
ಪ್ರಯಾಗ್ರಾಜ್ ಮಹಾಕುಂಭ ಮೇಳದಲ್ಲಿ ರುದ್ರಾಕ್ಷಿ ಮಾಲೆಗಳನ್ನು ಮಾರುತ್ತಿದ್ದ ವೇಳೆ ಸೆರೆ ಹಿಡಿಯಲಾದ ವಿಡಿಯೋದ ಮೂಲಕ ವೈರಲ್ ಆಗಿ ಸಂಚಲನ ಮೂಡಿಸಿದ ವೈರಲ್ ಹುಡುಗಿ ಮೋನಾಲಿಸಾ (Mahakumbh Viral Girl Monalisa) ಈಗ ಬಾಲಿವುಡ್ ನಟಿಯಾಗಿದ್ದಾರೆ ಎನ್ನುವುದು ಹಳೆಯ ವಿಚಾರ. ಆದರೆ, ಈಕೆ ದಕ್ಷಿಣ ಭಾರತದ ನಟಿಯೊಬ್ಬರ ಅವಕಾಶವನ್ನು ಕಿತ್ತುಕೊಂಡು, ಬಾಲಿವುಡ್ ಸಿನಿಮಾ ಅವಕಾಶ ಗಿಟ್ಟಿಕೊಂಡಿದ್ದಾರೆ ಎಂಬುದು ಇದೀಗ ತಿಳಿದುಬಂದಿದೆ. ಈ ಬಗ್ಗೆ ಸ್ವತಃ ಸಿನಿಮಾ ನಿರ್ದೇಶಕರೇ ಮಾಹಿತಿ ಹಂಚಿಕೊಂಡಿದ್ದಾರೆ.
ಹೌದು, ಕುಂಭಮೇಳದ ವೈರಲ್ ಸುಂದರಿ ಮೊನಾಲಿಸಾ ಇದೀಗ ಕುಂಭಮೇಳ ಮುಗಿಯುವುದಕ್ಕೂ ಮುನ್ನವೇ ಸಿನಿಮಾದಲ್ಲಿ ನಟಿಸುವುದಕ್ಕಾಗಿ ನಟನಾ ತರಬೇತಿ ಪಡೆಯಲು ಮುಂಬೈಗೆ ತೆರಳಿದ್ದಾರೆ. ಜೊತೆಗೆ, ತಮ್ಮ ಮೊದಲ ಚಿತ್ರದ ತಯಾರಿಯಲ್ಲಿ ನಿರತರಾಗಿದ್ದಾರೆ. ಆದರೆ, ಅವರಿಗೆ ಸಿಕ್ಕ ಪಾತ್ರಕ್ಕೆ ಮೊದಲು ದಕ್ಷಿಣ ಭಾರತದ ನಟಿಯನ್ನು ಆಯ್ಕೆ ಮಾಡಲಾಗಿತ್ತು. ಇದನ್ನು ನಾವು ಹೇಳುತ್ತಿಲ್ಲ, ಸ್ವತಃ ಚಿತ್ರದ ನಿರ್ದೇಶಕ ಮನೋಜ್ ಮಿಶ್ರಾ ಇತ್ತೀಚಿನ ಸಂದರ್ಶನದಲ್ಲಿ ಈ ವಿಷಯವನ್ನು ಬಹಿರಂಗಪಡಿಸಿದ್ದಾರೆ. ದಕ್ಷಿಣ ಭಾರತದ ನಟಿಯನ್ನು ಅಂತಿಮಗೊಳಿಸಿದ ನಂತರ, ಮೋನಾಲಿಸಾ ಅವರ ವೈರಲ್ ವೀಡಿಯೊಗಳನ್ನು ನೋಡಿದಾಗ, ತಕ್ಷಣವೇ ಅವರನ್ನು ಆ ನಟಿಯ ಸ್ಥಾನಕ್ಕೆ ಆಯ್ಕೆ ಮಾಡಲು ನಿರ್ಧರಿಸಿದರು ಎಂದು ಹೇಳಿಕೊಂಡಿದ್ದಾರೆ.
ಮೋನಾಲಿಸಾಗಾಗಿ ದಕ್ಷಿಣ ಭಾರತದ ನಟಿ ಚಾನ್ಸ್ ಮಿಸ್: ಇತ್ತೀಚಿನ ಸಂದರ್ಶನವೊಂದರಲ್ಲಿ ಮಾತನಾಡಿದ ಮನೋಜ್ ಮಿಶ್ರಾ, ತಮ್ಮ ಚಿತ್ರ 'ದಿ ಡೈರಿ ಆಫ್ ಮಣಿಪುರ್'ನಲ್ಲಿ ಬಡತನದಲ್ಲಿರುವ ಹುಡುಗಿಯ ಪಾತ್ರಕ್ಕೆ ನಟಿಯ ಅವಶ್ಯಕತೆ ಇತ್ತು ಎಂದು ಹೇಳಿದರು. 'ನಾನು ನನ್ನ ಈ ಚಿತ್ರಕ್ಕಾಗಿ ದಕ್ಷಿಣ ಭಾರತದ ನಟಿಯೊಬ್ಬರನ್ನು ಆಯ್ಕೆ ಮಾಡಿ ಅಂತಿಮಗೊಳಿಸಿದ್ದೆ. ನಂತರ ನಾನು ಮೋನಾಲಿಸಾ ಅವರ ವೈರಲ್ ವೀಡಿಯೊಗಳನ್ನು ನೋಡಿದಾಗ, ಅವರು ನನ್ನ ಚಿತ್ರದ ಪಾತ್ರಕ್ಕೆ ತುಂಬಾ ಸಾಮ್ಯತೆ ಹೊಂದಿದ್ದಾರೆ ಎಂದು ನನಗೆ ಅನಿಸಿತು. ನಾನು ಅವರನ್ನು ನನ್ನ ಚಿತ್ರದಲ್ಲಿ ನಟಿಸಲು ಅವಕಾಶ ಕೊಡುವುದಾಗಿ ತೀರ್ಮಾನಿಸಿದೆ. ಇದರ ಬೆನ್ನಲ್ಲಿಯೇ ನಾನು ಅವರ ಮನೆಗೆ ಹೋಗಿ ಅವರ ಕುಟುಂಬ ಮತ್ತು ಸಮಾಜದ ಇತರ ಜನರನ್ನು ಭೇಟಿಯಾದೆ. ಇದರ ಜೊತೆಗೆ, ಅಲ್ಲಿನ ಪೊಲೀಸ್ ಠಾಣಾಧಿಕಾರಿಯಿಂದ ಅನುಮತಿ ಪಡೆದು ನನ್ನ ಚಿತ್ರದ ಚಿತ್ರೀಕರಣವನ್ನು ಪ್ರಾರಂಭಿಸಿದೆ' ಎಂದು ಹೇಳಿದರು
ಇದನ್ನೂ ಓದಿ: ಹರಿದಾಡುತ್ತಿದೆ ಕುಂಭಮೇಳ ಸುಂದರಿ ಮೊನಾಲಿಸಾ ಡೀಪ್‌ಫೇಕ್ ವೀಡಿಯೋ
ಮೋನಾಲಿಸಾ ಎಲ್ಲಿ ವಾಸ: ದಿ ಡೈರಿ ಆಫ್ ಮಣಿಪುರ್ ಸಿನಿಮಾದ ಕುರಿತ ಸಂವಾದದಲ್ಲಿ ಮಾತನಾಡಿದ ಮನೋಜ್ ಮಿಶ್ರಾ, ತಾವು ಇಂದೋರ್-ಉಜ್ಜಯಿನಿ ಹೆದ್ದಾರಿಯಲ್ಲಿ ಬಂಗಲೆಯೊಂದನ್ನು ತೆಗೆದುಕೊಂಡಿದ್ದು, ಅಲ್ಲಿ ಮೋನಾಲಿಸಾ ಮತ್ತು ಅವರ ಕುಟುಂಬವನ್ನು ಇರಿಸಲಾಗಿದೆ. ಅಲ್ಲಿ ನಾಲ್ವರು ನಟನಾ ತರಬೇತಿ ನೀಡುವ ಶಿಕ್ಷಕರನ್ನು ನೇಮಿಸಲಾಗಿದ್ದು, ಅವರು ಮೋನಾಲಿಸಾಗೆ ಪಾಠ ಹೇಳಿಕೊಡುತ್ತಿದ್ದಾರೆ ಮತ್ತು ಅವರಲ್ಲಿ ಸುಧಾರಣೆಗಳನ್ನು ತರುತ್ತಿದ್ದಾರೆ. ಇದೀಗ ಮೋನಾಲಿಸಾ ಸಾಕಷ್ಟು ಸುಧಾರಿಸಿದ್ದಾರೆ' ಎಂದು ಮಾಹಿತಿ ನೀಡಿದರು.
ಮಹಾಶಿವರಾತ್ರಿಗಾಗಿ ಪಾಟ್ನಾಗೆ ಬಂದ ಮೊನಾಲಿಸಾ: ಇನ್ನು ಮೋನಾಲಿಸಾ ತಮ್ಮ ಮೊದಲ ಚಿತ್ರ 'ದಿ ಡೈರಿ ಆಫ್ ಮಣಿಪುರ್' ಚಿತ್ರದ ತಯಾರಿಯ ನಡುವೆ ಮಂಗಳವಾರ ಮಹಾಶಿವರಾತ್ರಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಪಾಟ್ನಾಗೆ ಆಗಮಿಸಿದ್ದಾರೆ. ಪಾಟ್ನಾ ವಿಮಾನ ನಿಲ್ದಾಣದಲ್ಲಿ ಅವರಿಗೆ ಅದ್ಧೂರಿ ಸ್ವಾಗತ ನೀಡಲಾಯಿತು. ಮೋನಾಲಿಸಾ ಕೂಡ ನಮಸ್ತೆ ಪಾಟ್ನಾ ಎಂದು ಅಲ್ಲಿನ ಜನರಿಗೆ ಶುಭ ಕೋರಿದರು. ಮೋನಾಲಿಸಾ ಪಾಟ್ನಾದಿಂದ ರಸ್ತೆ ಮಾರ್ಗದ ಮೂಲಕ ನೇಪಾಳಕ್ಕೆ ಹೋಗಲಿದ್ದಾರೆ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ: ಮುಂಬೈನಲ್ಲಿ ನಟನಾ ತರಬೇತಿ ಆರಂಭಿಸಿದ ಕುಂಭಮೇಳದ ವೈರಲ್ ಹುಡುಗಿ ಮೊನಾಲಿಸಾ! ಇಲ್ಲಿದೆ ವಿಡಿಯೋ ಝಲಕ್
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.