಣ್ಸನ್ನೆ ಹುಡುಗಿಯ ಮತ್ತೊಂದು ವಿಡಿಯೋ ವೈರಲ್..!

Suvarna News   | Asianet News
Published : Aug 09, 2020, 10:21 AM ISTUpdated : Aug 09, 2020, 10:32 AM IST
ಕಣ್ಸನ್ನೆ ಹುಡುಗಿಯ ಮತ್ತೊಂದು ವಿಡಿಯೋ ವೈರಲ್..!

ಸಾರಾಂಶ

'ಒರು ಅಡಾರ್ ಲವ್'‌ ಸಿನಿಮಾ ಹಾಡಿನ ಮೂಲಕ ಕಣ್ಸನ್ನೇ ಮೂಲಕವೇ ನ್ಯಾಷನಲ್ ಕ್ರಷ್ ಆದ ಮಲಯಾಳಂ ನಟಿ ಪ್ರಿಯಾ ಪ್ರಕಾಶ್ ವಾರಿಯರ್‌ನ ಇನ್ನೊಂದು ವಿಡಿಯೋ ವೈರಲ್ ಆಗಿದೆ. ಈ ಬಾರಿ ಏನ್ಮಾಡಿದ್ದಾರೆ..? ಇಲ್ನೋಡಿ

'ಒರು ಅಡಾರ್ ಲವ್'‌ ಸಿನಿಮಾ ಹಾಡಿನ ಮೂಲಕ ಕಣ್ಸನ್ನೇ ಮೂಲಕವೇ ನ್ಯಾಷನಲ್ ಕ್ರಷ್ ಆದ ಮಲಯಾಳಂ ನಟಿ ಪ್ರಿಯಾ ಪ್ರಕಾಶ್ ವಾರಿಯರ್‌ನ ಇನ್ನೊಂದು ವಿಡಿಯೋ ವೈರಲ್ ಆಗಿದೆ.

ಈ ಹಿಂದೆ 'ಮಾಣಿಕ್ಯ ಮಲರಾಯ ಪೂವಿ' ಹಾಡಿನ ಸಣ್ಣ ತುಣುಕಿನ ಮೂಲಕ ಭಾರೀ ಸದ್ದು ಮಾಡಿದ ಮಲ್ಲು ಗರ್ಲ್‌ ರಾತ್ರೋ ರಾತ್ರಿ ಹಿಟ್ ಆಗಿದ್ದಳು. ಸಿನಿಮಾ ಅಷ್ಟಾಗಿ ಹಿಟ್ ಆಗದಿದ್ದರೂ, ರಿಲೀಸ್ ಆದ ಒಂದೇ ದಿನದಲ್ಲಿ ಹಾಡು ಮಾತ್ರ ಸಿಕ್ಕಾಪಟ್ಟೆ ಹಿಟ್ಟ ಆಯ್ತು.

ಈ ಹಾಡು ಭಾರತದ ಲೇಟೆಸ್ಟ್ ಇಂಟರ್ನೆಟ್ ಸೆನ್ಸೇಷನ್, ನೀವೂ ಒಮ್ಮೆ ನೋಡಿ

ವಾಟ್ಸಾಪ್, ಫೇಸ್‌ಬುಕ್ ಎಲ್ಲಿ ನೋಡಿದರೂ ಕಣ್ಸನ್ನೆ ಹುಡುಗಿ ಮಿಂಚಿದ್ದೋ ಮಿಂಚಿದ್ದು. ಇದೀಗ ಅದೇ ಪ್ರಿಯಾ ಪ್ರಕಾಶ್ ವಾರಿಯರ್ ಇನ್ನೊಂದು ವಿಡಿಯೋ ವೈರಲ್ ಆಗಿದೆ. ಲಾಕ್‌ಡೌನ್ ಟೈಂ ಆದ್ರೂ ಕಣ್ಸನ್ನೆ ಹುಡುಗಿಯ ವಿಡಿಯೋಗೆ ನೆಟ್ಟಿಗರು ಫಿದಾ ಆಗಿದ್ದಾರೆ.

ಪಡ್ಡೆಗಳ ಹೃದಯಕ್ಕೆ ಮತ್ತೆ ಪ್ರಿಯಾ ವಾರಿಯರ್ ಡೈರೆಕ್ಟ್ ಶೂಟ್..!

ಬ್ಯೂಟಿ ಸಲೂನ್‌ನಲ್ಲಿ ಕುಳಿತ ಪ್ರಿಯಾ ಮಾಸ್ಕ್ ಧರಿಸಿಕೊಂಡೇ ಮಿರರ್ ವಿಡಿಯೋ ಮಾಡಿದ್ದಾರೆ. ಕುಳಿತಲ್ಲಿಂದಲೇ ಹುಬ್ಬು ಹಾರಿಸಿ, ಮಾಸ್ಕ್ ಒಳಗೆ ಕಿರುನಗೆ ನಕ್ಕಿದ್ದು ವಿಡಿಯೋದಲ್ಲಿ ಕಾಣಬಹುದು.

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ವೈದ್ಯರ ವರದಿ ಬಳಿಕ ಜೈಲಿನಲ್ಲಿ ನಟ ದರ್ಶನ್‌ಗೆ ಫಿಸಿಯೋಥೆರಪಿ ಚಿಕಿತ್ಸೆ ಸ್ಥಗಿತ
ನಾನೇನು ಸಾಧುವಲ್ಲ.. ಹೀಗೆ ಮಾತಾಡೋಕೆ ನನಗೂ ಬರುತ್ತೆ: ಪುಷ್ಪ ನಟಿ ಹೇಳಿದ್ದೇನು?