
ಬೆಂಗಳೂರು: ಅಂದ ಎಂಬ ಪದಕ್ಕೆ ಸಮನಾರ್ಥಕವಾಗಿದ್ದರು ನಟಿ ಶ್ರೀದೇವಿ (Actress Sridevi). ದಕ್ಷಿಣ ಭಾರತದ ಶ್ರೀದೇವಿ ಬಾಲಿವುಡ್‌ನಲ್ಲಿ ಸೂಪರ್ ಸ್ಟಾರ್ ನಟಿಯಾಗಿ ಮೆರೆದ ಕಲಾವಿದೆ. ಬಾಲಿವುಡ್ ನಿರ್ಮಾಪಕ ಬೋನಿ ಕಪೂರ್ ಅವರನ್ನು ಮದುವೆಯಾಗಿ ಒಂದಿಷ್ಟು ವರ್ಷ ಗ್ಯಾಪ್ ತೆಗೆದುಕೊಂಡಿದ್ದ ಶ್ರೀದೇವಿ, ಇಂಗ್ಲಿಷ್ ವಿಂಗ್ಲಿಷ್ ಸಿನಿಮಾ ಮೂಲಕ ಕಮ್ ಬ್ಯಾಕ್ ಮಾಡಿದ್ದರು. ಬೋನಿ ಕಪೂರ್-ಶ್ರೀದೇವಿ ದಂಪತಿಗೆ ಜಾಹ್ನವಿ ಮತ್ತು ಖುಷಿ ಎಂಬ ಇಬ್ಬರು ಮಕ್ಕಳಿದ್ದಾರೆ. ಆದರೆ ಶ್ರೀದೇವಿ ಅವರನ್ನು ಮದುವೆಯಾಗಲು ದಕ್ಷಿಣ ಭಾರತದ ಸ್ಟಾರ್ ನಟರೊಬ್ಬರು ಒಪ್ಪಿರಲಿಲ್ಲ. ಶ್ರೀದೇವಿ ತಾಯಿ ಅವರೇ ಈ ಮಾತು ಹೇಳಿದರೂ ನಟ ಮದುವೆಯಾಗಲು ಒಪ್ಪಿಕೊಳ್ಳಲಿಲ್ಲ.
ದಕ್ಷಿಣ ಭಾರತದ ರಜಿನಿಕಾಂತ್, ಕಮಲ್ ಹಾಸನ್, ಎಂಜಿಆರ್ ಸೇರಿದಂತೆ ಸ್ಟಾರ್ ನಟರ ಜೊತೆ ತೆರೆ ಹಂಚಿಕೊಂಡಿದ್ದಾರೆ. ಶ್ರೀದೇವಿ ಮತ್ತು ಕಮಲ್ ಹಾಸನ್ ಜೋಡಿಯನ್ನು ತೆರೆ ಮೇಲೆ ನೋಡಲು ಅಭಿಮಾನಿಗಳು ಕಾಯುತ್ತಿದ್ದರು. 1976ರಲ್ಲಿ ಬಿಡುಗಡೆಯಾದ ಮೊಂದ್ರು ಮುಡಿಚು (Moondru Mudichu) ಸಿನಿಮಾದಿಂದ ಶ್ರೀದೇವಿ ಮತ್ತು ಕಮಲ್ ಹಾಸನ್ ಪರಿಚಯವಾಗಿತ್ತು. ಈ ಸಿನಿಮಾ ಬಿಡುಗಡೆಯಾಗಿದ್ದಾಗ ಶ್ರೀದೇವಿ 13 ವಯಸ್ಸಿನ ಪುಟ್ಟ ಹುಡುಗಿಯಾಗಿದ್ದರು. ಈ ವೇಳೆ ಸಿನಿಮಾ ಲೋಕದಲ್ಲಿ ಶ್ರೀದೇವಿ ಅಂಬೆಗಾಲಿಡುತ್ತಿದ್ದರು. ಹಾಗಾಗಿ ಶ್ರೀದೇವಿ ಬೆನ್ನಿಗೆ ಕಮಲ್ ಹಾಸನ್ ನಿಂತಿದ್ದರು.
ಮೊಂದ್ರು ಮುಡಿಚು ಬಳಿಕ ಕುತ್ತವುಂ ಶಿಕ್ಷಾಯುಂ, ಪಥಿನಾರು ವಯಥಿನಿಲೆ, ಉನೈ ಸುತ್ರುಂ ಉಲಗಂ, ಸತ್ಯಾವನ್ ಸಾವಿತ್ರಿ, ಅದ್ಯಾ ಪಾದಮ್, ಆಶೀವಾರ್ದಂ, ನಿರಾಕುದಂ ಸಿನಿಮಾಗಳಲ್ಲಿ ಶ್ರೀದೇವಿ ಮತ್ತು ಕಮಲ್ ಹಾಸನ್ ಜೊತೆಯಾಗಿ ನಟಿಸಿದ್ದರು. ಸಾಲು ಸಾಲು ಸಿನಿಮಾಗಳಲ್ಲಿ ಇಬ್ಬರು ಜೊತೆಯಾಗಿ ನಟಿಸಿದ ಬಳಿಕ ಶ್ರೀದೇವಿ ಮತ್ತು ಕಮಲ್ ಹಾಸನ್ ಪರಸ್ಪರ ಪ್ರೀತಿಸುತ್ತಿದ್ದಾರೆ ಎಂಬ ಮಾತುಗಳು ಸಹ ಕೇಳಿ ಬಂದಿದ್ದವು. ಈ ವಿಷಯ ತಿಳಿಯುತ್ತಲೇ ಶ್ರೀದೇವಿ ತಾಯಿ ಮಗಳನ್ನು ಮದುವೆಯಾಗುವಂತೆ ಕಮಲ್ ಹಾಸನ್ ಬಳಿ ಹೇಳಿದ್ದರಂತೆ. ಆದ್ರೆ ಈ ಆಫರ್‌ನ್ನು ಕಮಲ್ ಹಾಸನ್ ತಿರಸ್ಕರಿಸಿ ಕಾರಣ ನೀಡಿದ್ದರಂತೆ.
ಇದನ್ನೂ ಓದಿ: ರಜನಿಕಾಂತ್ - ಶ್ರೀದೇವಿ ಮದುವೆಗೆ ಅಡ್ಡಿಯಾಯ್ತಾ ಕರೆಂಟ್?
ಮದುವೆ ಆಗದಿರಲು ಕಮಲ್ ಕೊಟ್ಟ ಕಾರಣ ಏನು?
ಹಲವು ಸಿನಿಮಾಗಳನ್ನು ಜೊತೆಯಾಗಿ ಮಾಡಿದ ಬಳಿಕ ಕಮಲ್ ಹಾಸನ್ ಮತ್ತು ಶ್ರೀದೇವಿ ನಡುವೆ ಒಳ್ಳೆಯ ಸ್ನೇಹ ಬೆಳೆದಿತ್ತು. ಕಮಲ್ ಹಾಸನ್ ಅವರನ್ನು ಶ್ರೀದೇವಿ ಗುರುವಿನ ಸ್ಥಾನದಲ್ಲಿ ಗೌರವಿಸುತ್ತಿದ್ದರು. ನಾವಿಬ್ಬರು ತುಂಬಾ ಒಳ್ಳೆಯ ಸ್ನೇಹಿತರು. ಹಾಗಾಗಿ ಶ್ರೀದೇವಿಯನ್ನು ಮದುವೆ ಆಗಲಾರೆ ಎಂದು ಕಮಲ್ ಹಾಸನ್ ಹೇಳಿದ್ದರಂತೆ. ಶ್ರೀದೇವಿ ಎಂದಿಗೂ ಕಮಲ್ ಹಾಸನ್ ಅವರಿಗೆ ಹೆಸರು ಹೇಳಿ ಕರೆದಿಲ್ಲ. ಎಲ್ಲೇ ಹೋದರೂ ಸರ್ ಎಂದೇ ಕರೆಯುತ್ತಿದ್ದರು.
ರಜಿನಿಕಾಂತ್ ಜೊತೆ ಮದುವೆ ಆಗಲಿಲ್ಲ ಯಾಕೆ?
ನಂತರ ಮಗಳ ಮದುವೆಯನ್ನು ಸೂಪರ್ ಸ್ಟಾರ್ ರಜಿನಿಕಾಂತ್ ಜೊತೆ ಮಾಡಿಸಬೇಕು ಎಂದು ಶ್ರೀದೇವಿ ತಾಯಿ ಕನಸು ಕಂಡಿದ್ದರು. ರಜಿನಿಕಾಂತ್ ಅನಾರೋಗ್ಯಕ್ಕೆ ಒಳಗಾದ ಸಂದರ್ಭದಲ್ಲಿ ಶ್ರೀದೇವಿ ಸಾಯಿಬಾಬಾಗೆ ಹರಕೆ ಹೊತ್ತಿದ್ದರು. ರಜನಿಕಾಂತ್ ಆರೋಗ್ಯ ಚೇತರಿಕೆಗಾಗಿ ಶ್ರೀದೇವಿ ಉಪವಾಸ ವ್ರತ ಆಚರಿಸಿದ್ದರು. ರಜನಿಕಾಂತ್ ಗುಣಮುಖರಾದ ಬಳಿಕ ಅವರ ಜೊತೆ ಶ್ರೀದೇವಿ ನಟಿಸಿದ್ದರು. ಹಾಗಾಗಿ ರಜನಿಕಾಂತ್ ನನ್ನ ಅಳಿಯ ಆಗಬೇಕೆಂದು ಶ್ರೀದೇವಿ ತಾಯಿಯ ಆಸೆಯಾಗಿತ್ತು. ಆದರೆ ಶ್ರೀದೇವಿ ಬಾಲಿವುಡ್ ನಿರ್ಮಾಪಕ ಬೋನಿ ಕಪೂರ್ ಅವರನ್ನು ಪ್ರೀತಿಸಿ ಮದುವೆಯಾದರು.
ಇದನ್ನೂ ಓದಿ: ಖ್ಯಾತ ನಟನೊಂದಿಗೆ ಮಗಳ ಮದ್ವೆ ಮಾಡ್ಬೇಕೆಂದುಕೊಂಡಿದ್ರು ಶ್ರೀದೇವಿ ಅಮ್ಮ; ಇಬ್ಬರ ನಡುವೆ ಬೋನಿ ಕಪೂರ್ ಬಂದಿದ್ದೇಗೆ?
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.