ಕಾಂಗ್ರೆಸ್‌ಗೆ ಮಂಗಳಾರತಿ ಮಾಡಿದ ಪ್ರೀತಿ ಜಿಂಟಾ, ಆರೋಪ ಹೊರಿಸಿ ಪೇಚಿಗೆ ಸಿಲುಕಿದ ಪಕ್ಷ

Published : Feb 25, 2025, 03:46 PM ISTUpdated : Feb 25, 2025, 04:25 PM IST
ಕಾಂಗ್ರೆಸ್‌ಗೆ ಮಂಗಳಾರತಿ ಮಾಡಿದ ಪ್ರೀತಿ ಜಿಂಟಾ, ಆರೋಪ ಹೊರಿಸಿ ಪೇಚಿಗೆ ಸಿಲುಕಿದ ಪಕ್ಷ

ಸಾರಾಂಶ

ನಟಿ ಪ್ರೀತಿ ಜಿಂಟಾ ತಿರುಗೇಟಿಗೆ ಕಾಂಗ್ರೆಸ್ ಪೇಚಿಗೆ ಸಿಲುಕಿದೆ. ಕಾರಣ ನಟಿ ವಿರುದ್ಧ ಆರೋಪ ಹೊರಿಸಿ ಇದೀಗ ದೇಶಾದ್ಯಂತ ಮುಖಭಂಗ ಅನುಭವಿಸಿದೆ. ಅಷ್ಟಕ್ಕೂ ಕಾಂಗ್ರೆಸ್ ಮಾಡಿದ ಆರೋಪವೇನು? ನಟಿಯ ಉತ್ತರವೇನು?

ನವದೆಹಲಿ(ಫೆ.25) ಬಾಲಿವುಡ್ ನಟಿ ಪ್ರೀತಿ ಜಿಂಟಾ ಇದೀಗ ಕಾಂಗ್ರೆಸ್ ವಿರುದ್ಧ ಗರಂ ಆಗಿದ್ದಾರೆ. ಕಾಂಗ್ರೆಸ್ ಟ್ವೀಟ್ ಮೂಲಕ ನಟಿ ಪ್ರೀತಿ ಜಿಂಟಾ ವಿರುದ್ಧ ಗಂಭೀರ ಆರೋಪ ಮಾಡಿದೆ. ಬಿಜೆಪಿ ಕೃಪಾಕಟಾಕ್ಷದಿಂದ ಪ್ರೀತಿ ಜಿಂಟಾ ತೆಗೆದುಕೊಂಡ 18 ಕೋಟಿ ರೂಪಾಯಿ ಸಾಲ ಮನ್ನಾ ಆಗಿದೆ ಎಂದು ಕಾಂಗ್ರೆಸ್ ನಟಿ ವಿರುದ್ಧ ಆರೋಪ ಮಾಡಿದೆ. ಇದಕ್ಕೆ ಪ್ರತಿಕ್ರಿಯಿಸಿದ ಪ್ರೀತಿ ಜಿಂಟಾ, ಪಕ್ಷ ಹಾಗೂ ಪಕ್ಷದ ನಾಯಕರು ಈ ಮಟ್ಟದ ಸುಳ್ಳು ಹೇಳುತ್ತಾ, ತಪ್ಪು ಮಾಹಿತಿಗಳನ್ನು ಪ್ರಚಾರ ಮಾಡುತ್ತಿರುವುದು ನಿಜಕ್ಕೂ ಆಘಾತ ತಂದಿದೆ ಎಂದು ಪ್ರೀತಿ ಜಿಂಟಾ ಸ್ಪಷ್ಟನೆ ನೀಡಿದ್ದರೆ. ಅಷ್ಟಕ್ಕೂ ಕಾಂಗ್ರೆಸ್ ಮಾಡಿದ ಆರೋಪವೇನು? ಇದಕ್ಕೆ ಪ್ರೀತಿ ಜಿಂಟಾ ಕೊಟ್ಟ ಪ್ರತಿಕ್ರಿಯೆ ಏನು?

ಕೇರಳ ಕಾಂಗ್ರೆಸ್ ಸೋಶಿಯಲ್ ಮೀಡಿಯಾ ಒಂದಲ್ಲಾ ಒಂದು ಟ್ವೀಟ್ ಮಾಡಿ ವಿವಾದ ಸೃಷ್ಟಿಸುತ್ತಾ ಬಂದಿದೆ. ಟ್ವೀಟ್ ಮಾಡಿ ವಿವಾದವಾಗುತ್ತಿದ್ದಂತೆ ಡಿಲೀಟ್ ಮಾಡಿದ ಉದಾಹರಣೆಗಳೂ ಇವೆ. ಇದೀಗ ಪ್ರೀತಿ ಜಿಂಟಾ ವಿಚಾರದಲ್ಲಿ ಟ್ವೀಟ್ ಮಾಡಿ ಪೇಚಿಗೆ ಸಿಲುಕಿದೆ. ಇತ್ತೀಚೆಗೆ ನ್ಯೂ ಇಂಡಿಯಾ ಕಾರ್ಪೋರೇಟ್ ಬ್ಯಾಂಕ್ ಕುರಿತು ಆರ್‌ಬಿಐ ಮಹತ್ವದ ನಿರ್ಧಾರ ತೆಗೆದುಕೊಂಡಿದೆ. ನಿಯಮ ಉಲ್ಲಂಘನೆ, ಅವ್ಯವಹಾರಗಳಿಂದ ನ್ಯೂ ಇಂಡಿಯಾ ಕೋಆಪರೇಟೀವ್ ಬ್ಯಾಂಕ್ ಟ್ರಾನ್ಸಾಕ್ಷನ್ ನಿರ್ಬಂಧಿಸಲಾಗಿದೆ. ಬ್ಯಾಂಕ್ ಸದ್ಯ ಬಾಗಿಲು ಮುಚ್ಚಿದೆ. ಇದು ಬಿಜೆಪಿ ಪ್ರೀತಿ ಜಿಂಟಾಗೆ ಮಾಡಿದ ನೆರವಿನ ಪರಿಣಾಮ ಎಂದು ಕೇರಳ ಕಾಂಗ್ರೆಸ್ ಟ್ವೀಟ್ ಮಾಡಿದೆ.

ಪ್ರಧಾನಿಯ ಹೊಗಳಿದ್ರೆ ಭಕ್ತರು, ಹೆಮ್ಮೆಯ ಹಿಂದೂ ಅಂದ್ರೆ ಅಂಧಭಕ್ತರು: ನಟಿ ಪ್ರೀತಿ ಜಿಂಟಾ ಹೇಳಿದ್ದೇನು ಕೇಳಿ..

ಪ್ರೀತಿ ಜಿಂಟಾ 18 ಕೋಟಿ ರೂಪಾಯಿ ಸಾಲವನ್ನು ನ್ಯೂ ಇಂಡಿಯಾ ಕೋಆಪರೇಟೀವ್ ಬ್ಯಾಂಕ್‌ನಿಂದ ಪಡೆದಿದ್ದಾರೆ. ಪ್ರತಿಯಾಗಿ ಪ್ರೀತಿ ಜಿಂಟಾ ತಮ್ಮ ಸೋಶಿಯಲ್ ಮೀಡಿಯಾ ಖಾತೆಯನ್ನು ಬಿಜೆಪಿಗೆ ನಿರ್ವಹಿಸಲು ನೀಡಿದ್ದಾರೆ. ಇದಕ್ಕೆ ಬಿಜೆಪಿ ಪ್ರೀತಿ ಜಿಂಟಾ ಸಾಲವನ್ನು ಮನ್ನ ಮಾಡಿದೆ ಎಂದು ಕೇರಳ ಕಾಂಗ್ರೆಸ್ ಟ್ವೀಟ್ ಮೂಲಕ ಹೇಳಿದೆ. ಇದರ ಪರಿಣಾಮ ನ್ಯೂ ಇಂಡಿಯಾ ಕಾರ್ಪೋರೇಟ್ ಬ್ಯಾಂಕ್ ಬಾಗಿಲು ಮುಚ್ಚಿದೆ ಎಂದು ಪ್ರೀತಿ ಜಿಂಟಾ ಮೇಲೆ ಆರೋಪ ಹೊರಿಸಿದೆ.

 

 

ಕೇರಳ ಕಾಂಗ್ರೆಸ್ ಈ ಟ್ವೀಟ್ ಮಾಡುತ್ತಿದ್ದಂತೆ ಹಲವರು ಅಚ್ಚರಿಗೊಂಡಿದ್ದರು. ಅಷ್ಟೇ ವೇಗದಲ್ಲಿ ಈ ಟ್ವೀಟ್ ಭಾರಿ ಚರ್ಚೆಗೆ ಗ್ರಾಸವಾಗಿತ್ತು. ಇದರ ಬೆನ್ನಲ್ಲೇ ಪ್ರೀತಿ ಜಿಂಟಾ ತಿರುಗೇಟು ನೀಡಿದ್ದಾರೆ. ನನ್ನ ಸೋಶಿಯಲ್ ಮೀಡಿಯಾ ಖಾತೆಗಳನ್ನು ಖುದ್ದು ನಾನು ನಿರ್ವಹಣೆ ಮಾಡುತ್ತೇನೆ. ಈ ರೀತಿ ಸುಳ್ಳು ಹೇಳಿ ತಿರುಗಲು ನಾಚಿಕೆಯಾಗಬೇಕು ನಿಮಗೆ. ಯಾರೂ ಕೂಡ ನನ್ನ ಸಾಲ ಮನ್ನಾ ಮಾಡಿಲ್ಲ. ಒಂದು ರಾಜಕೀಯ ಪಕ್ಷ ಹಾಗೂ ನಾಯಕರು ಈ ರೀತಿ ಸುಳ್ಳು ಹೇಳಿಕೆ, ತಪ್ಪು ಮಾಹಿತಿಗಳನ್ನು ಪ್ರಚಾರ ಮಾಡುತ್ತಿರುವುದು ನಿಜಕ್ಕೂ ಆಘಾತ ತಂದಿದೆ. ಈ ಕೀಳು ಗಾಸಿಪ್, ಜನರು ಒಂದು ಬಾರಿ ನೋಡುವಂತೆ, ಓದುವಂತೆ ಸುಳ್ಳುಗಳನ್ನು ನನ್ನ ಹೆಸರು, ಫೋಟೋ ಬಳಸಿ ಮಾಡುತ್ತಿರುವುದು ನಿಜಕ್ಕೂ ದುರದೃಷ್ಟಕರ. 10 ವರ್ಷಗಳ ಹಿಂದೆ ನಾನು ಸಾಲ ತೆಗೆದುಕೊಂಡಿದ್ದೆ. ಅದನ್ನೂ ಬಡ್ಡಿ ಸಮೇತ ತೀರಿಸಿದ್ದೇನೆ. ಈ ಮಾಹಿತಿ ಹಾಗೂ ಸ್ಪಷ್ಟನೆ ನಿಮಗೆ ಸಾಕು ಎನಿಸುತ್ತದೆ. ಇಷ್ಟೇ ಅಲ್ಲ ಮುಂದಿನ ದಿನಗಳಲ್ಲಿ ಈ ರೀತಿಯ ತಪ್ಪಾಗಿ ಅರ್ಥೈಸುವಿಕೆ ಅಂತ್ಯಗೊಳಿಸಲು ಸಾಧ್ಯವಾಗಲಿದೆ ಎಂದು ಭಾವಿಸಿದ್ದೇನೆ ಎಂದು ಪ್ರೀತಿ ಜಿಂಟಾ ಟ್ವೀಟ್ ಮಾಡಿದ್ದಾರೆ.

ಪ್ರೀತಿ ಜಿಂಟಾ ಸ್ಪಷ್ಟನೆ ಕೊಡುತ್ತಿದ್ದಂತೆ ಸೋಶಿಯಲ್ ಮೀಡಿಯಾದಲ್ಲಿ ಕಾಂಗ್ರೆಸ್ ವಿರುದ್ಧ ಹಲವರು ಕಮೆಂಟ್ ಮಾಡಿದ್ದಾರೆ. ರಾಷ್ಟ್ರೀಯ ಪಕ್ಷ, ದೇಶದಲ್ಲಿ ಸುದೀರ್ಘ ಇತಿಹಾಸವಿರುವ ಪಕ್ಷ ಈ ರೀತಿಯ ಸುಳ್ಳು ಟ್ವೀಟ್ ಮಾಡಿ ಮಂಗಳಾರತಿ ಮಾಡಿಸಿಕೊಡಿದೆ ಎಂದು ಹಲವರು ಕಮೆಂಟ್ ಮಾಡಿದ್ದಾರೆ. ಮರ್ಯಾದೆ ಮೂರು ಕಾಸಿಗೆ ಹರಾಜುಗುತ್ತಿದ್ದಂತೆ ಕೇರಳ ಕಾಂಗ್ರೆಸ್ ತನ್ನ ತಪ್ಪನ್ನು ಒಪ್ಪಿಕೊಂಡಿದೆ. ಬಿದ್ದರೂ ಮೀಸೆ ಮಣ್ಣಾಗಲಿಲ್ಲ ಅನ್ನೋ ರೀತಿ ದೊಡ್ಡ ಕತೆ ಮುಂದಿಟ್ಟು ಟ್ವೀಟ್ ಮಾಡಿದೆ.

 

 

ಪ್ರಕರಣ ಕುರಿತು ಸ್ಪಷ್ಟನೆ ಕೊಟ್ಟಿರುವುದಕ್ಕೆ ಧನ್ಯವಾದಗಳು. ಈ ಮೂಲಕ ನಾವು ನಮ್ಮ ತಪ್ಪನ್ನು ಒಪ್ಪಿಕೊಳ್ಳುತ್ತಿದ್ದೇವೆ ಎಂದು ಕೇರಳ ಕಾಂಗ್ರೆಸ್ ಟ್ವೀಟ್ ಮಾಡಿದೆ. ಸುದ್ದಿ ಮಾಧ್ಯಮಗಳು ಮಾಡಿದ ವರದಿ ಅನುಸರಿಸಿ ಟ್ವೀಟ್ ಮಾಡಿದ್ದೇವೆ ಎಂದು ಕೇರಳ ಕಾಂಗ್ರೆಸ್ ಸ್ಪಷ್ಟನೆ ನೀಡುವ ಪ್ರಯತ್ನ ಮಾಡಿದೆ. ಆದರೆ ಅಷ್ಟರಲ್ಲಿ ಕಾಂಗ್ರೆಸ್ ಮಾನ ಮೂರು ಕಾಸಿಗ ಹರಾಜಾಗಿತ್ತು.

ಗುಳಿ ಕೆನ್ನೆ ಚಲುವೆ ಪ್ರೀತಿ ಝಿಂಟಾ ಅವರಂತೆ ಕಾಣಲು ಈ ರೀತಿ ಆಭರಣ ಧರಿಸಿ ನೋಡಿ
 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಅತ್ತ ಪಂಚೆ ಉದುರಿ ಹೋಗುತ್ತಿದೆ.. ಇತ್ತ ಕುಣಿದು ಕುಪ್ಪಳಿಸಿ ಇಳಯರಾಜಾ ಕಂಪೋಸ್ ಮಾಡಿದ ಮಜವಾದ ಹಾಡು ಯಾವುದು?
ಅಖಂಡ 2 ರಿಲೀಸ್ ನಿಲ್ಲೋಕೆ ಅಸಲಿ ಕಾರಣ ಇದೇನಾ? ಅಷ್ಟಕ್ಕೂ ಬಾಲಯ್ಯ ಮುಂದೆ ಏನ್ಮಾಡ್ತಾರೆ?